ಯುವಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ: 2 ಕೆ.ಜಿ 250 ಗ್ರಾಂ ಗಾಂಜಾ ವಶ
Team Udayavani, Sep 12, 2020, 4:21 PM IST
ಚಿಕ್ಕಮಗಳೂರು: ಮನೆಯ ಪಕ್ಕದಲ್ಲಿ ಯುವಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಸವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಚಿಕ್ಕಮಗಳೂರು ನಗರದ ಗೌರಿ ಕಾಲುವೆ ಎಂಬಲ್ಲಿ ದಾಳಿ ನಡೆಸಿ ಹನೀಫ್ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತನಿಂದ 2 ಕೆ.ಜಿ 250 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಆರೋಪಿ ಹನೀಫ್ ಗಾಂಜಾ ಸೊಪ್ಪು ಮನೆಯಿಂದ ತೆಗೆದುಕೊಂಡು ಹೋಗುವಾಗ ದಾಳಿ ಮಾಡಲಾಗಿದೆ.
ಇದನ್ನೂ ಓದಿ: ಪತ್ನಿಯ ಇಚ್ಛೆಗೆ ವಿರುದ್ಧವಾಗಿ ಪತಿ 2ನೇ ಮದುವೆಯಾದರೆ ಮೊದಲ ಪತ್ನಿ ವಿಚ್ಛೇದನ ಪಡೆಯಲು ಅರ್ಹಳು
ಆರೋಪಿಯು ಮನೆಯ ಪಕ್ಕದಲ್ಲಿ ಯುವಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.