Udayavni Special

ನನ್ನ ಮೇಲಿನ ಆರೋಪ ರಾಜಕೀಯ ಪ್ರೇರಿತ : ರವಿ


Team Udayavani, Aug 15, 2020, 6:46 PM IST

ನನ್ನ ಮೇಲಿನ ಆರೋಪ ರಾಜಕೀಯ ಪ್ರೇರಿತ : ರವಿ

ಚಿಕ್ಕಮಗಳೂರು: ಅಭಿವೃದ್ಧಿ ವಿಚಾರದಲ್ಲಿ ವಿಪಕ್ಷಗಳು ನನ್ನ ಮೇಲೆ ಮಾಡುತ್ತಿರುವ ಆರೋಪ ರಾಜಕೀಯ ಪ್ರೇರಿತ ಎಂದು ಸಚಿವ ಸಿ.ಟಿ. ರವಿ ಹೇಳಿದರು.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ರಾಜಕಾರಣ ಮಾಡಬೇಕು. ಆದರೆ, ವಿಪಕ್ಷಗಳಿಗೆ ಬಹುಶಃ ನಾಳೆಯೇ ಚುನಾವಣೆ ಬರುತ್ತೆ ಎಂದು ಕನಸ್ಸು ಬಿದ್ದಿರಬೇಕು ಅದಕ್ಕೆ ಈಗಲೇ ರಾಜಕಾರಣ ಶುರು ಮಾಡಿದ್ದಾರೆ ಎಂದರು.

ನಾನು 24 ಗಂಟೆ ಕೆಲಸ ಮಾಡುವ ಸಕ್ರಿಯ ರಾಜಕಾರಣಿ. ದ್ವೇಷದ ರಾಜಕಾರಣ ಎಂದೂ ಮಾಡಿಲ್ಲ, ನನ್ನನ್ನು ನಿಷ್ಕ್ರಿಯ ಎನ್ನುವ ಮುಂಚೆಅವರಲ್ಲಿರುವ ಮಾನದಂಡ ಏನು ಎಂದು ಪರಿಶೀಲನೆ ಮಾಡಿಕೊಳ್ಳಬೇಕು. ಕಳೆದ 16 ವರ್ಷಗಳಿಂದ ಜಿಲ್ಲೆಯವರು ಉಸ್ತುವಾರಿ ಸಚಿವರು ಇರಲಿಲ್ಲ, ನಾನು 11 ತಿಂಗಳು, ಜೀವರಾಜ್‌ 9 ತಿಂಗಳು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದೆವು. ಉಳಿದಂತೆ 16 ವರ್ಷ ಜಿಲ್ಲೆಯವರೇ ಉಸ್ತುವಾರಿ ಸಚಿವರು ಆಗಿರಲಿಲ್ಲ ಎಂದರು.

ಬೇರೆ ಜಿಲ್ಲೆಯವರು ಉಸ್ತುವಾರಿ ಸಚಿವರಾಗುತ್ತಿದ್ದರು. ಅವರು ಕೇವಲ ಧ್ವಜ ಹಾರಿಸುವುದಕಷ್ಟೇ ಸೀಮಿತರಾಗುತ್ತಿದ್ದರು. ಎಲ್ಲೋ ಒತ್ತಾಯದ ಮೇರೆಗೆ ಒಂದೋ ಎರಡೋ ಕೆಡಿಪಿ ಸಭೆ ಮಾಡುತ್ತಿದ್ದರು. ಮತ್ತೆ ಜಿಲ್ಲೆಯ ಕಡೆ ತಲೆ ಹಾಕುತ್ತಿರಲಿಲ್ಲ ಎಂದರು.

ನಾನು ಕ್ಷೇತ್ರದಲ್ಲಿದ್ದು ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ. ವಿಪಕ್ಷಗಳ ಆರೋಪದಲ್ಲಿ ಹುರುಳಿಲ್ಲ ಎಂದ ಅವರು, ಕೋವಿಡ್ ಸಂಕಷ್ಟದ ಕಾಲದಲ್ಲೂ ಮೆಡಿಕಲ್‌ ಕಾಲೇಜು ತಂದಿದ್ದೇನೆ. ನೀರಾವರಿ ಸಂಬಂಧ ಜಿಲ್ಲಾ ಪಂಚಾಯತ್‌ ಸಭೆ ನಡೆಸಿ ಸಮಗ್ರ ವರದಿ ಎಲ್ಲರ ಮುಂದಿಟ್ಟಿದ್ದೇನೆ. ಅವೈಜ್ಞಾನಿಕ ಯೋಜನೆ ಕುರಿತು ವಿಧಾನಸೌಧದಲ್ಲಿ ಮಾತನಾಡಿದ್ದೇನೆ. ಅಂದು ಇದರ ಬಗ್ಗೆ ಧ್ವನಿ ಎತ್ತದವರು ಇಂದು ಕರಾಳ ದಿನ ಆಚರಿಸುತ್ತಿದ್ದಾರೆ. ಅವರಿಗೆ ಜಿಲ್ಲೆಯವರೇ ಉಸ್ತುವಾರಿ ಸಚಿವರಾಗಿದ್ದು, ಮತ್ತು ಸಕ್ರಿಯ ವ್ಯಕ್ತಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು ಹೊಟ್ಟೆಕಿಚ್ಚು ಎಂದರು.

ಜಿಲ್ಲಾ ಉತ್ಸವ ಮಾಡುವಾಗ ಅನೇಕರು ಉತ್ಸವ ಮಾಡದಂತೆ ಧ್ವನಿ ಎತ್ತಿದ್ದರು. ಆದರೂ ಉತ್ಸವ ವೈಭವದಿಂದ ನಡೆಯಿತು. ಅದೇ ರೀತಿ ಅಭಿವೃದ್ಧಿ ಕೆಲಸ ಮಾಡೇ ಮಾಡುತ್ತೇನೆ. ನಿಮ್ಮ ರಾಜಕಾರಣವನ್ನು ಎದುರಿಸುತ್ತೇನೆ. ನನ್ನ ಮೇಲೆ ಈ ಹಿಂದೆಯೂ ಅನೇಕ ಆರೋಪ ಮಾಡಿದ್ದೀರಿ. ಆದರೂ, ಜನರು ಸಿ.ಟಿ. ರವಿ ಬೆಸ್ಟ್‌ ಎಂದು ಚುನಾವಣೆಯಲ್ಲಿ ಹೆಚ್ಚಿನ ಮತ ನೀಡಿ ಆಯ್ಕೆ ಮಾಡಿದ್ದಾರೆ ಎಂದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಚೆನ್ನೈ ಪ್ರತಿಮೆ ಮನುಷ್ಯ ನಿವೃತ್ತಿ?

ಚೆನ್ನೈ ಪ್ರತಿಮೆ ಮನುಷ್ಯ ನಿವೃತ್ತಿ?

ಅಮ್ಮನಾದ ಮಾಯಂತಿ ಐಪಿಎಲ್‌ಗೆ ಇಲ್ಲ

ಅಮ್ಮನಾದ “ಮಾಯಂತಿ” ಐಪಿಎಲ್‌ಗೆ ಇಲ್ಲ

ಧೋನಿಗೆ ಚಿನ್ನದ ಕ್ಯಾಪ್‌, ಜಡೇಜಾಗೆ ಚಿನ್ನದ ಖಡ್ಗ!

ಧೋನಿಗೆ ಚಿನ್ನದ ಕ್ಯಾಪ್‌, ಜಡೇಜಾಗೆ ಚಿನ್ನದ ಖಡ್ಗ!

ಆರ್‌ಸಿಬಿ ಗೀತೆಯಲ್ಲಿ ಕನ್ನಡ ಪ್ರತ್ಯಕ್ಷವಾಯಿತು!

ಆರ್‌ಸಿಬಿ ಗೀತೆಯಲ್ಲಿ ಕನ್ನಡ ಪ್ರತ್ಯಕ್ಷವಾಯಿತು!

IPLಓವರ್‌ ಟು ಯುಎಇ IPL‌ ಶೋ ಆರಂಭ

ಓವರ್‌ ಟು ಯುಎಇ IPL‌ ಶೋ ಆರಂಭ

Narasimha-Nayaka

ಸಿಎಂ ಕುರ್ಚಿ ಪತನ, ಗುದ್ದಾಟ ಎಲ್ಲಾ ಗಾಳಿ ಸುದ್ದಿ: ನರಸಿಂಹ ನಾಯಕ

ಮಲೆ ಮಹದೇಶ್ವರ ದೇವಸ್ಥಾನದ ಹುಂಡಿ ಆದಾಯಕ್ಕೂ ಕೋವಿಡ್ ಹೊಡೆತ ; ಇಲ್ಲಿದೆ ಗಳಿಕೆ ವಿವರ

ಮಲೆ ಮಹದೇಶ್ವರ ದೇವಸ್ಥಾನದ ಹುಂಡಿ ಆದಾಯಕ್ಕೂ ಕೋವಿಡ್ ಹೊಡೆತ ; ಇಲ್ಲಿದೆ ಗಳಿಕೆ ವಿವರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಶ್ವ ಕರ್ಮರು ತಾಂತ್ರಿಕತೆಯ ಪಿತಾಮಹ: ಸಿ.ಟಿ. ರವಿ

ವಿಶ್ವ ಕರ್ಮರು ತಾಂತ್ರಿಕತೆಯ ಪಿತಾಮಹ: ಸಿ.ಟಿ. ರವಿ

ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು: ಕಾಂಗ್ರೆಸ್ ವಿರುದ್ಧ ಸಚಿವ ಸಿ.ಟಿ.ರವಿ ವಾಗ್ದಾಳಿ

ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು: ಕಾಂಗ್ರೆಸ್ ವಿರುದ್ಧ ಸಚಿವ ಸಿ.ಟಿ.ರವಿ ವಾಗ್ದಾಳಿ

ಸಣ್ಣ ಕಾಫಿ ಬೆಳೆಗಾರರ ಕುಟುಂಬಕ್ಕೆ ಸಹಾಯಧನ ವಿತರಣೆ

ಸಣ್ಣ ಕಾಫಿ ಬೆಳೆಗಾರರ ಕುಟುಂಬಕ್ಕೆ ಸಹಾಯಧನ ವಿತರಣೆ

ರೈತರಿಗೆ ಅಗತ್ಯ ಯಂತ್ರ ನೀಡಿ: ರಾಜೇಗೌಡ

ರೈತರಿಗೆ ಅಗತ್ಯ ಯಂತ್ರ ನೀಡಿ: ರಾಜೇಗೌಡ

ಚಿಕ್ಕಮಗಳೂರು ಕೋವಿಡ್ ಸೋಂಕಿಗೆ ಮೂವರು ಬಲಿ! 199 ಹೊಸ ಪ್ರಕರಣ

ಚಿಕ್ಕಮಗಳೂರು ಕೋವಿಡ್ ಸೋಂಕಿಗೆ ಮೂವರು ಬಲಿ! 199 ಹೊಸ ಪ್ರಕರಣ

MUST WATCH

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!

udayavani youtube

ಭತ್ತದ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

COVID-19 ಸಮಯದಲ್ಲಿ ಜೀವನಕ್ಕೆ ಆಧಾರವಾದ ಹೈನುಗಾರಿಕೆಹೊಸ ಸೇರ್ಪಡೆ

ಚೆನ್ನೈ ಪ್ರತಿಮೆ ಮನುಷ್ಯ ನಿವೃತ್ತಿ?

ಚೆನ್ನೈ ಪ್ರತಿಮೆ ಮನುಷ್ಯ ನಿವೃತ್ತಿ?

ಅಮ್ಮನಾದ ಮಾಯಂತಿ ಐಪಿಎಲ್‌ಗೆ ಇಲ್ಲ

ಅಮ್ಮನಾದ “ಮಾಯಂತಿ” ಐಪಿಎಲ್‌ಗೆ ಇಲ್ಲ

ಧೋನಿಗೆ ಚಿನ್ನದ ಕ್ಯಾಪ್‌, ಜಡೇಜಾಗೆ ಚಿನ್ನದ ಖಡ್ಗ!

ಧೋನಿಗೆ ಚಿನ್ನದ ಕ್ಯಾಪ್‌, ಜಡೇಜಾಗೆ ಚಿನ್ನದ ಖಡ್ಗ!

ಆರ್‌ಸಿಬಿ ಗೀತೆಯಲ್ಲಿ ಕನ್ನಡ ಪ್ರತ್ಯಕ್ಷವಾಯಿತು!

ಆರ್‌ಸಿಬಿ ಗೀತೆಯಲ್ಲಿ ಕನ್ನಡ ಪ್ರತ್ಯಕ್ಷವಾಯಿತು!

IPLಓವರ್‌ ಟು ಯುಎಇ IPL‌ ಶೋ ಆರಂಭ

ಓವರ್‌ ಟು ಯುಎಇ IPL‌ ಶೋ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.