Udayavni Special

ರೆಮಿಡಿಸಿವರ್‌ ಔಷಧಿ, ಬೆಡ್‌ಗಳ ಕೊರತೆ ಇಲ್ಲ


Team Udayavani, Apr 25, 2021, 3:17 PM IST

ರೆಮಿಡಿಸಿವರ್‌ ಔಷಧಿ, ಬೆಡ್‌ಗಳ ಕೊರತೆ ಇಲ್ಲ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ರೆಮಿಡಿಸಿವರ್‌ ಔಷಧಿ ಆಗಲಿ, ಬೆಡ್‌ಗಳ ಕೊರತೆ ಆಗಲಿ ಇಲ್ಲ. ಜನರು ಭಯಪಡುವ ಬದಲು ಕೋವಿಡ್ ನಿಯಂತ್ರಣಮಾರ್ಗಸೂಚಿ ಪಾಲಿಸಬೇಕು ಎಂದು ಜಿಲ್ಲಾಧಿ ಕಾರಿ ಆರ್‌.ಲತಾ ಮನವಿ ಮಾಡಿದರು.

ಗುಡಿಬಂಡೆ ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಶಾಲೆ, ಬಾಗೇಪಲ್ಲಿ ತಾಲೂಕಿನಮೊರಾರ್ಜಿ ಪದವಿ ಪೂರ್ವ ವಸತಿ ಕಾಲೇಜಿನಲ್ಲಿತೆರೆದಿರುವ ಕೋವಿಡ್‌ ಕೇರ್‌ ಕೇಂದ್ರಗಳಿಗೆ ಮತ್ತುಶಿಡ್ಲಘಟ್ಟ, ಬಾಗೇಪಲ್ಲಿ, ಗುಡಿಬಂಡೆ ತಾಲೂಕುಕೇಂದ್ರಗಳ ಸಾರ್ವಜನಿಕ ಆಸ್ಪತ್ರೆಗಳಿಗೆ ಭೇಟಿ ನೀಡಿ,ಬಾಗೇಪಲ್ಲಿ ಆಸ್ಪತ್ರೆಯ 13, ಕೋವಿಡ್‌ ಕೇಂದ್ರದ 5,ಶಿಡ್ಲಘಟ್ಟ ಆಸ್ಪತ್ರೆಯ 13, ಗುಡಿಬಂಡೆ ಆಸ್ಪತ್ರೆಯ 4ಕೋವಿಡ್‌ ಸೋಂಕಿತರೊಂದಿಗೆ ವಿಡಿಯೋ ಸಂವಾದ ನಡೆಸಿ ಆರೋಗ್ಯ, ಯೋಗಕ್ಷೇಮ, ಆಸ್ಪತ್ರೆಯಲ್ಲಿ ಅವರಿಗೆ ನೀಡುತ್ತಿರುವ ಆಹಾರದ ಗುಣಮಟ್ಟ, ನೀರು, ಔಷಧಿ ಮತ್ತು ಶುಚಿತ್ವದ ಬಗ್ಗೆ ವಿಚಾರಿಸಿದರು.

ಆಸ್ಪತ್ರೆಯಲ್ಲಿ ಸೋಂಕಿತರನ್ನು ವೈದ್ಯರು, ನರ್ಸ್‌ಗಳು ಉಪಚರಿಸುತ್ತಿರುವ ರೀತಿ ಹಾಗೂ ಸೌಲಭ್ಯಗಳ ಬಗ್ಗೆಖುದ್ದು ರೋಗಿಗಳಿಂದಲೇ ವಿವರಣೆ ಪಡೆದರು. ಇನ್ನುಮುಂದೆ ಮೂಲ ಸೌಕರ್ಯಗಳಲ್ಲಿ ಯಾವುದೇ ರೀತಿಯಲೋಪ ಉಂಟಾಗದಂತೆ ಕ್ರಮವಹಿಸಲು ಆಸ್ಪತ್ರೆಯವೈದ್ಯರು ಮತ್ತು ಅಧಿ ಕಾರಿಗಳಿಗೆ ಸೂಚಿಸಿದರು.  ಈಗಾಗಲೇ ನಿಗದಿತ ಗುರಿಯಂತೆ ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟ ಶೇ.50 ಜನರಿಗೆ ಕೋವಿಡ್‌ ಲಸಿಕೆ ಹಾಕಲಾಗಿದೆ. ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆಹಾಕಲಾಗುವುದು ಎಂದು ವಿವರಿಸಿದರು.

ವೈದ್ಯಾಧಿ ಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಲಿ: ಕೋವಿಡ್ ನಿಯಂತ್ರಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯರು, ದಾದಿಯರ ಮತ್ತು ಸಹಾಯಕ ಸಿಬ್ಬಂದಿ ಪಾತ್ರ ಬಹಳ ಮುಖ್ಯ. ಎಲ್ಲರೂ ಕಾರ್ಯ ಕೇಂದ್ರ ಸ್ಥಳದಲ್ಲಿದ್ದು, ಕೆಲಸ ಮಾಡುವಂತೆ ಸೂಚಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ. ಕೆ.ಮಿಥುನ್‌ ಕುಮಾರ್‌, ಉಪವಿಭಾಗಾಧಿಕಾರಿ ರಘುನಂದನ್‌, ಕೋವಿಡ್‌ ನೋಡಲ್‌ ಅಧಿಕಾರಿಯಶಸ್ವಿನಿ, ಶಿಡ್ಲಘಟ್ಟ ತಹಶೀಲ್ದಾರ್‌ ಬಿ.ಎಸ್‌.ರಾಜೀವ್‌,ತಾಪಂ ಇಒ ಚಂದ್ರಕಾಂತ್‌, ಬಾಗೇಪಲ್ಲಿ ತಹಶೀಲ್ದಾರ್‌ದಿವಾಕರ್‌, ತಾಲೂಕು ಆರೋಗ್ಯಾ ಧಿಕಾರಿಸತ್ಯನಾರಾಯಣ ರಾವ್‌, ಶಿಡ್ಲಘಟ್ಟ ತಾಲೂಕು ಆರೋಗ್ಯಾಧಿ ಕಾರಿ ಡಾ.ವೆಂಕಟೇಶ್‌ಮೂರ್ತಿ,ನಗರಸಭೆ ಪೌರಾಯುಕ್ತ ಶ್ರೀನಿವಾಸ್‌, ಸಿಡಿಪಿಒನಾಗವೇಣಿ, ನಗರಸಭೆ ಮುಖ್ಯಾಧಿ ಕಾರಿ ಪಂಕಜ್‌ರೆಡ್ಡಿ,

ಡಾ.ಕಿಶನ್‌, ಡಾ.ವಿಜಯಲಕ್ಷ್ಮೀ , ಗುಡಿಬಂಡೆ, ಶಿಡ್ಲಘಟ್ಟ, ಬಾಗೇಪಲ್ಲಿ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.

 

ಕನಿಷ 10 ಜನರಿಗೆ ದಂಡ ವಿಧಿಸಿ :

ಹಳ್ಳಿಗಳಲ್ಲಿ ಜನರು ಮಾಸ್ಕ್ ಹಾಕುತ್ತಿಲ್ಲ, ಅವರಿಗೆ ಕಡ್ಡಾಯವಾಗಿ ದಂಡ ಹಾಕಬೇಕು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿದಿನ ಕನಿಷ್ಠ 10 ಜನರಿಗೆ ದಂಡ ವಿ ಧಿಸಬೇಕು, ಪ್ರತಿ ನಗರಪ್ರದೇಶಗಳಲ್ಲಿ ಪ್ರತಿ ವಾರ್ಡ್‌, ಪ್ರತಿ ಗ್ರಾಮಕ್ಕೆ ಒಂದು ಟಾಸ್ಕ್ಫೋರ್ಸ್‌ ಸಮಿತಿ, ನೋಡಲ್‌ ಅ ಧಿಕಾರಿ ನೇಮಿಸಲಾಗಿದೆ. ಈಟಾಸ್ಕ್ ಫೋರ್ಸ್‌ ಸಮಿತಿ ಯೋಜನೆ ರೂಪಿಸಿಕೊಂಡು ಪ್ರತಿಮನೆಗೆ ಭೇಟಿ ನೀಡಿ ಎಷ್ಟು ಜನರಿಗೆ ಲಸಿಕೆ ಹಾಕಲಾಗಿದೆ, ಕೋವಿಡ್ ಕೇಸು ಎಷ್ಟು, ಸಕ್ರಿಯ ಎಷ್ಟು ಎಂಬ ಮಾಹಿತಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಲತಾ ಹೇಳಿದರು.

ಕೋವಿಡ್‌ ಸೋಂಕು ತಗುಲಿದವರ ಪ್ರಥಮ, ದ್ವಿತೀಯ ಸಂಪರ್ಕಿತರನ್ನು ಪತ್ತೆಹಚ್ಚಿ ಹೋಂ ಕೊರಟೈನ್‌ನಲ್ಲಿ ಇರುವಂತೆ

ನೋಡಿಕೊಳ್ಳಬೇಕು. ಅದಕ್ಕಾಗಿ ಪ್ರತ್ಯೇಕ ಹೋಂ ಐಸೋಲೇಷನ್‌ ತಂಡವನ್ನು ರಚಿಸಿ ಪ್ರಥಮ, ದ್ವಿತೀಯ ಸಂಪರ್ಕಿತರ ಮೇಲೆ ನಿಗಾ ವಹಿಸಬೇಕು. ಆಶಾ, ಅಂಗನವಾಡಿಕಾರ್ಯಕರ್ತರು, ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮ ಸಹಾಯಕರು, ಸಿಬ್ಬಂದಿ ಸಮಿತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪರಿಣಾಮಕಾರಿಯಾಗಿ ಕೋವಿಡ್ ನಿಯಂತ್ರಣ ಕ್ರಮ ಜರುಗಿಸಬೇಕು ಎಂದರು.

 

ಹೋಂ ಕೊರಂಟೈನ್‌ ಇರಲು ಇಚ್ಛಿಸದವರ ಮೇಲೆ ಪ್ರಕರಣ :

ಲಸಿಕೆ ಜೊತೆಗೆ ಗಂಟಲು ದ್ರವ ಪರೀಕ್ಷೆಗೆ ಹೆಚ್ಚೆಚ್ಚು ಜನರನ್ನು ಒಳಪಡಿಸಬೇಕು,ಯಾವುದೇ ಕಾರಣಕ್ಕೂ ಕೋವಿಡ್‌ ಸಾವು ಸಂಭವಿಸದಂತೆ ಮುನ್ನೆಚ್ಚರಿಕಾಕ್ರಮಗಳನ್ನು ವಹಿಸಬೇಕು, ಕೋವಿಡ್‌ಸೋಂಕಿತರ ಪ್ರಾಥಮಿಕ ಸಂಪರ್ಕಿತರುಹೋಂಕ್ವಾರಟೈನ್‌ನಲ್ಲಿ ಇರಲು ವಿರೋಧಿ ಸಿದರೆ ಅಂತವರ ಮೇಲೆ ಪ್ರಕರಣ ದಾಖಲಿಸಬೇಕು. ಅವರೆಲ್ಲರೂಪ್ರತ್ಯೇಕವಾಗಿ ವಾಸಿಸುವಂತೆ ನೋಡಿಕೊಳ್ಳಬೇಕು ಎಂದು ಬಾಗೇಪಲ್ಲಿ ತಾಲೂಕು ಕೋವಿಡ್‌ ನೋಡಲ್‌ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಲತಾ ಸೂಚಿಸಿದರು.

ಟಾಪ್ ನ್ಯೂಸ್

Reliance jio offers discounts to retain users during corona pandemic

ಕೋವಿಡ್ 19 : ಗ್ರಾಹಕ ಸ್ನೇಹಿ ಯೋಜನೆಯೊಂದನ್ನು ಘೋಷಿಸಿದ ಜಿಯೋ

ಕಾಪು ಬಳಿ ಅಪಘಾತಕ್ಕೀಡಾದ ವೆಸೆಲ್ ಟಗ್ :ಇನ್ನೂ ಆರಂಭಗೊಳ್ಳದ ರಕ್ಷಣಾ ಕಾರ್ಯಾಚರಣೆ !

ಕಾಪು ಬಳಿ ಅಪಘಾತಕ್ಕೀಡಾದ ವೆಸೆಲ್ ಟಗ್ :ಇನ್ನೂ ಆರಂಭಗೊಳ್ಳದ ರಕ್ಷಣಾ ಕಾರ್ಯಾಚರಣೆ !

covid effect at chikkamagalore

ಚಿಕ್ಕಮಗಳೂರು : ನಿಯಮ ಉಲ್ಲಂಘಿಸಿ ಅಂತ್ಯಸಂಸ್ಕಾರಕ್ಕೆ ಹೋದವರಿಗೆ ಕೋವಿಡ್ ದೃಢ

cats

ಫೇಸ್ ಬುಕ್ ಸ್ನೇಹಿತನಿಂದ ಹೀನ ಕೃತ್ಯ : ಮಹಿಳೆ ಮೇಲೆ 25 ಕಾಮುಕರಿಂದ ಅತ್ಯಾಚಾರ

cats

ದೆಹಲಿಯಲ್ಲಿ ಮತ್ತೆ ಒಂದು ವಾರ ಲಾಕ್ ಡೌನ್ ಮುಂದುವರಿಕೆ

Untitled-1

ಜೋರಾದ ಗಾಳಿ-ಮಳೆಗೆ ಗೋಡೆ ಕುಸಿದು ಅಜ್ಜಿ-ಮೊಮ್ಮಗ ಸಾವು

ಬದ್ಗದಸ್ದ

ಚಿಕ್ಕಮಗಳೂರಿನಲ್ಲೂ ಆಕ್ಸಿಜನ್ ಬಸ್ ಸೇವೆ ಪ್ರಾರಂಭ : ಡಿಸಿಎಂ ಸವದಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Eid ul Fitr

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸರಳ ಈದ್‌ ಉಲ್‌ ಫಿತ್ರ್

Maintain food quality

ಕ್ಯಾಂಟೀನ್‌ ಆಹಾರದಲ್ಲಿ ಗುಣಮಟ್ಟ ಕಾಯ್ದುಕೊಳ್ಳಿ

ಶಿಡ್ಲಘಟ್ಟ : ಬ್ಯಾಂಕ್ ದರೋಡೆಗೆ ವಿಫಲ ಯತ್ನ ; ಸಿಸಿ ಕ್ಯಾಮೆರಾದ DVR ಹೊತ್ತೊಯ್ದ ಕಳ್ಳರು

ಶಿಡ್ಲಘಟ್ಟ : ಬ್ಯಾಂಕ್ ಕಳ್ಳತನಕ್ಕೆ ಬಂದು ಸಿಸಿ ಕ್ಯಾಮೆರಾದ DVR ಹೊತ್ತೊಯ್ದ ಕಳ್ಳರು

ASCs

ಕೋವಿಡ್ ನಿರ್ಬಂಧದ ನಡುವೆಯೂ ಡಿಕೆಶಿ ದೇವಾಲಯ ಭೇಟಿ

1305cmyp7_1305bg_2

ಕೋವಿಡ್ ಸೋಂಕಿಗೆ ಮತ್ತೂಬ್ಬ ಶಿಕ್ಷಕ ಬಲಿ

MUST WATCH

udayavani youtube

ಪುತ್ತೂರು ಮಹಾಲಿಂಗೇಶ್ವರ ದೇಗುಲದ ಸಭಾಂಗಣ ಸದ್ಯಕ್ಕೆ COVID CARE CENTRE

udayavani youtube

ಕನ್ನಡ ಶಾಲೆಯ ವಿಭಿನ್ನ ಇಂಗ್ಲೀಷ್ ಕ್ಲಾಸ್

udayavani youtube

ದೆಹಲಿಯಲ್ಲಿ ಕೋವಿಡ್ 19 ಲಾಕ್ ಡೌನ್ ಮತ್ತೆ ವಿಸ್ತರಿಸಬೇಡಿ

udayavani youtube

ರಾಯಚೂರು ; ಫುಲ್ ಲಾಕ್ ಡೌನ್ ಹಿನ್ನೆಲೆ ಎಣ್ಣೆ ಖರೀದಿಗೆ ಮುಗಿಬಿದ್ದ ಮದ್ಯಪ್ರಿಯರು

udayavani youtube

Oxygen ನಮಗೆ ಬೇಕಿರುವುದಕ್ಕಿಂತ ಜಾಸ್ತಿನೇ ಇದೆ

ಹೊಸ ಸೇರ್ಪಡೆ

Reliance jio offers discounts to retain users during corona pandemic

ಕೋವಿಡ್ 19 : ಗ್ರಾಹಕ ಸ್ನೇಹಿ ಯೋಜನೆಯೊಂದನ್ನು ಘೋಷಿಸಿದ ಜಿಯೋ

10 Cryogenic Oxygen Tanker

10 ಕ್ರಯೋಜನಿಕ್‌ ಆಮ್ಲಜನಕ ಟ್ಯಾಂಕರ್‌

ಕಾಪು ಬಳಿ ಅಪಘಾತಕ್ಕೀಡಾದ ವೆಸೆಲ್ ಟಗ್ :ಇನ್ನೂ ಆರಂಭಗೊಳ್ಳದ ರಕ್ಷಣಾ ಕಾರ್ಯಾಚರಣೆ !

ಕಾಪು ಬಳಿ ಅಪಘಾತಕ್ಕೀಡಾದ ವೆಸೆಲ್ ಟಗ್ :ಇನ್ನೂ ಆರಂಭಗೊಳ್ಳದ ರಕ್ಷಣಾ ಕಾರ್ಯಾಚರಣೆ !

Prioritize the necessary facilities

ಅಗತ್ಯ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಿ

Is infection spreading from primary contact?

ಪ್ರಾಥಮಿಕ ಸಂಪರ್ಕದಿಂದ ಹರಡುತ್ತಿದೆಯೇ ಸೋಂಕು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.