ಇತಿಹಾಸದ ಕೊಂಡಿ ಕಳಚಿಕೊಳ್ಳುತ್ತಿರುವ ಯುವ ಪೀಳಿಗೆ

3 ಕೋಟಿ ರೂ. ವೆಚ್ಚದ ಗಾಂಧಿ ಭವನ ನಿರ್ಮಾಣಕ್ಕೆ ಉಸ್ತುವಾರಿ ಸಚಿವ ಶಿವಶಂಕರರೆಡ್ಡಿ ಶಂಕುಸ್ಥಾಪನೆ

Team Udayavani, Jun 6, 2019, 3:09 PM IST

ಚಿಕ್ಕಬಳ್ಳಾಪುರ: ಇಂದಿನ ಯುವ ಪೀಳಿಗೆಯು ದೇಶದ ಇತಿಹಾಸದ ಕೊಂಡಿಯನ್ನು ಕಳಚಿಕೊಳ್ಳುತ್ತಿರುವುದು ಆತಂಕಕಾರಿಯಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ತ್ಯಾಗ ಪುರುಷರನ್ನು ಸ್ಮರಿಸುವ ಹಾಗೂ ಅವರ ವಿಚಾರಧಾರೆಗಳ ಬಗ್ಗೆ ಪ್ರಸ್ತುತ ಸಮಾಜಕ್ಕೆ ಪರಿಚಯಿಸಿ ಕೊಡುವುದು ತೀರಾ ಅನಿರ್ವಾಯವಾಗಿದೆ ಎಂದು ಕೃಷಿ ಸಚಿವ ಎನ್‌.ಎಚ್.ಶಿವಶಂಕರರೆಡ್ಡಿ ತಿಳಿಸಿದರು.

ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯದ ಸಮೀಪ ಬುಧವಾರ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ 3 ಕೋಟಿ ವೆಚ್ಚದ ಗಾಂಧಿ ಭವನ ನಿರ್ಮಾಣ ಸೇರಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಜಗತ್ತಿನಲ್ಲಿ ಅಂಹಿಸಾ ಮಾರ್ಗದಲ್ಲಿ ವಿನೂತನವಾಗಿ ಸ್ವಾತಂತ್ರ್ಯ ಹೋರಾಟ ನಡೆಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾ ಗಾಂಧೀಜಿಯವರ ಸ್ಮರಿಸುವುದರ ಜೊತೆಗೆ ಅವರ ವಿಚಾರಧಾರೆ, ಆದರ್ಶ, ಬದ್ಧತೆ ಮತ್ತು ಸರಳತೆಯನ್ನು ಪ್ರತಿಯೊಬ್ಬರು ಮೈಗೂಢಿಸಿಕೊಳ್ಳ ಬೇಕಿದೆ. ಬಹುಷಃ ಪ್ರಪಂಚದಲ್ಲಿ ಗಾಂಧಿ ಕುರಿತಾಗಿ ಬರೆದಷ್ಟು ಪುಸ್ತಕಗಳು ಬೇರೆ ಯಾರು ಬಗ್ಗೆಯು ಇರಲಿಕ್ಕೆ ಸಾಧ್ಯವಿಲ್ಲ. ದೇಶಕ್ಕಾಗಿ ತಮ್ಮ ಜೀವಗಳನ್ನು ತ್ಯಾಗ ಬಲಿದಾನ ಮಾಡಿದ ನಾಯಕರುಗಳ ಇತಿಹಾಸದ ಬಗ್ಗೆ ಅರಿವು ಮೂಡಿಸಬೇಕಿದೆ. ಆದರೆ ವಿಪರ್ಯಾಸ ದೇಶದಲ್ಲಿ ಇಂದಿಗೂ ಗಾಂಧೀಜಿ ಕಂಡ ಗ್ರಾಮ ಸ್ವರಾಜ್‌ ಪರಿಕಲ್ಪನೆ ನನಸಾಗಿಯೆ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಳ್ಳಿಗಳ ಉದ್ದಾರ ದೇಶದ ಉದ್ದಾರ ಎಂದಿದ್ದರು ಗಾಂಧೀಜಿ. ಆದರೆ ಗ್ರಾಮೀಣ ಭಾಗದಲ್ಲಿ ಶೇ.100 ಕ್ಕೆ 50 ರಷ್ಟು ಹಳ್ಳಿಗಳು ಮದ್ಯ ಮಾರಾಟದ ಅಂಗಡಿಗಳಾಗಿವೆಯೆಂದು ಬೇಸರ ವ್ಯಕ್ತಪಡಿಸಿದರು. ಇಡೀ ವಿಶ್ವವೇ ಗಾಂಧೀಜಿರನ್ನು ಕೊಂಡಾಡುತ್ತದೆ.

ಡಾ.ಕೆ.ಸುಧಾಕರ್‌ ಮಾತನಾಡಿ, ಬದುಕಿನ ಉದ್ದಕ್ಕೂ ಆಹಿಂಸಾ ಮಾರ್ಗದಲ್ಲಿ ನಡೆದ ಗಾಂಧೀಜಿ ಕೊನೆಗೂ ನಾಥೋರಾಮ್‌ ಗುಡ್ಸೆ ಎಂಬಾತನ ಗುಂಡೇಟಿಗೆ ಬಲಿಯಾಗಿ ಹಿಂಸೆಯಿಂದ ಮೃತಪಟ್ಟಿದ್ದಾರೆ.

ಗಾಂಧೀಜಿ ವಿಚಾರಧಾರೆಗಳು ಈ ಭೂಮಿ ಇರುವವರೆಗೂ ಪ್ರಸ್ತುತವಾಗಿರುತ್ತದೆಯೆಂದ ಅವರು, ಆದರೆ ಸತ್ಯ, ನಿಷ್ಠೆ ಆಚರಣೆ ಕಷ್ಠ. ಆದರೆ ಗಾಂಧೀಜಿ ನುಡಿದಂತೆ ನಡೆದರು. ನಡೆದಂತೆ ನುಡಿದರೆಂದ ಶಾಸಕ ಸುಧಾಕರ್‌, ಚಿಕ್ಕಬಳ್ಳಾಪುರದಲ್ಲಿ ಗಾಂಧಿ ಭವನ ಕಟ್ಟಡದ ನಿರ್ಮಾಣ ಮಾಡುತ್ತಿರುವುದು ಸಂತಸ ತಂದಿದೆ. ಗಾಂಧಿ ಭವನದಲ್ಲಿ ಗಾಂಧೀಜಿಯವರ ಚರಿತ್ರೆ, ಬದುಕು, ಹೋರಾಟಗಳ ಬಗ್ಗೆ ಅನೇಕ ಪುಸ್ತಕಗಳು, ಸಿಡಿಗಳು ಲಭ್ಯರುತ್ತದೆ. ಒಂದೇ ಸೂರಿನಡಿ ಗಾಂಧೀಜಿಯವರ ಚರಿತ್ರೆ, ತ್ಯಾಗ, ಆದರ್ಶಗಳ ಬಗ್ಗೆ ಪ್ರತಿಯೊಬ್ಬರಿಗೆ ತಲುಪಿಸುವ ಉದ್ದೇಶದಿಂದ ಈ ಗಾಂಧಿ ಭವನ ನಿರ್ಮಾಣ ಮಾಡಲಾಗುತ್ತಿದೆ. ವಿಶೇಷವಾಗಿ ಯುವಕರು ಇಲ್ಲಿ ಬಂದು ಅಧ್ಯಯನ ಮಾಡಿ, ಇತಿಹಾಸ ತಿಳಿದುಕೊಂಡಾಗ ಮಾತ್ರ ಉತ್ತಮ ರೀತಿಯಲ್ಲಿ ಸಮಾಜ ನಿರ್ಮಾಣ ಮಾಡಬಹುದು ಹಾಗೂ ಆಲೋಚನೆಗಳಿ ಉತ್ತಮ ಅರ್ಥಸಿಗಲಿದೆ ಎಂದರು.

ಜಿಲ್ಲಾಧಿಕಾರಿ ಅನಿರುದ್‌ ಶ್ರವಣ್‌, ಸಿಇಒ ಗುರುದತ್‌ ಹೆಗಡೆ, ತಾಪಂ ಅಧ್ಯಕ್ಷ ಬಿ.ಎಂ.ರಾಮುಸ್ವಾಮಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ತಿರುಮಲಪ್ಪ, ಅಪರ ಜಿಲ್ಲಾಧಿಕಾರಿ ಆರತಿ ಆನಂದ್‌, ಉಪಭಾಗಾಧಿಕಾರಿ ಬಿ.ಶಿವಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇÍಕಿ ಲಕ್ಮೀ ದೇವಮ್ಮ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿ ಎಂ.ಜುಂಜಣ್ಣ, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ಕೃಷ್ಣೆಗೌಡ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ