ಮಕ್ಕಳ ಕತ್ತು ಹಿಸುಕಿ ನೇಣಿಗೆ ಶರಣಾದ ತಾಯಿ


Team Udayavani, Jan 28, 2019, 7:20 AM IST

makkala.jpg

ಚಿಕ್ಕಬಳ್ಳಾಪುರ: ಮಕ್ಕಳ ಭವಿಷ್ಯ ಚೆನ್ನಾಗಿಲ್ಲವೆಂದು ಜ್ಯೋತಿಷಿ ಹೇಳಿದ ಮಾತು ಕೇಳಿ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಿಕ ಘಟನೆ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಶನಿವಾರ ತಡರಾತ್ರಿ ನಡೆದಿದೆ. ವಿ.ಆರ್‌.ಉಷಾ ಅವರು, ತಮ್ಮ ಮನಸ್ಸಿನ ನೋವನ್ನು ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾರೆ. ನಗರದ ಸರ್‌ಎಂವಿ ಲೇಔಟ್‌ನ ನಿವಾಸಿ ವಿ.ಆರ್‌.ಉಷಾ ಕೋಂ ಅಶೋಕ್‌ (32) ಹಾಗೂ ಮಕ್ಕಳಾದ ಎರಡೂವರೆ ವರ್ಷದ ಶಾನ್ವಿತ ಹಾಗೂ 10 ವರ್ಷದ ಶಾಮಂತ್‌ ಎಂದು ಗುರುತಿಸಲಾಗಿದೆ.

ಮಕ್ಕಳ ಭವಿಷ್ಯ ಚೆನ್ನಾಗಿಲ್ಲ ಎಂದು ತಿಳಿದ ಮೇಲೆ ಬದುಕಿನ ಮೇಲಿನ ಆಸಕ್ತಿ ಕಡಿಮೆಯಾಯಿತು. ಗಂಡ ಸೇರಿದಂತೆ ಕುಟುಂಬದ ಎಲ್ಲ ಸದಸ್ಯರೂ ನನಗೆ ಧೈರ್ಯ ಹೇಳಿದರು. ಆದರೂ ನನಗೆ ಧೈರ್ಯ ಬರಲೇ ಇಲ್ಲ. ಮೊದಲು ನಾನೊಬ್ಬಳೇ ಸಾಯಬೇಕು ಎಂದು ಅನ್ನಿ ಸಿತ್ತು. ಆದರೆ ಮಕ್ಕಳನ್ನು ಬಿಟ್ಟು ಸಾಯಲು ಇಷ್ಟವಾ ಗದೇ ನಿದ್ದೆ ಮಾತ್ರೆ ಕೊಟ್ಟು ನಾನೇ ಸಾಯಿಸಿದ್ದೇನೆ ಎಂದು ಡೆತ್‌ನೋಟಲ್ಲಿ ಬರೆದಿದ್ದಾರೆ.

ಡೆತ್‌ ನೋಟ್‌ನಲ್ಲಿ ಏನಿದೆ?: ನನ್ನ ಮಕ್ಕಳ ಸಾವಿಗೆ ನಾನೇ ಕಾರಣ. ಮಕ್ಕಳ ಭವಿಷ್ಯ ಚೆನ್ನಾಗಿಲ್ಲ ಎಂದು ಜ್ಯೋತಿಷಿಯೊಬ್ಬರು ಹೇಳಿದಾಗ ನನ್ನ ಬದುಕಿನ ಮೇಲೆ ಆಸಕ್ತಿ ಕಡಿಮೆ ಆಯಿತು. ಜೀವನದಲ್ಲಿ ಸಂತೋಷ ಕಂಡಿಲ್ಲ. ಅಶೋಕನ ಮದುವೆಯಾದ ಮೇಲೆ ಸಂತೋಷವಾಗಿದ್ದೆ. ಮಕ್ಕಳು ಆದ ಮೇಲೆ ಇನ್ನೂ ಆರಾಮಗಿದ್ದೆ. ಆದರೆ ಮಕ್ಕಳ ಬದುಕು ಚೆನ್ನಾಗಿಲ್ಲ ಎಂದು ಜ್ಯೋತಿಷ್ಯ ಹೇಳಿದ ಮೇಲೆ ನಾನು ಸಾಯಬೇಕು ಅನಿಸಿತು. ನೀವು ಅದೆಲ್ಲಾ ನಂಬಬೇಡ ಎಂದು ನನಗೆ ಧೈರ್ಯ ತುಂಬಿದ್ದೀರಿ. ಆದರೆ ನನಗೆ ಧೈರ್ಯ ಬರಲಿಲ್ಲ. ಆದರೆ ನಾನು ಒಬ್ಬಳೇ ಸಾಯಬೇಕು ಅನಿಸಿತು. ಆದರೆ ಮಕ್ಕಳನ್ನು ಬಿಟ್ಟು ನಾನು ಸಾಯಲು ಇಷ್ಟಪಡಲಿಲ್ಲ. ಇಬ್ಬರಿಗೂ ನಿದ್ರೆ ಮಾತ್ರೆ ಕೊಟ್ಟು ನಾನೇ ಸಾಯಿಸಿ ನೇಣಿಗೆ ಶರಣಾದೆ.

ನನ್ನಂಥ ತಾಯಿ, ಹೆಂಡತಿ ಯಾರಿಗೂ ಬೇಡ, ದೇವರು ನನಗೆ ಮೋಸ ಮಾಡಿದ. ಅಶೋಕ, ಅತ್ತೆ ಮಾವ ನನನ್ನು ಚೆನ್ನಾಗಿ ನೋಡಿಕೊಂಡರು. ನನ್ನ ಬಗ್ಗೆ ಯೋಚನೆ ಮಾಡಬೇಡಿ. ಎಷ್ಟೇ ಧೈರ್ಯ ತೆಗೆದುಕೊಂಡರು ನನ್ನ ಕೈಯಲ್ಲಿ ಆಗಲಿಲ್ಲ. ನನ್ನ ನೋವು ಯಾರಿಗೂ ಹೇಳಿಕೊಳ್ಳಲಿಲ್ಲ. ನಾನು ನಿಮಗೆ ಮೋಸ ಮಾಡುತ್ತಿದ್ದೇನೆ. ಕ್ಷಮೆ ಇರಲಿ. ನಾನು ನಿಮಗೆ ಸಂತೋಷ ಕೊಡಲಿಲ್ಲ. ಜ್ಯೋತಿಷ್ಯರ ಮಾತು ನಂಬಬೇಡ ಎಂದ ಅಕ್ಕ, ತಂಗಿ ಅಶೋಕ ಧೈರ್ಯ ಹೇಳಿದ್ದರು. ಆದರೆ ನಾನು ಒಳ್ಳೆ ಹೆಂಡತಿ, ತಾಯಿ ಆಗಲಿಲ್ಲ. ಮೋಸ ಮಾಡಿಬಿಟ್ಟೆ. ಅಶೋಕಗೆ ಎಲ್ಲರು ಧೈರ್ಯ ಹೇಳಿ. ಅವರ ಮುಂದಿನ ಜೀವನ ಚೆನ್ನಾಗಿರಲಿ. ಇಡೀ ಫ್ಯಾಮಿಲಿಯ ಕ್ಷಮೆ ನನ್ನ ಮೇಲೆ ಇರಲಿ

ಮನುಷ್ಯನಿಗೆ ಯಾವುದೇ ವಯಸ್ಸಿನ ಹಂತದಲ್ಲಿ ಖನ್ನತೆ ಬರಬಹುದು. ಸಹಜವಾಗಿ ಮನುಷ್ಯ ಅಂದುಕೊಂಡಿದ್ದನ್ನು ಸಾಧಿಸದೇ ಇದ್ದರೆ ಹೆಚ್ಚು ಮಾನಸಿಕವಾಗಿ ಖನ್ನತೆಗೆ ಒಳಗಾಗುತ್ತಾನೆ. ಮನುಷ್ಯ ತನ್ನ ಮೇಲೆ ತನಗೆ ವಿಶ್ವಾಸ ಹೊಂದಬೇಕು. ಬೇರೊಬ್ಬರು ಹೇಳುವ ಮಾತುಗಳಿಗೆ ಕಿವಿಗೊಟ್ಟರೆ ಇಂತಹ ಘಟನೆಗಳು ನಡೆಯುತ್ತವೆ. ಮಕ್ಕಳ ಭವಿಷ್ಯ ರೂಪಿಸುವುದು ಪೋಷಕರ ಕೈಯಲ್ಲಿದೆ. ಜ್ಯೋತಿಷ್ಯರ ಕೈಯಲ್ಲಿ ಇಲ್ಲ ಎಂಬುದನ್ನು ಈ ಸಮಾಜ ಅರ್ಥ ಮಾಡಿಕೊಳ್ಳಬೇಕು.
-ಡಾ.ಚಂದ್ರಮೋಹನ್‌, ಮಾನಸಿಕ ಆರೋಗ್ಯ ತಜ್ಞರು, ಆರೋಗ್ಯ ಇಲಾಖೆ

ಜ್ಯೋತಿಷ್ಯದಿಂದ ಇಂದು ಸಾವಿರಾರು ಕುಟುಂಬಗಳು ಸಮಾಜದಲ್ಲಿ ಬೀದಿಪಾಲಾಗಿವೆ. ಮುಗ್ಧರು ಜ್ಯೋತಿಷಿಗಳ ಮಾತು ಕೇಳಿ ಆತ್ಮವಿಶ್ವಾಸ ಕಳೆದುಕೊಂಡು ಸಾಯುತ್ತಾರೆಂಬುದನ್ನು ಚಿಕ್ಕಬಳ್ಳಾಪುರದ ಉಷಾ ಹಾಗೂ ಆಕೆಯ ಮಕ್ಕಳ ಘಟನೆಯೇ ಸಾಕ್ಷಿ. ಜ್ಯೋತಿಷಿಗಳ ತಂತ್ರ, ಕುತಂತ್ರಗಳ ಬಗ್ಗೆ ಜನರಲ್ಲಿ ದೊಡ್ಡ ಮಟ್ಟದಲ್ಲಿ ಅಭಿಯಾನ ಆಗಬೇಕಿದೆ. ಜನರನ್ನು ವೈಜ್ಞಾನಿಕವಾಗಿ, ವೈಚಾರಿಕವಾಗಿ ಜಾಗೃತಿಗೊಳಿಸಿದಾಗ ಇಂತಹ ಘಟನೆಗಳು ನಡೆಯುವುದಿಲ್ಲ. ಆತ್ಮವಿಶ್ವಾಸಕ್ಕಿಂತ ಮನುಷ್ಯನಿಗೆ ದೊಡ್ಡ ಶಕ್ತಿ ಮತ್ತೂಂದಿಲ್ಲ.
-ಡಾ.ಕೋಡಿರಂಗಪ್ಪ, ಪ್ರಗತಿಪರ ಚಿಂತಕ

ಟಾಪ್ ನ್ಯೂಸ್

ಮುಂಬೈ ಟೆಸ್ಟ್: ಹತ್ತಕ್ಕೆ ಹತ್ತೂ ವಿಕೆಟ್ ಕಿತ್ತ ಅಜಾಜ್ ಪಟೇಲ್ ಹೊಸ ದಾಖಲೆ

ಮುಂಬೈ ಟೆಸ್ಟ್: ಹತ್ತಕ್ಕೆ ಹತ್ತೂ ವಿಕೆಟ್ ಕಿತ್ತ ಅಜಾಜ್ ಪಟೇಲ್ ಹೊಸ ದಾಖಲೆ

arrest-25

ಕಾವೂರಿನಲ್ಲಿ ಮಾರಕಾಯುಧ ಝಳಪಿಸಿ 3 ಗೋವುಗಳ ಕಳ್ಳತನ : ಮೂವರ ಬಂಧನ

ಒಮಿಕ್ರಾನ್ ಸೋಂಕಿನ ಭಯ: ಪತ್ನಿ, ಮಕ್ಕಳನ್ನು ಕೊಂದು ಪರಾರಿಯಾದ ಪ್ರೊಫೆಸರ್

ಒಮಿಕ್ರಾನ್ ಸೋಂಕಿನ ಭಯ: ಪತ್ನಿ, ಮಕ್ಕಳನ್ನು ಕೊಂದು ಪರಾರಿಯಾದ ಪ್ರೊಫೆಸರ್

cm-b-bommai

ಕ್ಲಸ್ಟರ್ ಅಪಾರ್ಟ್ಮೆಂಟ್ ಗಳಲ್ಲಿ ಹೊರಗಡೆಯವರಿಗೆ ಪ್ರವೇಶ ನಿರ್ಬಂಧ: ಸಿಎಂ ಬೊಮ್ಮಾಯಿ

ಟೀಂ ಇಂಡಿಯಾದ ದ.ಆಫ್ರಿಕಾ ಸರಣಿ ಮೊಟಕು: ಕೋವಿಡ್ ಭೀತಿಯಿಂದ ಟಿ20 ಸರಣಿ ಮುಂದೂಡಿಕೆ

ಟೀಂ ಇಂಡಿಯಾದ ದ.ಆಫ್ರಿಕಾ ಸರಣಿ ಮೊಟಕು: ಕೋವಿಡ್ ಭೀತಿಯಿಂದ ಟಿ20 ಸರಣಿ ಮುಂದೂಡಿಕೆ

shivaraj-kumar

ಪುನೀತ್ ಡ್ರೀಮ್ ಪ್ರಾಜೆಕ್ಟ್ ಟೀಸರ್ ಬಿಡುಗಡೆಗೆ ಸಿಎಂಗೆ ಆಹ್ವಾನ ನೀಡಿದ ಶಿವಣ್ಣ

1-ff

ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ರಾಜ್ಯಪಾಲ ಕೆ. ರೋಸಯ್ಯ ವಿಧಿವಶಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

gyhghgf

3 ತಿಂಗಳ ಬಳಿಕ ನಂದಿಗಿರಿಧಾಮ ವೀಕ್ಷಣೆಗೆ ಮುಕ್ತ

ಇಂದಿನಿಂದ ನಂದಿಗಿರಿಧಾಮ ಪ್ರವಾಸಿಗರಿಗೆ ಮುಕ್ತ

ಇಂದಿನಿಂದ ನಂದಿಗಿರಿಧಾಮ ಪ್ರವಾಸಿಗರಿಗೆ ಮುಕ್ತ

ಬೆಳೆ ನಾಶ

ಲಕ್ಷಾಂತರ ರೂ. ಬೆಳೆ ನಾಶವಾದ್ರೂ ತಿರುಗಿ ನೋಡಿಲ್ಲ..!

4nandibetta

ಚಿಕ್ಕಬಳ್ಳಾಪುರ: 3 ತಿಂಗಳ ಬಳಿಕ ಸಾರ್ವಜನಿಕರಿಗೆ ನಂದಿಬೆಟ್ಟ ಪ್ರವೇಶಕ್ಕೆ ಮುಕ್ತ

1sudhakar

ಓಮಿಕ್ರಾನ್ ಸೋಂಕಿನ ಕುರಿತು ಆತಂಕ ಬೇಡ: ಸಚಿವ ಡಾ.ಕೆ.ಸುಧಾಕರ್

MUST WATCH

udayavani youtube

Omicron Virus ಕುರಿತು CM Highprofile ಮೀಟಿಂಗ್ !!

udayavani youtube

ಎಚ್ಚರಿಕೆ! ದೆಹಲಿ ಆಸ್ಪತ್ರೆಯಲ್ಲಿ ಒಮಿಕ್ರಾನ್

udayavani youtube

Podcast ಲೋಕದಲ್ಲಿ ಏನಿದು ಹೊಸ ಸಂಚಲನ ?!

udayavani youtube

ಸರ್ಕಾರಿ ಕಚೇರಿಯಲ್ಲಿನ ಕಾಗದ ಹೊತ್ತೊಯ್ದ ಮೇಕೆ ಹಿಂದೆ ಓಡುತ್ತಿರುವ ನೌಕರರು

udayavani youtube

ಅಜ್ಜಂಪುರ ತಾಲೂಕಿನ ಹಲವೆಡೆ ವರುಣನ ಅಬ್ಬರ

ಹೊಸ ಸೇರ್ಪಡೆ

10bjp

ಬಿಜೆಪಿಗೆ ಪಾಠ ಕಲಿಸಿ: ಡಾ| ಅಜಯಸಿಂಗ್‌

ಮುಂಬೈ ಟೆಸ್ಟ್: ಹತ್ತಕ್ಕೆ ಹತ್ತೂ ವಿಕೆಟ್ ಕಿತ್ತ ಅಜಾಜ್ ಪಟೇಲ್ ಹೊಸ ದಾಖಲೆ

ಮುಂಬೈ ಟೆಸ್ಟ್: ಹತ್ತಕ್ಕೆ ಹತ್ತೂ ವಿಕೆಟ್ ಕಿತ್ತ ಅಜಾಜ್ ಪಟೇಲ್ ಹೊಸ ದಾಖಲೆ

10kannada

ಕನ್ನಡ-ತಮಿಳು ಪರಸ್ಪರ ಆಪ್ತ ಸಂಬಂಧ

arrest-25

ಕಾವೂರಿನಲ್ಲಿ ಮಾರಕಾಯುಧ ಝಳಪಿಸಿ 3 ಗೋವುಗಳ ಕಳ್ಳತನ : ಮೂವರ ಬಂಧನ

ಒಮಿಕ್ರಾನ್ ಸೋಂಕಿನ ಭಯ: ಪತ್ನಿ, ಮಕ್ಕಳನ್ನು ಕೊಂದು ಪರಾರಿಯಾದ ಪ್ರೊಫೆಸರ್

ಒಮಿಕ್ರಾನ್ ಸೋಂಕಿನ ಭಯ: ಪತ್ನಿ, ಮಕ್ಕಳನ್ನು ಕೊಂದು ಪರಾರಿಯಾದ ಪ್ರೊಫೆಸರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.