ಕಂದಾಯ ಭೂಮಿಯಲ್ಲಿದ್ದ ಅಕ್ರಮ ಗುಡಿಸಲು ನೆಲಸಮ

Team Udayavani, Apr 25, 2020, 2:55 PM IST

25-April-19

ಚಿಕ್ಕಮಗಳೂರು: ಗುಡಿಸಲು ಕಳೆದುಕೊಂಡಿದ್ದು ತಮಗೆ ಆಶ್ರಯ ನೀಡುವಂತೆ ಗುಡಿಸಲು ನಿವಾಸಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಚಿಕ್ಕಮಗಳೂರು: ಸರ್ಕಾರಿ ಕಂದಾಯ ಭೂಮಿಯಲ್ಲಿ ನಿರ್ಮಿಸಿಕೊಂಡಿದ್ದ ಗುಡಿಸಲುಗಳನ್ನು ನಗರಸಭೆ ಜೆಸಿಬಿ ಮೂಲಕ ಏಕಾಏಕಿ ನೆಲಸಮ ಮಾಡಿದ್ದಾರೆ ಎಂದು ನಿವಾಸಿಗಳು ಆರೋಪಿಸಿದರು.

ನಗರದ ಜಿಪಂ ಕಚೇರಿ ಮುಂಭಾಗದಲ್ಲಿ ನಿರ್ಮಿಸಿಕೊಂಡಿದ್ದ ಗುಡಿಸಲುಗಳನ್ನು ನಗರಸಭೆ ಸಿಬ್ಬಂದಿ ಜೆಸಿಬಿ ಮೂಲಕ ಏಕಾಏಕಿ ನಮ್ಮ ಗುಡಿಸಲುಗಳನ್ನು ಕಡೆವಿ, ಆಹಾರ ಸಾಮಗ್ರಿಗಳನ್ನು ಮಣ್ಣುಪಾಲು ಮಾಡಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು. ನಗರದ ಹೌಸಿಂಗ್‌ ಬೋರ್ಡ್‌ ಬಡಾವಣೆ ಸಮೀಪದ ಜಿಪಂ ಕಚೇರಿ ಎದುರಿನಲ್ಲಿರುವ ಸರ್ಕಾರಿ ಖಾಲಿ ಜಾಗದಲ್ಲಿ ನಿವೇಶನ ರಹಿತರು 20ಕ್ಕೂ ಹೆಚ್ಚು ಕೂಲಿ ಕಾರ್ಮಿಕರ ಕುಟುಂಬಗಳು ಕಳೆದ 10 ವರ್ಷಗಳಿಂದ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದೆವು. ಲಾಕ್‌ಡೌನ್‌ನಿಂದ ಕೆಲಸವಿಲ್ಲದೇ ಗುಡಿಸಲುಗಳಲ್ಲೇ ವಾಸವಾಗಿದ್ದು ಸಂಘ- ಸಂಸ್ಥೆಗಳು ನೀಡಿದ ಆಹಾರ ಸಾಮಗ್ರಿಗಳನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದೆವು.

ಗುರುವಾರ ನಗರಸಭೆ ಅಧಿಕಾರಿಗಳು ಒಂದು ಜೆಸಿಬಿ ಹಾಗೂ ಒಂದು ಟ್ರ್ಯಾಕ್ಟರ್‌ ಕಳುಹಿಸಿ ಏಕಾಏಕಿ ಗುಡಿಸಲುಗಳನ್ನು ನೆಲಸಮ ಮಾಡಿದ್ದಾರೆ. ಗುಡಿಸಲಿನಲ್ಲಿದ್ದ ಆಹಾರ ಸಾಮಗ್ರಿಗಳು ಮಣ್ಣುಪಾಲಾಗಿವೆ. ಎರಡು ಗುಡಿಸಲುಗಳನ್ನು ಮಾತ್ರ ನೆಲಸಮ ಮಾಡದೇ ಬಿಟ್ಟಿದ್ದಾರೆ. ಗುಡಿಸಲಿನಲ್ಲಿ ವಾಸಿಸುತ್ತಿದ್ದ 40 ಮಂದಿ ಎರಡೇ ಗುಡಿಸಿಲಿನಲ್ಲೇ ಆಶ್ರಯ ಪಡೆದುಕೊಂಡಿದ್ದೇವೆ ಎಂದರು.

ಲಾಕ್‌ಡೌನ್‌ನಂತಹ ಸಂದರ್ಭದಲ್ಲಿ ಗುಡಿಸಲುಗಳನ್ನು ಕೆಡವಿ ನಗರಸಭೆ ಮುಂದಾಗಿರುವುದು ಅಮಾನವೀಯ ಕ್ರಮವಾಗಿದೆ. ಮನುಷ್ಯತ್ವಕ್ಕೆ ಬೆಲೆ ನೀಡದೆ ಗುಡಿಸಲು ಕೆಡವಿ ಹಾಕಿದ್ದಾರೆ. ಲಾಕ್‌ಡೌನ್‌ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಸರ್ಕಾರವೇ ಆದೇಶ ನೀಡಿದೆ. ಎರಡು ಗುಡಿಸಿಲಿನಲ್ಲಿ 40 ಜನರು ವಾಸಿಸುವಂತೆ ಮಾಡಿ ಸರ್ಕಾರದ ಆದೇಶವನ್ನೇ ನಗರಸಭೆ ಅಧಿಕಾರಿಗಳು ಉಲ್ಲಂಘನೆ ಮಾಡಿದ್ದಾರೆ.
ಕೆ.ಟಿ. ರಾಧಾಕೃಷ್ಣ,
ಬಿಎಸ್‌ಪಿ ಜಿಲ್ಲಾಧ್ಯಕ್ಷ

ಗುಡಿಸಲು ನಿರ್ಮಿಸಿಕೊಂಡ ಜಾಗ ರಿಂಗ್‌ ರಸ್ತೆಗೆ ಸಂಬಂಧಿಸಿದ ಜಾಗವಾಗಿದೆ. ನಾಲ್ಕು ವರ್ಷಗಳಿಂದ ಗುಡಿಸಲು ನಿರ್ಮಿಸಿಕೊಂಡಿರುವ ಐದು ಗುಡಿಸಲುಗಳನ್ನು ಹಾಗೆಯೇ ಬಿಟ್ಟಿದ್ದೇವೆ. ಐದು ಮಂದಿ ಅಕ್ರಮ ಗುಡಿಸಲು ಹಾಕಿದ್ದರು. 12 ಮಂದಿ ಗುಡಿಸಲು ಹಾಕುತ್ತಿದ್ದರು. ಅವುಗಳನ್ನು ತೆರವುಗೊಳಿಸಿದ್ದೇವೆ.
ಚಂದ್ರಶೇಖರ್‌,
ಪೌರಾಯುಕ್ತ

ಟಾಪ್ ನ್ಯೂಸ್

1-ddsdd

ಸಿಎಂ ಸಾವಂತ್ ಗೆ ಸರಳ ಬಹುಮತದ ವಿಶ್ವಾಸ ; ಪಾರ್ಸೇಕರ್ ಸವಾಲು

ಪಾಣೆಮಂಗಳೂರು: ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಪಾಣೆಮಂಗಳೂರು: ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಯಾದಗಿರಿ: ನವೋದಯ ಶಾಲೆಯ 75 ಮಕ್ಕಳಿಗೆ ಕೋವಿಡ್ ದೃಢ; ಒಂದು ವಾರ ಶಾಲೆ ಬಂದ್

ಯಾದಗಿರಿ: ನವೋದಯ ಶಾಲೆಯ 75 ಮಕ್ಕಳಿಗೆ ಕೋವಿಡ್ ದೃಢ; ಒಂದು ವಾರ ಶಾಲೆ ಬಂದ್

11-fd

ಚನ್ನಣ್ಣನವರ್, ಸೆಂಟ್ರಲ್ ಜೈಲ್ ಎಸ್ ಪಿ ಸೇರಿ ಹಲವು ಐಪಿಎಸ್ ಗಳ ವರ್ಗಾವಣೆ

ಟಿ.ಪಿ. ಶಿವಕುಮಾರ್ ಚಾಮರಾಜನಗರ ನೂತನ ಎಸ್ಪಿ

ಟಿ.ಪಿ. ಶಿವಕುಮಾರ್ ಚಾಮರಾಜನಗರ ನೂತನ ಎಸ್ಪಿ

1-sdsa

ಗೋವಾ: ನಾಮಪತ್ರ ಸಲ್ಲಿಸುವ ಮುನ್ನಾ ದಿನ ಬಿಜೆಪಿ ತೊರೆದ ಸಚಿವ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 581 ಅಂಕ ಇಳಿಕೆ; ಲಾಭ, ನಷ್ಟ ಕಂಡ ಷೇರುಗಳು ಯಾವುದು?

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 581 ಅಂಕ ಇಳಿಕೆ; ಲಾಭ, ನಷ್ಟ ಕಂಡ ಷೇರುಗಳು ಯಾವುದು?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಒಳ್ಳೆ ಸೇಬು ಇರುವಾಗ ಕೊಳೆತ ಮಾವಿನ ಹಣ್ಣು ಯಾರಿಗ್ರಿ ಬೇಕು : ಕಾಂಗ್ರೆಸ್ ಗೆ ಈಶ್ವರಪ್ಪ ಟಾಂಗ್

ಒಳ್ಳೆ ಸೇಬು ಇರುವಾಗ ಕೊಳೆತ ಮಾವಿನ ಹಣ್ಣು ಯಾರಿಗ್ರಿ ಬೇಕು : ಕಾಂಗ್ರೆಸ್ ಗೆ ಈಶ್ವರಪ್ಪ ಟಾಂಗ್

chikkamagalore news

ಕಾಫಿ ನಾಡಿನ ಕ್ರಿಕೆಟ್‌ ಪ್ರತಿಭೆಗೆ ಅಮೆರಿಕ ತಂಡದಲ್ಲಿ ಮನ್ನಣೆ

ಮದುವೆ ದಿನದಂದು ಕಾಫಿದೊರೆ ಸಿದ್ದಾರ್ಥ ಹೆಗ್ಗಡೆ ಅವರಿಗೆ ನುಡಿ ನಮನ ಸಲ್ಲಿಸಿದ ಮದುಮಗ

ಮದುವೆ ದಿನದಂದು ಕಾಫಿದೊರೆ ಸಿದ್ದಾರ್ಥ ಹೆಗ್ಗಡೆ ಅವರಿಗೆ ನುಡಿ ನಮನ ಸಲ್ಲಿಸಿದ ಮದುಮಗ

ಹೇಮಾವತಿ ನದಿಮೂಲದಲ್ಲಿ ನೂತನ ದೇವಸ್ಥಾನ ನಿರ್ಮಾಣದ ಗುದ್ದಲಿ ಪೂಜೆ

ಹೇಮಾವತಿ ನದಿಮೂಲದಲ್ಲಿ ನೂತನ ದೇವಸ್ಥಾನ ನಿರ್ಮಾಣದ ಗುದ್ದಲಿ ಪೂಜೆ

5leporied

ಚಿಕ್ಕಮಗಳೂರು:  ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

MUST WATCH

udayavani youtube

ತುಳುನಾಡಿನ ರಾಜಧಾನಿ ಬಾರ್ಕೂರನ್ನು ಆಳಿದ ರಾಜರ ಹೆಸರೇನು ಗೊತ್ತೇ ?

udayavani youtube

ಉತ್ತರಪ್ರದೇಶ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ

udayavani youtube

ಮನೆಯಿಂದ ಹೊರ ಬಂದ್ರೆ ತಲೆಗೇ ಕುಕ್ಕುತ್ತೆ ಈ ಕಾಗೆ.!

udayavani youtube

ದೇಶದ ಧ್ವಜದ ಜೊತೆ ಘೋಷಣೆ ಕೂಗಿದ್ದಕ್ಕೆ ಬಂಧನ!

udayavani youtube

ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೇ ವಾರದಿಂದ ಭಕ್ತರು ಯಲ್ಲಮ್ಮನ ಕ್ಷೇತ್ರಕ್ಕೆ ಬರುತ್ತಿದ್ದಾರೆ

ಹೊಸ ಸೇರ್ಪಡೆ

ರೋವ್ಮನ್‌ ಪೊವೆಲ್‌ ಸಿಡಿಲಬ್ಬರದ ಶತಕ: 3ನೇ ಟಿ20 ಪಂದ್ಯ ಗೆದ್ದ ವೆಸ್ಟ್‌ ಇಂಡೀಸ್‌

ರೋವ್ಮನ್‌ ಪೊವೆಲ್‌ ಸಿಡಿಲಬ್ಬರದ ಶತಕ: 3ನೇ ಟಿ20 ಪಂದ್ಯ ಗೆದ್ದ ವೆಸ್ಟ್‌ ಇಂಡೀಸ್‌

1-ddsdd

ಸಿಎಂ ಸಾವಂತ್ ಗೆ ಸರಳ ಬಹುಮತದ ವಿಶ್ವಾಸ ; ಪಾರ್ಸೇಕರ್ ಸವಾಲು

ಪಾಣೆಮಂಗಳೂರು: ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಪಾಣೆಮಂಗಳೂರು: ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಯಾದಗಿರಿ: ನವೋದಯ ಶಾಲೆಯ 75 ಮಕ್ಕಳಿಗೆ ಕೋವಿಡ್ ದೃಢ; ಒಂದು ವಾರ ಶಾಲೆ ಬಂದ್

ಯಾದಗಿರಿ: ನವೋದಯ ಶಾಲೆಯ 75 ಮಕ್ಕಳಿಗೆ ಕೋವಿಡ್ ದೃಢ; ಒಂದು ವಾರ ಶಾಲೆ ಬಂದ್

“ಗ್ರಾಮ ಒನ್‌’ ಸೇವೆ ಜನಮಾನಸದಲ್ಲಿ ಉಳಿಯಲಿ; ಮುಖ್ಯಮಂತ್ರಿ ಬೊಮ್ಮಾಯಿ

“ಗ್ರಾಮ ಒನ್‌’ ಸೇವೆ ಜನಮಾನಸದಲ್ಲಿ ಉಳಿಯಲಿ; ಮುಖ್ಯಮಂತ್ರಿ ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.