Udayavni Special

ವಿದ್ಯಾರ್ಥಿಗಳ ಭವಿಷ್ಯ ಕತ್ತಲಿಗೆ ನೂಕಿದ ಕೋವಿಡ್‌ ಸೋಂಕು


Team Udayavani, May 1, 2021, 5:58 PM IST

ವಿದ್ಯಾರ್ಥಿಗಳ ಭವಿಷ್ಯ ಕತ್ತಲಿಗೆ ನೂಕಿದ ಕೋವಿಡ್‌ ಸೋಂಕು

ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು: ಕೋವಿಡ್‌ ಸೋಂಕು ಅನೇಕ ಸಂಕಷ್ಟಗಳನ್ನು ತಂದೊಡ್ಡಿದೆ. ವಿದ್ಯಾಥಿಗಳ ಭವಿಷ್ಯವನ್ನು ಕತ್ತಲಿನಟ್ಟಿದೆ. ಕೋವಿಡ್‌ ಹಿನ್ನೆಲೆಯಲ್ಲಿ 1ರಿಂದ 9ನೇ ತರಗತಿ ವಿದ್ಯಾರ್ಥಿಗಳನ್ನು ಸಾಮೂಹಿಕವಾಗಿ ಉತೀರ್ಣ ಗೊಳಿಸಲಾಗಿದೆ.

ನಡೆಯಬೇಕಾಗಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆ ಮುಂದೂಡಲಾಗಿದೆ. ಸರ್ಕಾರ ಯಾವುದೇ ಸಂದರ್ಭದಲ್ಲಿ ಪರೀಕ್ಷೆಯನ್ನು ನಡೆಸಬಹುದಾಗಿದ್ದು ಪರೀಕ್ಷೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆನ್‌ ಲೈನ್‌ ಮೂಲಕ ಪೂರ್ವಭಾವಿ ಪರೀಕ್ಷೆ ನಡೆಯುತ್ತಿದ್ದರೆ, ದ್ವಿತಿಯ ಪಿಯುಸಿ ವಿದ್ಯಾರ್ಥಿಗಳಿಗೆ ಪಠ್ಯ ಬೋಧನೆಗಳು ಪೂರ್ಣಗೊಂಡು ಯೂಟ್ಯೂಬ್‌ನಲ್ಲಿ ವಿಡಿಯೋದಲ್ಲಿ ರಿವಿಜನ್‌ ನಡೆಸಲಾಗುತ್ತಿದೆ. ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ನಡೆಸುತ್ತಿರುವ 10ನೇ ತರಗತಿ ವಿದ್ಯಾರ್ಥಿಗಳ ವಿಭಾಗದ ಗುಂಪನ್ನು ರಚಿಸಿದ್ದು, ಆ ಗುಂಪಿಗೆ ವಾಟ್ಸ್‌ ಆ್ಯಪ್‌ಗೆ ಪ್ರಶ್ನೆ ಪತ್ರಿಕೆಯನ್ನು ಹಾಕಲಾಗುತ್ತದೆ. ಉತ್ತರ ಬರೆದು ಪುನಃ ವಾಟ್ಸ್‌ ಆ್ಯಪ್‌ಗೆ ಹಾಕಿದರೆ, ತಪ್ಪುಗಳನ್ನು ಶಿಕ್ಷಕರು ತಿದ್ದಿ ಹೇಳುವ ಕೆಲಸ ಮಾಡುತ್ತಿದ್ದಾರೆ.

ವಾಟ್ಸ್‌ ಆ್ಯಪ್‌ ಮೊಬೈಲ್‌ ಹೊಂದಿರದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಯನ್ನು ಮುಟ್ಟಿಸಿದ್ದು, ಅವರು ಉತ್ತರ ಬರೆದು ಉತ್ತರ ಪತ್ರಿಕೆಯನ್ನು ಶಾಲೆಗಳಿಗೆ ತಲುಪಿಸಬೇಕು. ಶಾಲೆ ಆರಂಭವಾಗುತ್ತಿದ್ದಂತೆ ಮೌಲ್ಯಮಾಪನ ನಡೆಸಿ ತಪ್ಪು ಬರೆದಿರುವ ಉತ್ತರಗಳಿಗೆ, ಹೇಗೆ ಉತ್ತರಿಸಬೇಕೆಂಬ ಸಲಹೆಗಳನ್ನು ನೀಡುವ ಮೂಲಕ ಮುಖ್ಯ ಪರೀಕ್ಷೆಗೆ ಶಿಕ್ಷಕರು ವಿದ್ಯಾರ್ಥಿಗಳನ್ನು ಅಣಿಗೊಳಿಸುತ್ತಿದ್ದಾರೆ. ಪಿಯುಸಿ ವಿದ್ಯಾರ್ಥಿಗಳಿಗೆ ಪಠ್ಯಬೋಧನೆ ಪೂರ್ಣಗೊಂಡಿದ್ದರಿಂದ ಆನ್‌ಲೈನ್‌ ಮೂಲಕ ರಿವಿಜನ್‌ ಮಾಡಲಾಗುತ್ತಿದೆ. ನೋಟ್ಸ್‌ ನೀಡಲು ಸಾಧ್ಯವಾಗಿರಲಿಲ್ಲ, ಹಾಗಾಗಿ ನೋಟ್ಸ್‌ ರೆಡಿಮಾಡಿಕೊಂಡು ಜೆರಾಕ್ಸ್‌ ಪ್ರತಿಗಳನ್ನು ವಿದ್ಯಾಥಿಗಳಿಗೆ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಆಸಕ್ತಿ ಬಂದಾಗ ತಮಗೆ ಇಷ್ಟವಾಗುವ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಎಷ್ಟೊತ್ತಿಗಾದರೂ ಪಾಠ ಕೇಳುವ ಅವಕಾಶವನ್ನು ಪಪೂ ಶಿಕ್ಷಣ ಇಲಾಖೆ ಕಲ್ಪಿಸಿಕೊಟ್ಟಿದೆ ಎಂದು ಉಪನ್ಯಾಸಕರು ತಿಳಿಸಿದರು.

ಪಪೂ ಶಿಕ್ಷಣ ಇಲಾಖೆ ಆನ್‌ಲೈನ್‌ ಪಾಠವನ್ನು ಒಂದು ವಿಷಯವನ್ನು ಒಂದು ಜಿಲ್ಲೆಯವರಿಗೆ ವಹಿಸಿಕೊಡಲಾಗಿತ್ತು. ಕನ್ನಡ ವಿಷಯ ಬೋಧನೆಯನ್ನು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಗೆ ವಹಿಸಿಕೊಡಲಾಗಿತ್ತು. ಇಲಾಖೆ ಅ ಧಿಕಾರಿಗಳು ಕನ್ನಡ ಶಿಕ್ಷಕರೊಬ್ಬರನ್ನು ಆಯ್ಕೆ ಮಾಡಿಕೊಂಡು ಕನ್ನಡ ವಿಷಯ ಬೋ ಧಿಸಿ ಅದರ ರೆಕಾರ್ಡ್‌ ಮಾಡಿಕೊಂಡು ಪಿಯು ಬೋರ್ಡಿಗೆ ಕಳುಹಿಸಿಕೊಡಲಾಗಿತ್ತು. ಶಿಕ್ಷಣ ಇಲಾಖೆ ನಿರ್ದೇಶನದಂತೆ ವಿವಿಧ ಜಿಲ್ಲೆಗಳಿಂದ ಒಂದೊಂದು ವಿಷಯಗಳನ್ನು ವಿಡಿಯೋ ಮಾಡಿಸಿ ಯುಟ್ಯೂಬ್‌ನಲ್ಲಿ ಶಿಕ್ಷಣ ಇಲಾಖೆ ಅಪ್‌ಲೋಡ್‌ ಮಾಡಿದ್ದು, ವಿದ್ಯಾರ್ಥಿಗಳು ತಮ್ಮಗೆ ಬೇಕಾದಾಗ ಮೊಬೈಲ್‌ ಮೂಲಕ ತರಗತಿಗಳನ್ನು ಕೇಳಬಹುದಾಗಿದೆ. ಇದನ್ನು ಸಬೋ  ಕ್ಲಾಸಸ್‌ ಎಂದು ಕರೆಯಲಾಗುತಿದೆ. ಈಗಾಗಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಮತ್ತು ಪಿಯು ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದರೆ ಪರೀಕ್ಷಾ ವೇಳಾಪಟ್ಟಿ ಪ್ರಕಟಗೊಳ್ಳುವ ಸಾಧ್ಯತೆಗಳಿವೆ ಎಂದು ಉಪನ್ಯಾಸಕರು ತಿಳಿಸಿದರು.

ಟಾಪ್ ನ್ಯೂಸ್

ಕೋವಿಡ್ ನಿಯಂತ್ರಣ, ಪರಿಹಾರ ಒದಗಿಸುವಲ್ಲಿ ಕೇಂದ್ರ, ರಾಜ್ಯ ಸರಕಾರಗಳು ವಿಫಲ : ಸೊರಕೆ ಆರೋಪ 

ಕೋವಿಡ್ ನಿಯಂತ್ರಣ, ಪರಿಹಾರ ಒದಗಿಸುವಲ್ಲಿ ಕೇಂದ್ರ, ರಾಜ್ಯ ಸರಕಾರಗಳು ವಿಫಲ : ಸೊರಕೆ ಆರೋಪ 

cm bsy ex media advisor senior journalist mahadev prakash is no more

ಹಿರಿಯ ಪತ್ರಕರ್ತ ಮಹದೇವ ಪ್ರಕಾಶ್​ ಕೋವಿಡ್ ಗೆ ಬಲಿ : ಬಿ ಎಸ್ ವೈ ಸಂತಾಪ

ಚಂಡಮಾರುತ ಭೀತಿ, ಮುನ್ನೆಚ್ಚರಿಕೆಗೆ ಡಾ.ಭರತ್ ಶೆಟ್ಟಿ ವೈ ಸೂಚನೆ

ಚಂಡಮಾರುತ ಭೀತಿ, ಮುನ್ನೆಚ್ಚರಿಕೆಗೆ ಶಾಸಕ ಡಾ.ಭರತ್ ಶೆಟ್ಟಿ ವೈ ಸೂಚನೆ

cats

ಜನರ ಸುರಕ್ಷತೆಗಾಗಿ ಕಟ್ಟುನಿಟ್ಟಿನ ಕ್ರಮ : ಶಾಸಕಿ ರೂಪಾಲಿ ಎಸ್.ನಾಯ್ಕ

ಚಂಡ ಮಾರುತ ಭೀತಿ : ಕರಾವಳಿಯಲ್ಲಿ ವಿಸ್ತಾರಗೊಂಡ‌ ಕಡಲು : ತೀರ ವಾಸಿಗಳಲ್ಲಿ ಆತಂಕ

ಚಂಡ ಮಾರುತ ಭೀತಿ : ಕರಾವಳಿಯಲ್ಲಿ ವಿಸ್ತಾರಗೊಂಡ‌ ಕಡಲು ; ತೀರ ವಾಸಿಗಳಲ್ಲಿ ಆತಂಕ

Kovaccine Vaccine Preparation Unit in Kolar Mallur: Ashwatthanarayana

ಕೋಲಾರದ ಮಾಲೂರಿನಲ್ಲಿ ಕೊವ್ಯಾಕ್ಸಿನ್ ಲಸಿಕೆ ತಯಾರಿಕಾ ಘಟಕ: ಅಶ್ವತ್ಥನಾರಾಯಣ

ವದಂತಿಗೆ ಕಿವಿಗೊಡಬೇಡಿ: CBSE 12ನೇ ತರಗತಿ ಪರೀಕ್ಷೆ ರದ್ದು ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ

ವದಂತಿಗೆ ಕಿವಿಗೊಡಬೇಡಿ: CBSE 12ನೇ ತರಗತಿ ಪರೀಕ್ಷೆ ರದ್ದು ಬಗ್ಗೆ ಇನ್ನೂ ನಿರ್ಧಾರವಾಗಿಲ್ಲಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Natinal BJP Sec C T Ravi Statement

ಪ್ರಧಾನಿಯನ್ನು ನರಹಂತಕನೆನ್ನುವುದು ಅಸಂವಿಧಾನಿಕವಲ್ಲವೇ..? : ಸಿ.ಟಿ ರವಿ

13-20

ಕೊರೊನಾ ತಡೆಗೆ ತಂಡವಾಗಿ ಕೆಲಸ ಮಾಡಿ

13-19

ಹಳ್ಳಿ ಜನರಲ್ಲಿ ಜಾಗೃತಿ ಮೂಡಿಸಿ: ಸಿ.ಟಿ.ರವಿ

12-19

ಕೊರೊನಾ ಚಿಕಿತ್ಸೆಗೆ ಸ್ಪಂದಿಸದ ಖಾಸಗಿ ಆಸ್ಪತ್ರೆ ವಿರುದ್ಧ ಕ್ರಮ

12-18

ಕೋವಿಡ್‌ ಸೆಂಟರ್‌ಗೆ ಧನಸಹಾಯ

MUST WATCH

udayavani youtube

ರಷ್ಯಾದ ಸ್ಫುಟ್ನಿಕ್ v ಬೆಲೆ 995 ರೂ

udayavani youtube

ಕೋವಿಡ್ ಲಸಿಕೆ ವಿತರಣೆಗೆ ಕಾಂಗ್ರೆಸ್ ಪಕ್ಷ 100 ಕೋಟಿ

udayavani youtube

ಸರ್ಕಾರ ಚಿತ್ರರಂಗದ ಕೈ ಹಿಡಿಯಲಿ

udayavani youtube

ಮರವಂತೆಯಲ್ಲಿ‌ ತೀವ್ರಗೊಂಡ‌ ಕಡಲ್ಕೊರೆತ

udayavani youtube

ಸ್ವ್ಯಾಬ್ ಕಲಕ್ಷನ್​ಗೆ ಬಂದ ಆರೋಗ್ಯ ಸಿಬ್ಬಂದಿ ಮೇಲೆ ಅವಾಜ್​ ಹಾಕಿದ ವ್ಯಕ್ತಿ

ಹೊಸ ಸೇರ್ಪಡೆ

ಕೋವಿಡ್ ನಿಯಂತ್ರಣ, ಪರಿಹಾರ ಒದಗಿಸುವಲ್ಲಿ ಕೇಂದ್ರ, ರಾಜ್ಯ ಸರಕಾರಗಳು ವಿಫಲ : ಸೊರಕೆ ಆರೋಪ 

ಕೋವಿಡ್ ನಿಯಂತ್ರಣ, ಪರಿಹಾರ ಒದಗಿಸುವಲ್ಲಿ ಕೇಂದ್ರ, ರಾಜ್ಯ ಸರಕಾರಗಳು ವಿಫಲ : ಸೊರಕೆ ಆರೋಪ 

cats

ಧಾರವಾಡ ಜಿಲ್ಲೆಯಲ್ಲಿಂದು ಖಾಲಿ ಇರುವ ಬೆಡ್ ಗಳ ಮಾಹಿತಿ

cm bsy ex media advisor senior journalist mahadev prakash is no more

ಹಿರಿಯ ಪತ್ರಕರ್ತ ಮಹದೇವ ಪ್ರಕಾಶ್​ ಕೋವಿಡ್ ಗೆ ಬಲಿ : ಬಿ ಎಸ್ ವೈ ಸಂತಾಪ

ಚಂಡಮಾರುತ ಭೀತಿ, ಮುನ್ನೆಚ್ಚರಿಕೆಗೆ ಡಾ.ಭರತ್ ಶೆಟ್ಟಿ ವೈ ಸೂಚನೆ

ಚಂಡಮಾರುತ ಭೀತಿ, ಮುನ್ನೆಚ್ಚರಿಕೆಗೆ ಶಾಸಕ ಡಾ.ಭರತ್ ಶೆಟ್ಟಿ ವೈ ಸೂಚನೆ

cats

ಜನರ ಸುರಕ್ಷತೆಗಾಗಿ ಕಟ್ಟುನಿಟ್ಟಿನ ಕ್ರಮ : ಶಾಸಕಿ ರೂಪಾಲಿ ಎಸ್.ನಾಯ್ಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.