ಪ್ರೇಕ್ಷಕರ ಮನರಂಜಿಸಿದ ಕಬಡ್ಡಿ ಪಂದ್ಯಾವಳಿ

Team Udayavani, Feb 5, 2019, 11:15 AM IST

chikk-1.jpg

ಚಿಕ್ಕಮಗಳೂರು: ಜಿಲ್ಲಾ ಅಮೆಚೂರ್‌ ಕಬ್ಬಡಿ ಅಸೋಸಿಯೇಷನ್‌ ಹಾಗೂ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ನಗರದ ಸುಭಾಷ್‌ ಚಂದ್ರಬೋಸ್‌ ಆಟದ ಮೈದಾನದಲ್ಲಿ ಆಯೋಜಿಸಿರುವ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.

ಜಿಲ್ಲಾ ಮಟ್ಟದ ಪಂದ್ಯಾವಳಿಯೂ ಎರಡು ದಿನಗಳ ಕಾಲ ಜಿದ್ದಾಜಿದ್ದಿ ಸೆಣಸಾಟ ನಡೆದಿದ್ದು, ಕಡೂರು, ಮೂಡಿಗೆರೆ, ಚಿಕ್ಕಮಗಳೂರು, ತರೀಕೆರೆ, ಶೃಂಗೇರಿ, ನರಸಿಂಹರಾಜಪುರ, ಕೊಪ್ಪ, ಅಜ್ಜಂಪುರ ತಾಲೂಕಿನಿಂದ ತಲಾ ಒಂದರಂತೆ ಒಟ್ಟು ಎಂಟು ಕಬಡ್ಡಿ ತಂಡಗಳು ಭಾನುವಾರ ಮತ್ತು ಸೋಮವಾರ ರೋಚಕ ಪ್ರದರ್ಶನ ನೀಡಿದವು.

ಜಿಲ್ಲಾ ಮಟ್ಟದ ಪಂದ್ಯಾವಳಿಯೂ ಭಾನುವಾರ ಮತ್ತು ಸೋಮವಾರ ನಡೆದಿದ್ದು, ಸೋಮವಾರ ನಡೆದ ಪಂದ್ಯದಲ್ಲಿ ಕಡೂರು ಮತ್ತು ಚಿಕ್ಕಮಗಳೂರು ತಂಡಗಳು ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಸೆಣಸಿದ್ದು, ಪಂದ್ಯದ ಮೊದಲಾರ್ಧದಲ್ಲಿ ಚಿಕ್ಕಮಗಳೂರು ತಂಡ ಮುನ್ನಡೆ ಕಾಯ್ದುಕೊಂಡು ಕಡೂರು ತಂಡವನ್ನು ಸೋಲಿಸುವ ಪ್ರದರ್ಶನ ನೀಡಿತ್ತು. ಆದರೆ ದ್ವಿತೀಯಾರ್ಧದಲ್ಲಿ ಅನಿರೀಕ್ಷಿತ ಪ್ರದರ್ಶನ ನೀಡಿದ ಚೇತನ್‌ ನೇತೃತ್ವದ ತಂಡ ಚಿಕ್ಕಮಗಳೂರು ತಂಡಕ್ಕೆ ಭಾರೀ ಪೈಪೋಟಿ ನೀಡಿ ಒಂದು ಅಂಕದಿಂದ ಮುನ್ನಡೆ ಸಾಧಿಸಿತು. ಅಂತಿಮ ಕ್ಷಣದಲ್ಲಿ ನಡೆದ ರೋಮಾಂಚನಕಾರಿ ಆಟದಲ್ಲಿ ಕಡೂರು ತಂಡ ಗೆಲುವು ಸಾಧಿಸಿತು.

ಮೂಡಿಗೆರೆ ಹಾಗೂ ಕೊಪ್ಪ ತಂಡಗಳೂ ರೋಚಕ ಪ್ರದರ್ಶನ ನೀಡಿದ್ದು, ಅಂತಿಮ ಕ್ಷಣದಲ್ಲಿ ಮೂಡಿಗೆರೆ ತಂಡ ಕೊಪ್ಪ ತಂಡವನ್ನು ಸೋಲಿಸುವ ಮೂಲಕ ಫೈನಲ್‌ ಪ್ರವೇಶ ಪಡೆಯಿತು. ಜಿಲ್ಲಾ ಮಟ್ಟದ ವಿಭಾಗದ ಅಂತಿಮ ಪಂದ್ಯ ಮಂಗಳವಾರ ಸಂಜೆ ನಡೆಯಲಿದ್ದು, ಈ ಪಂದ್ಯದಲ್ಲಿ ಕಡೂರು ಹಾಗೂ ಮೂಡಿಗೆರೆ ತಂಡಗಳು ಸೆಣಸಲಿವೆ.

ರಾಜ್ಯ ಮಟ್ಟದ ವಿಭಾಗದ ಪಂದ್ಯಾವಳಿ ಸೋಮವಾರ ರಾತ್ರಿಯಿಂದ ಆರಂಭವಾಗಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳ ಪ್ರಸಿದ್ಧ ತಂಡಗಳು ಪಂದ್ಯಾವಳಿಯಲ್ಲಿ ಸೆಣಸಲಿವೆ. ಸೆಮಿಫೈನಲ್‌ ಪಂದ್ಯಾವಳಿಗೂ ಮುನ್ನ ಜಿಲ್ಲಾಧಿಕಾರಿ ಶ್ರೀರಂಗಯ್ಯ ಅವರು ಸ್ವರ್ಧಿಗಳಿಗೆ ಶುಭಕೋರಿ ಕೆಲ ಹೊತ್ತು ಪಂದ್ಯ ವೀಕ್ಷಿಸಿದರು. ಅಮೆಚೂರ್‌ ಕಬ್ಬಡ್ಡಿ ಅಸೋಸಿಯೇಶನ್‌ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಆರ್‌.ಶ್ರೀನಿವಾಸ್‌, ಜಿಲ್ಲಾ ಪಂಚಾಯತ್‌ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಸಿಂತಾ ಅನಿಲ್‌ಕುಮಾರ್‌, ನಗರಸಭೆ ಸದಸ್ಯರಾದ ಎಚ್.ಡಿ.ತಮ್ಮಯ್ಯ, ಟಿ.ರಾಜಶೇಖರ್‌ ಇನ್ನಿತರರ ಅತಿಥಿಗಳು ಪಂದ್ಯಗಳನ್ನು ವೀಕ್ಷಿಸಿದರು.

ಪ್ರೊ ಕಬಡ್ಡಿಯ ತಮಿಳ್‌ ತಲೈವಾ ತಂಡದ ಆಟಗಾರ ಸುಕೇಶ್‌ ದೇವಾಡಿಗ ಹಾಗೂ ದರ್ಶನ್‌, ಗುಜರಾತ್‌ ಫಾರ್ಚುನರ್‌ ತಂಡದ ಸಚಿನ್‌ ವಿಠuಲ್‌, ಬೆಂಗಾಲ್‌ ವಾರಿಯರ್ ತಂಡದ ಮಿಥುನ್‌ ಗೌಡ, ಯುಪಿ ಯೋಧ ತಂಡದ ಪ್ರಶಾಂತ್‌ ಕುಮಾರ್‌ ತಮ್ಮ ಕ್ರೀಡಾ ಪ್ರದರ್ಶನ ನೀಡಲಿದ್ದಾರೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

4-chikkamagaluru

Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.