ಒತ್ತುವರಿ ಜಮೀನು ಲೀಸ್ ನೀಡುವಾಗ ಪರಿಶೀಲಿಸಿ
ಬೆಳೆಗಾರರ ದಿಕ್ಕು ತಪ್ಪಿಸುವ ಯೋಜನೆ ಬೇಡ
Team Udayavani, May 3, 2022, 3:10 PM IST
ಚಿಕ್ಕಮಗಳೂರು: ಒತ್ತುವರಿ ಜಮೀನು ಲೀಸ್ ನೀಡುವ ಸಂಬಂಧ ವೈಜ್ಞಾನಿಕವಾಗಿ ಪರಿಶೀಲಿಸಿ ಅನುಷ್ಠಾನಗೊಳಿಸಬೇಕು. ಬೆಳೆಗಾರರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು ಎಂದು ಕೆಪಿಸಿಸಿ ವಕ್ತಾರ ಎಚ್.ಎಚ್. ದೇವರಾಜ್ ತಿಳಿಸಿದರು.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಕೇಂದ್ರ ಮತ್ತು ರಾಜ್ಯ ಸಚಿವರು ನೀಡಿದ ಅನೇಕ ಭರವಸೆಗಳು ಹುಸಿಯಾಗಿವೆ. ಕಂದಾಯ ಸಚಿವ ಆರ್.ಅಶೋಕ್ ನೀಡಿದ ಅನೇಕ ಭರವಸೆಗಳು ಕಾರ್ಯರೂಪಕ್ಕೆ ಬಂದಿಲ್ಲ ಎಂದರು.
ಈಗಾಗಲೇ ಕಾಫಿ ಬೆಳೆಗಾರರು ಅನೇಕ ಸಮಸ್ಯೆಗಳಿಂದ ನಲುಗಿ ಹೋಗಿದ್ದಾರೆ. ಮತ್ತೆ ಮತ್ತೆ ಅವರ ಆಸೆಗಳಿಗೆ ತಣ್ಣೀರು ಎರಚದೆ ಕಂದಾಯ ಸಚಿವರು ನೀಡಿದ ಭರವಸೆಗೆ ಬದ್ಧರಾಗಬೇಕು. ಪೂರ್ವಭಾವಿ ಸಿದ್ಧತೆ ನಡೆಸಿ, ಕಾನೂನು ತಜ್ಞರ ಸಲಹೆ ಪಡೆದು ವೈಜ್ಞಾನಿಕವಾಗಿ ತೀರ್ಮಾನ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಡೀಮ್ಡ್ ಫಾರೆಸ್ಟ್ ಅರಣ್ಯ ಇಲಾಖೆಯಿಂದ ವಾಪಸ್ ಪಡೆದು ಕಂದಾಯ ಇಲಾಖೆಗೆ ಸೇರ್ಪಡೆಗೊಳಿಸುವುದಾಗಿ ಸರ್ಕಾರ ತಿಳಿಸಿದೆ. ಡೀಮ್ಡ್ ಫಾರೆಸ್ಟ್ ಅನ್ನು ಲೀಸ್‌ಗೆ ನೀಡದೆ ಸಾಮಾಜಿಕ ಪರಿಕಲ್ಪನೆಯಡಿ ಭೂಮಿ ವಂಚಿತರಿಗೆ ಮತ್ತು ಬಡವರಿಗೆ ಹಂಚಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.
ತಾಲೂಕು ಕಚೇರಿಯಲ್ಲಿ ಬಾಕಿ ಇರುವ 94ಸಿ, ಫಾರಂ 53, 57 ಅರ್ಜಿಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದ ಅವರು, ಕಂದಾಯ ಸಚಿವರು ಚುನಾವಣೆ ಗಿಮಿಕ್ ಮಾಡದೆ. ಸಮಸ್ಯೆ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು, ಇದರ ಸಂಪೂರ್ಣ ಹೊಣೆಯನ್ನು ಗೃಹ ಸಚಿವರು ಹೊರಬೇಕು. ಗೃಹಮಂತ್ರಿ ಆರಗ ಜ್ಞಾನೇಂದ್ರ ಅವರು ತಕ್ಷಣ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಕೆಪಿಸಿಸಿ ಮಹಿಳಾ ಘಟಕದ ಉಪಾಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ, ಬೆಂಗಳೂರಿನಲ್ಲಿ ಯುವತಿ ಮೇಲೆ ನಡೆದ ಆ್ಯಸಿಡ್ ದಾಳಿ ಖಂಡನೀಯ. ಆ್ಯಸಿದ್ ದಾಳಿ ನಡೆಸಿದ ಆರೋಪಿಯನ್ನು ತಕ್ಷಣ ಬಂಧಿಸಬೇಕು. ಜೀವನ್ಮರಣ ನಡುವೆ ಹೋರಾಟ ನಡೆಸುತ್ತಿರುವ ಯುವತಿ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಕುಟುಂಬದವರಿಗೆ ಸರ್ಕಾರಿ ಕೆಲಸ ನೀಡಬೇಕು ಎಂದು ಆಗ್ರಹಿಸಿದರು.
ಮುಖಂಡ ರವೀಶ್ ಬಸಪ್ಪ ಮಾತನಾಡಿ, ಬಿಜೆಪಿಯವರಿಗೆ ಗಣತಂತ್ರದ ಮೇಲೆ ನಂಬಿಕೆಯಿಲ್ಲ, ಭಾಷಾ ವಿಚಾರ ಸಂಬಂಧ ಸಿ.ಟಿ.ರವಿ ಅವರು ವಿರುದ್ಧ ಹೇಳಿಕೆ ನೀಡಿದ್ದು, ಕನ್ನಡ ನಾಡಿನಲ್ಲಿ ಬದುಕಲು ಇಷ್ಟವಿಲ್ಲದಿದ್ದರೆ ಅವರಿಗೆ ಇಷ್ಟವಿರುವಲ್ಲಿ ಬದುಕಲಿ. ಕನ್ನಡ ಭಾಷೆಗೆ ಅವಹೇಳನ ಮಾಡಬಾರದು ಎಂದರು. ಸುದ್ದಿಗೋಷ್ಠಿಯಲ್ಲಿ ಹಿರೇಮಗಳೂರು ಪುಟ್ಟಸ್ವಾಮಿ, ಎಚ್.ಪಿ. ಮಂಜೇಗೌಡ, ತನೂಜ್ ಕುಮಾರ್ ಇದ್ದರು.
ಹುಬ್ಬಳ್ಳಿ ಗಲಭೆಗೆ ಕಾಂಗ್ರೆಸ್ ಕಾರಣವೆಂದು ಸಿ.ಟಿ.ರವಿ ಹೇಳಿಕೆ ನೀಡಿದ್ದು, ಗಲಭೆ ಹುಟ್ಟು ಹಾಕುವುದು ಕಾಂಗ್ರೆಸ್ ಸಿದ್ಧಾಂತವಲ್ಲ. ಬಿಜೆಪಿ ಮತ್ತು ಅಂಗಸಂಸ್ಥೆಗಳವರು ಗಲಭೆ ಹುಟ್ಟು ಹಾಕುವವರು. ಅನ್ಯಧರ್ಮೀಯರಿಗೆ ಜಾತ್ರೆಯಲ್ಲಿ ಅಂಗಡಿ ಹಾಕಬಾರದು. ಹಲಾಲ್, ಆಜಾನ್ ಇವುಗಳ ಬಗ್ಗೆ ಪ್ರಚೋದಿಸಿದ್ದು ಸಿ.ಟಿ.ರವಿ. ಕಾಂಗ್ರೆಸ್ ಬಗ್ಗೆ ಇನ್ನೊಮ್ಮೆ ಹಗುರವಾಗಿ ಮಾತನಾಡಿದರೆ ಹೋರಾಟ ರೂಪಿಸಲಾಗುವುದು. -ಎಚ್.ಎಚ್.ದೇವರಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮೂಡಿಗೆರೆ ತಾಲೂಕಿನಲ್ಲಿ ಹೆಚ್ಚಾದ ಕಾಡಾನೆಗಳ ಹಾವಳಿ
ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ : ರೈತರ ಬೆಳೆ ಹಾನಿ
ಕೊಟ್ಟಿಗೆಹಾರ : ರಸ್ತೆಯಲ್ಲಿ ಕೆಟ್ಟು ನಿಂತ ಲಾರಿ, ವಾಹನ ಸಂಚಾರ ಸ್ಥಗಿತ
ದತ್ತಪೀಠದಲ್ಲಿ ಮತ್ತೊಂದು ವಿವಾದ: ಗುಹೆಯೊಳಗೆ ನಮಾಜ್, ಗೋರಿ ಪೂಜೆ ಆರೋಪ; ವಿಡಿಯೋ ವೈರಲ್
ವಿದ್ಯುತ್ ವ್ಯತ್ಯಯ :ಮೆಸ್ಕಾಂ ಸಿಬ್ಬಂದಿ ಮೇಲೆ ತಂಡದಿಂದ ಹಲ್ಲೆ! ದೃಶ್ಯ ಸಿಸಿಟಿವಿಯಲ್ಲಿ ಸೆರೆ