ಯೋಧರ ಪಡೆಯಿಂದ 78 ಜನರ ರಕ್ಷಣೆ

ನೀರಿನಿಂದ ಆವೃತ್ತವಾದ ಆಲೆಖಾನ್‌ ಹೊರಟ್ಟಿಯಲ್ಲಿ ರಕ್ಷಣಾ ಕಾರ್ಯ

Team Udayavani, Aug 12, 2019, 11:29 AM IST

ಚಿಕ್ಕಮಗಳೂರು: ಆಲೇಖಾನ್‌ ಹೊರಟ್ಟಿಯಲ್ಲಿ ಸಿಲುಕಿದ್ದ ಜನರನ್ನು ಯೋಧರ ತಂಡವು ರಕ್ಷಿಸಿ ಕರೆತಂದಿತು.

ಚಿಕ್ಕಮಗಳೂರು: ಗುಡ್ಡ ಕುಸಿತ, ನದಿ ಪ್ರವಾಹದಿಂದಾಗಿ ಆಲೇಖಾನ್‌ ಹೊರಟ್ಟಿ ಗ್ರಾಮದಲ್ಲಿ ಸಿಲುಕಿಕೊಂಡಿದ್ದ 78 ಗ್ರಾಮಸ್ಥರನ್ನು ಯೋಧರ ಪಡೆ ಸುರಕ್ಷಿತವಾಗಿ ಕರೆತರುವಲ್ಲಿ ಯಶಸ್ವಿಯಾಗಿದೆ.

ಕಳೆದ 3 ದಿನಗಳ ಹಿಂದೆ ದಿಢೀರನೆ ಭಾರೀ ಮಳೆ ಸುರಿದು ಗುಡ್ಡ ಕುಸಿತವಾಗಿದ್ದಲ್ಲದೆ, ನದಿಯ ನೀರು ಪ್ರವಾಹದಂತೆ ಉಕ್ಕಿ ಹರಿದಿದ್ದರಿಂದಾಗಿ ಗ್ರಾಮಸ್ಥರು ಹೊರಬರಲಾರದೆ ನಡುಗಡ್ಡೆಯಲ್ಲಿ ಸಿಲುಕಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಗ್ರಾಮಸ್ಥರನ್ನು ರಕ್ಷಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿರಲಿಲ್ಲ.

ಭಾನುವಾರ ಬೆಳಗ್ಗೆ 8 ಗಂಟೆಗೆ ಕಾರ್ಯಚರಣೆಗೆ ಆರಂಭಿಸಿದ ಯೋಧರ ತಂಡ ಸತತ 5 ರಿಂದ 6 ಗಂಟೆಗಳ ಕಾರ್ಯಾಚರಣೆ ನಡೆಸಿ ಅಪಾಯದಲ್ಲಿ ಸಿಲುಕಿದ್ದವರನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ.

ಕಳೆದೊಂದು ವಾರದಿಂದ ಸುರಿದ ಬಾರಿ ಮಳೆಗೆ ಹೇಮಾವತಿ ನದಿಯಲ್ಲಿ ಪ್ರವಾಹ ಅಪಾಯದಟ್ಟ ಮೀರಿ ಹರಿದು ಪ್ರವಾಹ ಉಂಟು ಮಾಡಿತ್ತು. ಅದರಲ್ಲೂ ಕಳೆದ ಮೂರು ದಿನಗಳ ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಆಲೇಖಾನ್‌ ಮತ್ತು ಹೊರಟ್ಟಿ ಸಂಪರ್ಕ ಕಲ್ಪಿಸುವ ರಸ್ತೆ ಮೇಲೆ ದೊಡ್ಡ ಪ್ರಮಾಣದಲ್ಲಿ ಗುಡ್ಡದ ಮಣ್ಣು ಹಾಗೂ ಮರಗಳು ಬಿದ್ದ ಪರಿಣಾಮ ಸಂಪರ್ಕ ಕಡಿತಗೊಂಡು ತಮ್ಮನ್ನು ರಕ್ಷಿಸುವಂತೆ ಜಿಲ್ಲಾಡಳಿತವನ್ನು ಪರಿ ಪರಿಯಾಗಿ ಬೇಡಿಕೊಂಡಿದ್ದರು.

ಶುಕ್ರವಾರ ಮತ್ತು ಶನಿವಾರ ಜಿಲ್ಲಾಡಳಿತ, ಅಗ್ನಿಶಾಮಕ ದಳ ಹಾಗೂ ಪೊಲೀಸ್‌ ಸಿಬ್ಬಂದಿ ಎಷ್ಟೇ ಪ್ರಯತ್ನಪಟ್ಟರು ರಸ್ತೆಯ ಮೇಲೆ ಹಲವು ಕಡೆ ಅಪಾರ ಪ್ರಮಾಣದ ಗುಡ್ಡದ ಮಣ್ಣು ಹಾಗೂ ಮರ ಬಿದ್ದಿದ್ದರಿಂದ ಆಲೇಖಾನ್‌, ಹೊರಟ್ಟಿ ಗ್ರಾಮವನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ತಮ್ಮ ಪ್ರಯತ್ನವನ್ನು ಕೈ ಚಲ್ಲಿದ ಜಿಲ್ಲಾಡಳಿತ ಇರವ ರಕ್ಷಣೆಗೆ ಹೆಲಿಕಾಪ್ಟರ್‌ ಹಾಗೂ ಯೋಧರನ್ನು ಕಳಿಸುವಂತೆ ರಾಜ್ಯ ಸರ್ಕಾರದ ಮೊರೆ ಹೋಗಿದ್ದರು.

ಜಿಲ್ಲಾಡಳಿತದ ಕೋರಿಕೆಗೆ ಸ್ಪಂದಿಸಿದ ರಾಜ್ಯ ಸರ್ಕಾರ ಶನಿವಾರ ಸಂಜೆ ಯೋಧರ ತಂಡವನ್ನು ಮೂಡಿಗೆರೆಗೆ ಕಳಿಸಿತ್ತು. ಭಾನುವಾರ 8 ಗಂಟೆಗೆ ಕಾರ್ಯಾಚರಣೆ ಆರಂಭಿಸಿದ ಯೋಧರ ತಂಡ ಸತತ 5 ರಿಂದ6 ಗಂಟೆ ಕಾರ್ಯಾಚರಣೆ ನಡೆಸಿ ಯೋಧರ ತಂಡ ಆಲೇಖಾನ್‌ ಹೊರಟ್ಟಿ ಗ್ರಾಮದಲ್ಲಿ ಸಿಲುಕಿದ್ದ ಸುಮಾರು 78 ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

ಭಾನುವಾರ ಬೆಳಗ್ಗೆ 8 ಗಂಟೆಯಿಂದ ಗುಡ್ಡಗಾಡು ಪ್ರದೇಶದಲ್ಲಿ 4 ರಿಂದ 5 ಕಿಮೀ ರಸ್ತೆ ಮಾಡಿಕೊಂಡು ಆಲೇಖಾನ್‌ ಹೊರಟ್ಟಿ ಗ್ರಾಮವನ್ನು ಪ್ರವೇಶಿಸಿದ ಯೋಧರ ತಂಡ ರ್ಯಾಕ್‌ ಮತ್ತು ಹಗ್ಗದ ಸಹಾಯದಿಂದ ಜನರನ್ನು ಸುರಕ್ಷಿತವಾಗಿ ಹ್ರೆರತಂದರು. ವಾಪಸ್‌ ಬರುವ ಸಂದರ್ಭದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದವರು, ವೃದ್ಧರನ್ನು ಯೋಧರು ನಾಲ್ಕೈದು ಕಿಮೀ ಹೆಗಲ ಮೇಲೆ ಹೊತ್ತು ತಂದಿದ್ದಾರೆ. ಯೋಧರಿಂದ ರಕ್ಷಿಸಲ್ಪಟ್ಟ ಜನರನ್ನು ಕೊಟ್ಟಿಗೆಹಾರದಲ್ಲಿ ತೆರೆಯಲಾಗಿರುವ ನಿರಾಶ್ರಿತರ ಕೇಂದ್ರದಲ್ಲಿ ಬಿಡಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಉಡುಪಿ: ನೂತನ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ಅವರ ಪದಗ್ರಹಣ ಸಮಾರಂಭ ಫೆ. 24ರ ಸಂಜೆ 4 ಗಂಟೆಗೆ ಹೊಟೇಲ್‌ ಕಿದಿಯೂರಿನ ಶೇಷಶಯನ ಸಭಾಭವನದಲ್ಲಿ...

  • ಕಡಬ: ರಾಜ್ಯದಲ್ಲಿ ಘೋಷಣೆಯಾಗಿರುವ ಎಲ್ಲ 50 ನೂತನ ತಾಲೂಕುಗಳು ಅನುದಾನದ ಕೊರತೆಯಿಂದ ಕಾರ್ಯಾರಂಭ ಮಾಡಿಲ್ಲ. ಆರು ದಶಕಗಳ ಹೋರಾಟದ ಫಲವಾಗಿ ಘೋಷಣೆಯಾದ ಕಡಬ ತಾಲೂಕಿನ...

  • ಒಂದು ದಿನ ಮಧ್ಯಾಹ್ನ ಮರವೊಂದು ತಿಳಿಗಾಳಿಗೆ ತಾನೇ ತೂಗಿಕೊಳ್ಳುತ್ತ ನಿದ್ರಿಸುತ್ತಿತ್ತು. ಅಷ್ಟರಲ್ಲಿ ಮಹಾನ್‌ ಪಂಡಿತನಾದ ಡಾಂಗೌಜಿ ತನ್ನ ಸ್ನೇಹಿತನೊಡನೆ...

  • ಲಕ್ಷಾಂತರ ರೂಪಾಯಿ ವ್ಯಯಿಸಿ ಅಳವಡಿಸಿರುವ ರಬ್ಬರ್‌ ಕೋನ್‌ಗಳ ಪ್ರಸ್ತುತ ಸ್ಥಿತಿ ಹೇಗಿದೆ ಎಂದು ತಿಳಿಯುವ ನಿಟ್ಟಿನಲ್ಲಿ "ಸುದಿನ' ತಂಡವು ರಿಯಾಲಿಟಿ ಚೆಕ್‌ ನಡೆಸಿದೆ....

  • ಮನೆಯ ಸುತ್ತುಮುತ್ತಲಿನಲ್ಲಿ ಬರುವ ಪ್ರತಿಯೊಂದು ಹಕ್ಕಿಗೂ ಅದರದ್ದೇ ಆದ ಚೆಲುವು, ಬೆಡಗು, ಆಕರ್ಷಣೆ. ಅಶ್ವತ್ಥಮರದ ಎಲೆಗಳ ನಡುವೆ ಕುಳಿತಿರುವ ವಸಂತದ ಹಕ್ಕಿ ಕಣ್ಣಿಟ್ಟು...