ಸಡಗರದ ಕಲ್ಕೆರೆ ಕರಿಯಮ್ಮ ದೇವಿ ರಥೋತ್ಸವ
Team Udayavani, Feb 20, 2021, 4:27 PM IST
ಅಜ್ಜಂಪುರ: ತಾಲೂಕಿನ ಕಲ್ಕೆರೆ ಗ್ರಾಮದಲ್ಲಿ ಕರಿಯಮ್ಮ ದೇವಿ ರಥೋತ್ಸವ ನೂರಾರು ಭಕ್ತರ ಭಕ್ತಿ-ಭಾವ, ಸಂಭ್ರಮ-ಸಡಗರದ ನಡುವೆ ಶುಕ್ರವಾರ ಜರುಗಿತು.
ರಥೋತ್ಸವದ ಅಂಗವಾಗಿ ಕರಿಯಮ್ಮ ದೇವಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ದೇವಿಯ ಉತ್ಸವ ಮೂರ್ತಿ ಮೆರವಣಿಗೆ ನಡೆಸಲಾಯಿತು. ಉತ್ಸವದಲ್ಲಿ ಡೊಳ್ಳು, ವೀರಗಾಸೆಯಂತಹ ಜಾನಪದ ಕಲಾತಂಡಗಳು ಪಾಲ್ಗೊಂಡು ಗಮನ ಸೆಳೆದವು.
ನಂತರ ದೇವಿಯನ್ನು ಅಲಂಕೃತಗೊಂಡ ರಥದಲ್ಲಿರಿಸಿ, ರಥೋತ್ಸವ ನಡೆಸಲಾಯಿತು. ಸೇರಿದ್ದ ಭಕ್ತರು ಬಾಳೆ ಹಣ್ಣು, ನಿಂಬೆ ಹಣ್ಣನ್ನು ರಥದ ಕಲಶದತ್ತ ತೂರಿ ಸಂಭ್ರಮಿಸಿದರು. ಹೂ-ಹಣ್ಣು ಅರ್ಪಿಸಿ, ಭಕ್ತಿ ಸಮರ್ಪಿಸಿದರು.
ರಥೋತ್ಸವದ ಅಂಗವಾಗಿ ಮಂಗಳವಾರ ಧ್ವಜಾರೋಹಣ, ದೇವಿಗೆ ಮಧುವಣಗಿತ್ತಿ ಸೇವೆ, ಬುಧವಾರ ಬೇವಿನ ಸೀರೆ, ಗುರುವಾರ ಸಿದ್ದಲಿಂಗಸ್ವಾಮಿ ನೇತೃತ್ವದಲ್ಲಿ ಸಹಸ್ರ ಕುಂಕುಮಾರ್ಚನೆ, ಪಾನಕದ ಬಂಡಿ ಸೇವೆ, ಕಳಸಾರೋಹಣ ಸೇವೆ ನಡೆದಿದ್ದವು. ಸೋಮವಾರ ಹಾಲು ಪಲ್ಲಕ್ಕಿ ಸೇವೆ, ಮಂಗಳವಾರ ಓಕಳಿ ಸೇವೆ, ಅಚ್ಚಂದ ಸೇವೆ ನಡೆಯುವ ಮೂಲಕ ವಾರ್ಷಿಕ ರಥೋತ್ಸವಕ್ಕೆ ತೆರೆ ಬೀಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪೊಲೀಸ್ ಠಾಣೆ ಬಳಿ ತುಕ್ಕು ಹಿಡಿಯುತ್ತಿವೆ ವಾಹನಗಳು
ಪುತ್ತೂರು ಜಿಲ್ಲೆಯಾದರೆ ಬೆಳ್ತಂಗಡಿಗೂ ಅನುಕೂಲ: ಪ್ರದೇಶವಾರು ಮೂಲ ಸೌಕರ್ಯ ಅಭಿವೃದ್ಧಿ ಸಾಧ್ಯ
ಹಸಿ ತ್ಯಾಜ್ಯದಿಂದ ಗೊಬ್ಬರ ತಯಾರಿ : ಬಂಟ್ವಾಳ ಪುರಸಭೆಯಿಂದ ಮಾರಾಟಕ್ಕೆ ಸಿದ್ಧತೆ
ಬೈರಿಕಟ್ಟೆ-ಕಲ್ಲಜೇರ-ನೆಕ್ಕಿತ್ತಪುಣಿ ರಸ್ತೆ ವಿಸ್ತರಣೆಗೆ ಆಗ್ರಹ
“ರಥ ಚಲಿಸುವ ಧರ್ಮ ಸಭಾ ಮಂಟಪ’ : ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ