ಚಿಕ್ಕಮಗಳೂರಿನಲ್ಲಿ ಭಾರೀ ಮಳೆ; ಕೊಚ್ಚಿ ಹೋದ ಬಾಲಕಿ: 3 ತಾಲೂಕಿನಲ್ಲಿ ರಜೆ ಘೋಷಣೆ
Team Udayavani, Jul 5, 2022, 11:08 AM IST
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಭಾರೀ ಮಳೆ ಮುಂದಿವರಿದಿದ್ದು, ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಧಾರಕಾರ ಮಳೆಯಾಗುತ್ತಿರುವ ಮೂಡಿಗೆರೆ, ಶೃಂಗೇರಿ, ಕಳಸ ತಾಲೂಕುಗಳಲ್ಲಿ ಮಂಗಳವಾರ ಮತ್ತು ಬುಧವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಸೋಮವಾರ ಸಂಜೆ ಶಾಲೆಯಿಂದ ಮನೆಗೆ ತೆರಳುವಾಗ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಬಾಲಕಿಯ ಪತ್ತೆಗಾಗಿ ಕಾರ್ಯಾಚರಣೆ ನಡೆಯುತ್ತಿದೆ. ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ಗ್ರಾಮದ ಒಂದನೇ ತರಗತಿ ವಿದ್ಯಾರ್ಥಿನಿ ಸುಪ್ರೀತಾ ಶಾಲೆಯಿಂದ ವಾಪಾಸ್ ಬರುತ್ತಿರವ ವೇಳೆ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಳು.
ಸದ್ಯ ಬಾಲಕಿಯ ಪತ್ತೆಗಾಗಿ ಅಗ್ನಿಶಾಮಕದಳದ 6 ತಂಡಗಳಿಂದ ಕಾರ್ಯಾಚರಣೆ ನಡೆಯುತ್ತಿದ್ದು, ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿಗಳೂ ಸಾಥ್ ನೀಡಿದ್ದಾರೆ.
ಮನೆ ಮೇಲೆ ಬಿದ್ದ ಮರ: ಬಿರುಗಾಳಿ ಆರ್ಭಟಕ್ಕೆ ಮರ ಬಿದ್ದು ಮನೆ ಸಂಪೂರ್ಣ ಜಖಂಗೊಂಡ ಘಟನೆ ಕಳಸ ತಾಲೂಕಿನ ಹೆಮ್ಮಕ್ಕಿ ಗ್ರಾಮದಲ್ಲಿ ನಡೆದಿದೆ. ಬೆಳಗಿನ ಜಾವ 4.30ರ ವೇಳೆಯಲ್ಲಿ ಕ್ಲೆಮೆಂಡ್ ಡಿಸೋಜ ಎಂಬುವರ ಮನೆ ಮೇಲೆ ಮರ ಬಿದ್ದಿದೆ. ದಂಪತಿ, ಇಬ್ಬರು ಮಕ್ಕಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಇದನ್ನೂ ಓದಿ:ವಿಟ್ಲ: ಸಾರಡ್ಕ ಬಳಿ ಗುಡ್ಡ ಕುಸಿತ: ಕರ್ನಾಟಕ-ಕೇರಳ ಸಂಚಾರ ಬಂದ್
ರಜೆ ಘೋಷಣೆ: ಧಾರಕಾರ ಮಳೆಯಾಗುತ್ತಿರುವ ಮೂಡಿಗೆರೆ, ಶೃಂಗೇರಿ, ಕಳಸ ತಾಲೂಕುಗಳಲ್ಲಿ ಮಂಗಳವಾರ ಮತ್ತು ಬುಧವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಳೆ ಕಡಿಮೆಯಾದರೂ ಅನಾಹುತ ನಿಲ್ಲುತ್ತಿಲ್ಲ: ಆತಂಕದಲ್ಲಿ ಮಲೆನಾಡು
ಚಿಕ್ಕಮಗಳೂರು: ಬಾರ್ ಮುಂದೆ ಹೆಚ್ಚಾದ ಅಪಘಾತ; ಬಾರ್ ಸ್ಥಳಾಂತರಕ್ಕೆ ಆಗ್ರಹಿಸಿ ಪ್ರತಿಭಟನೆ
ಮನೆ ಪರಿಹಾರ ನೀಡದ ಸರ್ಕಾರ: ಅರ್ಧ ಹಾಕಿಟ್ಟ ಪಂಚಾಂಗದಲ್ಲೇ ಧ್ವಜ ನೆಟ್ಟು ಆಕ್ರೋಶ
ಮಳೆಗೆ ಕೊಚ್ಚಿಹೋದ ಬೆಳೆ : ಮನನೊಂದ ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಶರಣು
ಜೀವನ ಕಸಿದ ಮಳೆ..; ವರುಣಾರ್ಭಟಕ್ಕೆ ನೆಲಸಮವಾಗುತ್ತಿದೆ ಸಾಲು ಸಾಲು ಮನೆಗಳು