ತಂದೆ ಹತ್ಯೆ ಮಾಡಿ ಜೈಲು ಪಾಲಾದ ಮಗ:ಅನಾಥಾಶ್ರಮ ಸೇರಿದ ಬುದ್ದಿಮಾಂದ್ಯ ಮಕ್ಕಳು:ತಾಯಿ ಪಾಡು?


Team Udayavani, Sep 25, 2021, 8:57 PM IST

chikkamagalore news

ಕೊಟ್ಟಿಗೆಹಾರ:ಇದ್ದ ಮೂವರು ಮಕ್ಕಳಲ್ಲಿ ಒಬ್ಬ ಮಗ ತಂದೆಯನ್ನು ಹತ್ಯೆ ಮಾಡಿ ಜೈಲು ಪಾಲಾದರೆ, ಇನ್ನಿಬ್ಬರು ಬುದ್ದಿಮಾಂದ್ಯ, ಅಂಗವೈಕಲ್ಯಪೀಡಿತ ಮಕ್ಕಳನ್ನು ಇಳಿ ವಯಸ್ಸಿನಲ್ಲಿ ಸಾಕಲಾಗದೆ ಅನಾಥಾಶ್ರಮಕ್ಕೆ ಕಳುಹಿಸಿ ಏಕಾಂಗಿಯಾದ ತಾಯಿಯೊಬ್ಬಳ ದುರಂತದ ಕಥೆ ಇದು.

ಮೂಡಿಗೆರೆ ತಾಲ್ಲೂಕಿನ ಚನ್ನಡ್ಲು ಗ್ರಾಮದ ಸುಂದರ ಹಾಗೂ ಅರುಣ ದಂಪತಿಗಳಿಗೆ ಮೂವರು ಮಕ್ಕಳು. ಇಬ್ಬರು ಮಕ್ಕಳು ಹುಟ್ಟಿನಿಂದ ಬುದ್ದಿಮಾಂದ್ಯತೆ ಹಾಗೂ ಅಂಗವೈಕಲ್ಯತೆಯಿಂದ ಬಳಲುತ್ತಿದ್ದು ಹಿರಿಯ ಮಗ ಬೆಂಗಳೂರಿನಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ತಂದೆ ಸುಂದರ ಅವರು ಕೂಲಿ ಕೆಲಸ ಮಾಡಿ ಕುಟುಂಬವನ್ನು  ಸಾಕುತ್ತಿದ್ದರೆ, ತಾಯಿ ಅರುಣ ಅವರು ಅಂಗವೈಕಲ್ಯ ಮಕ್ಕಳು ನೋಡಿಕೊಂಡು ಮನೆಯಲ್ಲಿರುತ್ತಿದ್ದರು.

ಕುಟುಂಬಕ್ಕೆ ಆಸರೆಯಾದ ಸುಂದರ್‌ ಅವರು 2020 ರಲ್ಲಿ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದು ಆ ಸಂದರ್ಭದಲ್ಲಿ  ಸುಂದರ್‌ ಅವರ ಕುಟುಂಬಕ್ಕೆ ದಿಕ್ಕು ತೋಚದಂತಾಗಿತ್ತು. ಹಲವಾರು ಸಂಘ ಸಂಸ್ಥೆಗಳು, ಜನಪ್ರತಿನಿಗಳು, ದಾನಿಗಳು ಲಕ್ಷಾಂತರ ರೂ. ನೆರವು ನೀಡಿದ್ದರು.

ಆದರೆ ಬೆಂಗಳೂರಿನಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಗ ಲಾಕ್‌ಡೌನ್‌ ಸಂದರ್ಭದಲ್ಲಿ ಮನೆಗೆ ಬಂದಾಗ ಹಣದ ವಿಚಾರವಾಗಿ ಮಗ, ಪಾರ್ಶ್ವವಾಯು ಪೀಡಿತನಾಗಿ ಮಲಗಿದ್ದ ತಂದೆ ಸುಂದರ್‌ ಅವರನ್ನು ಕೊಡಲಿಯಿಂದ ಕಡಿದು ಹತ್ಯೆ ಮಾಡಿದ್ದು, ಮಗ ಜೈಲು ಪಾಲಾಗಿದ್ದ.

ಮನೆಗೆ ಆಧಾರವಾಗಿದ್ದ ಸುಂದರ್‌ ನಿಧನದಿಂದ ದಿಕ್ಕು ತೋಚದೆ ಸಂಕಷ್ಟದಿಂದ ಇಬ್ಬರು ಬುದ್ದಿಮಾಂದ್ಯ ಅಂಗವಿಕಲ ಮಕ್ಕಳನ್ನು ಸಾಕುತ್ತಿದ್ದ ಅರುಣ ಅವರ ಮೇಲೆ ತಿಂಗಳ ಹಿಂದೆ ಸಂಬಂದಿಕರೊಬ್ಬರು ಕ್ಷುಲಕ ಕಾರಣಕ್ಕೆ ಹಲ್ಲೆ ನಡೆಸಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡು ಅರುಣ ಅವರು ಆಸ್ಪತ್ರೆಗೆ ದಾಖಲಾಗಿದ್ದರು.

ಇದನ್ನೂ ಓದಿ:ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಪಡೆದ ಉಗರಗೋಳ ಪೈಲ್ವಾನರು

ಇದೀಗ ಇಳಿವಯಸ್ಸಿನಲ್ಲಿ ಬುದ್ದಿಮಾಂದ್ಯ ಅಂಗವಿಕಲ ಮಕ್ಕಳನ್ನು ನೋಡಿಕೊಳ್ಳಲು ಆಗದೇ ಗ್ರಾಮಸ್ಥರು ಹಾಗೂ ಸಾರ್ವಜನಿಕರು ತಾಯಿ ಅರುಣ ಅವರ ಮನವೊಲಿಸಿ ಇಬ್ಬರು ಮಕ್ಕಳನ್ನು ಅನಾಥಾಶ್ರಮಕ್ಕೆ ಬಿಡಲು ಒಪ್ಪಿಸಿದ್ದು, ಶನಿವಾರ ಬುದ್ದಿಮಾಂದ್ಯ ಅಂಗವಿಕಲ ಇಬ್ಬರು ಮಕ್ಕಳನ್ನು ಬೆಂಗಳೂರಿನ ಬನ್ನೇರುಘಟ್ಟದ  ಆರ್‌.ವಿ.ಎನ್‌ ಪೌಂಡೇಶನ್‌ನ ಅನಾಥಾಶ್ರಮಕ್ಕೆ ಕರೆದ್ಯೊಯಲಾಯಿತು.

ಗಂಡನನ್ನು ಕಳೆದುಕೊಂಡು ಇಬ್ಬರು ಮಕ್ಕಳನ್ನು ಅನಾಥಾಶ್ರಮಕ್ಕೆ ಕಳಿಸಿ ಏಕಾಂಗಿಯಾಗಿ ಕಣ್ಣೀರು ಹಾಕುತ್ತಿದ್ದ ಅರುಣ ಅವರ ದೃಶ್ಯ ಮನಕಲಕುವಂತಿತ್ತು. ಅನಾಥಾಶ್ರಮಕ್ಕೆ ಹೋಗಲು ಅಂಬುಲೆನ್ಸ್‌ಗೆ ಹಣವನ್ನು ಬಾಳೂರು ಗ್ರಾ.ಪಂ, ಬಾಳೂರು ಪೊಲೀಸರ ವತಿಯಿಂದ  ನೀಡಲಾಯಿತು.

ಈ ಸಂದರ್ಭದಲ್ಲಿ ಬಾಳೂರು ಗ್ರಾ.ಪಂ ಅಧ್ಯಕ್ಷೆ ಗೀತಾ, ಉಪಾದ್ಯಕ್ಷ ಬಿ.ಬಿ.ಮಂಜುನಾಥ್‌, ಸದಸ್ಯರಾದ ಮನೋಜ್‌, ಬಿಜೆಪಿ ಮುಖಂಡರಾದ ಬಿ.ಎಂ ಭರತ್‌, ಬಾಳೂರು ಠಾಣೆ ಪಿಎಸ್‌ಐ ರೇಣುಕಾ, ಸಿಬ್ಬಂದಿಗಳಾದ ಮಹೇಶ್‌, ವೈಭವ್‌, ಸಾಮಾಜಿಕ ಸಕ್ರಿಯ ಸೇವಾಸಂಸ್ಥೆಯ ಅಧ್ಯಕ್ಷ ಪಿಶ್‌ಮೋಣು, ಕಾರ್ಯಾಧ್ಯಕ್ಷ ಅಬ್ದುಲ್‌ ರೆಹಮಾನ್‌, ಉಪಾಧ್ಯಕ್ಷ ಹಸೆ„ನಾರ್‌ ಬಿಳುಗುಳ, ಗ್ರಾಮಸ್ಥರಾದ ರೋಹಿತ್‌, ಮದನ್‌, ಜಗದೀಶ್‌,ರಾಜು, ಸಂದೀಪ್‌, ವಿಜೇಂದ್ರ, ಸುದೀಪ್‌, ಪೂರ್ಣೇಶ್‌,ಚಂದ್ರಶೇಖರ್‌, ರವಿ, ಅಣ್ಣಪ್ಪ, ಇದ್ದರು.

 

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

4-chikkamagaluru

Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.