Udayavni Special

ಹುಲ್ಲೇಡಿ ಶಿಕಾರಿ ಬಲು ಜೋರು

Team Udayavani, Sep 25, 2020, 7:31 PM IST

ಹುಲ್ಲೇಡಿ ಶಿಕಾರಿ ಬಲು ಜೋರು

ಚಿಕ್ಕಮಗಳೂರು: ಅತಿಯಾದ ರಾಸಾಯನಿಕ ಬಳಕೆಯಿಂದ ಅವಸಾನದತ್ತ ಸಾಗುತ್ತಿರುವ ಮಲೆನಾಡು ಭಾಗದಲ್ಲಿನ ಹುಲ್ಲೇಡಿಗೆ ಈಗ ಭಾರೀ ಡಿಮ್ಯಾಂಡ್‌ ಬಂದಿದೆ. ಹುಲ್ಲೇಡಿ ಶಿಕಾರಿ ಬಲು ಜೋರಾಗಿ ನಡೆಯುತ್ತಿದ್ದು ಸ್ಥಳೀಯರಿಗೆ ತಾತ್ಕಾಲಿಕ ಉದ್ಯೋಗ ಕಲ್ಪಿಸಿದೆ.

ಹೌದು, ಹುಲ್ಲೇಡಿಯಿಂದ ಬಗೆ ಬಗೆ ಖಾದ್ಯಗಳನ್ನು ತಯಾರಿಕೆಗೆ ಮಲೆನಾಡಿನಲ್ಲಿ ಹೆಸರುವಾಸಿಯಾಗಿದ್ದು, ಈ ಏಡಿಗೆ ಅಪಾರ ಬೇಡಿಕೆ ಉಂಟಾಗಿದೆ. ಮಳೆಗಾಲದಲ್ಲಿ ಮಾತ್ರ ಕಂಡು ಬರುವ ಈ ಏಡಿ ಪಾಳುಬಿದ್ದ ಜಮೀನುಗಳಲ್ಲಿ ಕಂಡು ಬರುತ್ತವೆ. ಸದ್ಯ ಹುಲ್ಲೇಡಿಗೆ ಬೇಡಿಕೆಹೆಚ್ಚಾಗಿದ್ದು, ಮೂಡಿಗೆರೆ ತಾಲೂಕು ಬಡವನದಿಣ್ಣೆ, ಹೊರಟ್ಟಿ, ಮುಗ್ರವಳ್ಳಿ, ಕಾರಮಗೆ, ಸಬ್ಬೇನಹಳ್ಳಿಯಲ್ಲಿ ಪಾಳು ಬಿಟ್ಟಿರುವ ಜಮೀನಿನಲ್ಲಿ ಏಡಿ ಶಿಕಾರಿ ಜೋರಾಗಿ ನಡೆಯುತ್ತಿದೆ.

ಗ್ರಾಮೀಣ ಪ್ರದೇಶದ ಜನರು ಏಡಿ ಹಿಡಿದು ವ್ಯಾಪಾರ ಮಾಡುವ ಕಾರ್ಯದಲ್ಲಿ ನಿರತರಾಗಿದ್ದು, ಪ್ರತಿನಿತ್ಯ 50 ರಿಂದ 60 ಜನರು ಬೆಳಗ್ಗೆ 7ರಿಂದ ಸಂಜೆ 4ಗಂಟೆ ವರೆಗೆ ಏಡಿ ಹಿಡಿದು ವ್ಯಾಪಾರ ಮಾಡುತ್ತಿದ್ದು, ಪ್ರತಿಜೋಡಿ ಏನಿಲ್ಲವೆಂದರೂ ದಿನಕ್ಕೆ 1 ಸಾವಿರ ರೂ. ಸಂಪಾದಿಸುತ್ತಿದ್ದಾರೆ. ಕಳೆದೊಂದು ವಾರದಿಂದ ಮಳೆ ಅಧಿ ಕವಾಗಿದ್ದು, ಕೂಲಿ ಕೆಲಸವಿಲ್ಲದೇ ಹುಲ್ಲೇಡಿ ಹಿಡಿದು ಮಾರಾಟ ಮಾಡುವ ಕಾಯಕಕ್ಕೆ ಸ್ಥಳೀಯರು ಮೊರೆ ಹೋಗಿದ್ದಾರೆ.

ತಾವು ಹಿಡಿದ ಹುಲ್ಲೇಡಿಯನ್ನು ಗಾತ್ರಕ್ಕೆ ಅನುಗುಣವಾಗಿ ವಿಂಗಡಿಸಿ 50ರಿಂದ 60 ಏಡಿ ಇರುವ ಚೀಲಕ್ಕೆ 300 ರಿಂದ 400 ರೂ. ಮಾರಾಟ ಮಾಡುತ್ತಿದ್ದಾರೆ. ಈ ಭಾಗಕ್ಕೆ ಬರುವ ಪ್ರವಾಸಿಗರು ಹುಲ್ಲೇಡಿಯನ್ನು ಖರೀದಿ ಮಾಡುತ್ತಿದ್ದಾರೆ. ಈ ಪ್ರದೇಶಕ್ಕೆ ಪ್ರವಾಸಕ್ಕೆ ಬರುವ ಹೊರ ಜಿಲ್ಲೆಯ ಪ್ರವಾಸಿಗರು ಖರೀದಿ ಮಾಡಿ ಕೊಂಡೊಯ್ಯುತ್ತಿದ್ದು ಭಾರೀ ಡಿಮ್ಯಾಂಡ್‌ ಬಂದಿದೆ.

ಹಿಂದೆ ಗದ್ದೆ ಬೇಸಾಯ ಸಮಯದಲ್ಲಿ ಹೇರಳವಾಗಿ ಸಿಗುತ್ತಿದ್ದ ಹುಲ್ಲೇಡಿ ರಾಸಾಯನಿಕ ಔಷ ಧ ಬಳಕೆಯಿಂದ ಇತ್ತೀಚಿನ ದಿನಗಳಲ್ಲಿ ಹುಲ್ಲೇಡಿಗಳು ಕಣ್ಮರೆಯಾಗುತ್ತಿವೆ. ಗದ್ದೆಗಳಲ್ಲಿ ಶುಂಠಿ ಬೆಳೆಯಲು ಮುಂದಾದ ಪರಿಣಾಮ ಬೆಳೆಗೆ ಅಧಿಕ ಪ್ರಮಾಣದಲ್ಲಿ ರಾಸಾಯನಿಕ ಸಿಂಪರಣೆ ಮಾಡುತ್ತಿರುವುದರಿಂದ ಹುಲ್ಲೇಡಿಗಳ ಸಂತತಿ ಅವಸಾನದ ಅಂಚು ತಲುಪಲು ಕಾರಣವಾಗಿದೆ.

ಮಲೆನಾಡಿನಲ್ಲಿ ಖಾದ್ಯಕ್ಕೆ ಹೆಸರುವಾಸಿಯಾಗಿರುವ ಮಳೆಗಾಲದಲ್ಲಿ ಮಾತ್ರ ಕಂಡು ಬರುವ ಹುಲ್ಲೇಡಿ ಸದ್ಯ ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚಾಗಿದೆ. ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟವು ಜೋರಾಗಿರುವ ಕಾರಣ ಕೂಲಿ ಕೆಲಸವು ಇಲ್ಲದಂತಾಗಿದ್ದು ಹುಲ್ಲೇಡಿ ಶಿಕಾರಿ ಮಾಡಿ ಮಾರಾಟ ಕಾಯಕ ಜೋರಾಗಿ ನಡೆಯುತ್ತಿದೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

chamarajanagar

ಚಾಮರಾಜನಗರ: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ದೊಂಬಿವಿಲಿಯಲ್ಲಿ ಎರಡು ಅಂತಸ್ತಿನ ಕಟ್ಟಡ ಕುಸಿತ ! ಹದಿನೆಂಟು ಕುಟುಂಬಗಳು ಪಾರು

ದೊಂಬಿವಿಲಿಯಲ್ಲಿ ಎರಡು ಅಂತಸ್ತಿನ ಕಟ್ಟಡ ಕುಸಿತ ! ಹದಿನೆಂಟು ಕುಟುಂಬಗಳು ಪಾರು

ಚಕ್ರಬಡ್ಡಿ ಮನ್ನಾಕ್ಕಾಗಿ ಗ್ರಾಹಕರು ಅರ್ಜಿ ಹಾಕಬೇಕಾಗಿಲ್ಲ! ವಿತ್ತ ಸಚಿವಾಲಯ ಸ್ಪಷ್ಟನೆ

ಚಕ್ರಬಡ್ಡಿ ಮನ್ನಾಕ್ಕಾಗಿ ಗ್ರಾಹಕರು ಅರ್ಜಿ ಹಾಕಬೇಕಾಗಿಲ್ಲ! ವಿತ್ತ ಸಚಿವಾಲಯ ಸ್ಪಷ್ಟನೆ

ಸಿದ್ದರಾಮಯ್ಯ ಸಿಎಂ ಆಗಲಿ ಎಂಬುದು ವೈಯಕ್ತಿಕ ಅಭಿಪ್ರಾಯ ನೋಟಿಸ್‌ ಕೊಟ್ರೆ ಉತ್ತರಿಸುತ್ತೇನೆ

ಸಿದ್ದರಾಮಯ್ಯ CM ಆಗಲಿ ಎಂಬುದು ವೈಯಕ್ತಿಕ ಅಭಿಪ್ರಾಯ; ನೊಟೀಸ್‌ ಕೊಟ್ರೆ ಉತ್ತರಿಸುತ್ತೇನೆ !

chennai

ಚೆನ್ನೈ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿ KKR: ಟಾಸ್ ಗೆದ್ದ ಧೋನಿ ಪಡೆ

ಉಡುಪಿ: ಕೋವಿಡ್‌ ಲಸಿಕೆಗಾಗಿ ಡೇಟಾ ಬೇಸ್‌ ಸಿದ್ಧಪಡಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ಉಡುಪಿ: ಕೋವಿಡ್‌ ಲಸಿಕೆಗಾಗಿ ಡೇಟಾ ಬೇಸ್‌ ಸಿದ್ಧಪಡಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ 1 ಸಾವು, 62 ಮಂದಿಗೆ ಸೋಂಕು ದೃಢ

ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ 1 ಸಾವು, 62 ಮಂದಿಗೆ ಸೋಂಕು ದೃಢ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಪಚುನಾವಣೆಯಲ್ಲಿ ಬಿಜೆಪಿಗೆ ಒಳ ಒಪ್ಪಂದದ ಅಗತ್ಯವಿಲ್ಲ: ನಳೀನ್ ಕುಮಾರ್ ಕಟೀಲ್

ಉಪಚುನಾವಣೆಯಲ್ಲಿ ಬಿಜೆಪಿಗೆ ಒಳ ಒಪ್ಪಂದದ ಅಗತ್ಯವಿಲ್ಲ: ನಳೀನ್ ಕುಮಾರ್ ಕಟೀಲ್

ಕಾಂಗ್ರೆಸ್ ನಲ್ಲಿದ್ದರೆ ಸಂಭಾವಿತ, ಪಾರ್ಟಿ ಬಿಟ್ರೆ ಕ್ರಿಮಿನಲ್ ಆಗ್ತಾರಾ? ಸಿ.ಟಿ.ರವಿ ಕಿಡಿ

ಕಾಂಗ್ರೆಸ್ ನಲ್ಲಿದ್ದರೆ ಸಂಭಾವಿತ, ಪಾರ್ಟಿ ಬಿಟ್ರೆ ಕ್ರಿಮಿನಲ್ ಆಗ್ತಾರಾ? ಸಿ.ಟಿ.ರವಿ ಕಿಡಿ

ಬಫರ್‌ ಝೋನ್‌ಗೆ ಗ್ರಾಮಸ್ಥರ ಆಕ್ಷೇಪ

ಬಫರ್‌ ಝೋನ್‌ಗೆ ಗ್ರಾಮಸ್ಥರ ಆಕ್ಷೇಪ

ಟ್ರಾಫಿಕ್‌ ಜಾಮ್‌: ಪ್ರವಾಸಿಗರಿಗೆ ತೊಂದರೆ

ಟ್ರಾಫಿಕ್‌ ಜಾಮ್‌: ಪ್ರವಾಸಿಗರಿಗೆ ತೊಂದರೆ

ಕೂಡಿ ಬಾಳಿದರೆ ಸ್ವರ್ಗ ಸುಖ: ರಂಭಾಪುರಿ ಜಗದ್ಗುರು

ಕೂಡಿ ಬಾಳಿದರೆ ಸ್ವರ್ಗ ಸುಖ: ರಂಭಾಪುರಿ ಜಗದ್ಗುರು

MUST WATCH

udayavani youtube

Peoples take on reopening of schools | ಶಾಲೆ ಯಾಕೆ ಬೇಕು? ಯಾಕೆ ಬೇಡ ? | Udayavani

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

ಹೊಸ ಸೇರ್ಪಡೆ

chamarajanagar

ಚಾಮರಾಜನಗರ: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ದೊಂಬಿವಿಲಿಯಲ್ಲಿ ಎರಡು ಅಂತಸ್ತಿನ ಕಟ್ಟಡ ಕುಸಿತ ! ಹದಿನೆಂಟು ಕುಟುಂಬಗಳು ಪಾರು

ದೊಂಬಿವಿಲಿಯಲ್ಲಿ ಎರಡು ಅಂತಸ್ತಿನ ಕಟ್ಟಡ ಕುಸಿತ ! ಹದಿನೆಂಟು ಕುಟುಂಬಗಳು ಪಾರು

ಚಕ್ರಬಡ್ಡಿ ಮನ್ನಾಕ್ಕಾಗಿ ಗ್ರಾಹಕರು ಅರ್ಜಿ ಹಾಕಬೇಕಾಗಿಲ್ಲ! ವಿತ್ತ ಸಚಿವಾಲಯ ಸ್ಪಷ್ಟನೆ

ಚಕ್ರಬಡ್ಡಿ ಮನ್ನಾಕ್ಕಾಗಿ ಗ್ರಾಹಕರು ಅರ್ಜಿ ಹಾಕಬೇಕಾಗಿಲ್ಲ! ವಿತ್ತ ಸಚಿವಾಲಯ ಸ್ಪಷ್ಟನೆ

ಸಿದ್ದರಾಮಯ್ಯ ಸಿಎಂ ಆಗಲಿ ಎಂಬುದು ವೈಯಕ್ತಿಕ ಅಭಿಪ್ರಾಯ ನೋಟಿಸ್‌ ಕೊಟ್ರೆ ಉತ್ತರಿಸುತ್ತೇನೆ

ಸಿದ್ದರಾಮಯ್ಯ CM ಆಗಲಿ ಎಂಬುದು ವೈಯಕ್ತಿಕ ಅಭಿಪ್ರಾಯ; ನೊಟೀಸ್‌ ಕೊಟ್ರೆ ಉತ್ತರಿಸುತ್ತೇನೆ !

chennai

ಚೆನ್ನೈ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿ KKR: ಟಾಸ್ ಗೆದ್ದ ಧೋನಿ ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.