Udayavni Special

ಬಣಕಲ್‌ ಸುತ್ತಮುತ್ತ ಹುಲ್ಲೇಡಿ ಶಿಕಾರಿ!

Team Udayavani, Aug 23, 2020, 11:08 AM IST

ಬಣಕಲ್‌ ಸುತ್ತಮುತ್ತ ಹುಲ್ಲೇಡಿ ಶಿಕಾರಿ!

ಕೊಟ್ಟಿಗೆಹಾರ: ಬಣಕಲ್‌ ಸುತ್ತಮುತ್ತ ಪಾಳು ಬಿದ್ದ ಗದ್ದೆಗಳಲ್ಲಿ ಹುಲ್ಲೇಡಿ ಶಿಕಾರಿ ಪ್ರಾರಂಭವಾಗಿದ್ದು ಸ್ಥಳೀಯರು ಗದ್ದೆಗೆ ಇಳಿದು ಹುಲ್ಲೇಡಿ ಹಿಡಿಯುತ್ತಿದ್ದ ದೃಶ್ಯ ಬಣಕಲ್‌, ಅತ್ತಿಗೆರೆ ಸುತ್ತಮುತ್ತ ಕಂಡು ಬರುತ್ತಿದೆ.

ಕೆಲ ಮನೆಗಳಲ್ಲಿ ಗೌರಿ- ಗಣೇಶ ಹಬ್ಬದಮರುದಿನ ಏಡಿ ಸಾರು ಮಾಡುವ ಕ್ರಮವಿದ್ದು  ಹಬ್ಬದ ಹಿಂದಿನ ದಿನ ಪಾಳು ಬಿದ್ದ ಗದ್ದೆಗಳಲ್ಲಿ ಏಡಿ ಶಿಕಾರಿ ಮಾಡುವುದು ಸಾಮಾನ್ಯ. ಪಾಳುಬಿದ್ದ ಗದ್ದೆಗಳಲ್ಲಿ ಮಳೆಯಿಂದ ನಿಂತ ನೀರಿನಲ್ಲಿ ಹುಲ್ಲೇಡಿಗಳನ್ನು ಹುಡುಕುವ ಸ್ಥಳೀಯರು, ಮಳೆಗೆ ನೆನೆಯದಂತೆ ಬಣ್ಣದ ಪ್ಲಾಸ್ಟಿಕ್‌ನ್ನು ಹಾಕಿಕೊಂಡು ಗುಂಪು ಗುಂಪಾಗಿ ಹುಲ್ಲೇಡಿ ಹಿಡಿಯುತ್ತಿರುವುದು ಈ ಸಮಯದಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ಅಲ್ಪಾಯುಷಿಯಾದ ಹುಲ್ಲೇಡಿಗಳನ್ನು ಭತ್ತದ ಗದ್ದೆಗಳಲ್ಲಿ ಮಾತ್ರ ಕಾಣಲು ಸಾಧ್ಯ.

ಭತ್ತದ ಗದ್ದೆಗಳಲ್ಲಿಬೆಳೆಯುವ ಕಳೆಯನ್ನು ತಿಂದು ಬದುಕುವ ಹುಲ್ಲೇಡಿಗಳು ಕೇವಲ ಒಂದೂವರೆ ತಿಂಗಳು ಮಾತ್ರ ಬದುಕುತ್ತವೆ. ಭತ್ತದ ಗದ್ದೆಗಳಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಗದ್ದೆಗಳಲ್ಲಿಯೇ ತಮ್ಮ ಬದುಕಿನ ಪಯಣವನ್ನು ಮುಗಿಸುತ್ತವೆ. ಇದರ ನಡುವೆಯೇ ಗದ್ದೆಯ ಕಳೆ ಕೀಳುವ ಮಹಿಳೆಯರು ಹುಲ್ಲೇಡಿಗಳನ್ನು ಹಿಡಿದು ಹುಲ್ಲೇಡಿ ಹುರುಕಲು, ಹುಲ್ಲೇಡಿಗಳನ್ನು ಸಾರನ್ನು ತಯಾರಿಸುತ್ತಾರೆ.

ಕಳಲೆ ಅಥವಾ ಕೆಸವು ಹಾಕಿ ಮಾಡಿದ ಹುಲ್ಲೇಡಿಯ ಖಾದ್ಯ ಮಲೆನಾಡಿನ ವಿಶೇಷವಾಗಿದ್ದು 3 ರಿಂದ ದಿನಗಳ ಕಾಲ ಈ ಖಾದ್ಯವನ್ನು ಸೇವಿಸುತ್ತಾರೆ. ದಿನ ಕಳೆದಂತೆ ರುಚಿ ಹೆಚ್ಚುವುದು ಏಡಿ ಸಾರಿನ ವಿಶೇಷ.ಭತ್ತದ ಕೃಷಿಯಲ್ಲಿ ರಾಸಾಯನಿಕಗಳ ಬಳಕೆಯಿಂದಾಗಿ ಏಡಿಗಳ ಸಂತತಿ ದಿನದಿಂದ ಕಡಿಮೆಯಾಗುತ್ತಿದ್ದು ಮುಂಚಿನಷ್ಟು ಏಡಿಗಳು ಗದ್ದೆಗಳಲ್ಲಿ ಕಂಡ ಬರುತ್ತಿಲ್ಲ. ಮಲೆನಾಡಿನಲ್ಲಿ ಕಲ್ಲೇಡಿ, ಹುಲ್ಲೇಡಿ, ಮುಂಡೇಡಿ ಎಂಬ ಮೂರು ತರದ ಏಡಿಗಳಿವೆ. ಹುಲ್ಲೇಡಿಯನ್ನು ಕಡೆದು ಸಾರು ಮಾಡಿದರೆ ಕಲ್ಲೇಡಿಯನ್ನು ಕೊಂಬು ಮುರಿದು ಸಾರು ಮಾಡುತ್ತಾರೆ. ಆದರೆ ಮುಂಡೇಡಿಯನ್ನು ಯಾರೂ ತಿನ್ನುವುದಿಲ್ಲ. ಮಲೆನಾಡಿನಲ್ಲಿ ಕ್ಲಲೇಡಿಗೆ ಭಾರೀ ಬೇಡಿಕೆ ಇದೆ. ಸಮುದ್ರದ ಏಡಿಯನ್ನು ಮಲೆನಾಡಿಗರು ಅಷ್ಟು ಇಷ್ಟ ಪಡುವುದಿಲ್ಲ. ಕಲ್ಲೇಡಿಯನ್ನು ಬೆಂಕಿಯಲ್ಲಿ ಸುಟ್ಟು ತಿಂದರೆ ಅದರ ರುಚಿಯೇ ಬೇರೆ ಎನ್ನುತ್ತಾರೆ ಸ್ಥಳೀಯರಾದ ಮಗ್ಗಲಮಕ್ಕಿ ಗಣೇಶ್‌.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ವಿಷ್ಣುದಾದ 70 ಅಭಿಮಾನಿಗಳ ಮನದಲ್ಲಿ ಯಜಮಾನ್ರು ಜೀವಂತ

ವಿಷ್ಣುದಾದ 70 ಅಭಿಮಾನಿಗಳ ಮನದಲ್ಲಿ ಯಜಮಾನ್ರು ಜೀವಂತ

t-15

ತಡೆಯಲಾಗದ ಅನಿಯಂತ್ರಿತ ಮೂತ್ರ ವಿಸರ್ಜನೆ ಮತ್ತು ಮೂತ್ರಶಂಕೆಯ ಅವಸರ

ಕೃಷಿ ಮಸೂದೆ ಬಗ್ಗೆ ಸುಳ್ಳು ಹಬ್ಬಿಸಬೇಡಿ: ವಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ಆರೋಪವೇನು?

ಕೃಷಿ ಮಸೂದೆ ಬಗ್ಗೆ ಸುಳ್ಳು ಹಬ್ಬಿಸಬೇಡಿ: ವಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ಆರೋಪವೇನು?

ಡ್ರಗ್ ದಂಧೆ: ನಿರೂಪಕ ಅಕುಲ್, ಸಂತೋಷ್, ಕಾಂಗ್ರೆಸ್ ನ ಮಾಜಿ ಶಾಸಕರ ಪುತ್ರನಿಗೆ CCB ನೋಟಿಸ್

ಡ್ರಗ್ ದಂಧೆ: ನಿರೂಪಕ ಅಕುಲ್, ಸಂತೋಷ್, ಕಾಂಗ್ರೆಸ್ ನ ಮಾಜಿ ಶಾಸಕರ ಪುತ್ರನಿಗೆ ಸಿಸಿಬಿ ಶಾಕ್

ರಜೌರಿಯ ಗುಂಡಿನ ಮೊರೆತಗಳ ನಡುವೆ ಅರಳಿದ ಕ್ರಿಕೆಟ್ ಪ್ರತಿಭೆ ಅಬ್ದುಲ್‌ ಸಮದ್

ರಜೌರಿಯ ಗುಂಡಿನ ಮೊರೆತಗಳ ನಡುವೆ ಅರಳಿದ ಕ್ರಿಕೆಟ್ ಪ್ರತಿಭೆ ಅಬ್ದುಲ್‌ ಸಮದ್

ಸೆ.21ರಿಂದ ಶಾಲೆಗಳು ಮಾತ್ರ ಪ್ರಾರಂಭ, ತರಗತಿಗಳಲ್ಲ: ಸುರೇಶ್ ಕುಮಾರ್

ಸೆ.21ರಿಂದ ಶಾಲೆಗಳು ಮಾತ್ರ ಪ್ರಾರಂಭ, ತರಗತಿಗಳಲ್ಲ: ಸುರೇಶ್ ಕುಮಾರ್

ವೆಂಟಿಲೇಟರ್ ಸಮಸ್ಯೆ; ನವಜಾತ ಶಿಶು ಸಾವು-ಸಂಬಂಧಿಕರ ಆಕ್ರೋಶ, ನರ್ಸ್ ಒತ್ತೆಯಾಳು!

ವೆಂಟಿಲೇಟರ್ ಸಮಸ್ಯೆ; ನವಜಾತ ಶಿಶು ಸಾವು-ಸಂಬಂಧಿಕರ ಆಕ್ರೋಶ, ನರ್ಸ್ ಒತ್ತೆಯಾಳು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು: ಕಾಂಗ್ರೆಸ್ ವಿರುದ್ಧ ಸಚಿವ ಸಿ.ಟಿ.ರವಿ ವಾಗ್ದಾಳಿ

ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು: ಕಾಂಗ್ರೆಸ್ ವಿರುದ್ಧ ಸಚಿವ ಸಿ.ಟಿ.ರವಿ ವಾಗ್ದಾಳಿ

ಸಣ್ಣ ಕಾಫಿ ಬೆಳೆಗಾರರ ಕುಟುಂಬಕ್ಕೆ ಸಹಾಯಧನ ವಿತರಣೆ

ಸಣ್ಣ ಕಾಫಿ ಬೆಳೆಗಾರರ ಕುಟುಂಬಕ್ಕೆ ಸಹಾಯಧನ ವಿತರಣೆ

ರೈತರಿಗೆ ಅಗತ್ಯ ಯಂತ್ರ ನೀಡಿ: ರಾಜೇಗೌಡ

ರೈತರಿಗೆ ಅಗತ್ಯ ಯಂತ್ರ ನೀಡಿ: ರಾಜೇಗೌಡ

ಚಿಕ್ಕಮಗಳೂರು ಕೋವಿಡ್ ಸೋಂಕಿಗೆ ಮೂವರು ಬಲಿ! 199 ಹೊಸ ಪ್ರಕರಣ

ಚಿಕ್ಕಮಗಳೂರು ಕೋವಿಡ್ ಸೋಂಕಿಗೆ ಮೂವರು ಬಲಿ! 199 ಹೊಸ ಪ್ರಕರಣ

ಕಾಫಿನಾಡಲ್ಲಿ ಮುಂದುವರಿದ ಮಳೆ

ಕಾಫಿನಾಡಲ್ಲಿ ಮುಂದುವರಿದ ಮಳೆ

MUST WATCH

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!

udayavani youtube

ಭತ್ತದ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

COVID-19 ಸಮಯದಲ್ಲಿ ಜೀವನಕ್ಕೆ ಆಧಾರವಾದ ಹೈನುಗಾರಿಕೆ

udayavani youtube

ಕೃಷಿ ಮಾಡಲು ಹಠ – ಚಟ ಎರಡೂ ಇರಬೇಕು ಎಂದ ಕೃಷಿಕ | Success story of BV Poojaryಹೊಸ ಸೇರ್ಪಡೆ

ವಿಷ್ಣುದಾದ 70 ಅಭಿಮಾನಿಗಳ ಮನದಲ್ಲಿ ಯಜಮಾನ್ರು ಜೀವಂತ

ವಿಷ್ಣುದಾದ 70 ಅಭಿಮಾನಿಗಳ ಮನದಲ್ಲಿ ಯಜಮಾನ್ರು ಜೀವಂತ

t-15

ತಡೆಯಲಾಗದ ಅನಿಯಂತ್ರಿತ ಮೂತ್ರ ವಿಸರ್ಜನೆ ಮತ್ತು ಮೂತ್ರಶಂಕೆಯ ಅವಸರ

ಮುಂಬಯಿ: 2 ಕೆಜಿ ಚರಸ್‌ ಜತೆಗೆ ಇಬ್ಬರ ಬಂಧನ

ಮುಂಬಯಿ: 2 ಕೆಜಿ ಚರಸ್‌ ಜತೆಗೆ ಇಬ್ಬರ ಬಂಧನ

A street merchant

ಬೀದಿ ವ್ಯಾಪಾರಿಗಳ ಜೀವನೋಪಾಯ ಸಂರಕ್ಷಣೆಗೆ ಕೆಲಸ ಮಾಡಿ

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.