ಗುಡುಗು ಸಹಿತ ಧಾರಾಕಾರ ಮಳೆ
Team Udayavani, Apr 6, 2022, 5:40 PM IST
ಶೃಂಗೇರಿ: ತಾಲೂಕಿನಾದ್ಯಂತ ಮಂಗಳವಾರ ಸಂಜೆ ಗುಡುಗಿನ ಸಹಿತ ಧಾರಾಕಾರ ಮಳೆ ಸುರಿದಿದೆ. ಕೆಲವೆಡೆ ಬಿರುಸಿನ ಗಾಳಿ ಬೀಸಿದ್ದು, ಇದರಿಂದ ಕಾಡು ಮರ, ಅಡಕೆ ಮರಗಳು ಉರುಳಿ ಬಿದ್ದಿವೆ.
ಒಮ್ಮೆಲೆ ರಭಸವಾದ ಗಾಳಿ ಹಾಗೂ ಅಲ್ಪಾವಧಿಯಲ್ಲಿ ಜೋರಾದ ಮಳೆಯಾಗಿದೆ. ಗಾಳಿಯ ಹೊಡೆತಕ್ಕೆ ವಿದ್ಯುತ್ ಮಾರ್ಗದ ಮೇಲೆ ಮರ ಉರುಳಿದ್ದು, ಕೆಲ ಭಾಗದಲ್ಲಿ ವಿದ್ಯುತ್ ಕಡಿತವಾಗಿದೆ.
ಕುಂಚೆಬೈಲು, ಮೆಣಸೆ, ಮಸಿಗೆ, ಪಟ್ಟಣ, ಕಲ್ಕಟ್ಟೆ ಭಾಗದಲ್ಲಿ ಬಿರುಸಿನ ಮಳೆಯಾಗಿದೆ. ಮಸಿಗೆ ಗ್ರಾಮದ ಮರಟೆ ಹಳ್ಳದ ಬಳಿ ವಿದ್ಯುತ್‌ಲೈನ್ ಮೇಲೆ ಮರ ಬಿದ್ದಿದ್ದು, ಸಂಚಾರಕ್ಕೂ ಅಡ್ಡಿಯಾಗಿತ್ತು.