ಸಚಿವರಿಗೆ ಅತಿವೃಷ್ಟಿಯ ಕರಾಳ ದರ್ಶನ

ಮೂಡಿಗೆರೆ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ•ನೆರೆ ಹಾನಿ ಪರಿಶೀಲನೆ

Team Udayavani, Aug 22, 2019, 11:40 AM IST

22-Agust-12

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಆಗಿರುವ ಹಾನಿಯನ್ನು ಸಚಿವರಾದ ಸಿ.ಟಿ.ರವಿ ಮತ್ತು ಜೆ.ಸಿ.ಮಾಧುಸ್ವಾಮಿ ಪರಿಶೀಲಿಸಿದರು.

ಚಿಕ್ಕಮಗಳೂರು: ನಿರಂತರ ಮಳೆ, ಭೂ ಕುಸಿತಗಳ ಮಧ್ಯೆ ಬದುಕಿದ್ದೇ ಹೆಚ್ಚು. ಇಲ್ಲಿ ಜೀವಿಸಲು ಸಾಧ್ಯವಿಲ್ಲ. ನಮಗೆ ಆಗಿರುವ ನಷ್ಟಕ್ಕೆ ಪರಿಹಾರ ನೀಡಿ, ನಮ್ಮನ್ನು ಬೇರೆ ಕಡೆಗೆ ಸ್ಥಳಾಂತರಿಸಿ…. ಇದು ಅತಿವೃಷ್ಟಿ ಹಾಗೂ ಪ್ರವಾಹದಿಂದ ಸರ್ವಸ್ವವನ್ನೂ ಕಳೆದುಕೊಂಡ ಸಂತ್ರಸ್ತರು ನೂತನ ಸಚಿವರ ಎದುರು ತಮ್ಮ ನೋವು ತೋಡಿಕೊಂಡ ಪರಿ.

ಭಾರೀ ಮಳೆಯಿಂದ ತನ್ನ ಮೂಲ ಚಿತ್ರಣವನ್ನೇ ಕಳೆದುಕೊಂಡ ಮೂಡಿಗೆರೆ ತಾಲೂಕಿನ ಮಲೆಮನೆ, ದುರ್ಗದಹಳ್ಳಿ, ಆಲೇಕಾನ್‌ ಹೊರಟ್ಟಿ, ಮಧುಗುಂಡಿ ಮುಂತಾದ ಸ್ಥಳಗಳಿಗೆ ಬುಧವಾರ ಸಚಿವರಾದ ಸಿ.ಟಿ.ರವಿ ಮತ್ತು ಮಾಧುಸ್ವಾಮಿ ಭೇಟಿ ನೀಡಿದಾಗ ಸಂತ್ರಸ್ತರು ಪ್ರಕೃತಿ ವಿಕೋಪದ ಕರಾಳತೆಯನ್ನು ಬಿಚ್ಚಿಟ್ಟರು.

ಸಚಿವದ್ವಯರು ಅಧಿಕಾರಿಗಳು ಹಾಗೂ ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ, ತಾಪಂ ಅಧ್ಯಕ್ಷ ರತನ್‌ ಕುಮಾರ್‌ ಅವರೊಂದಿಗೆ ತೀವ್ರ ಭೂಕುಸಿತಕ್ಕೆ ಒಳಗಾಗಿರುವ ಮಲೆಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಂತ್ರಸ್ತರ ಅಹವಾಲು ಆಲಿಸಿದರು.

‘ನಿರಂತರವಾಗಿ ಸುರಿದ ಮಳೆಗೆ ಭೂಕುಸಿತ ಉಂಟಾಗಿ ಮನೆ, ತೋಟ ಮಣ್ಣಿನಡಿ ಹೂತು ಹೋಗಿದೆ. ಜೀವ ಉಳಿದಿದ್ದೆ ಹೆಚ್ಚು. ಫಸಲು ನೀಡುತ್ತಿದ್ದ ಕಾಫಿಗಿಡವೆಲ್ಲ ಮಣ್ಣುಪಾಲಾಗಿದೆ. ಅಡಿಕೆ ತೋಟ ಮಣ್ಣಿನ ರಾಡಿಯೊಳಗೆ ಸೇರಿದೆ. ಇಲ್ಲಿ ವಾಸ ಮಾಡಲಾರೆವು ಎಂದು ವಿಂದ್ಯಾ ಹಾಗೂ ರಾಜೇಶ್‌ ಕಣ್ಣೀರಿಡುತ್ತ ಗೋಳು ತೋಡಿಕೊಂಡರು.

ಸಚಿವ ಸಿ.ಟಿ.ರವಿ ಮಾತನಾಡಿ, ಎಲ್ಲರಿಗೂ ಪುನರ್ವಸತಿ ಕಲ್ಪಿಸಲಾಗುವುದು. ಸೂಕ್ತ ಸ್ಥಳವನ್ನು ಗುರುತಿಸಿ ಎಲ್ಲರಿಗೂ ಜೀವನ ನಡೆಸಲು ಅನುಕೂಲ ಮಾಡಿಕೊಡಲಾಗುವುದು. ಆದರೆ, ಅದು ಮುಂದೆ ಆಗಬೇಕಿರುವ ಕೆಲಸ. ಈಗ ತುರ್ತಾಗಿ ನಿಮಗೆ ಏನಾದರೂ ಆಗಬೇಕಿದ್ದರೆ ಅದನ್ನು ತಿಳಿಸಿ. ಮನೆ ಕಳೆದುಕೊಂಡಿರುವವರಿಗೆ ಬೇರೆಡೆ ಪುನರ್ವಸತಿ ಕಲ್ಪಿಸುವವರೆಗೆ 10 ತಿಂಗಳ ಮಟ್ಟಿಗೆ ಪ್ರತಿ ತಿಂಗಳು 5 ಸಾವಿರ ರೂ. ಮನೆ ಬಾಡಿಗೆ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಆ ರೀತಿ ಯಾರಾದರೂ ಬಾಡಿಗೆ ಮನೆ ಹುಡುಕಿಕೊಂಡರೆ ಅವರಿಗೆ ಕೊಡಲಾಗುವುದು ಎಂದರು.

ತುರ್ತು ಪರಿಹಾರವಾಗಿ ಮನೆ ಕಳೆದುಕೊಂಡವರಿಗೆ 10 ಸಾವಿರ ರೂ. ಅನ್ನು ಈಗಾಗಲೆ ಕೊಡಲಾಗಿದೆ. ಉಳಿದ ಪರಿಹಾರದ ಹಣವನ್ನು ಮುಂದಿನ ದಿನಗಳಲ್ಲಿ ಕೊಡಲಾಗುವುದು ಎಂದು ತಿಳಿಸಿದರು.

ಕಳೆದ 100 ವರ್ಷಗಳಿಂದ ನಮ್ಮ ಕುಟುಂಬ ಇಲ್ಲಿ ವಾಸಿಸುತ್ತಾ ಬಂದಿದೆ. ಆದರೆ, ಮೊನ್ನೆ ಬಂದ ವಿಪರೀತ ಮಳೆ ನಮ್ಮ ಬದುಕನ್ನೇ ನಾಶ ಮಾಡಿದೆ. 22 ಎಕರೆ ಭೂಮಿ ಹಾಳಾಗಿದೆ. ಕೇವಲ ನಮ್ಮ ಕುಟುಂಬ ಮಾತ್ರವಲ್ಲ, ಸುತ್ತಮುತ್ತಲು 25-30 ಕುಟುಂಬಗಳು ತಮ್ಮ ಜೀವಿತಾವಧಿಯ ಎಲ್ಲಾ ಆಸ್ತಿಯನ್ನು ಕಳೆದುಕೊಂಡಿದ್ದಾರೆ ಎಂದರು. ಅವರಿಗೆ ರವಿ, ಎಂ.ಬಿ.ಚಂದ್ರೇಗೌಡ, ಬಿ.ಚಂದ್ರೇಗೌಡ ಅವರು ಸಹ ಧ್ವನಿಗೂಡಿಸಿದರು.

ಇದೇ ರೀತಿಯ ಸ್ಥಿತಿ ಆಲೇಕಾನ್‌, ಬಿದರುತಳ, ಮಧುಗುಂಡಿ, ದುರ್ಗದಹಳ್ಳಿ, ಅಲ್ಗಡ ಮುಂತಾದ ಬೆಟ್ಟದ ತಡಿಯಲ್ಲಿ ಇರುವ ಗ್ರಾಮಗಳ ಜನರದ್ದಾಗಿತ್ತು. ಎಲ್ಲರ ಬೇಡಿಕೆಯೂ ಈ ವಿಪರೀತ ಮಳೆ ಸುರಿಯುವ ಪ್ರದೇಶದಿಂದ ನಮ್ಮನ್ನು ಸ್ಥಳಾಂತರಿಸಿ ಭೂಮಿ ಹಾಗೂ ಪರಿಹಾರ ನೀಡಿ, ಹೊಸದಾಗಿ ನಮ್ಮ ಜೀವನವನ್ನು ಆರಂಭಿಸಿಕೊಳ್ಳುತ್ತೇವೆ ಎಂಬುದಾಗಿತ್ತು.

ಈ ಎಲ್ಲಾ ಗ್ರಾಮಗಳಿಗೆ ಹೋಗುವ ರಸ್ತೆಗಳ ಮೇಲೆ ಬಿದ್ದಿದ್ದ ಲಾರಿಗಟ್ಟಲೆ ಮಣ್ಣನ್ನು ತೆಗೆದು ಈಗ ವಾಹನಗಳು ಓಡಾಡುವಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಆದರೆ, ಅನೇಕ ಕಡೆ ರಸ್ತೆಗಳೇ ನಾಶವಾಗಿ ಕೆಲವು ಗ್ರಾಮಗಳಿಗೆ ಹೊಸದಾಗಿ ಸಂಪರ್ಕ ಕಲ್ಪಿಸಲಾಗಿದೆ ಎಂದು ತಿಳಿಸಿದ ಶಾಸಕ ಕುಮಾರಸ್ವಾಮಿ, ಈ ಗ್ರಾಮಗಳ ಜನರನ್ನು ಬೇರೆಡೆಗೆ ಸ್ಥಳಾಂತರಿಸಬೇಕು. ಈ ಭೂಮಿಯನ್ನು ಅರಣ್ಯ ಇಲಾಖೆಗೆ ಕೊಟ್ಟು ಅಲ್ಲಿಂದ ಸುರಕ್ಷಿತವಾದ ಸ್ಥಳದಲ್ಲಿ ಭೂಮಿ ಪಡೆದು ಈ ಕುಟುಂಬಗಳಿಗೆ ಪುನರ್‌ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಸರ್ಕಾರಕ್ಕೆ ಇದನ್ನು ಮನವರಿಕೆ ಮಾಡಿಕೊಡಬೇಕೆಂದು ಸಚಿವರಿಗೆ ಹೇಳಿದರು.

ಸಚಿವರಾದ ಸಿ.ಟಿ. ರವಿ ಹಾಗೂ ಮಾಧುಸ್ವಾಮಿ ಬೆಟ್ಟದ ಬುಡದಲ್ಲಿರುವ ಈ ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಿದರಲ್ಲದೇ ಅಲ್ಲಲ್ಲಿ ಮಳೆಯಿಂದ ಸಾಕಷ್ಟು ಹಾನಿಗೊಳಗಾದ ಕುಟುಂಬದವರನ್ನು ಹಾಗೂ ಗದ್ದೆ-ತೋಟಗಳನ್ನು ಕಳೆದುಕೊಂಡ ಗ್ರಾಮಸ್ಥರನ್ನು ಭೇಟಿ ಮಾಡಿ, ಸರ್ಕಾರದಿಂದ ತಕ್ಷಣಕ್ಕೆ ದೊರೆಯುವ ಪರಿಹಾರ ಹಾಗೂ ಮುಂದೆ ಒದಗಿಸಲಿರುವ ಖಾಯಂ ಪರಿಹಾರದ ಬಗ್ಗೆ ವಿವರಿಸಿ ಸಾಂತ್ವನ ಹೇಳಿದರು.

ಆಲೇಕಾನ್‌ ಹೊರಟ್ಟಿ ಸೇರಿದಂತೆ ಪೂರ್ಣವಾಗಿ ಮನೆ ಕಳೆದುಕೊಂಡು ಸಂತ್ರಸ್ತರಿಗೆ ಆಶ್ರಯ ನೀಡಿರುವ ಬಿದರಹಳ್ಳಿ ಮೊರಾರ್ಜಿ ಶಾಲೆಗೆ ಸಚಿವರು ಭೇಟಿ ನೀಡಿ ಪರಿಶೀಲಿಸಿದಾಗ ಅಲ್ಲಿದ್ದ ಸಂತ್ರಸ್ತರು ಸಹ ತಮಗೆ ಬದಲಿ ಭೂಮಿ ಹಾಗೂ ವಸತಿ ಸೌಲಭ್ಯ, ಪರಿಹಾರ ನೀಡಬೇಕೆಂಬ ಬೇಡಿಕೆ ಮುಂದಿಟ್ಟರು.

ಮಳೆಯ ಹೊಡೆತ ಈ ಭಾಗದಲ್ಲಿ ಕಡಿಮೆಯಾಗಿದೆ. ಭೋರ್ಗರೆದು ಹರಿದ ಹಳ್ಳಗಳು ಈಗ ಶಾಂತವಾಗಿವೆ. ಆದರೆ, ಅತಿವೃಷ್ಟಿಯಿಂದಾದ ಹಾನಿ ಮಾತ್ರ ಹಾಗೇ ಉಳಿದಿದೆ. ಮತ್ತೂಮ್ಮೆ ಇಲ್ಲಿ ರಸ್ತೆಗಳನ್ನು ಸರಿಪಡಿಸಿ ನೀಡಬಹುದು. ಇರುವ ಜಾಗದಲ್ಲಿ ವಸತಿ ಸೌಲಭ್ಯ ಕಲ್ಪಿಸಬಹುದಾದರೂ ಈಗಾಗಲೇ ಮಣ್ಣು, ಕಲ್ಲಿನಲ್ಲಿ ಸೇರಿರುವ ತೋಟಗಳನ್ನು ಪುನಃಶ್ಚೇತನಗೊಳಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಇಲ್ಲಿನ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವುದೊಮದೇ ಪರಿಹಾರ ಎಂದು ವಿಧಾನ ಪರಿಷತ್‌ ಸದಸ್ಯ ಎಂ.ಕೆ. ಪ್ರಾಣೇಶ್‌ ಅಭಿಪ್ರಾಯಪಟ್ಟರು. ಸಚಿವರಿಗೆ ಅತಿವೃಷ್ಟಿ ಹಾನಿಗೊಳಗಾದ ಕುಟುಂಬಗಳಿಗೆ ಒದಗಿಸಿರುವ ಪರಿಹಾರದ ಬಗ್ಗೆ ಜಿಲ್ಲಾಧಿಕಾರಿ ಡಾ| ಬಗಾದಿಗೌತಮ್‌ ವಿವರ ನೀಡಿದರು. ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿ ರಾಜೀವ್‌ ಚಾವ್ಲಾ, ಜಿ.ಪಂ. ಸಿಇಒ ಎಸ್‌.ಅಶ್ವತಿ, ಜಿಲ್ಲಾ ರಕ್ಷಣಾಧಿಕಾರಿ ಹರೀಶ್‌ ಪಾಂಡೆ ಇತರರಿದ್ದರು.

ಟಾಪ್ ನ್ಯೂಸ್

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.