Udayavni Special

ಕೋವಿಡ್ ನಿಯಂತ್ರಣಕ್ಕಾಗಿ ವಿಶೇಷ ಅಭಿಯಾನ


Team Udayavani, Apr 20, 2021, 8:10 PM IST

ಕೋವಿಡ್ ನಿಯಂತ್ರಣಕ್ಕಾಗಿ ವಿಶೇಷ ಅಭಿಯಾನ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ದಿನೇ ದಿನೆ ಕೋವಿಡ್ ಸೋಂಕು ಹೆಚ್ಚಾಗುತ್ತಿರುವಹಿನ್ನೆಲೆಯಲ್ಲಿ ಜಿಲ್ಲಾಡಳಿತದೊಂದಿಗೆ ಚುನಾಯಿತ ಪ್ರತಿನಿಧಿಗಳು ಎಚ್ಚತ್ತುಕೊಂಡಿದ್ದು, ಸೋಂಕುನಿಯಂತ್ರಿಸಲು ಜನರಲ್ಲಿ ಜಾಗೃತಿ ಮೂಡಿಸಲು ವಿಶೇಷ ಅಭಿಯಾನವನ್ನು ಆರಂಭಿಸಿದ್ದಾರೆ.

ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷ ಡಿ.ಎಸ್‌.ಆನಂದ್‌ರೆಡ್ಡಿ(ಬಾಬು) ನಗರಸಭೆಯ ಅಧಿಕಾರಿ ಗಳೊಂದಿಗೆ ಚಿಕ್ಕಬಳ್ಳಾಪುರ ನಗರದಲ್ಲಿ ಕೋವಿಡ್ ಕುರಿತು ಜನರಲ್ಲಿ ಅರಿವುಮೂಡಿಸುವ ಜೊತೆಗೆ ಮುನ್ನೆಚ್ಚರಿಕೆಕ್ರಮಗಳನ್ನು ಕೈಗೊಳ್ಳಲು ನಿರ್ಲಕ್ಷಿಸುವಜನರಿಗೆ ದಂಡ ವಿಧಿಸಿ, ಮಾಸ್ಕ್ ವಿತರಿಸುವ ಯೋಜನೆಯನ್ನು ಆರಂಭಿಸಿದ್ದಾರೆ.

ವಿನಾಕಾರಣ ಮನೆಯಿಂದ ಹೊರ ಬರಬೇಡಿ: ನಗರದ ವಿವಿಧಡೆ ಅಧಿಕಾರಿಗಳೊಂದಿಗೆ ಸಂಚರಿಸಿದನಗರಸಭಾ ಅಧ್ಯಕ್ಷರು, ಜಿಲ್ಲಾ ಕೇಂದ್ರದಲ್ಲಿ ಕೊರೊನಾ ಸೋಂಕಿತರಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ನಾಗರಿಕರು ವಿನಾಕಾರಣ ಮನೆಯಿಂದ ಹೊರ ಬರುವುದನ್ನು ಸ್ವಯಂ ನಿರ್ಬಂಧಿಸಿಕೊಳ್ಳಬೇಕು. ಅಗತ್ಯವಿದ್ದಾಗಮಾತ್ರ ಮನೆಯಿಂದ ಹೊರ ಬರಬೇಕು.ಬರುವ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕಅಂತರವನ್ನು ಕಾಯ್ದುಕೊಂಡು,ಸ್ಯಾನಿಟೈಸರ್‌ ಸಿಂಪಡಿಸಿಕೊಂಡುಸುರಕ್ಷತಾ ಕ್ರಮಗಳನ್ನು ಕೈಗೊಂಡುಸೋಂಕು ನಿಯಂತ್ರಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಇಲಾಖೆಯೊಂದಿಗೆ ಕೈಜೋಡಿಸಿ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‌ಕುಮಾರ್‌ ಮಾರ್ಗ ದರ್ಶನದಲ್ಲಿ ಪೊಲೀಸ್‌ ಅಧಿಕಾರಿಗಳು, ತಮ್ಮ ತಮ್ಮ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಾಗರಿಕರ ಸಭೆಗಳನ್ನು ಆಯೋಜಿಸಿ, ಕಲ್ಯಾಣಮಂಟಪಗಳ ಮಾಲೀಕರ ಸಭೆಯನ್ನು ಸಂಘಟಿಸಿ ಸರ್ಕಾರದ ನೀತಿ ನಿಯಮಗಳನ್ನುಪಾಲಿಸುವ ಮೂಲಕ ಕೊರೊನಾಸೋಂಕು ನಿಯಂತ್ರಿಸಲು ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಕೋವಿಡ್ ಕಾರ್ಯಪಡೆ ಸಕ್ರಿಯ: ಜಿಪಂ ಸಿಇಒ ಪಿ.ಶಿವಶಂಕರ್‌ ಮಾರ್ಗದರ್ಶನದಲ್ಲಿ ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳ ತಂಡ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಸೋಂಕಿನ ಕುರಿತು ಜಾಗೃತಿ ಮೂಡಿಸುವ ಜೊತೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲು ಉದಾಸೀನ ಮಾಡುವ ಗ್ರಾಮಸ್ಥರ ಮೇಲೆ ದಂಡ ವಿಧಿಸುವ ಕಾರ್ಯದಲ್ಲಿ ತಾಪಂ ಇಒ-ಗ್ರಾಪಂ ಪಿಡಿಒಗಳು ನಿರತರಾಗಿದ್ದಾರೆ. ಗ್ರಾಮದಲ್ಲಿ ಈ ಹಿಂದೆ ರಚಿಸಿರುವ ಕೊರೊನಾ ಕಾರ್ಯಪಡೆಯನ್ನು ಸಕ್ರಿಯಗೊಳಿಸಲಾಗಿದೆ.

ಡೀಸಿ ಆರ್‌.ಲತಾ ಸೂಚನೆಯ ಮೇರೆಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ಕಾಲಿಗೆ ಚಕ್ರ ಹಾಕಿಕೊಂಡಂತೆ ವರ್ತಿಸುತ್ತಿದ್ದಾರೆ. ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕವಾಗಿ ಪ್ರಭಾವ ಹೊಂದಿರುವ ಮುಖಂಡರನ್ನು ಸಂಪರ್ಕ ಸಾಧಿಸಿ, ಕೋವಿಡ್ ನಿಯಂತ್ರಿಸಲು ಜನರಲ್ಲಿ ಅರಿವು ಮೂಡಿಸುವ ಜೊತೆಗೆ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಲು ಶ್ರಮಿಸುತ್ತಿದ್ದಾರೆ. ವಿಶೇಷವಾಗಿ ಆಯಾ ತಾಲೂಕುಗಳ ತಹಶೀಲ್ದಾರ್‌, ಆರೋಗ್ಯಾಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ರಾಜಸ್ವ ನಿರೀಕ್ಷಕರು ಸಹಿತ ಪ್ರಮುಖ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡಂತೆ ಸೋಂಕು ನಿಯಂತ್ರಿಸಲು ಪ್ರಯತ್ನ ಮಾಡುತ್ತಿದ್ದಾರೆ.

ನಾಗರಿಕರ ನಿರ್ಲಕ್ಷ್ಯ: ವಿವಿಧೆಡೆ ಕೆಲ ನಾಗರಿಕರು ಇನ್ನೂ ಕೋವಿಡ್‌- 19 ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲು ಮೀನಾಮೇಷ ಹಾಗೂ ನಿರ್ಲಕ್ಷ್ಯವಹಿಸುತ್ತಿರುವುದು ಕಂಡು ಬಂದಿದೆ. ಮನೆಯಿಂದ ಹೊರ ಬರುವಾಗ ಮಾಸ್ಕ್ ಧರಿಸುತ್ತಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರೆತ್ತಿದ್ದಾರೆ. ನಾಗರಿಕರ ನಿರ್ಲಕ್ಷ್ಯ ಧೋರಣೆಯನ್ನು ನೋಡಿ ನೋಡಿ ಸುಸ್ತಾಗಿರುವ ಅಧಿಕಾರಿಗಳು ಇದೀಗ ದಂಡ ವಿಧಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ನಗರದಲ್ಲಿ ನಗರ ಸಭೆಯ ಅಧಿಕಾರಿಗಳು ಮತ್ತು ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿ ದಂಡ ವಿಧಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ಟಾಪ್ ನ್ಯೂಸ್

Reliance jio offers discounts to retain users during corona pandemic

ಕೋವಿಡ್ 19 : ಗ್ರಾಹಕ ಸ್ನೇಹಿ ಯೋಜನೆಯೊಂದನ್ನು ಘೋಷಿಸಿದ ಜಿಯೋ

ಕಾಪು ಬಳಿ ಅಪಘಾತಕ್ಕೀಡಾದ ವೆಸೆಲ್ ಟಗ್ :ಇನ್ನೂ ಆರಂಭಗೊಳ್ಳದ ರಕ್ಷಣಾ ಕಾರ್ಯಾಚರಣೆ !

ಕಾಪು ಬಳಿ ಅಪಘಾತಕ್ಕೀಡಾದ ವೆಸೆಲ್ ಟಗ್ :ಇನ್ನೂ ಆರಂಭಗೊಳ್ಳದ ರಕ್ಷಣಾ ಕಾರ್ಯಾಚರಣೆ !

covid effect at chikkamagalore

ಚಿಕ್ಕಮಗಳೂರು : ನಿಯಮ ಉಲ್ಲಂಘಿಸಿ ಅಂತ್ಯಸಂಸ್ಕಾರಕ್ಕೆ ಹೋದವರಿಗೆ ಕೋವಿಡ್ ದೃಢ

cats

ಫೇಸ್ ಬುಕ್ ಸ್ನೇಹಿತನಿಂದ ಹೀನ ಕೃತ್ಯ : ಮಹಿಳೆ ಮೇಲೆ 25 ಕಾಮುಕರಿಂದ ಅತ್ಯಾಚಾರ

cats

ದೆಹಲಿಯಲ್ಲಿ ಮತ್ತೆ ಒಂದು ವಾರ ಲಾಕ್ ಡೌನ್ ಮುಂದುವರಿಕೆ

Untitled-1

ಜೋರಾದ ಗಾಳಿ-ಮಳೆಗೆ ಗೋಡೆ ಕುಸಿದು ಅಜ್ಜಿ-ಮೊಮ್ಮಗ ಸಾವು

ಬದ್ಗದಸ್ದ

ಚಿಕ್ಕಮಗಳೂರಿನಲ್ಲೂ ಆಕ್ಸಿಜನ್ ಬಸ್ ಸೇವೆ ಪ್ರಾರಂಭ : ಡಿಸಿಎಂ ಸವದಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Eid ul Fitr

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸರಳ ಈದ್‌ ಉಲ್‌ ಫಿತ್ರ್

Maintain food quality

ಕ್ಯಾಂಟೀನ್‌ ಆಹಾರದಲ್ಲಿ ಗುಣಮಟ್ಟ ಕಾಯ್ದುಕೊಳ್ಳಿ

ಶಿಡ್ಲಘಟ್ಟ : ಬ್ಯಾಂಕ್ ದರೋಡೆಗೆ ವಿಫಲ ಯತ್ನ ; ಸಿಸಿ ಕ್ಯಾಮೆರಾದ DVR ಹೊತ್ತೊಯ್ದ ಕಳ್ಳರು

ಶಿಡ್ಲಘಟ್ಟ : ಬ್ಯಾಂಕ್ ಕಳ್ಳತನಕ್ಕೆ ಬಂದು ಸಿಸಿ ಕ್ಯಾಮೆರಾದ DVR ಹೊತ್ತೊಯ್ದ ಕಳ್ಳರು

ASCs

ಕೋವಿಡ್ ನಿರ್ಬಂಧದ ನಡುವೆಯೂ ಡಿಕೆಶಿ ದೇವಾಲಯ ಭೇಟಿ

1305cmyp7_1305bg_2

ಕೋವಿಡ್ ಸೋಂಕಿಗೆ ಮತ್ತೂಬ್ಬ ಶಿಕ್ಷಕ ಬಲಿ

MUST WATCH

udayavani youtube

ಪುತ್ತೂರು ಮಹಾಲಿಂಗೇಶ್ವರ ದೇಗುಲದ ಸಭಾಂಗಣ ಸದ್ಯಕ್ಕೆ COVID CARE CENTRE

udayavani youtube

ಕನ್ನಡ ಶಾಲೆಯ ವಿಭಿನ್ನ ಇಂಗ್ಲೀಷ್ ಕ್ಲಾಸ್

udayavani youtube

ದೆಹಲಿಯಲ್ಲಿ ಕೋವಿಡ್ 19 ಲಾಕ್ ಡೌನ್ ಮತ್ತೆ ವಿಸ್ತರಿಸಬೇಡಿ

udayavani youtube

ರಾಯಚೂರು ; ಫುಲ್ ಲಾಕ್ ಡೌನ್ ಹಿನ್ನೆಲೆ ಎಣ್ಣೆ ಖರೀದಿಗೆ ಮುಗಿಬಿದ್ದ ಮದ್ಯಪ್ರಿಯರು

udayavani youtube

Oxygen ನಮಗೆ ಬೇಕಿರುವುದಕ್ಕಿಂತ ಜಾಸ್ತಿನೇ ಇದೆ

ಹೊಸ ಸೇರ್ಪಡೆ

Types of medical examination of the kidneys

ಮೂತ್ರಪಿಂಡಗಳ ವೈದ್ಯಕೀಯ ಪರೀಕ್ಷಾ  ವಿಧಗಳು ಮತ್ತು ವಿಧಾನಗಳು

Reliance jio offers discounts to retain users during corona pandemic

ಕೋವಿಡ್ 19 : ಗ್ರಾಹಕ ಸ್ನೇಹಿ ಯೋಜನೆಯೊಂದನ್ನು ಘೋಷಿಸಿದ ಜಿಯೋ

10 Cryogenic Oxygen Tanker

10 ಕ್ರಯೋಜನಿಕ್‌ ಆಮ್ಲಜನಕ ಟ್ಯಾಂಕರ್‌

ಕಾಪು ಬಳಿ ಅಪಘಾತಕ್ಕೀಡಾದ ವೆಸೆಲ್ ಟಗ್ :ಇನ್ನೂ ಆರಂಭಗೊಳ್ಳದ ರಕ್ಷಣಾ ಕಾರ್ಯಾಚರಣೆ !

ಕಾಪು ಬಳಿ ಅಪಘಾತಕ್ಕೀಡಾದ ವೆಸೆಲ್ ಟಗ್ :ಇನ್ನೂ ಆರಂಭಗೊಳ್ಳದ ರಕ್ಷಣಾ ಕಾರ್ಯಾಚರಣೆ !

Prioritize the necessary facilities

ಅಗತ್ಯ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.