ಚಿಕ್ಕಮಗಳೂರು: ಮೋಜು-ಮಸ್ತಿಗೆ ಹೊರಟಿದ್ದ ಅರಣ್ಯಧಿಕಾರಿಗಳನ್ನು ತಡೆದ ಜನರ ಮೇಲೆ ಕೇಸ್!
Team Udayavani, May 22, 2021, 11:59 AM IST
ಚಿಕ್ಕಮಗಳೂರು: ಕೋವಿಡ್ ನಿಯಮಗಳ ನಡುವೆ ಮೋಜು-ಮಸ್ತಿಗೆ ಹೊರಟಿದ್ದ ಅರಣ್ಯಧಿಕಾರಿಗಳನ್ನು ಗ್ರಾಮಸ್ಥರೇ ತಡೆದು ವಾಪಾಸ್ ಕಳುಹಿಸಿದ್ದ ಸುದ್ದಿಯನ್ನು ಶುಕ್ರವಾರ ಓದಿದ್ದೀರಿ. ಆದರೆ ಇದೀಗ ಅಧಿಕಾರಿಗಳನ್ನು ತಡೆದ ಜನರ ಮೇಲೆಯೇ ಪ್ರಕರಣ ದಾಖಲಿಸಲಾಗಿದೆ.
ಕೋವಿಡ್ ನಿಯಮಗಳ ನಡುವೆ ಹಿರಿಯ ಅಧಿಕಾರಿಗಳು ಸೇರಿದಂತೆ ಹಲವು ಅರಣ್ಯಾಧಿಕಾರಿಗಳು ಹತ್ತಕ್ಕೂ ಹೆಚ್ಚು ಜೀಪು ಮತ್ತು ಕಾರಿನಲ್ಲಿ ಮೋಜು ಮಸ್ತಿಗೆಂದು ತೆರಳಿದ್ದರು. ಈ ವೇಳೆ ಜಿಲ್ಲೆಯ ತರೀಕೆರೆ ತಾಲೂಕಿನ ಸಂತವೇರಿಯಲ್ಲಿ ಗ್ರಾಮಸ್ಥರು ಅಧಿಕಾರಿಗಳನ್ನು ತಡೆದಿದ್ದರು.
ಕೋವಿಡ್ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಊರಿಗೆ ಬರಬೇಡಿ ಎಂದು ಗ್ರಾಮಸ್ಥರು ತಡೆದಿದ್ದರು. ಜನರು ಸಂಕಷ್ಟದಲ್ಲಿರುವಾಗ ಮೋಜು-ಮಸ್ತಿ ಬೇಕಾ ಎಂದು ಪ್ರಶ್ನಿಸಿದ್ದರು. ಸ್ಥಳೀಯರು ತಡೆದ ಹಿನ್ನೆಲೆ ಅಧಿಕಾರಿಗಳು ಅಲ್ಲಿಂದ ಹಿಂತುರುಗಿ ಕೆಮ್ಮಣ್ಣಗುಂಡಿಯತ್ತ ಪ್ರಯಾಣಿಸಿದ್ದರು. ಈ ಸುದ್ದಿ ಮತ್ತು ವಿಡಿಯೋ ಗಳು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿ ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತವಾಗಿತ್ತು.
ಇದನ್ನೂ ಓದಿ:ಕೋವಿಡ್ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಲಾಠಿ ಏಟು: 17 ವರ್ಷದ ಬಾಲಕ ಸಾವು, ಪೊಲೀಸರ ಅಮಾನತು
ಆದರೆ ಇದೀಗ ಅರಣ್ಯಾಧಿಕಾರಿಗಳನ್ನು ತಡೆದು ಪ್ರಶ್ನೆ ಮಾಡಿದ್ದಕ್ಕೆ ಸ್ಥಳೀಯರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರು ಸೇರಿ ನಾಲ್ವರು ಗ್ರಾಮಸ್ಥರ ವಿರುದ್ಧ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಕೋವಿಡ್ ನಿಂದ ನಮ್ಮ ಗ್ರಾಮವನ್ನು ನಾವು ರಕ್ಷಿಸಬಾರದೇ, ಅಧಿಕಾರಿಗಳು ಕೋವಿಡ್ ನಿಯಮವನ್ನು ಮೀರಿದರೆ ಪ್ರಶ್ನಿಸಬಾರದೇ? ಅಧಿಕಾರಿಗಳಿಗೆ ಒಂದು ನಿಯಮ, ಜನರಿಗೆ ಒಂದು ನಿಯಮವೇ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ,
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಯರ ಭಕ್ತರಿಗೆ ತಿರುಪತಿಯಲ್ಲಿ ಅಗತ್ಯ ಸೌಲಭ್ಯ: ರಾಯರಿಗೆ 1.5 ಕೋಟಿಯ ಕಾಸಿನ ಸರ
ವಿಶ್ವಗುರು ಭಾರತ 100ನೇ ಸಂಚಿಕೆ ಬಿಡುಗಡೆ; 5ಜಿ ಸೇವೆ ಶೀಘ್ರ ಕಾರ್ಯಾರಂಭ: ಸಚಿವೆ ನಿರ್ಮಲಾ
ಸಚಿವ ಭಗವಂತ ಖೂಬಾ- ಶಾಸಕ ಶರಣು ಸಲಗರ ನಡುವೆ ಮಾತಿನ ಚಕಮಕಿ
ಅಂಗಾಂಗ ದಾನ: ಸಿಎಂ ಬೊಮ್ಮಾಯಿ ಸಹಿತ ಸಚಿವರ ನೋಂದಣಿ
ಮಾನವ ಕುಲವೇ ತಲೆತಗ್ಗಿಸುವಂಥ ಪ್ರಿಯಾಂಕ್ ಖರ್ಗೆ ಹೇಳಿಕೆ: ಛಲವಾದಿ ನಾರಾಯಣಸ್ವಾಮಿ
MUST WATCH
ಹೊಸ ಸೇರ್ಪಡೆ
ರಾಯರ ಭಕ್ತರಿಗೆ ತಿರುಪತಿಯಲ್ಲಿ ಅಗತ್ಯ ಸೌಲಭ್ಯ: ರಾಯರಿಗೆ 1.5 ಕೋಟಿಯ ಕಾಸಿನ ಸರ
ವಿಶ್ವಗುರು ಭಾರತ 100ನೇ ಸಂಚಿಕೆ ಬಿಡುಗಡೆ; 5ಜಿ ಸೇವೆ ಶೀಘ್ರ ಕಾರ್ಯಾರಂಭ: ಸಚಿವೆ ನಿರ್ಮಲಾ
ಜಾತಿ ಪ್ರಮಾಣಪತ್ರ ಪ್ರಕರಣ: ಸಮೀರ್ ವಾಂಖೆಡೆ ಮುಸ್ಲಿಂ ಸಮುದಾಯದವರಲ್ಲ’
ಏಷ್ಯಾ ಕಪ್, ಟಿ20 ವಿಶ್ವಕಪ್: ಶಕಿಬ್ ಅಲ್ ಹಸನ್ ಬಾಂಗ್ಲಾ ನಾಯಕ
ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪದಕ ವಿಜೇತರಿಗೆ ಐಒಎ ನಗದು ಪುರಸ್ಕಾರ