ಸಂಕಷ್ಟದಲ್ಲಿ ತೋಟಗಾರಿಕಾ ಬೆಳೆಗಾರ: ಡಾ| ಇಂದ್ರೇಶ್‌

Team Udayavani, Jul 16, 2019, 11:20 AM IST

cm-tdy-2..

ಕಡೂರು: ತಾಲೂಕು ಚಟ್ನಳ್ಳಿಯ ಜೋಡಿಲಿಂಗದಹಳ್ಳಿ ದಾಳಿಂಬೆ ಹೊಲದಲ್ಲಿ ನಡೆದ ಕೃಷಿ ಸಂವಾದ ಕಾರ್ಯಕ್ರಮವನ್ನು ತೋಟಗಾರಿಕೆ ವಿವಿ ಉಪಕುಲಪತಿ ಡಾ.ಇಂದ್ರೇಶ್‌ ಉದ್ಘಾಟಿಸಿದರು.

ಕಡೂರು: ಸಂಕಷ್ಟದಲ್ಲಿರುವ ತೋಟಗಾರಿಕಾ ಬೆಳೆಗಾರರ ಜತೆ ತೋಟಗಾರಿಕಾ ವಿಶ್ವ ವಿದ್ಯಾಲಯ ಸದಾ ಇರುತ್ತದೆ ಎಂದು ಬಾಗಲಕೋಟೆ ತೋಟಗಾರಿಕಾ ವಿವಿ ಉಪಕುಲಪತಿ ಡಾ| ಕೆ.ಎಂ. ಇಂದ್ರೇಶ್‌ ತಿಳಿಸಿದರು.

ತಾಲೂಕಿನ ಚಟ್ನಳ್ಳಿ ಸಮೀಪದ ಜೋಡಿಲಿಂಗದಹಳ್ಳಿ ರಸ್ತೆಯಲ್ಲಿರುವ ರೈತ ಮಹಾಲಿಂಗಪ್ಪ ಕಾಂತಣ್ಣನವರ ದಾಳಿಂಬೆ ಹೊಲದಲ್ಲಿ ಸೋಮವಾರ ಆಯೋಜಿಸಿದ್ದ ರೈತರೊಂದಿಗಿನ ಕೃಷಿ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಡಕೆ, ಕಾಫಿ, ತೆಂಗು, ಹಣ್ಣಿನ ಬೆಳೆಗಳಾದ ದಾಳಿಂಬೆ ಮತ್ತು ಇತರೆ ತರಕಾರಿ ಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಇಂದಿನ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಬೆಳೆಗಾರರ ಬಳಿ ಬಂದು ತಾಂತ್ರಿಕ ನೆರವು ನೀಡಿ ಅವುಗಳನ್ನು ಬೆಳೆಯುವ ವಿಧಾನಗಳನ್ನು ತಿಳಿಸಬೇಕಾಗಿದೆ. ರೋಗ ತಡೆಗಟ್ಟುವ ಬಗ್ಗೆ ಕ್ರಿಮಿನಾಶಕ ಬಳಕೆ ಬಗ್ಗೆ ನಿಖರ ತಿಳಿವಳಿಕೆ ನೀಡಿ, ಬೆಳೆಗಾರರ ನಷ್ಟ ತಪ್ಪಿಸಲು ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾನಿಲಯ ಸದಾ ನಿಮ್ಮೊಂದಿಗೆ ಇದೆ ಎಂದು ತಿಳಿಸಿದರು.

ನಮ್ಮ ವಿವಿಯಲ್ಲಿ ಕೆಲವು ಸತ್ವಪೂರ್ಣ ಕೀಟನಾಶಕಗಳು, ರೋಗ ನಿರೋಧಕ ಔಷಧಗಳ ಸಂಶೋಧನೆ ಮಾಡಿದ್ದು, ಅವುಗಳ ಬಳಕೆಯಿಂದ ರೈತರಿಗೆ ಲಾಭವಾಗುವ ಮಾಹಿತಿ ಲಭ್ಯವಿದೆ. ದಾಳಿಂಬೆಗೆ ಬರುವ ಮಾರಕ ರೋಗಗಳ ಹತೋಟಿ ನಿಟ್ಟಿನಲ್ಲಿ ನಮ್ಮ ಸಂಶೋಧನೆ ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು.

ಕೃಷಿಕ, ಸಾಹಿತಿ ಚಟ್ನಳ್ಳಿ ಮಹೇಶ್‌ ಮಾತನಾಡಿ, ದೇಶದ ಬೆನ್ನೆಲುಬಾಗಿರುವ ರೈತ ಸಮೂಹಕ್ಕೆ ಆತಂಕ ತರುವಂತಹ ರೋಗರುಜಿನಗಳ ಬಾಧೆ ಮತ್ತು ಕೀಟಗಳ ಹಾವಳಿ ಬಹು ದೊಡ್ಡ ಸಮಸ್ಯೆಯಾಗಿದೆ. ಕೃಷಿಗೆ ಹಾಕಿದ ಬಂಡವಾಳ ಬಾರದ ಸ್ಥಿತಿಯಲ್ಲಿ ನೋವು ಅನುಭವಿಸುತ್ತಿರುವ ರೈತನಿಗೆ ಪದೇ ಪದೆ ಕಾಡುವ ಬರಗಾಲ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ. ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಜರ್ಜರಿತರಾಗಿವ ಕೃಷಿ ಸಮೂಹಕ್ಕೆ ತೋಟಗಾರಿಕೆ ಇಲಾಖೆ, ತೋಟಗಾರಿಕಾ ವಿವಿ ಜನಪ್ರತಿನಿಧಿಗಳು ಒಟ್ಟಾರೆ ಆಡಳಿತ ಸ್ಪಂದಿಸಿದಲ್ಲಿ ಮಾತ್ರ ರೈತ ಬದುಕಲು ಸಾಧ್ಯ. ಇಂದು ನಡೆಯುತ್ತಿರುವ ತೋಟಗಾರಿಕಾ ಬೆಳೆಗಳ ಸಂವಾದ ಕೃಷಿಕರ ಬಾಳಿಗೆ ಭರವಸೆ ಮೂಡಿಸಲಿ ಎಂದು ಆಶಿಸುತ್ತೇನೆ ಎಂದರು.

ಸಂವಾದದಲ್ಲಿ ಭಾಗವಹಿಸಿದ್ದ ದಾಳಿಂಬೆ ಬೆಳೆಗಾರರಾದ ಶ್ರೀರಾಂಪುರದ ಕುಮಾರ್‌, ಮಾಹಲಿಂಗಪ್ಪರ ಕಾಂತರಾಜ್‌, ಜಗದೀಶ್‌, ಶೆಟ್ಟಿಹಳ್ಳಿ ರಾಮಜ್ಜ, ಬೆಲಗೂರು ಅಶೋಕ್‌,ನಾಗೇನಹಳ್ಳಿ ಮಹಾದೇವ ಮುಂತಾದ ಪ್ರಗತಿಪರ ದಾಳಿಂಬೆ ಬೆಳೆಗಾರರು ಮಾತನಾಡಿ, ರೋಗ ಹತೋಟಿ ಬಗ್ಗೆ ಈಗಿನ ಕ್ರಿಮಿನಾಶಕಗಳು ವಿಫಲವಾಗಿವೆ. ಇದಕ್ಕೆ ಕಲಬೆರಕೆ ಔಷಧಗಳ ಮಾರಾಟಗಾರರು ಕಾರಣವೇ ಎಂದು ಪ್ರಶ್ನಿಸಿ ದರು. ಇದಕ್ಕೆ ಉತ್ತರಿಸಿದ ತೋಟಗಾರಿಕೆ ವಿವಿ ಸಸ್ಯರೋಗ ತಜ್ಞರಾದ ಡಾ.ಜಿ.ಮಂಜುನಾಥ್‌, ಕೀಟರೋಗ ತಜ್ಞ ಡಾ.ರಾಮನಗೌಡ ಅವರು, ರೈತರ ಅನುಮಾನಕ್ಕೆ ಸಹಮತ ವ್ಯಕ್ತಪಡಿಸಿದರು. ನಮ್ಮ ವಿವಿ ತಾಂತ್ರಿಕ ಪರೀಕ್ಷೆಗೆ ಮಾತ್ರ ಒಳ ಪಟ್ಟಿದ್ದು, ಕಲಬೆರಕೆ ಮಾರಾಟ ನಿಷೇಧಿಸುವ ಹೊಣೆ ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳಿಗೆ ಸಂಬಂಧಿಸಿದೆ ಎಂದು ಹೇಳಿದರು.

ಸಭೆಗೆ ಆಹ್ವಾನ ನೀಡಿದ್ದರೂ ಬಾರದಕೃಷಿ ಮತ್ತು ತೋಟಗಾರಿಕಾ ಅಧಿಕಾರಿಗಳ ವಿರುದ್ಧ ರೈತರು ಅಸಮಧಾನ ವ್ಯಕ್ತಪಡಿಸಿ ದರು. ಇಲಾಖಾ ಅಧಿಕಾರಿಗಳಿಂದ ಯಾವುದೇತಾಂತ್ರಿಕ ಸಲಹೆ-ಸಹಕಾರ ತೋಟಗಾರಿಕಾ ಬೆಳೆಗಾರರಿಗೆ ದೊರೆಯುತ್ತಿಲ್ಲ ಎಂದು ಆಕ್ಷೇಪಿಸಿ ದರು. ತೋಟಗಾರಿಕಾ ವಿವಿಯ ಡಾ.ವೈ.ಕೆ.ಕೋಟಿಕಲ್, ಡಾ.ವಿಷ್ಣುವರ್ಧನ್‌, ದಾಳಿಂಬೆಸಂಶೋಧನಾ ಕೇಂದ್ರದ ಡಾ.ಆಶಿಶ್‌ ಮೈತ್ರಿ, ಡಾ.ಶ್ವೇತಾ ಬಿ.ಎಸ್‌, ಜಿಪಂ ಸದಸ್ಯ ವಿಜಯಕುಮಾರ್‌, ನೂರಾರು ರೈತರು ಭಾಗವಹಿಸಿದ್ದರು.

ಟಾಪ್ ನ್ಯೂಸ್

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-chikkamagaluru

Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

ಉಡುಪಿಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು: ಜಯಪ್ರಕಾಶ್‌ ಹೆಗ್ಡೆ

Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು: ಜಯಪ್ರಕಾಶ್‌ ಹೆಗ್ಡೆ

Chikkamagaluru; ದೇವೇಗೌಡರು ಆಕಸ್ಮಿಕವಾಗಿ ಪ್ರಧಾನಿಯಾಗಿದ್ದು…: ಸಿಎಂ ಸಿದ್ದರಾಮಯ್ಯ

Chikkamagaluru; ದೇವೇಗೌಡರು ಆಕಸ್ಮಿಕವಾಗಿ ಪ್ರಧಾನಿಯಾಗಿದ್ದು…: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.