ಚಿಕ್ಕಮಗಳೂರು: ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದ ಕೈದಿ 24 ಗಂಟೆಯೊಳಗೆ ಬಂಧನ
Team Udayavani, May 28, 2022, 1:17 PM IST
ಚಿಕ್ಕಮಗಳೂರು : ಅನಾರೋಗ್ಯದ ನಿಮಿತ್ತ ಆಸ್ಪತ್ರೆ ಗೆ ದಾಖಲಾಗಿದ್ದ ವೇಳೆ ತಪ್ಪಿಸಿಕೊಂಡಿದ್ದ ಕೈದಿಯನ್ನು 24 ಗಂಟೆಯೊಳಗೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಗಾಂಜಾ ಪ್ರಕರಣದಲ್ಲಿ ಬಂಧಿತನಾಗಿದ್ದ ಕಡೂರು ಮೂಲದ ಧನರಾಜ್, ಜೈಲು ಸಿಬ್ಬಂದಿಯನ್ನ ಆಸ್ಪತ್ರೆ ಶೌಚಾಲಯದೊಳಗೆ ತಳ್ಳಿ ತಪ್ಪಿಸಿಕೊಂಡಿದ್ದ.
ಜೈಲು ಸಿಬ್ಬಂದಿಗಳು ಮತ್ತು ಕಡೂರು ಪಿಎಸ್ ಐ ರಮ್ಯಾ ನೇತೃತ್ವದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ ಪೊಲೀಸರು ಶಿವಮೊಗ್ಗ ತಾಲೂಕಿನ ಕುಂಸಿ ಬಳಿ ಬಂಧಿಸಿದ್ದಾರೆ.
ಇದನ್ನೂ ಓದಿ : ಮದುವೆ ಹಾಲ್ನಲ್ಲಿ ಕಣ್ಮರೆಯಾದ ಚಿನ್ನದ ಸರ ದೈವ ಸನ್ನಿಧಿಯಲ್ಲಿ ಪತ್ತೆ!