ಶಾಲೆಗಳಲ್ಲಿ ಇಂದಿನಿಂದ ಮತ್ತೆ ಮಕ್ಕಳ ಕಲರವ

Team Udayavani, May 29, 2018, 12:28 PM IST

chikk.jpg

ಶಿವಮೊಗ್ಗ: ಬೇಸಿಗೆ ರಜೆ ಕಳೆದು ಮಕ್ಕಳು ಶಾಲೆಗಳತ್ತ ಮುಖಮಾಡತೊಡಗಿದ್ದರೆ, ಎರಡು ತಿಂಗಳ ಬಳಿಕ ಶಾಲಾ ಆವರಣದಲ್ಲಿ ಮಕ್ಕಳ ಕಲರವ ಆರಂಭಗೊಂಡಿದೆ. ಶಾಲಾ ಆರಂಭಕ್ಕೆ ಯಾವುದೇ ಸಮಸ್ಯೆ ಎದುರಾಗದಂತೆ ಜಿಲ್ಲಾ ಶಿಕ್ಷಣ ಇಲಾಖೆ ಸಿದ್ಧತೆ ಕೈಗೊಂಡಿದೆ.

ಕಳೆದ ಬಾರಿಯಂತೆ ಪಠ್ಯ ಪುಸ್ತಕ ವಿತರಣೆಯಲ್ಲಿ ವಿಳಂಬ ಆಗಬಾರದೆಂದು ಎಚ್ಚೆತ್ತುಕೊಂಡಿರುವ ಇಲಾಖೆ ಆ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ಜಿಲ್ಲೆಗೆ ಈಗಾಗಲೇ ಶೇ.85ರಷ್ಟು ಪಠ್ಯ ಪುಸ್ತಕ ಹಾಗೂ ಶೇ. 80ರಷ್ಟು ಸಮವಸ್ತ್ರ ಪೂರೈಕೆಯಾಗಿದೆ.

ಕಳೆದ ಶೈಕ್ಷಣಿಕ ಸಾಲಿನಲ್ಲಿ ಶಾಲೆ ಆರಂಭಗೊಂಡು ತರಗತಿ ಪ್ರಾರಂಭವಾಗಿ 15 ದಿನ ಕಳೆದಿದ್ದರೂ ವಿದ್ಯಾರ್ಥಿಗಳಿಗೆ ಪುಸ್ತಕ ಪೂರ್ಣ ಪ್ರಮಾಣದಲ್ಲಿ ಕೈ ಸೇರದ ಪರಿಣಾಮ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುವಂತಾಗಿತ್ತು. ಈ ಬಾರಿ ಇದಕ್ಕೆ ಅವಕಾಶ ಮಾಡಿಕೊಡದಂತೆ ಶಿಕ್ಷಣ ಇಲಾಖೆ ಮುಂಚಿತವಾಗಿಯೇ ಪುಸ್ತಕಗಳನ್ನು ಗೋದಾಮಿನಲ್ಲಿ ದಾಸ್ತಾನು ಮಾಡಿಕೊಂಡಿದೆ. ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಮೊದಲ ದಿನದಿಂದಲೇ ಪಠ್ಯ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲು ಅಗತ್ಯ ಕ್ರಮ ಕೈಗೊಂಡಿದೆ.

ಕಳೆದ ಸಾಲಿನಲ್ಲಿ ಪಠ್ಯಪುಸ್ತಕ ಮುದ್ರಣ ಕಾರ್ಯ ತಡವಾಗಿತ್ತು. ಇದರಿಂದಾಗಿ ಪೂರೈಕೆಯಲ್ಲೂ ಸಾಕಷ್ಟು ವ್ಯತ್ಯಯವಾಗಿತ್ತು. ಅಲ್ಲದೆ ಪುಠ್ಯಪುಸ್ತಕ ಮುದ್ರಣ ಕಾರ್ಯ ಒಂದೇ ಕಡೆ ನಡೆಯುತ್ತಿತ್ತು. ಆದರೆ ಈ ಬಾರಿ ಆಯಾ ವಿಭಾಗವಾರು ಪಠ್ಯಪುಸ್ತಕಗಳು ಮುದ್ರಣಗೊಳ್ಳುತ್ತಿದೆ. ಹೀಗಾಗಿ ನಿಗದಿತ ವೇಳೆಗೆ ವಿದ್ಯಾರ್ಥಿಗಳಿಗೆ ಪೂರೈಕೆ ಮಾಡಲು ಸಾಧ್ಯವಾಗುತ್ತಿದೆ.

ಮೇ 29 ರಿಂದ ಶಾಲೆಗಳು ಪುನರಾರಂಭವಾಗಲಿದ್ದು, ಮಕ್ಕಳನ್ನು ಬರಮಾಡಿಕೊಳ್ಳಲು ತಯಾರಿ ಸಾಗಿದೆ. ಮುಖ್ಯವಾಗಿ ಜಿಲ್ಲೆಗೆ ಈಗಾಗಲೇ ಶೇ 85ರಷ್ಟು ಪಠ್ಯ ಪುಸ್ತಕ ಪೂರೈಕೆಯಾಗಿದೆ. ಇದರಲ್ಲಿ ಉರ್ದು, ತಮಿಳು, ಸಂಸ್ಕೃತ ಪಠ್ಯ ಪುಸ್ತಕ ಹೊರತುಪಡಿಸಿ ಕನ್ನಡ ಮತ್ತು ಇಂಗ್ಲಿಷ್‌ ಮಾಧ್ಯಮದ ಶೇ. 100ರಷ್ಟು ಪಠ್ಯ ಪುಸ್ತಕ ಪೂರೈಕೆಯಾಗಿದೆ. ಅದರಲ್ಲಿ ಶೇ. 99ರಷ್ಟು ಪುಸ್ತಕ ಮಕ್ಕಳ ಕೈಸೇರಿವೆ. ಬಾಕಿ ಉಳಿದಿರುವ ಪಠ್ಯ ಪುಸ್ತಕಗಳು ಇನ್ನು ಕೆಲವೇ ದಿನದಲ್ಲಿ ಪೂರೈಕೆಯಾಗುವ ಸಾಧ್ಯತೆ ಇದೆ. ಅಲ್ಲದೇ ಈಗಾಗಲೇ ಪೂರೈಕೆಯಾಗಿರುವ ಪುಸ್ತಕಗಳನ್ನು ಶಾಲೆಗಳಿಗೆ ತಲುಪಿಸುವ ಕಾರ್ಯ ನಡೆಯುತ್ತಿದೆ.

ಜಿಲ್ಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಾರ್ಯಾಲಯದಿಂದ ಪ್ರಸಕ್ತ ಸಾಲಿಗೆ ಒಟ್ಟು 17,60,219 ಪಠ್ಯಪುಸ್ತಕಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು. ಈಗಾಗಲೇ 14,77,450 ಪಠ್ಯ ಪುಸ್ತಕ ಪೂರೈಕೆಯಾಗಿವೆ. ಉಳಿದ 2,82,769 ಪುಸ್ತಕಗಳು ಸಧ್ಯದಲ್ಲಿಯೇ ಪೂರೈಕೆಯಾಗಲಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬುಕ್‌ ಬ್ಯಾಂಕ್‌: ಪಠ್ಯಪುಸ್ತಕ ವಿತರಣೆ ತಡವಾದ ಸಂದರ್ಭದಲ್ಲಿ ಕಲಿಕೆ ದೃಷ್ಟಿಯಿಂದ ಮಕ್ಕಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶಕ್ಕೆ ಪ್ರತಿ ಶಾಲೆಯಲ್ಲೂ ಬುಕ್‌ಬ್ಯಾಂಕ್‌ ತೆರೆಯಲಾಗಿದೆ. ಹಿಂದಿನ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳು ಬಳಸಿದ ಪುಸ್ತಕಗಳನ್ನು ಪಡೆದು ಅವುಗಳನ್ನು ಗ್ರಂಥಾಲಯದಲ್ಲಿ ಕೂಡಿಡಲಾಗುತ್ತದೆ. ಅನಿವಾರ್ಯ ಸಂದರ್ಭದಲ್ಲಿ ಅವುಗಳನ್ನು ಪ್ರಸಕ್ತ ಸಾಲಿನಮಕ್ಕಳಿಗೆ ವಿತರಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ವೆಬ್‌ಸೈಟ್‌ನಲ್ಲೂ ಪುಸ್ತಕ ಲಭ್ಯ: ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ವೆಬ್‌ ಸೈಟ್‌ನಲ್ಲೂ ಪಠ್ಯಪುಸ್ತಕಗಳನ್ನು ಅಪ್‌ಲೋಡ್‌ ಮಾಡಲಾಗಿದೆ. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಕರ್ನಾಟಕ ಟೆಕ್ಸ್‌rಬುಕ್‌ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಂಡು ಮಕ್ಕಳು ತಮಗೆ ಬೇಕಾದ ತರಗತಿಯ ಪಠ್ಯಪುಸ್ತಕದ ಪುಟಗಳನ್ನು ಪ್ರಿಂಟ್‌ ಮಾಡಿಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ.

ಶಾಲಾ ಸಮವಸ್ತ್ರ: ವಿದ್ಯಾರ್ಥಿಗಳಿಗೆ ವಿತರಿಸಲು ಸಮವಸ್ತ್ರ ಪೂರೈಕೆಯಾಗಿದ್ದು, ಈಗಾಗಲೇ ಶಾಲೆಗಳಿಗೆ ರವಾನೆಯಾಗಿದೆ. ಶೇ. 80ರಷ್ಟು ಸಮವಸ್ತ್ರ ಪೂರೈಕೆಯಾಗಿದೆ. 8, 9 ಹಾಗೂ 10ನೇ ತರಗತಿ ಹೆಣ್ಣು ಮಕ್ಕಳ ಸಮವಸ್ತ್ರ ಪೂರೈಕೆಯಾಗಬೇಕಿದೆ. ಒಟ್ಟಾರೆ ಪ್ರತಿ ವರ್ಷ ನಿಗದಿತ ವೇಳೆಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ಪೂರೈಕೆಯಾಗದೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಉಂಟಾಗುತ್ತಿದ್ದ ಗೊಂದಲ ಈ ಬಾರಿ ಬಹುತೇಕ ಇಲ್ಲವಾಗಿದೆ. 

„ವಿಶೇಷ ವರದಿ

ಟಾಪ್ ನ್ಯೂಸ್

ಶುಕ್ರವಾರ ನಡೆಯಲಿದೆ ಸಿಡಿಎಸ್ ಜ.ಬಿಪಿನ್ ರಾವತ್ ಮತ್ತು ಪತ್ನಿಯ ಅಂತ್ಯಕ್ರಿಯೆ

ಶುಕ್ರವಾರ ನಡೆಯಲಿದೆ ಸಿಡಿಎಸ್ ಜ.ಬಿಪಿನ್ ರಾವತ್ ಮತ್ತು ಪತ್ನಿಯ ಅಂತ್ಯಕ್ರಿಯೆ

ಸಕಲೇಶಪುರದಲ್ಲೂ ನಡೆದಿತ್ತು ಹೆಲಿಕಾಪ್ಟರ್‌ ದುರಂತ

29 ವರ್ಷಗಳ ಹಿಂದೆ ಸಕಲೇಶಪುರದಲ್ಲೂ ಸೇನಾ ಹೆಲಿಕಾಪ್ಟರ್ ಪತನ

ವಿರಾಟ್ ಕೊಹ್ಲಿಗೆ 48 ಗಂಟೆಗಳ ಗಡುವು ನೀಡಿದ್ದ ಬಿಸಿಸಿಐ: ಆದರೂ ಒಪ್ಪದ ವಿರಾಟ್!

ವಿರಾಟ್ ಕೊಹ್ಲಿಗೆ 48 ಗಂಟೆಗಳ ಗಡುವು ನೀಡಿದ್ದ ಬಿಸಿಸಿಐ: ಆದರೂ ಒಪ್ಪದ ವಿರಾಟ್!

ಈ ರಾಶಿಯವರಿಂದು ಉದ್ಯೋಗದಲ್ಲಿ ಹಣಕಾಸಿನ ವಿಚಾರದಲ್ಲಿ ಸಾಹಸ ಮಾಡದಿರಿ

ಈ ರಾಶಿಯವರಿಂದು ಉದ್ಯೋಗದಲ್ಲಿ ಹಣಕಾಸಿನ ವಿಚಾರದಲ್ಲಿ ಸಾಹಸ ಮಾಡದಿರಿ

ತಮಿಳುನಾಡಿನಲ್ಲಿ ಸೌರ ಘಟಕ ಸ್ಥಾಪನೆಗೆ ಅಮೆರಿಕ ನೆರವು

ತಮಿಳುನಾಡಿನಲ್ಲಿ ಸೌರ ಘಟಕ ಸ್ಥಾಪನೆಗೆ ಅಮೆರಿಕ ನೆರವು

ಜರ್ಮನಿ ಚಾನ್ಸಲರ್‌ ಆಗಿ ಒಲಾಫ್ ಶೋಲ್ಜ್ ಪ್ರಮಾಣ

ಜರ್ಮನಿ ಚಾನ್ಸಲರ್‌ ಆಗಿ ಒಲಾಫ್ ಶೋಲ್ಜ್ ಪ್ರಮಾಣ

ಜೈವಿಕ ಯುದ್ಧದ ಬಗ್ಗೆ ಎಚ್ಚರಿಕೆ ನೀಡಿದ್ದರು ; ರಾವತ್‌ ಕೊನೆ ಭಾಷಣ

ಜೈವಿಕ ಯುದ್ಧದ ಬಗ್ಗೆ ಎಚ್ಚರಿಕೆ ನೀಡಿದ್ದರು ; ರಾವತ್‌ ಕೊನೆ ಭಾಷಣಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಕಿಸ್ಥಾನದಲ್ಲಷ್ಟೇ ಸಿದ್ದು ಹೆಸರು ಹೇಳಬಹುದು: ರವಿ ವ್ಯಂಗ್ಯ

ಪಾಕಿಸ್ಥಾನದಲ್ಲಷ್ಟೇ ಸಿದ್ದು ಹೆಸರು ಹೇಳಬಹುದು: ರವಿ ವ್ಯಂಗ್ಯ

ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ಅಪಘಾತ : ಇಬ್ಬರು ಸ್ಥಳದಲ್ಲೇ ಸಾವು, ಓರ್ವ ಗಂಭೀರ

ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ಅಪಘಾತ : ಇಬ್ಬರು ಸ್ಥಳದಲ್ಲೇ ಸಾವು, ಓರ್ವ ಗಂಭೀರ

ಒಪ್ಪಂದವೆಲ್ಲಾ ಕಾಂಗ್ರೆಸ್ಸಿಗೆ ಬಿಟ್ಟಿದ್ದು, ನಮ್ಮದು ಜನರೊಂದಿಗೆ ಸಂಬಂಧ: ಸಿ.ಟಿ.ರವಿ

ಒಪ್ಪಂದವೆಲ್ಲಾ ಕಾಂಗ್ರೆಸ್ಸಿಗೆ ಬಿಟ್ಟಿದ್ದು, ನಮ್ಮದು ಜನರೊಂದಿಗೆ ಸಂಬಂಧ: ಸಿ.ಟಿ.ರವಿ

chikkamagalore

ವಿದ್ಯುತ್‌ ಬೇಲಿಗೆ ಸಿಲುಕಿ ಕಾಡಾನೆ ಸಾವು

chikkamagalore news

ಕಾಂಗ್ರೆಸ್‌ ಅಭ್ಯರ್ಥಿಗೆ ತಂದೆ ಕೂಡಿಟ್ಟ ಹಣ ದೇಣಿಗೆ

MUST WATCH

udayavani youtube

ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ನಿಧನ

udayavani youtube

ಮಲ್ಲಿಗೆ ಕೃಷಿಯಲ್ಲಿ ಯಶಸ್ಸನ್ನು ಕಂಡ ಕರಂಬಳ್ಳಿಯ ಕೃಷಿಕ

udayavani youtube

ಶಿರಸಿ : ಪೂಜೆಗೆಂದು ಕೊರಳಿಗೆ ಹಾಕಿದ ಬಂಗಾರದ ಸರವನ್ನೇ‌ ನುಂಗಿದ ಆಕಳು

udayavani youtube

ಕುಮಾರಸ್ವಾಮಿಯನ್ನ ಸಿಎಂ ಸ್ಥಾನದಲ್ಲಿ ಕೂರಿಸಿ ಕಾಲೆಳೆದದ್ದು ಕಾಂಗ್ರೆಸ್ ನವರೆ : ಸಿಟಿ ರವಿ

udayavani youtube

ಮಂಗಳೂರು : ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ, ಘಟನಾ ಸ್ಥಳದಲ್ಲಿ ಡೆತ್ ನೋಟ್ ಪತ್ತೆ

ಹೊಸ ಸೇರ್ಪಡೆ

ಶುಕ್ರವಾರ ನಡೆಯಲಿದೆ ಸಿಡಿಎಸ್ ಜ.ಬಿಪಿನ್ ರಾವತ್ ಮತ್ತು ಪತ್ನಿಯ ಅಂತ್ಯಕ್ರಿಯೆ

ಶುಕ್ರವಾರ ನಡೆಯಲಿದೆ ಸಿಡಿಎಸ್ ಜ.ಬಿಪಿನ್ ರಾವತ್ ಮತ್ತು ಪತ್ನಿಯ ಅಂತ್ಯಕ್ರಿಯೆ

ಸಕಲೇಶಪುರದಲ್ಲೂ ನಡೆದಿತ್ತು ಹೆಲಿಕಾಪ್ಟರ್‌ ದುರಂತ

29 ವರ್ಷಗಳ ಹಿಂದೆ ಸಕಲೇಶಪುರದಲ್ಲೂ ಸೇನಾ ಹೆಲಿಕಾಪ್ಟರ್ ಪತನ

1bulls

ಚರಂಡಿಗೆ ಬಿದ್ದು ಎತ್ತು ಸಾವು: ಕಂಗಾಲಾದ ರೈತ

ವಿರಾಟ್ ಕೊಹ್ಲಿಗೆ 48 ಗಂಟೆಗಳ ಗಡುವು ನೀಡಿದ್ದ ಬಿಸಿಸಿಐ: ಆದರೂ ಒಪ್ಪದ ವಿರಾಟ್!

ವಿರಾಟ್ ಕೊಹ್ಲಿಗೆ 48 ಗಂಟೆಗಳ ಗಡುವು ನೀಡಿದ್ದ ಬಿಸಿಸಿಐ: ಆದರೂ ಒಪ್ಪದ ವಿರಾಟ್!

ಈ ರಾಶಿಯವರಿಂದು ಉದ್ಯೋಗದಲ್ಲಿ ಹಣಕಾಸಿನ ವಿಚಾರದಲ್ಲಿ ಸಾಹಸ ಮಾಡದಿರಿ

ಈ ರಾಶಿಯವರಿಂದು ಉದ್ಯೋಗದಲ್ಲಿ ಹಣಕಾಸಿನ ವಿಚಾರದಲ್ಲಿ ಸಾಹಸ ಮಾಡದಿರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.