ಚಿಕ್ಕಬಳ್ಳಾಪುರ, ಕೋಲಾರಕ್ಕೆ ತೆರೆದ ಕಾಲುವೆಯಲ್ಲಿ ಎತ್ತಿನಹೊಳೆ ನೀರು

Team Udayavani, Aug 11, 2018, 6:05 AM IST

ಚಿಕ್ಕಬಳ್ಳಾಪುರ: ಬಯಲು ಸೀಮೆಯ ಬರ ಪೀಡಿತ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಪೈಪ್‌ಲೈನ್‌ ಬದಲಾಗಿ ತೆರೆದ ಕಾಲುವೆ ಮೂಲಕ ಎತ್ತಿನಹೊಳೆ ನೀರು ಹರಿಸಲಾಗುವುದು ಎಂದು ಜಲ ಸಂಪನ್ನೂಲ ಸಚಿವ ಡಿ.ಕೆ.ಶಿವಕುಮಾರ್‌ ಘೋಷಿಸಿದರು.

ನಗರದಲ್ಲಿ ಶುಕ್ರವಾರ ಸ್ಥಳೀಯ ಒಕ್ಕಲಿಗರ ಸಂಘದಿಂದ ನಡೆದ ಕೆಂಪೇಗೌಡ ಜಯಂತಿಯಲ್ಲಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಯಡಿ ತಜ್ಞರ ವರದಿ ಪ್ರಕಾರ 24 ಟಿಎಂಸಿ ನೀರು ಸಿಗಲಿದೆ. ಮುಖ್ಯವಾಗಿ ಎತ್ತಿನಹೊಳೆ ಯೋಜನೆಯನ್ನು ಕೋಲಾರ, ಚಿಕ್ಕಬಳ್ಳಾಫ‌ುರ ಜಿಲ್ಲೆಗಳನ್ನು ದೃಷ್ಟಿಯಲ್ಲಿರಿಸಿಕೊಂಡು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಆದರೆ ಪೈಪ್‌ಲೈನ್‌ ಮೂಲಕ ನೀರು ಹರಿಸುವುದು ವಿಳಂಬ ಆಗುತ್ತದೆ ಎಂಬ ಕಾರಣಕ್ಕೆ ಜತೆಗೆ ಯೋಜನೆಯ ಬಹುಪಾಲು ನೀರು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಸಿಗಬೇಕೆಂಬ ಉದ್ದೇಶದಿಂದ ಪೈಪ್‌ಲೈನ್‌ ಬದಲಾಗಿ ತೆರೆದ ಕಾಲುವೆ ಮೂಲಕ ಹರಿಸಲು ನಿರ್ಧರಿಸಲಾಗಿದೆ. 

ತೆರೆದ ಕಾಲುವೆಯಲ್ಲಿ ಯಾರು ಕೂಡ ರೈತರಯ ತಮ್ಮ ಜಮೀನುಗಳಿಗೆ ಅಥವಾ ತೋಟಗಳಿಗೆ ಕೊಳವೆ ಬಾವಿಗಳ ಪಂಪ್‌ಸೆಟ್‌ನ್ನು ಅಳವಡಿಸದಂತೆ ವಿಶೇಷ ಕಾನೂರು ರೂಪಿಸಲು ಇಲಾಖೆ ನಿರ್ಧರಿಸಿದೆ. ಎತ್ತಿನಹೊಳೆ ಯೋಜನೆ ನೀರು ಪಡೆಯಲು ಹಾಸನದ ಅರಿಸೀಕೆರೆ ಮತ್ತಿತರ ಭಾಗಗಳ ರೈತರು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಎತ್ತಿನಹೊಳೆ ಯೋಜನೆ ರೂಪಿಸಿರುವುದೇ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಆದ್ದರಿಂದ ಶೀಘ್ರದಲ್ಲಿ ಕಾಮಗಾರಿ ನಿರ್ವಹಿಸಲು ಈಗಾಗಲೇ ಮುಖ್ಯಮಂತ್ರಿಗಳು ಸಭೆ ನಡೆಸಿ ಪ್ರಗತಿ ಪರಾಮರ್ಶೆ ನಡೆಸಿದ್ದಾರೆ ಎಂದರು.

ರೈತರು ಶ್ರಮ ಜೀವಿಗಳು:
ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ರೈತರು ಶ್ರಮ ಜೀವಿಗಳಾಗಿದ್ದಾರೆ. 15,00, 2,000 ಅಡಿಗಳ ಅಳದಿಂದ ನೀರು ತೆಗೆದು ಉತ್ತಮ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಎರಡು ಜಿಲ್ಲೆಗಳಲ್ಲಿ ಬೆಳೆಯುವ ಹಣ್ಣು, ತರಕಾರಿ, ಹಾಲು, ರೇಷ್ಮೆ ಇಡೀ ದೇಶಕ್ಕೆ ಪೂರೈಕೆ ಆಗುತ್ತದೆ. ಜಿಲ್ಲೆಯ ರೇಷ್ಮೆ ರಾಮನಗರ ಜಿಲ್ಲೆಗಿಂತ ಹೆಚ್ಚಿಗೆ ಗುಣಮಟ್ಟದಿಂದ ಕೂಡಿದೆ. ಜಿಲ್ಲೆಗೆ ತನ್ನದೇ ಆದ ಇತಿಹಾಸ ಇದೆ. ಆದರೆ ಶಾಶ್ವತ ನೀರಾವರಿ ಇಲ್ಲದೇ ರೈತರು ತೀರಾ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ಶೀಘ್ರಗತಿಯಲ್ಲಿ ಎತ್ತಿನಹೊಳೆ ನೀರನ್ನು ಈ ಭಾಗಕ್ಕೆ ಹರಿಸಬೇಕೆಂಬ ನಿಟ್ಟಿನಲ್ಲಿ ಪ್ರಾಮಾಣಿಕ ಸರ್ಕಾರ ಕೆಲಸ ಮಾಡುತ್ತಿದೆ. ರಾಜ್ಯ ಸರ್ಕಾರ ರೈತರ ಧ್ವನಿಯಾಗಿ, ಜನ ಸಾಮಾನ್ಯರ ಅಶೋತ್ತರಗಳಿಗೆ ಸ್ವಂದಿಸಿ ಕೆಲಸ ಮಾಡಲಿದೆ ಎಂದು ಹೇಳಿದರು.

ಮೆಡಿಕಲ್‌ ಕಾಲೇಜಿಗೆ ಅನುದಾನ
ಕಳೆದ ಕಾಂಗ್ರೆಸ್‌ ಸರ್ಕಾರದಲ್ಲಿ ಜಿಲ್ಲೆಗೆ ವೈದ್ಯಕೀಯ ಕಾಲೇಜು ಮಂಜೂರಾಗಿದ್ದರೂ ಕಾಮಗಾರಿ ಆರಂಭಗೊಂಡಿಲ್ಲ. ಈ ಸರ್ಕಾರದಲ್ಲಿ ವೈದ್ಯಕೀಯ ಕಾಲೇಜು ಕನಸು ನನಸಾಗಬೇಕಿದೆ. ಕಾಲೇಜು ಸ್ಥಾಪಿಸಿ ಕೆಂಪೇಗೌಡರ ಹೆಸರು ನಾಮಕಾರಣ ಮಾಡಬೇಕು ಎಂದು ಶಾಸಕ ಸುಧಾಕರ್‌ ಮನವಿ ಮಾಡಿದರು. ಇದಕ್ಕೆ ಸ್ವಂದಿಸಿದ ಸಚಿವ ಡಿ.ಕೆ.ಶಿವಕುಮಾರ್‌, ಕಾಲೇಜು ನಿರ್ಮಾಣಕ್ಕೆ ಅಗತ್ಯ ಹಣಕಾಸಿನ ನೆರವು ಒದಗಿಸುವ ಭರವಸೆ ನೀಡಿದರು.


ಈ ವಿಭಾಗದಿಂದ ಇನ್ನಷ್ಟು

  • ಹುಬ್ಬಳ್ಳಿ: ರಾಜ್ಯದ ಎರಡು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ದಾಖಲೆ ಮತದಾನವಾಗಿದೆ. ಕುಂದಗೋಳದಲ್ಲಿ ಶೇ.82.42, ಚಿಂಚೋಳಿಯಲ್ಲಿ ಶೇ.71 ಮತದಾನವಾಗಿದೆ. ಅಲ್ಲಲ್ಲಿ...

  • ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಉಳಿಸಲು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಪ್ರಯತ್ನಪಡುತ್ತಿರುವಂತೆಯೇ, ಜೆಡಿಎಸ್‌ ಜತೆಗಿನ ಮೈತ್ರಿ ಖತಂಗೊಳಿಸುವುದೇ ಉತ್ತಮ...

  • ಬೆಂಗಳೂರು: ರಾಜ್ಯ ರಾಜಕಾರಣದ ದಿಕ್ಕು ಬದಲಿಸುವ ರೀತಿಯಲ್ಲಿ ಲೋಕಸಭಾ ಚುನಾವಣೋತ್ತರ ಸಮೀಕ್ಷಾ ಫ‌ಲಿತಾಂಶ ಹೊರಬಿದ್ದಿದ್ದು, ಮೈತ್ರಿ ಪಕ್ಷಗಳಿಗೆ ದೊಡ್ಡ ಆಘಾತ...

  • ಬೆಂಗಳೂರು: ತೀವ್ರ ಕುತೂಹಲ ಮೂಡಿಸಿರುವ ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರಗಳಿಗೆ ಭಾನುವಾರ ನಡೆದ ಮತದಾನ ಬಹುತೇಕ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು,...

  • ಕಲಬುರಗಿ: ಚಿಂಚೋಳಿ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನವರು ಮತದಾರರಿಗೆ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಡಾ.ಉಮೇಶ ಜಾಧವ್‌ ಅವರು ಪೊಲೀಸ್‌...

ಹೊಸ ಸೇರ್ಪಡೆ