ಉಪಯೋಗಕ್ಕೆ ಬಾರದಂತಾದ ಎಪಿಎಂಸಿ ಹರಾಜು ಕಟ್ಟೆ

Team Udayavani, Jul 9, 2019, 10:19 AM IST

ಬಾಳೆಹೊನ್ನೂರು: ಕೊಪ್ಪ ಎಪಿಎಂಸಿಯಿಂದ ನಿರ್ಮಿಸಿರುವ ಹರಾಜು ಕಟ್ಟೆ.

ಬಾಳೆಹೊನ್ನೂರು: ಡೋಬಿಹಳ್ಳದ ಪಕ್ಕದಲ್ಲಿ ಕೊಪ್ಪ ಎಪಿಎಂಸಿ ವತಿಯಿಂದ 79 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಹರಾಜು ಕಟ್ಟೆ ಉಪಯೋಗಕ್ಕೆ ಬಾರದಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಉದ್ಘಾಟನೆಗೊಂಡು 20 ತಿಂಗಳಾದರೂ ಒಂದು ದಿನವೂ ಹಾರಜು ಕಟ್ಟೆಯಲ್ಲಿ ಸಂತೆ ನಡೆದಿಲ್ಲ. ಅಲೆಮಾರಿಗಳು ಹಾಗೂಭಿಕ್ಷುಕರಿಗೆ ವಾಸ ಮಾಡಲು ಅನುಕೂಲ ವಾಗಿದೆ. ಮೂಲಭೂತ ಸೌಲಭ್ಯ ಹಾಗೂ ಸರಿಯಾದ ರಸ್ತೆ ಇಲಯಿರುವುದೇ ಇದಕ್ಕೆ ಪ್ರಮುಖ ಕಾರಣ. ಡೋಬಿಹಳ್ಳದ ಪಕ್ಕದಲ್ಲಿ ರುವ ಮಾಂಸದಂಗಡಿ ಹಾಗೂ ಮೀನು ಮಾರುಕಟ್ಟೆ ತ್ಯಾಜ್ಯದಿಂದ ನೊಣ ಹಾಗೂಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿದೆ. ಭಾರೀ ಮಳೆ ಬಂದಾಕ್ಷಣ ಹರಾಜುಕಟ್ಟೆ ಜಲಾವೃತಗೊಳ್ಳುತ್ತದೆ. ಕಳೆದ ಬಾರಿ ನಾಲ್ಕು ಬಾರಿ ಹರಾಜು ಕಟ್ಟೆ ಮುಳುಗಡೆಯಾಗಿ ದ್ದನ್ನು ಸ್ಮರಿಸಬಹುದು.

ಟ್ರಾಫಿಕ್‌ ಸಮಸ್ಯೆ: ಜೆ.ಸಿ.ವೃತ್ತದಿಂದ ಡೊಬಿಹಳ್ಳದ ಸೇತುವೆ ವರೆಗೆ ಕೇಂದ್ರದ ಸಿಆರ್‌ಎಫ್‌ ಯೋಜನೆಯಡಿ 8 ಕೋಟಿ ರೂ. ವೆಚ್ಚದಲ್ಲಿ ನೂತನ ಸೇತುವೆ, ಪಾದಚಾರಿಗಳು ಸಂಚರಿಸಲು ಫುಟ್ಪಾತ್‌ ನಿರ್ಮಿಸಲಾಗಿತ್ತು. ಸಂತೆ ದಿನ ಗ್ರಾಮಪಂಚಾಯಿತಿ ಪಿಎಇಒ ಸ್ಥಳದಲ್ಲಿದ್ದು, ಸಂತೆಯನ್ನು ಕೂಡಲೇ ಹರಾಜು ಕಟ್ಟೆಗೆ ಸ್ಥಳಾಂತರ ಮಾಡಲು ಅಧಿಕಾರಿಗಳು ಮುಂದಾಗಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

  • ಚಿಕ್ಕಮಗಳೂರು: ಸಂವಿಧಾನದ ಮೂಲ ಆಶಯಗಳನ್ನು ಪ್ರತಿಯೊಬ್ಬರೂ ಅರಿತು ಕೊಳ್ಳುವ ಅನಿವಾರ್ಯತೆ ಇದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಉಮೇಶ್‌...

  • ರಘು ಶಿಕಾರಿ ಶಿಕಾರಿಪುರ: ಶಿಕಾರಿಪುರ ತಾಲೂಕು ಎಂದಾಕ್ಷಣ ಜನರ ಕಲ್ಪನೆಗೆ ಬರೋದು ಮುಖ್ಯಮಂತ್ರಿಗಳ ಕ್ಷೇತ್ರ. ಈ ತಾಲೂಕಿನಲ್ಲಿ ಎಲ್ಲಾ ರೀತಿಯ ಅಭಿವೃದ್ದಿ ಕಾರ್ಯಗಳು...

  • ಮೂಡಿಗೆರೆ: ಚಂಪಾ ಷಷ್ಠಿಯ ದಿನ ತಾಲೂಕಿನ ಗೋಣಿಬೀಡು ಅಗ್ರಹಾರದ ಸುಬ್ರಹ್ಮಣ್ಯ ದೇವಾಲಯದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಸುಬ್ರಹ್ಮಣ್ಯ ಷಷ್ಠಿಯ ದಿನ ಸಾವಿರಾರು...

  • ಶೃಂಗೇರಿ: ಮಲೆನಾಡು ಜಾನಪದ ಮತ್ತು ವಿಶಿಷ್ಟ ಕಲೆಗಳ ಅತ್ಯುತ್ತಮ ಸಮಾಗಮದ ಪ್ರದೇಶವಾಗಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಎಚ್‌.ಎಂ.ನಾಗರಾಜ ರಾವ್‌ ಹೇಳಿದರು. ಮೆಣಸೆಯ...

  • ಸಾಗರ: ಒಂದೆಡೆ ಕಳಸವಳ್ಳಿ ಹಾಗೂ ಅಂಬಾರಗೋಡ್ಲು ತಟಗಳ ನಡುವೆ ಶರಾವತಿ ಹಿನ್ನೀರಿನ ಸಿಗಂದೂರಿಗೆ ಹೋಗಲು ತುಮರಿ ಸೇತುವೆ ಕಾಮಗಾರಿಯ ಚಟುವಟಿಕೆಗಳು ನಿಧಾನವಾಗಿ ಬಿರುಸು...

ಹೊಸ ಸೇರ್ಪಡೆ