‘ಪಾಕಿಸ್ತಾನ್ ಜಿಂದಾಬಾದ್’ ಎಂದವರು ರೈತ ಹೋರಾಟದಲ್ಲಿ ಭಾಗಿಯಾಗಿದ್ದಾರೆ: ಶೋಭಾ ಕರಂದ್ಲಾಜೆ
Team Udayavani, Jan 27, 2021, 1:15 PM IST
ಚಿಕ್ಕಮಗಳೂರು: ಪ್ರತಿಭಟನೆಯ ನೇತೃತ್ವವನ್ನ ರೈತರು ವಹಿಸಿಲ್ಲ ಅನ್ನೋದಕ್ಕೆ ನಿನ್ನೆ ಘಟನೆಯೇ ಸಾಕ್ಷಿ. ಕೆಂಪು ಕೋಟೆ ಹತ್ತಿದವರು ಯಾರೂ ರೈತರಲ್ಲ. ಗಣರಾಜ್ಯ ತ್ರಿವರ್ಣ ಧ್ವಜ ಹಾರಿಸುವ ದಿನವೇ ಕೆಟ್ಟ ಘಟನೆ ನಡೆದಿರುವುದು ದುರಂತ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಆರಂಭದಿಂದಲೂ ಹೇಳುತ್ತಿದ್ದೆ. ಪ್ರತಿಭಟನೆಯ ನೇತೃತ್ವವನ್ನು ರೈತರು ವಹಿಸಿಲ್ಲ. ಉಮ್ಮರ್ ಖಾಲಿದ್ ಬಿಡುಗಡೆಗೊಳಿಸುವಂತೆ ದೇಶದ್ರೋಹಿ ಶಕ್ತಿ ವಹಿಸಿವೆ. ಕೆಂಪು ಕೋಟೆಗೆ ನುಗ್ಗಿ ರೈತರು ಕೆಟ್ಟ ಪದ್ಧತಿಯನ್ನ ಹಾಕಿಕೊಟ್ಟಿದ್ದಾರೆ.
ಕೆನಡಾದ ಖಲಿಸ್ತಾನ್ ಮೂವ್‍ಮೆಂಟ್‍ನವರು ಈ ಹೋರಾಟಕ್ಕೆ ಬೆಂಬಲ ಕೊಟ್ಟಿದ್ದಾರೆ. ಉಮ್ಮರ್ ಖಾಲಿದ್‍ಗೆ ಬೆಂಬಲ ಕೊಟ್ಟಿದ್ದವರು ಅವರು ಇದಕ್ಕೆ ಬೆಂಬಲ ಕೊಟ್ಟಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ಭಾರತ ವಿರೋಧಿ ಚಟುವಟಿಕೆ ಮಾಡುತ್ತಿದ್ದವರು ಭಾಗಿಯಾಗಿದ್ದಾರೆ. ಜೆಎನ್‍ಯುನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದವರು ಇದರಲ್ಲಿ ಜೋಡಣೆಯಾಗಿದ್ದಾರೆ.
ಇದನ್ನೂ ಓದಿ: ಕೆಂಪುಕೋಟೆಯಲ್ಲಿ ಸಿಖ್ ಧ್ವಜ ಹಾರಿಸಿದ್ದು ನಾನೇ: ಯಾರಿದು ನಟ ದೀಪ್ ಸಿಧು, ಸನ್ನಿ ಆಪ್ತ
ನಾವು ಆರಂಭದಿಂದಲೂ ಹೇಳಿಕೊಂಡು ಬಂದಿದ್ದು ಇವತ್ತು ಸಾಭೀತಾಗಿದೆ. ನಿಜವಾದ ರೈತರು ಹಿಂಸಾಚಾರ ನಡೆಸಲು ಸಾಧ್ಯವಿಲ್ಲ. ರೈತರ ಹೆಸರಲ್ಲಿ ಈ ಪ್ರತಿಭಟನೆಯ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ ಎಂದು ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.
ಇದನ್ನೂ ಓದಿ: FAU-G ಭಾರತದಲ್ಲಿ ಬಿಡುಗಡೆಯಾಗಿದೆ. ಭಾರತದಲ್ಲಿ PUBGಯ ಭವಿಷ್ಯ..?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆರೋಪಿಗಳ ಐಶಾರಾಮಿ ಕಾರು ಮಾರಾಟ ಪ್ರಕರಣ, ಕಬ್ಬಳ್ ರಾಜ್ ಸೇರಿ ಇಬ್ಬರು ಪೊಲೀಸರು ಅಮಾನತು
ಮಹಿಳೆಯನ್ನು ಕಟ್ಟಿಹಾಕಿ ಹಾಡಹಗಲೇ ದರೋಡೆಗೆ ಯತ್ನ: ಸಿನಿಮೀಯಾ ರೀತಿಯಲ್ಲಿ ನಡೆಯಿತು ಚೇಸಿಂಗ್
ವಿಜಯಾನಂದ ಕಾಶಪ್ಪನವರ್ ದೊಡ್ಡವರು ಅವರಷ್ಟು ದೊಡ್ಡ ನಾಯಕ ನಾನಲ್ಲ : ನಿರಾಣಿ
ಇಂದು ಸಿಎಂ ಯಡಿಯೂರಪ್ಪ ಹುಟ್ಟುಹಬ್ಬ: ಶುಭಾಶಯ ಕೋರಿದ ನರೇಂದ್ರ ಮೋದಿ, ನಡ್ಡಾ, ಶಾ
ಪಂಚ ರಾಜ್ಯ ಚುನಾವಣೆಗೆ ದಿನ ನಿಗದಿ: ಕರ್ನಾಟಕದ ಉಪಚುನಾವಣೆ ಯಾವಾಗ?