ಪುಂಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ: ಪರಿಸರವಾದಿ ವಿಕ್ರಂ ಒತ್ತಾಯ
Team Udayavani, Nov 5, 2022, 12:10 PM IST
ಕೊಟ್ಟಿಗೆಹಾರ: ಮೂಡಿಗೆರೆ ತಾಲ್ಲೂಕಿನ ಅರಣ್ಯ ವ್ಯಾಪ್ತಿಯಲ್ಲಿ ಉಪಟಳ ನೀಡುವ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಬೇಕು ಎಂದು ಪರಿಸರವಾದಿ ಹಾಗೂ ಕರ್ನಾಟಕ ರಾಜ್ಯ ಕಾಡಾನೆಗಳ ಸಂರಕ್ತ ಸಂಘದ ಅಧ್ಯಕ್ಷ ವಿಕ್ರಂ ಒತ್ತಾಯಿಸಿದ್ದಾರೆ.
ಉಪಟಳ ನೀಡುವ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಬೇಕು. ಇದರಿಂದ ಕಾಡಾನೆಗಳ ಇರುವಿಕೆಯ ಬಗ್ಗೆ ನಿಖರ ಮಾಹಿತಿ ತಿಳಿಯುವುದರಿಂದ ಕೃಷಿಕರಿಗೆ ಕಾಡನಂಚಿನ ಗ್ರಾಮಸ್ಥರಿಗೆ ಅನುಕೂಲವಾಗಲಿದೆ ಎಂದರು.
ಅಲ್ಲದೆ ಕಾಡಾನೆಗಳ ಚಲನವಲನಗಳನ್ನು ಗಮನಿಸಲು ತಂಡವನ್ನು ರಚಿಸಬೇಕು. ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಮೋಪಾ ವಿಮಾನ ನಿಲ್ದಾಣ ಕಾಮಗಾರಿ ವೀಕ್ಷಿಸಿದ ಗೋವಾ ಸಿಎಂ: ಭೂಮಿ ಕಳೆದುಕೊಂಡವರಿಗೆ ಪರಿಹಾರ
ಅಂಬಾರಿ ಹೊರುವ ಆನೆ ಅಭಿಮನ್ಯುವನ್ನು ಕಾರ್ಯಾಚರಣೆಗೆ ಬಳಸುವುದು ಸರಿಯಲ್ಲ
ಅಂಬಾರಿ ಹೊರುವ ಆನೆ ಅಭಿಮನ್ಯುವನ್ನು ಕಾಡಾನೆ ಕಾರ್ಯಾಚರಣೆಗೆ ಬಳಸುವುದು ಸರಿಯಲ್ಲ ಎಂದು ಪರಿಸರವಾದಿ ಹಾಗೂ ಕರ್ನಾಟಕ ರಾಜ್ಯ ಕಾಡಾನೆಗಳ ಸಂರಕ್ಷಣಾ ಸಂಘದ ಅಧ್ಯಕ್ಷ ವಿಕ್ರಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು,ಅಭಿಮನ್ಯು ಆನೆ ಈ ದೇಶದ ಆಸ್ತಿ. ಬುದ್ದಿವಂತ ಹಾಗೂ ವಿಶಿಷ್ಟ ಆನೆಯಾದ ಆನೆಯನ್ನು ಕಾರ್ಯಾಚರಣೆಗೆ ಬಳಸಿಕೊಳ್ಳುವುದು ಸರಿಯಲ್ಲ. ಊರುಬಗೆಯಲ್ಲಿ ಕಾಡಾನೆ ಸೆರೆಗೆ ಅಭಿಮನ್ಯು ವನ್ನು ಕರೆ ತಂದಿದ್ದು ಅಭಿಮನ್ಯು ವಿಗೆ ಜ್ವರ ಹಾಗೂ ನಿರ್ಜಲೀಕರಣ ಪ್ರಾರಂಭವಾಗಿದೆ. ಅರಣ್ಯ ಇಲಾಖೆ ಈ ಬಗ್ಗೆ ಗಮನ ಹರಿಸಲಿ ಎಂದು ಒತ್ತಾಯಿಸಿದ್ದಾರೆ.