ಹೊರ ಬಿತ್ತುಜಿಪಂ- ತಾಪಂ ಸ್ಥಾನಗಳ ಮೀಸಲಾತಿ


Team Udayavani, May 2, 2021, 6:49 PM IST

25-13

ಚಿಕ್ಕಮಗಳೂರು: ರಾಜ್ಯ ಚುನಾವಣಾ ಆಯೋಗ ಈ ಹಿಂದೆ ಜಿಪಂ ಮತ್ತು ತಾಪಂ ಕ್ಷೇತ್ರ ಪುನರ್‌ ವಿಂಗಡಣೆ ಮಾಡಿ ಕರಡು ಪ್ರತಿಯನ್ನು ಹೊರಡಿಸಿತ್ತು. ಸದ್ಯ ಈ ಕ್ಷೇತ್ರಗಳ ಮೀಸಲಾತಿಯನ್ನು ಪ್ರಕಟಿಸಿ ಆದೇಶ ಹೊರಡಿಸಿದೆ. ಚಿಕ್ಕಮಗಳೂರು ಜಿಲ್ಲೆ ಭೌಗೋಳಿಕವಾಗಿ ವಿಸ್ತಾರವಾಗಿದ್ದು, ಮಲೆನಾಡು ಮತ್ತು ಬಯಲು ಸೀಮೆ ಪ್ರದೇಶವನ್ನು ಒಳಗೊಂಡಿದೆ.

ತಾಪಂ ವ್ಯಾಪ್ತಿಯಲ್ಲಿ 96 ಕ್ಷೇತ್ರಗಳನ್ನು ಹೊಂದಿದ್ದರೆ, ಜಿಪಂ ವ್ಯಾಪ್ತಿಯಲ್ಲಿ 33 ಕ್ಷೇತ್ರಗಳನ್ನು ಒಳಗೊಂಡಿದೆ. ಚಿಕ್ಕಮಗಳೂರು ತಾಪಂ ವ್ಯಾಪ್ತಿಯ 15 ಸ್ಥಾನಗಳಲ್ಲಿ 8 ಸ್ಥಾನಗಳನ್ನು ಮೀಸಲಿಟ್ಟಿದ್ದು, ಮೂಡಿಗೆರೆಯ ತಾಪಂ ವ್ಯಾಪ್ತಿಯ 10 ಸ್ಥಾನಗಳಲ್ಲಿ 5 ಸ್ಥಾನಗಳನ್ನು ಮೀಸಲಿಡಲಾಗಿದೆ. ಕೊಪ್ಪ ತಾಲೂಕಿನ 11 ಸ್ಥಾನಗಳಲ್ಲಿ 6 ಸ್ಥಾನಗಳನ್ನು ಮೀಸಲಿಡಲಾಗಿದೆ. ಶೃಂಗೇರಿ ತಾಲೂಕಿನ 11ಸ್ಥಾನಗಳಲ್ಲಿ 6 ಸ್ಥಾನಗಳನ್ನು ಮೀಸಲಿಡಲಾಗಿದೆ. ನರಸಿಂಹರಾಜಪುರ ತಾಲೂಕಿನ 11ಸ್ಥಾನಗಳಲ್ಲಿ 6 ಸ್ಥಾನಗಳನ್ನು ಮೀಸಲಿಡಲಾಗಿದೆ. ಕಡೂರು ತಾಲೂಕಿನ 18 ಸ್ಥಾನಗಳಲ್ಲಿ 9 ಸ್ಥಾನಗಳನ್ನು ಮೀಸಲಿರಿಸಲಾಗಿದೆ.

ತರೀಕೆರೆಯ 9 ಸ್ಥಾನಗಳಲ್ಲಿ 5 ಸ್ಥಾನಗಳನ್ನು ಮೀಸಲಿಡಲಾಗಿದೆ. ಅಜ್ಜಂಪುರ ತಾಲೂಕಿನ 11 ಸ್ಥಾನಗಳ ಪೈಕಿ 6 ಸ್ಥಾನಗಳನ್ನು ಮೀಸಲಿಡಲಾಗಿದೆ. ಜಿಪಂ 33 ಸ್ಥಾನಗಳ ಪೈಕಿ 17 ಸ್ಥಾನಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವರ್ಗದವರಿಗೆ ಮೀಸಲಿರಿಸಿದ್ದು, ಕ್ಷೇತ್ರಗಳ ಮೀಸಲಾತಿ ವಿವರ ಇಂತಿದೆ. ತಾಪಂ: ಚಿಕ್ಕಮಗಳೂರು ತಾಲೂಕು 15 ಸ್ಥಾನಗಳಲ್ಲಿ 8 ಸ್ಥಾನಗಳನ್ನು ಮೀಸಲಿಡಲಾಗಿದ್ದು, ಪರಿಶಿಷ್ಟ ಜಾತಿಗೆ 4 ಸ್ಥಾನಲಿಟ್ಟಿದೆ. ಅದರಲ್ಲಿ 2 ಸ್ಥಾನ ಮಹಿಳೆಯರಿಗೆ ಮೀಸಲಿಡಲಾಗಿದೆ. ಪರಿಶಿಷ್ಟ ಪಂಗಡದ ಮಹಿಳೆಗೆ 1 ಸ್ಥಾನ ಮೀಸಲಿಡಲಾಗಿದೆ. ಹಿಂದುಳಿದ ವರ್ಗ(ಎ)ಗೆ 2 ಸ್ಥಾನ ಮೀಸಲಿಟ್ಟಿದ್ದು, ಅದರಲ್ಲೊಂದು ಮಹಿಳೆ, ಸಾಮಾನ್ಯ ವರ್ಗಕ್ಕೆ 8 ಸ್ಥಾನ ಮೀಸಲಿಟ್ಟಿದ್ದು ಅದರಲ್ಲಿ 4 ಸ್ಥಾನ ಮಹಿಳೆಯರಿಗೆ ಮೀಸಲಿಡಲಾಗಿದೆ. ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿ 10 ಸ್ಥಾನಗಳನ್ನು ಒಳಗೊಂಡಿದ್ದು, 5 ಸ್ಥಾನಗಳನ್ನು ಮೀಸಲಿಡಲಾಗಿದೆ. ಪರಿಶಿಷ್ಟ ಜಾತಿಗೆ 3 ಸ್ಥಾನಗಳನ್ನು ಮೀಸಲಿಡಲಾಗಿದ್ದು, ಅದರಲ್ಲಿ 2 ಮಹಿಳೆಯರಿಗೆ, ಪರಿಶಿಷ್ಟ ಪಂಗಡದಲ್ಲಿ 1 ಸ್ಥಾನ ಮಹಿಳೆಗೆ ಮೀಸಲಿಡಲಾಗಿದೆ.

ಹಿಂದುಳಿದ ವರ್ಗ(ಎ) 1 ಸ್ಥಾನ ಪುರುಷರಿಗೆ 1 ಸ್ಥಾನ ಮಹಿಳೆಗೆ ಮೀಸಲಿಡಲಾಗಿದೆ. ಸಾಮಾನ್ಯ ವರ್ಗಕ್ಕೆ 5 ಸ್ಥಾನ ಮೀಸಲಿಟ್ಟಿದ್ದು ಅದರಲ್ಲಿ 1 ಸ್ಥಾನ ಮಹಿಳೆಯರಿಗೆ ಮೀಸಲಿಡಲಾಗಿದೆ. ಕೊಪ್ಪ ತಾಲೂಕು ವ್ಯಾಪ್ತಿಯಲ್ಲಿ 11 ಸ್ಥಾನಗಳ ಪೈಕಿ 6 ಸ್ಥಾನಗಳನ್ನು ಮೀಸಲಿಟ್ಟಿದ್ದು, ಪರಿಶಿಷ್ಟ ಜಾತಿಗೆ 1 ಸ್ಥಾನ, ಪುರುಷರಿಗೆ 1 ಸ್ಥಾನ ಮೀಸಲಿಡಲಾಗಿದೆ. ಪರಿಶಿಷ್ಟ ಪಂಗಡದ 1ಸ್ಥಾನ ಮಹಿಳೆಗೆ ಮೀಸಲಿಡಲಾಗಿದೆ. ಹಿಂದುಳಿವರ್ಗ(ಎ)ಗೆ 1ಸ್ಥಾನ ಪುರುಷರಿಗೆ 1ಸ್ಥಾನ ಮಹಿಳೆಯರಿಗೆ ಮೀಸಲಿಡಲಾಗಿದೆ. ಸಾಮಾನ್ಯ ವರ್ಗಕ್ಕೆ 6 ಸ್ಥಾನಗಳನ್ನು ಮೀಸಲಿಟ್ಟಿದ್ದು ಅದರಲ್ಲಿ 3 ಸ್ಥಾನ ಮಹಿಳೆಯರಿಗೆ ಮೀಸಲಿಡಲಾಗಿದೆ.

ಶೃಂಗೇರಿ ತಾಲೂಕು ವ್ಯಾಪ್ತಿಯ 11 ಸ್ಥಾನಗಳಲ್ಲಿ 6 ಸ್ಥಾನಗಳನ್ನು ಮೀಸಲಿಡಲಾಗಿದ್ದು, ಪರಿಶಿಷ್ಟ ಜಾತಿಗೆ 1 ಸ್ಥಾನ ಮಹಿಳೆಯರಿಗೆ, ಪರಿಶಿಷ್ಟ ಪಂಗಡ 1 ಸ್ಥಾನ ಮಹಿಳೆಯರಿಗೆ ಮೀಸಲಿಡಲಾಗಿದೆ. ಹಿಂದುಳಿದ ವರ್ಗ(ಎ) 2 ಸ್ಥಾನ ಮಹಿಳೆಯರಿಗೆ ಮೀಸಲು, ಹಿಂದುಳಿದ ವರ್ಗ(ಬಿ) 1ಸ್ಥಾನ ಪುರುಷರಿಗೆ ಮೀಸಲಿಡಲಾಗಿದೆ. ಸಾಮಾನ್ಯ ವರ್ಗಕ್ಕೆ 6 ಸ್ಥಾನ ಮೀಸಲಿಟ್ಟಿದ್ದು, ಅದರಲ್ಲಿ 2 ಸ್ಥಾನ ಮಹಿಳೆಯರಿಗೆ ಮೀಸಲಿಡಲಾಗಿದೆ. ನರಸಿಂಹರಾಜಪುರ ತಾಲೂಕು ವ್ಯಾಪ್ತಿಯ 11 ಸ್ಥಾನಗಳಲ್ಲಿ 6 ಸ್ಥಾನಗಳನ್ನು ಮೀಸಲಿಡಲಾಗಿದ್ದು ಪರಿಶಿಷ್ಟ ಜಾತಿ 1 ಸ್ಥಾನ ಪುರುಷರಿಗೆ 1 ಸ್ಥಾನ ಮಹಿಳೆಗೆ ಮೀಸಲಿಡಲಾಗಿದೆ. ಪರಿಶಿಷ್ಟ ಪಂಗಡ 1 ಸ್ಥಾನ ಮಹಿಳೆಗೆ ಮೀಸಲಿಡಲಾಗಿದೆ.

ಹಿಂದುಳಿದ ವರ್ಗ(ಎ)ಗೆ 1 ಸ್ಥಾನ ಪುರುಷ 1ಸ್ಥಾನ ಮಹಿಳೆಗೆ ಮೀಸಲು. ಸಾಮಾನ್ಯ ವರ್ಗಕ್ಕೆ 6 ಸ್ಥಾನ ಮೀಸಲಿಟ್ಟಿದ್ದು, ಅದರಲ್ಲಿ 3 ಸ್ಥಾನ ಮಹಿಳೆಯರಿಗೆ ಮೀಸಲಿಡಲಾಗಿದೆ. ಕಡೂರು ತಾಲೂಕು ವ್ಯಾಪ್ತಿಯಲ್ಲಿ ಬರುವ 18 ಸ್ಥಾನಗಳ ಪೈಕಿ 9 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಪರಿಶಿಷ್ಟ ಜಾತಿ 3 ಸ್ಥಾನ ಮೀಸಲಿಟ್ಟಿದ್ದು, ಅದರಲ್ಲಿ 2 ಸ್ಥಾನ ಮಹಿಳೆಯರಿಗೆ ಮೀಸಲು, ಪರಿಶಿಷ rಪಂಗಡ 1ಸ್ಥಾನ ಮಹಿಳೆಗೆ ಮೀಸಲು, ಹಿಂದುಳಿದ ವರ್ಗ(ಎ) 3 ಸ್ಥಾನಗಳಲ್ಲಿ 2 ಸ್ಥಾನ ಮಹಿಳೆಯರಿಗೆ, ಹಿಂದುಳಿದ ವರ್ಗ(ಬಿ) 1ಸ್ಥಾನ ಪುರುಷರಿಗೆ ಮೀಸಲು, ಸಾಮಾನ್ಯ ವರ್ಗಕ್ಕೆ 9 ಸ್ಥಾನಗಳನ್ನು ಮೀಸಲಿಟ್ಟಿದ್ದು 4 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ತರೀಕೆರೆ ತಾಲೂಕು ವ್ಯಾಪ್ತಿಯ 9 ಸ್ಥಾನಗಳಲ್ಲಿ 5 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಪರಿಶಿಷ್ಟ ಪಂಗಡಕ್ಕೆ 3 ಸ್ಥಾನಗಳಲ್ಲಿ 2 ಸ್ಥಾನ ಮಹಿಳೆಯರಿಗೆ, ಪರಿಶಿಷ್ಟ ಪಂಗಡ 1 ಸ್ಥಾನ ಮಹಿಳೆಯರಿಗೆ. ಸಾಮಾನ್ಯ ವರ್ಗಕ್ಕೆ 5 ಸ್ಥಾನ ಮೀಸಲಿಟ್ಟಿದು,ª ಅದರಲ್ಲಿ 2 ಸ್ಥಾನ ಮಹಿಳೆಯರಿಗೆ ಮೀಸಲಿಡಲಾಗಿದೆ. ಅಜ್ಜಂಪುರ ತಾಲೂಕು ವ್ಯಾಪ್ತಿಯ 11 ಸ್ಥಾನಗಳಲ್ಲಿ 6 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಪರಿಶಿಷ್ಟ ಜಾತಿ 1ಸ್ಥಾನ ಮಹಿಳೆ 1ಸ್ಥಾನ ಪುರುಷರಿಗೆ, ಪರಿಶಿಷ್ಟ ಪಂಗಡ 1ಸ್ಥಾನ ಮಹಿಳೆಯರಿಗೆ, ಹಿಂದುಳಿವರ್ಗ(ಎ) 1ಸ್ಥಾನ ಮಹಿಳೆ, 1ಸ್ಥಾನ ಪುರುಷರಿಗೆ ಸಾಮಾನ್ಯ ವರ್ಗಕ್ಕೆ 6 ಸ್ಥಾನಗಳನ್ನು ಮೀಸಲಿಟ್ಟಿದ್ದು 3 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.

ಜಿಲ್ಲಾ ಪಂಚಾಯತ್‌: ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್‌ 33 ಸ್ಥಾನಗಳ ಪೈಕಿ 17 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಪರಿಶಿಷ್ಟ ಜಾತಿ 8 ಸ್ಥಾನಗಳನ್ನು ಮೀಸಲಿಟ್ಟಿದ್ದು, ಅದರಲ್ಲಿ 4 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಪರಿಶಿಷ್ಟ ಪಂಗಡಕ್ಕೆ 1 ಸ್ಥಾನ ಮಹಿಳೆಯರಿಗೆ ಮೀಸಲಿಡಲಾಗಿದೆ. ಹಿಂದುಳಿದ ವರ್ಗ(ಎ) 6 ಸ್ಥಾನಗಳನ್ನು ಮೀಸಲಿಟ್ಟಿದ್ದು, ಅದರಲ್ಲಿ 3 ಸ್ಥಾನಗಳನ್ನು ಮಹಿಳೆಯರಿಗೆ, ಹಿಂದುಳಿದ ವರ್ಗ(ಬಿ) 1 ಸ್ಥಾನ ಮಹಿಳೆಯರಿಗೆ ಮೀಸಲಿಡಲಾಗಿದೆ. ಸಾಮಾನ್ಯ ವರ್ಗಕ್ಕೆ 17 ಸ್ಥಾನಗಳನ್ನು ಮೀಸಲಿಟ್ಟಿದ್ದು, ಅದರಲ್ಲಿ 8 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.

ಟಾಪ್ ನ್ಯೂಸ್

ಬೀಜಾಡಿ: ಮೊಬೈಲ್‌ ಅಂಗಡಿಯಲ್ಲಿ 70 ಸಾವಿರ ರೂ.ಮೌಲ್ಯದ ಸೊತ್ತು ಕಳ್ಳತನ

ಬೀಜಾಡಿ: ಮೊಬೈಲ್‌ ಅಂಗಡಿಯಲ್ಲಿ 70 ಸಾವಿರ ರೂ.ಮೌಲ್ಯದ ಸೊತ್ತು ಕಳ್ಳತನ

Murder-aa

ವಂಡಾರು: ಪತಿಯಿಂದ ಪತ್ನಿ ಕೊಲೆ: ಪ್ರಕರಣ ದಾಖಲು

ಆದಿಉಡುಪಿ: ಇಬ್ಬರಿಗೆ ಬೀದಿ ನಾಯಿ ಕಡಿತ; ಜನರಲ್ಲಿ ಆತಂಕ

ಆದಿಉಡುಪಿ: ಇಬ್ಬರಿಗೆ ಬೀದಿ ನಾಯಿ ಕಡಿತ; ಜನರಲ್ಲಿ ಆತಂಕ

ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮ ಸಾಗಾಟ: 49,500 ರೂ. ಮೌಲ್ಯದ 33 ಕ್ವಿಂ. ಅಕ್ಕಿ ವಶ

ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮ ಸಾಗಾಟ: 49,500 ರೂ. ಮೌಲ್ಯದ 33 ಕ್ವಿಂ. ಅಕ್ಕಿ ವಶ

ತೊಕ್ಕೊಟ್ಟು: ಸ್ಕೂಟರ್‌ ಕಳ್ಳರಿಬ್ಬರ ಬಂಧನ

ತೊಕ್ಕೊಟ್ಟು: ಸ್ಕೂಟರ್‌ ಕಳ್ಳರಿಬ್ಬರ ಬಂಧನ

ಮಾರ್ಕೋನಹಳ್ಳಿ ಜಲಾಶಯ ಭರ್ತಿ : ರೈತರಲ್ಲಿ ಮುಖದಲ್ಲಿ ಮಂದಹಾಸ

ಮಾರ್ಕೋನಹಳ್ಳಿ ಜಲಾಶಯ ಭರ್ತಿ: ರೈತರಲ್ಲಿ ಮಂದಹಾಸ, ಜಲಾಶಯದ ಒಳಹರಿವು 2200 ಕ್ಯೂಸೆಕ್ಸ್

ಟಿವಿಎಸ್‍ ನಿಂದ ಹೊಸ ಮಾದರಿಯ ಐಕ್ಯೂಬ್‍ ಎಲೆಕ್ಟ್ರಿಕ್‍ ಸ್ಕೂಟರ್ ಗಳ ಬಿಡುಗಡೆ

ಟಿವಿಎಸ್‍ ನಿಂದ ಹೊಸ ಮಾದರಿಯ ಐಕ್ಯೂಬ್‍ ಎಲೆಕ್ಟ್ರಿಕ್‍ ಸ್ಕೂಟರ್ ಗಳ ಬಿಡುಗಡೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತುಂಬಿದ ಕೊಡ ತುಳುಕಲ್ಲ,ಅರ್ಧಂಬರ್ಧ ಕೊಡಗಳೇ ತುಳುಕೋದು: ಸಿದ್ದುಗೆ ಸಿಟಿ ರವಿ ಟಾಂಗ್

ತುಂಬಿದ ಕೊಡ ತುಳುಕಲ್ಲ,ಅರ್ಧಂಬರ್ಧ ಕೊಡಗಳೇ ತುಳುಕೋದು: ಸಿದ್ದುಗೆ ಸಿಟಿ ರವಿ ಟಾಂಗ್

ಚಿಕ್ಕಮಗಳೂರಿನ ಸಮಗ್ರ ಅಭಿವೃದ್ಧಿಗೆ ನಾನು ಬದ್ಧ: ಸಿಎಂ ಬೊಮ್ಮಾಯಿ

ಚಿಕ್ಕಮಗಳೂರಿನ ಸಮಗ್ರ ಅಭಿವೃದ್ಧಿಗೆ ನಾನು ಬದ್ಧ: ಸಿಎಂ ಬೊಮ್ಮಾಯಿ

mukherjee

ಮುಖರ್ಜಿ ಕನಸು ನನಸಾಗಿಸಿದ್ದು ಬಿಜೆಪಿ ಹೆಗ್ಗಳಿಕೆ

fire

ನಗರಸಭೆಯಿಂದ ಕಿರುಕುಳ: ತಳ್ಳು ಗಾಡಿಗೆ ಬೆಂಕಿ ಹಚ್ಚಿದ ವ್ಯಾಪಾರಿ

chikmagaluru

ಜಿಲ್ಲೆಯ ಸಮಸ್ಯೆಗಳಿಗೆ ಸಿಕ್ಕಿತೇ ಪರಿಹಾರ?

MUST WATCH

udayavani youtube

ಕೊಪ್ಪಲಂಗಡಿ : ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಪಿಕಪ್

udayavani youtube

ಹೊರಟ್ಟಿ ಸೇರ್ಪಡೆಯಿಂದ ಪಕ್ಷಕ್ಕೆ ಬಲ : ಸಿಎಂ

udayavani youtube

ಹುಣಸೂರಿನಲ್ಲಿ ಭಾರೀ ಮಳೆಗೆ ಮನೆಗಳು ಜಲಾವೃತ

udayavani youtube

SSLC ನಂತ್ರ ನಿಮಗಿದೆ ಭರಪೂರ ಅವಕಾಶ !!

udayavani youtube

ಕಾರಿಂಜೇಶ್ವರ ದೇವಸ್ಥಾನದ ಬಳಿ ಬೃಹತ್ ಬಂಡೆಕಲ್ಲು ಕುಸಿತ

ಹೊಸ ಸೇರ್ಪಡೆ

ಬೀಜಾಡಿ: ಮೊಬೈಲ್‌ ಅಂಗಡಿಯಲ್ಲಿ 70 ಸಾವಿರ ರೂ.ಮೌಲ್ಯದ ಸೊತ್ತು ಕಳ್ಳತನ

ಬೀಜಾಡಿ: ಮೊಬೈಲ್‌ ಅಂಗಡಿಯಲ್ಲಿ 70 ಸಾವಿರ ರೂ.ಮೌಲ್ಯದ ಸೊತ್ತು ಕಳ್ಳತನ

Murder-aa

ವಂಡಾರು: ಪತಿಯಿಂದ ಪತ್ನಿ ಕೊಲೆ: ಪ್ರಕರಣ ದಾಖಲು

ಆದಿಉಡುಪಿ: ಇಬ್ಬರಿಗೆ ಬೀದಿ ನಾಯಿ ಕಡಿತ; ಜನರಲ್ಲಿ ಆತಂಕ

ಆದಿಉಡುಪಿ: ಇಬ್ಬರಿಗೆ ಬೀದಿ ನಾಯಿ ಕಡಿತ; ಜನರಲ್ಲಿ ಆತಂಕ

ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮ ಸಾಗಾಟ: 49,500 ರೂ. ಮೌಲ್ಯದ 33 ಕ್ವಿಂ. ಅಕ್ಕಿ ವಶ

ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮ ಸಾಗಾಟ: 49,500 ರೂ. ಮೌಲ್ಯದ 33 ಕ್ವಿಂ. ಅಕ್ಕಿ ವಶ

ತೊಕ್ಕೊಟ್ಟು: ಸ್ಕೂಟರ್‌ ಕಳ್ಳರಿಬ್ಬರ ಬಂಧನ

ತೊಕ್ಕೊಟ್ಟು: ಸ್ಕೂಟರ್‌ ಕಳ್ಳರಿಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.