Udayavni Special

ಇಂದು ಶೃಂಗೇರಿ ಶ್ರೀಗಳ ದಿವ್ಯಸಪ್ತತಿಪೂರ್ತಿ ಸಮಾರಂಭ


Team Udayavani, Apr 18, 2021, 6:30 PM IST

18-20

ಶೃಂಗೇರಿ: ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿಗಳ ದಿವ್ಯಸಪ್ತತಿಪೂರ್ತಿ ಸಮಾರಂಭವು ಶ್ರೀ ಶಾರದಾ ಪೀಠದಲ್ಲಿ ಏ.18ರಂದು ನಡೆಯಲಿದೆ. ಅವಿಚ್ಚಿನ್ನ ಗುರುಪರಂಪರೆ ಹೊಂದಿರುವ ಶ್ರೀ ಶಾರದಾ ಪೀಠದ 35 ನೇ ಜಗದ್ಗುರು ಶ್ರೀ ಅಭಿನವ ವಿದ್ಯಾತೀರ್ಥ ಸ್ವಾಮೀಜಿಗಳಿಂದ ಸನ್ಯಾಸ ಸ್ವೀಕರಿಸಿದ್ದರು.

1989 ರಲ್ಲಿ ಪೀಠಾಧಿ ಪತಿಗಳಾಗಿ ವಿರಾಜಮಾನರಾಗಿರುವ ಶ್ರೀಗಳು ಚೈತ್ರ ಶುಕ್ಲ ಷಷ್ಠಿಯಂದು ಜನಿಸಿದ್ದರು. ದಿವ್ಯ ಸಪ್ತತಿಪೂರ್ತಿ ಅಂಗವಾಗಿ ಆಯುತಚಂಡಿ ಮಹಾಯಾಗ, ಕೋಟಿ ಕುಂಕುಮಾರ್ಚನೆ, ಅತಿರುದ್ರಮಹಾಯಾಗದಲ್ಲಿ ಪಾಲ್ಗೊಂಡಿರುವ ಋತ್ವಿಜರು ಬೆಳಗ್ಗೆ ಜಗದ್ಗುರುಗಳು ಆಹಿ°ಕ ದರ್ಶನ ಪಡೆದರು. ಉಭಯ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ಬೆಟ್ಟದ ಶ್ರೀ ಮಲಹಾನಿಕಾರೇಶ್ವರ ಸ್ವಾಮಿ ಸನ್ನಿ ಧಿಗೆ ತೆರಳಿ ಪೂಜೆ ಸಲ್ಲಿಸಿದರು.

ಸ್ವಾಮಿಯ ಸನ್ನಿ ಧಿಯಲ್ಲಿ ಶ್ರೀ ಸದ್ವಿದ್ಯಾ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಗಳು ರುದ್ರ ಪಠಿಸಿದರು. ಗುರುಭವನದ ಸಮೀಪ ಯಾಗಶಾಲೆಯಲ್ಲಿ ಆಯುತಚಂಡಿ ಮಹಾಯಾಗ, ಅತಿರುದ್ರ ಮಹಾಯಾಗ ನಡೆಯುತ್ತಿದ್ದು, ಕೋಟಿ ಕುಂಕುಮಾರ್ಚನೆ, ಶ್ರೀ ಶಾರದಾಂಬೆ ಸನ್ನಿ ಧಿಯಲ್ಲಿ ನಡೆಯುತ್ತಿದೆ. ವರ್ಧಂತಿ ಅಂಗವಾಗಿ ನಡೆಯುತ್ತಿದ್ದ ಜಗದ್ಗುರುಗಳ ಆಹಿ°ಕ ದರ್ಶನ ರದ್ದುಪಡಿಸಲಾಗಿದೆ. 2011 ರ ಖರ ನಾಮ ಸಂವತ್ಸರದಲ್ಲಿ ಜಗದ್ಗುರುಗಳ ಷಷ್ಟಭಿಪೂರ್ತಿ ಸಂದರ್ಭದಲ್ಲಿ ಶ್ರೀಮಠದ ಇತಿಹಾಸದಲ್ಲಿ ಮೊದಲ ಬಾರಿಗೆ ಆಯುತ ಚಂಡಿಕಾಯಾಗ, ಅತಿರುದ್ರ ಮಹಾಯಾಗ, ಕೋಟಿ ಕುಂಕುಮರ್ಚಾನೆ ಕಾರ್ಯಕ್ರಮದಲ್ಲಿ ಒಂದು ಸಾವಿರ ಋತ್ವಿಜರು ಹತ್ತು ಸಾವಿರ ದುರ್ಗಾ ಸಪ್ತಶತಿ ಪಾರಾಯಣ 100 ಯಜ್ಞ ಕುಂಡದಲ್ಲಿ ಒಂದು ಸಾವಿರ ಆವೃತ್ತಿ ಚಂಡಿಹೋಮ ನೆರವೇರಿಸಲಾಗಿತ್ತು.

ಅಗಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವರ್ಧಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಬಾರಿಯೂ ವರ್ಧಂತಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಆಗಮಿಸುತ್ತಿದ್ದರು. ಮುಖ್ಯಮಂತ್ರಿಗಳಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಪ್ರವಾಸ ರದ್ದಾಗಿದೆ.

ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೊಪ್ಪದ ಸಾ Ìನಿ ಮತ್ತು ತಂಡದವರ ಹಾಡುಗಾರಿಕೆ ನಡೆಯಿತು. ವಯೋಲಿನ್‌ನಲ್ಲಿ ಹೊಸೊಳ್ಳಿ ರಘುರಾಂ, ಮೃದಂಗದಲ್ಲಿ ಪುತ್ತೂರು ನಿಕ್ಷಿತ್‌ ಹಾಗೂ ಘಟಂನಲ್ಲಿ ಬೆಂಗಳೂರಿನ ಉತ್ತಮ್‌ ಸಹಕರಿಸಿದರು.

ಟಾಪ್ ನ್ಯೂಸ್

6-16

4 ವರ್ಷವಾದ್ರೂ ಮುಗಿಯದ ಕೆರೆ ನಿರ್ಮಾಣ ಕಾರ್ಯ

yryrtyt

ಬೆಳಗಾವಿ:  ಮಾರುಕಟ್ಟೆ ಸ್ಥಳಾಂತರದಿಂದ ಬಿಗಡಾಯಿಸಿದ ಪರಿಸ್ಥಿತಿ

yytyyt

2ನೇ ಮೀರಜ್‌ ಖ್ಯಾತಿ ಬಾಗಲಕೋಟೆಯಲ್ಲಿ ಆಕ್ಸಿಜನ್‌ ಆತಂಕ

ಕನ್ನಡಿಗರ ಉಸಿರನ್ನೇ ಕಿತ್ತುಕೊಳ್ಳುವ ಕೇಂದ್ರದ ಮಾರಕ ತಾರತಮ್ಯ ಬದಲಾಗಬೇಕು : ಹೆಚ್.ಡಿಕೆ

ಕನ್ನಡಿಗರ ಉಸಿರನ್ನೇ ಕಿತ್ತುಕೊಳ್ಳುವ ಕೇಂದ್ರದ ಮಾರಕ ತಾರತಮ್ಯ ಬದಲಾಗಬೇಕು : ಹೆಚ್.ಡಿಕೆ

ಪರೀಕ್ಷೆ ವೇಳೆ ಕೋವಿಡ್ ಲಕ್ಷಣ ಇರುವವರಿಗೆ ಮಾತ್ರೆ ನೀಡುವಂತೆ ಅರೋಗ್ಯ ಇಲಾಖೆ ಸೂಚನೆ

yuyutu6

ತಂದೆ ಕಳೆದುಕೊಂಡ ಮರುದಿನವೇ ವೈದ್ಯ ಸೇವೆಗೆ ಹಾಜರ್‌

ಮನೆಯಲ್ಲೇ ಕ್ವಾರಂಟೈನ್‌ ಆದ ಸೋಂಕಿತರಿಗೆ ವೈದ್ಯಕೀಯ ನೆರವು: ಡಿಸಿಎಂ ಡಾ.ಅಶ್ವತ್ಥನಾರಾಯಣ

ಮನೆಯಲ್ಲೇ ಕ್ವಾರಂಟೈನ್‌ ಆದ ಸೋಂಕಿತರಿಗೆ ವೈದ್ಯಕೀಯ ನೆರವು: ಡಿಸಿಎಂ ಡಾ.ಅಶ್ವತ್ಥನಾರಾಯಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-19

ಬಿಜೆಪಿ ಕಾರ್ಯಕರ್ತರ ಹತ್ಯೆ ಖಂಡನೀಯ: ಸಿ.ಟಿ.ರವಿ

6-18

ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ

6-17

ಕೊರೊನಾ ತಡೆಗೆ ಸಮನ್ವಯದಿಂದ ಕೆಲಸ ಮಾಡಿ

ಕಾಫಿನಾಡಿನಲ್ಲಿ ಆಕ್ಸಿಜನ್ ಗಾಗಿ ಸೋಂಕಿತರ ಪರದಾಟ!

ಕಾಫಿನಾಡಿನಲ್ಲಿ ಆಕ್ಸಿಜನ್ ಗಾಗಿ ಸೋಂಕಿತರ ಪರದಾಟ!

ಕೋವಿಡ್ ಸೋಂಕಿಗೆ ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಸಹೋದರಿ ಬಲಿ!

ಕೋವಿಡ್ ಸೋಂಕಿಗೆ ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಸಹೋದರಿ ಬಲಿ!

MUST WATCH

udayavani youtube

ಗಾರ್ಮೆಂಟ್ ಆಸ್ಪತ್ರೆಗೆ ಹೋದ್ರೆ ಸಾಯುತ್ತಾರೆ ; ಡಿಕೆ ಶಿವಕುಮಾರ್‌ ಸರ್ಕಾರದ ವಿರುದ್ಧ ಕಿಡಿ

udayavani youtube

Junior NTR ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಅಂತ ಕನ್ನಡದಲ್ಲಿ ಹೇಳಿದ್ದಾರೆ.

udayavani youtube

ಅಮಾಸೆ ಗಿರಾಕಿ ಎಂದು ತೇಜಸ್ವಿ ಸೂರ್ಯ ವಿರುದ್ಧ ಡಿ ಕೆ ಶಿವಕುಮಾರ್​ ಗರಂ..!

udayavani youtube

ಬಯಲು ಪ್ರದೇಶದಲ್ಲಿ ಕೋವಿಡ್ ಸೋಂಕಿತರಿಗೆ ಸ್ಥಳೀಯ ವೈದ್ಯರಿಂದ ಚಿಕಿತ್ಸೆ

udayavani youtube

ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸಚಿವ ವಿ.ಮುರಳೀಧರನ್ ಅವರ ಕಾರ್ ಮೇಲೆ ಹಲ್ಲೆ

ಹೊಸ ಸೇರ್ಪಡೆ

6-22

ಆಮ್ಲಜನಕ ಲಭ್ಯತೆ ಸಮಸ್ಯೆ; ಶಾಸಕ ಹಾಲಪ್ಪ ಆತಂಕ

6-21

ಕೆಲ ಅಸಮಾಧಾನದ ಮಧ್ಯೆಯೂ ಜನಪರ ಕೆಲಸದ ಸಂತೃಪ್ತಿ ಇದೆ : ಹಕ್ರೆ

6-20

ಸೋಂಕು ತಡೆಗೆ ಎಲ್ಲ ವಾರ್ಡ್‌ಗಳಲ್ಲಿ ಸ್ಯಾನಿಟೈಸ್‌

6-16

4 ವರ್ಷವಾದ್ರೂ ಮುಗಿಯದ ಕೆರೆ ನಿರ್ಮಾಣ ಕಾರ್ಯ

yryrtyt

ಬೆಳಗಾವಿ:  ಮಾರುಕಟ್ಟೆ ಸ್ಥಳಾಂತರದಿಂದ ಬಿಗಡಾಯಿಸಿದ ಪರಿಸ್ಥಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.