ಬೆಂಕಿ ಅವಘಢ: 3 ಎಕರೆ ಅಡಕೆ ತೋಟ ನಾಶ
Team Udayavani, Jan 22, 2022, 9:15 PM IST
ಮೂಡಿಗೆರೆ: ಆಕಸ್ಮಿಕವಾಗಿ ಉಂಟಾದ ಬೆಂಕಿ ಅವಘಡದಿಂದಾಗಿ ಮೂರು ಎಕರೆ ಅಡಕೆ ತೋಟ ಸಂಪೂರ್ಣವಾಗಿ ನಾಶವಾದ ಘಟನೆ ತಾಲೂಕಿನ ಬೆಟ್ಟಿಗೆರೆ ಗ್ರಾಮದಲ್ಲಿ ನಡೆದಿದೆ. ಬೆಟ್ಟಗೆರೆಯ ರತೀಶ್ ಎಂಬುವವರಿಗೆ ಸೇರಿದ ತೋಟ ಇದಾಗಿದ್ದು, ಶುಕ್ರವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ.
ಏಕಾಏಕಿ ಬೆಂಕಿಯ ಕೆನ್ನಾಲಿಗೆ ಇಡೀ ತೋಟದ ತುಂಬೆಲ್ಲಾ ವ್ಯಾಪಿಸಿಕೊಂಡು ಕೆಲವೇ ನಿಮಿಷಗಳಲ್ಲಿ ಮೂರು ಎಕರೆ ಅಡಕೆ ತೋಟ ಬೆಂಕಿಗೆ ಆಹುತಿಯಾಗಿದೆ. ಬೆಂಕಿಯಿಂದಾಗಿ ಅಡಕೆ ಗಿಡಗಳ ಜೊತೆಗೆ ಕಾμ ಗಿಡಗಳೂ ಸಹ ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಮೂರು ವರ್ಷಗಳ ಅತಿವೃಷ್ಟಿಯಿಂದಾಗಿ ಬಸವಳಿದಿದ್ದ ತೋಟವು ಮಾಲೀಕ ರತೀಶ್ ಅವರ ಮುತುವರ್ಜಿಯಿಂದಾಗಿ ಈ ವರ್ಷದಿಂದ ಫಸಲು ನೀಡಲು ಪ್ರಾರಂಭಿಸಿತ್ತು.
ದುರಾದೃಷ್ಟವಶಾತ್ ತೋಟದಲ್ಲಿದ್ದ ಒಣ ಹುಲ್ಲಿಗೆ ದಿಢೀರ್ ಬೆಂಕಿ ಹೊತ್ತಿಕೊಂಡು ತೋಟವು ಸಂಪೂರ್ಣವಾಗಿ ನಾಶವಾಗಿದೆ. ಸಾವಿರಾರು ಅಡಕೆ ಹಾಗೂ ಕಾμ ಗಿಡಗಳ ಜೊತೆಗೆ ಲಕ್ಷಾಂತರ ರೂ. ಮೊತ್ತದ ಸ್ಪಿ Åಂಕ್ಲರ್ ಪೈಪುಗಳು ಸಹ ನಾಶವಾಗಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ, ಕೃಷಿ ಇಲಾಖೆ ಹಾಗೂ ತಾಲೂಕು ಆಡಳಿತದ ಅಧಿ ಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದರು.