ಜಲಮೂಲ ಇದ್ರೂ ನಿರ್ವಹಣೆಯದ್ದೇ ಸಮಸ್ಯೆ


Team Udayavani, Apr 20, 2021, 6:09 PM IST

20-20

ಶೃಂಗೇರಿ: ತಾಲೂಕಿನಲ್ಲಿ ಜಲ ಮೂಲಗಳು ಸಾಕಷ್ಟು ಇದ್ದರೂ, ಸೂಕ್ತ ನಿರ್ವಹಣೆ ಇಲ್ಲದೆ ಕುಡಿಯುವ ನೀರಿನ ಸಮಸ್ಯೆ ಹಲವಾರು ಕಡೆ ತಲೆದೋರಿದೆ. ಪಪಂ ಸೇರಿದಂತೆ ವಿವಿಧ ಗ್ರಾಪಂ ಮಟ್ಟದ ಕುಡಿಯುವ ನೀರಿನ ಘಟಕಗಳಿಗೆ ವಿದ್ಯುತ್‌ ಸಮಸ್ಯೆ, ಪೈಪ್‌ಲೈನ್‌ ಹಾನಿಗೊಳಗಾಗುವ ಕಾರಣದಿಂದ ಆಗಾಗ್ಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ಅಡಚಣೆಯಾಗುತ್ತಿದೆ. ನದಿಯಿಂದ ನೀರೆತ್ತುವ ಘಟಕಗಳಿಗೆ ನೀರಿನ ಸಮಸ್ಯೆಯಾಗದಿದ್ದರೂ, ಹಳ್ಳ, ಕೆರೆಯಿಂದ ನೀರೆತ್ತುವ ಕಡೆಯಲ್ಲಿ ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗಲಿದೆ. ತಾಲೂಕಿನ ದೊಡ್ಡ ಗ್ರಾಪಂ ಮೆಣಸೆಯ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ತುಂಗಾನದಿಯ ನೀರನ್ನು ಅವಲಂಬಿಸಿದೆ.

ನದಿಯ ಪಕ್ಕದಲ್ಲಿ ಬಾವಿ ನಿರ್ಮಿಸಿ ಅದರಿಂದ ನೀರೆತ್ತಿ, ಟ್ಯಾಂಕ್‌ಗಳಲ್ಲಿ ಸಂಗ್ರಹಿಸಿ, ನಂತರ ಮನೆ- ಮನೆಗಳಿಗೆ ವಿತರಣೆ ಮಾಡಲಾಗುತ್ತಿದೆ. ಮೆಣಸೆ ಗ್ರಾಪಂ ಕಚೇರಿ ಹಿಂಭಾಗದಲ್ಲಿ ನಿರ್ಮಿಸಿರುವ ನೀರಿನ ಸಂಗ್ರಹ ತೊಟ್ಟಿ ಹಲವಾರು ವರ್ಷದ ಹಿಂದೆ ನಿರ್ಮಿಸಿದ್ದು, ಅಂದಿನ ನೀರಿನ ಬಳಕೆಗೂ ಈಗಿನ ನೀರಿನ ಬಳಕೆದಾರರ ಹೆಚ್ಚಳದಿಂದ ಪ್ರತಿ ದಿನ ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ದಿನ ಬಿಟ್ಟು ದಿನ ನೀರು ಸರಬರಾಜು ಮಾಡಲಾಗುತ್ತಿದೆ. ನೀರಿನ ತೊಟ್ಟಿಗೆ ಬರುವ ಪೈಪ್‌ ಲೈನ್‌ ಹಳೆಯದಾಗಿದ್ದು,ಆಗಾಗ್ಗೆ ಪೈಪ್‌ ಒಡೆದು ನೀರು ಪೂರೈಕೆಗೆ ಅಡಚಣೆಯಾಗುತ್ತಿದೆ. ರಸ್ತೆ ಅಗಲೀಕರಣಕ್ಕೂ ಮೊದಲು ಹಾಕಲಾಗಿದ್ದ ಪೈಪ್‌ ಈಗ ರಸ್ತೆಯಲ್ಲಿದ್ದು, ಪೈಪ್‌ ಒಡೆದರೂ ದುರಸ್ತಿ ಮಾಡುವುದು ಕಷ್ಟವಾಗಿದೆ.

ವಿದ್ಯುತ್‌ ಸಮಸ್ಯೆ: ಬೇಸಿಗೆಯಲ್ಲಿ ವಿದ್ಯುತ್‌ ಕಡಿತ ಹೆಚ್ಚಾಗಿದ್ದು, ಇದರೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ವೋಲ್ಟೆàಜ್‌ ಸಮಸ್ಯೆ ಎದುರಾಗಿದೆ. ಶಿಡ್ಲೆ, ಕೋಡೂರು, ಹಾಲಂದೂರು, ಹೊಸನಗರ, ಕೊರಡಕಲ್ಲು, ಪಡುಬೈಲು, ಮೂಡಬನ ಮುಂತಾದೆಡೆ ಸಮರ್ಪಕ ವೋಲ್ಟೆಜ್‌ ಇಲ್ಲದೆ ಮೋಟಾರ್‌ ಚಾಲನೆಯಾಗುವುದಿಲ್ಲ. ಕೆಲವೆಡೆ ಸಣ್ಣ ಹಳ್ಳದಿಂದ ಪೂರೈಸುವ ನೀರಿನ ಹರಿವು ಕಡಿಮೆಯಾಗಿದೆ. ತೋಟಗಳಿಗೆ ನೀರೆತ್ತುವುದರಿಂದ ನೀರಿನ ಹರಿವು ಕುಸಿತವಾಗಿದೆ.

ಅಸಮರ್ಪಕ ಬಳಕೆ: ಕುಡಿಯುವ ನೀರು ಪಪಂ ಮತ್ತು ಗ್ರಾಪಂನಿಂದ ಪೂರೈಸುತ್ತಿದ್ದು,ಸಾರ್ವಜನಿಕರು ನೀರಿನ ಬಳಕೆಯನ್ನು ಅನ್ಯ ಉದ್ದೇಶಕ್ಕೆ ಬಳಸುವುದರಿಂದ ನೀರಿನ ಸಮರ್ಪಕ ಬಳಕೆಯಾಗುತ್ತಿಲ್ಲ. ಪಪಂ ಶುದ್ಧೀಕರಿಸಿ ನೀರನ್ನು ಸಾರ್ವಜನಿಕರಿಗೆ ಒದಗಿಸುತ್ತಿದ್ದು, ಕುಡಿಯುವ ನೀರನ್ನು ತಮ್ಮ ಕೈತೋಟ, ವಾಹನ ತೊಳೆಯಲು ಮತ್ತಿತರ ಬಳಕೆಗೂ ಬಳಸುತ್ತಾರೆ. ಇದರಿಂದ ಸಾರ್ವಜನಿಕರಿಗೆ ನೀರಿನ ಸರಬರಾಜಿನಲ್ಲಿ ಇಳಕೆಯಾಗುತ್ತದೆ. ಕುಡಿಯುವ ನೀರನ್ನು ಹಿತ- ಮಿತವಾಗಿ ಬಳಸಬೇಕು ಎಂದು ಪಪಂ ಅಧ್ಯಕ್ಷ ಹರೀಶ್‌ ಶೆಟ್ಟಿ ವಿನಂತಿಸಿದ್ದಾರೆ. ವಾಟರ್‌ಮ್ಯಾನ್‌ಗಳು ಕುಡಿಯುವ ನೀರಿನ ಘಟಕದ ನಿರ್ವಹಣೆ ಮಾಡುತ್ತಿದ್ದು, ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಾಟರ್‌ ಮ್ಯಾನ್‌ ಪ್ರತಿ ದಿನವೂ ಕರ್ತವ್ಯದಲ್ಲಿರಬೇಕಾಗಿದ್ದು,ರಜೆ ಎಂಬುದೇ ಇಲ್ಲ. ಕುಡಿಯುವ ನೀರಿನ ಸರಬರಾಜು ಮಾಡುವ ಮೋಟಾರ್‌ಗಳಿಗೆ ರಾತ್ರಿ ಹಾಗೂ ಹಗಲಿನಲ್ಲಿ ತ್ರೀಫೇಸ್‌ ವಿದ್ಯುತ್‌ ದೊರಕುವುದರಿಂದ ಆ ಸಮಯಕ್ಕೆ ಮೋಟಾರ್‌ ಚಾಲನೆಗೊಳಿಸುವುದು ಅಗತ್ಯವಾಗಿದೆ. ವೋಲ್ಟೆàಜ್‌ ಕಡಿಮೆಯಾದರೆ ಮೋಟರ್‌ ಸ್ಥಬ್ಧಗೊಳಿಸಬೇಕು.ನಿರಂತರ ಸಮರ್ಪಕ ವಿದ್ಯುತ್‌ ಪೂರೈಕೆ ಇದ್ದರೆ ಈ ಸಮಸ್ಯೆ ಪರಿಹಾರವಾಗಬಲ್ಲದು.

ಟಾಪ್ ನ್ಯೂಸ್

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

B Y Vijayendra: ಕಾಂಗ್ರೆಸ್‌ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?

B Y Vijayendra: ಕಾಂಗ್ರೆಸ್‌ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

9 ವರ್ಷದ ಬಾಲಕಿ ಕಿಡ್ನ್ಯಾಪ್ ಮಾಡಿ ಡಿಕೆಶಿ ಆಸ್ತಿ ಬರೆಯಿಸಿಕೊಂಡ್ರು: ಎಚ್‌ಡಿಡಿ

9 ವರ್ಷದ ಬಾಲಕಿ ಕಿಡ್ನ್ಯಾಪ್ ಮಾಡಿ ಡಿಕೆಶಿ ಆಸ್ತಿ ಬರೆಯಿಸಿಕೊಂಡ್ರು: ಎಚ್‌ಡಿಡಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

7

Kundapur: ಬೈಕ್‌ ಢಿಕ್ಕಿ; ಸ್ಕೂಟರ್‌ ಸವಾರೆಗೆ ಗಾಯ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.