ಅರಣ್ಯ ಇಲಾಖೆಯಿಂದ ಡ್ರೋಣ್‌ ಸರ್ವೇ

Team Udayavani, Dec 21, 2019, 2:37 PM IST

cm-tdy-1

ಹೊಸನಗರ: ಅರಣ್ಯ ಇಲಾಖೆಗೆ ತಮ್ಮ ಪ್ರದೇಶವನ್ನು ನಿಖರವಾಗಿ ಗುರುತಿಸಿಕೊಳ್ಳುವುದೇ ದೊಡ್ಡ ಸಮಸ್ಯೆ. ಗಡಿ ಗುರುತಿಸುವಿಕೆಯಲ್ಲಿ ಲೋಪ.. ಸಾರ್ವಜನಿಕರ ತಕರಾರು.. ಇದಕ್ಕೆಲ್ಲ ಮುಕ್ತಿ ನೀಡಲು ಡ್ರೋಣ್‌ ಮೂಲಕ ಏರಿಯಲ್‌ ಸರ್ವೇ ಮಾಡಿದರೆ ಹೇಗೆ ಎಂಬ ಚಿಂತನೆ ಅರಣ್ಯ ಇಲಾಖೆಗೆ ಬಂದಿದೆ.

ಹಾಗಾಗಿ ಶಿವಮೊಗ್ಗ ವೃತ್ತ ಅರಣ್ಯ ಇಲಾಖೆಯ ಸಿಸಿಎಫ್‌ ಶ್ರೀನಿವಾಸಲು ವಿಶೇಷ ಆಸಕ್ತಿಯಿಂದಾಗಿ ಪ್ರಾಯೋಗಿಕವಾಗಿ ಡ್ರೋಣ್‌ ಬಳಸಿ ಸರ್ವೇ ನಡೆಸಿದೆ. ತಾಲೂಕಿನ ನಿಟ್ಟೂರು ಗ್ರಾಪಂ ವ್ಯಾಪ್ತಿಯ ಮಂಜಗಳಲೆ ಗ್ರಾಮದಲ್ಲಿ ಮೂರು ಬ್ಲಾಕ್‌ಗಳಲ್ಲಿ ಹಂತಹಂತವಾಗಿ ಡ್ರೋಣ್‌ ಕ್ಯಾಮೆರಾ ಬಳಸಿ ಏರಿಯಲ್‌ ಸರ್ವೇಯನ್ನು ಪ್ರಾಯೋಗಿಕವಾಗಿ ನಡೆಸಿ ಸಿಸಿಎಫ್‌ ಶ್ರೀನಿವಾಸಲು ಗಮನ ಸೆಳೆದಿದ್ದಾರೆ.

ಡ್ರೋಣ್‌ ಬಳಕೆ ಏಕೆ?: ಮಲೆನಾಡು ಎಂದರೆ ಗಿರಿಕಂದರದ ಬೀಡು.. ಕಿಕ್ಕಿರಿದ ಅರಣ್ಯ.. ಈ ನಡುವೆ ಸರ್ವೇ ಮಾಡಿ ಗಡಿ ಗುರುತಿಸುವುದೇ ಅರಣ್ಯ ಇಲಾಖೆಗೆ ದೊಡ್ಡ ಸವಾಲು. ಅಲ್ಲದೆ ಸರ್ವೇ ವಿಚಾರದಲ್ಲಿ ವಿವಾದಗಳು ಹೊಸತಲ್ಲ.. ಜೊತೆಗೆ ಸರ್ವೇ ಸರಿಯಾಗಿಲ್ಲ ಎಂಬ ಸಾರ್ವಜನಿಕರ ನಿರಂತರ ಅಸಮಾಧಾನ. ಆಧುನಿಕ ತಂತ್ರಜ್ಞಾನ ಬಳಸಿ ಸರ್ವೇ ಮಾಡಿ ನಿಖರ ಮಾಹಿತಿ ಪಡೆದುಕೊಂಡಲ್ಲಿ ಅರಣ್ಯ ಇಲಾಖೆ ಕೆಲಸ ಸುಲಭವಾಗಬಹುದು ಎಂಬ ನಿರೀಕ್ಷೆಯಲ್ಲಿ ಪ್ರಾಯೋಗಿಕವಾಗಿ ಡ್ರೋಣ್‌ ಬಳಕೆ ಮಾಡಿ ಸರ್ವೇ ಮಾಡಲಾಗಿದೆ.

ಏರಿಯಲ್‌ ಸರ್ವೇಯಿಂದ ಲಾಭವೇನು?: ಕಡಿದಾದ ಪ್ರದೇಶವಿರಲಿ.. ಒಳಗೆ ಪ್ರವೇಶಿಸಲಾಗದಂತ ದಟ್ಟ ಅರಣ್ಯವಿರಲಿ ಸುಲಭವಾಗಿ ಸರ್ವೇ ಕಾರ್ಯ ನಡೆಸಬಹುದು. ಅಲ್ಲದೆ ಸರ್ವೇ ಬಗ್ಗೆ ನಿಖರ ಮತ್ತು ಸಮಗ್ರ ಮಾಹಿತಿ ಪಡೆಯಬಹುದು. ಮ್ಯಾನ್‌ ಪವರ್‌ ಕಡಿಮೆ ಮತ್ತು ಕಾಲಮಿತಿಯೊಳಗೆ ಸರ್ವೇ ನಡೆಸಬಹುದು. ಒಮ್ಮೆ ಸರ್ವೇ ಕಾರ್ಯ ಯಶಸ್ವಿಯಾದಲ್ಲಿ ಕಚೇರಿಯಲ್ಲೇ ಕುಳಿತು ಕಾರ್ಯ ನಿರ್ವಹಿಸಲು ಅನುಕೂಲ. ಸರ್ವೇ ಬಗ್ಗೆ ಸಾರ್ವಜನಿಕರ ಅಸಮಾಧಾನ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಶಾಶ್ವತ ಪರಿಹಾರ ನೀಡಬಹುದು ಎಂಬ ಲೆಕ್ಕಾಚಾರವನ್ನು ಅರಣ್ಯ ಇಲಾಖೆ ಹೊಂದಿದೆ.

15ದಿನದಲ್ಲಿ ವರದಿ: ಈಗಾಗಲೇ ಶಿವಮೊಗ್ಗ ವೃತ್ತ ಅರಣ್ಯ ಇಲಾಖೆಯ ಸಿಸಿಎಫ್‌ ಶ್ರೀನಿವಾಸಲು ವಿಶೇಷ ಆಸಕ್ತಿಯಿಂದಾಗಿ ನಿಟ್ಟೂರಿನ ಮಂಜಗಳಲೆ ಗ್ರಾಮದಲ್ಲಿ ಪ್ರಾಯೋಗಿಕವಾಗಿ ನಡೆಸಲಾದ ಏರಿಯಲ್‌ ಸರ್ವೇ ಕಾರ್ಯ ಯಶಸ್ವಿಯಾಗಿ ಸಮಾಪ್ತಿಗೊಂಡಿದೆ. ಸಮಗ್ರ ವರದಿಗಾಗಿ ಇಲಾಖೆಯ ತಂತ್ರಜ್ಞಾನ ವಿಭಾಗಕ್ಕೆ ಕಳುಹಿಸಲಾಗಿದೆ. ಸರ್ವೇ ವೇಳೆ ಸಾಗರ ವಲಯ ಡಿಸಿಎಫ್‌ ಮೋಹನಕುಮಾರ್‌, ಆರ್‌ಎಫ್‌ಒ ಆದರ್ಶ ಎಂ.ಪಿ, ಎಆರ್‌ಎಫ್‌ಒ ಸತೀಶ ನಾಯ್ಕ ಇದ್ದರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

4-chikkamagaluru

Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.