Udayavni Special

ಮಲೆನಾಡಿಗೂ ವಕ್ಕರಿಸಿದ ಮಿಡತೆ ಹಾವಳಿ


Team Udayavani, Jun 11, 2020, 8:27 AM IST

ಮಲೆನಾಡಿಗೂ ವಕ್ಕರಿಸಿದ ಮಿಡತೆ ಹಾವಳಿ

ಶೃಂಗೇರಿ: ಕೂತಗೋಡು ಗ್ರಾಪಂ ವ್ಯಾಪ್ತಿಯ ಕೊಚ್ಚವಳ್ಳಿಯಲ್ಲಿ ಮಿಡತೆ ದಾಳಿಗೆ ತುತ್ತಾಗಿರುವ ಅಡಕೆ ಮರ.

ಶೃಂಗೇರಿ: ಉತ್ತರ ಭಾರತದಲ್ಲಿ ಕಂಡು ಬಂದಿರುವ ಮಿಡತೆ ಹಾವಳಿ ಇದೀಗ ಮಲೆನಾಡಿಗೂ ವಕ್ಕರಿಸಿದೆ. ತಾಲೂಕಿನ ಕೂತಗೋಡು ಗ್ರಾಪಂ ವ್ಯಾಪ್ತಿಯ ರೈತರೊಬ್ಬರ ಅಡಕೆ ತೋಟಕ್ಕೆ ಮಿಡತೆ ದಾಳಿ ಮಾಡಿದ್ದು, ರೈತರ ನಿದ್ದೆಗೆಡಿಸಿದೆ.

ಕೊಚ್ಚವಳ್ಳಿಯ ಅಶೋಕ್‌ ಎಂಬುವವರ ಅಡಕೆ ತೋಟದಲ್ಲಿ ಮಿಡತೆ ದಾಳಿ ನಡೆಸಿದ್ದು, ಎರಡೇ ದಿನದಲ್ಲಿ ಎರಡು ಮರದ ಸೋಗೆ(ಎಲೆ) ಸಂಪೂರ್ಣ ತಿಂದು ಹಾಕಿದೆ. ಮರ ಒಣಗಿ ನಿಂತಿದ್ದು, ಫಲ ಭರಿತ ಕೊನೆಯ ಅಡಕೆ ಕಾಯಿಗಳು ಉದುರಿ ಹೋಗಿದೆ. ಮಂಗಳವಾರ ಮನೆಯ ಎದುರಿನ ತೋಟದಲ್ಲಿ ಟಾರ್ಚ್‌ ಬೆಳಕಿನಲ್ಲಿ ಮಿಡತೆಗಳ ಹಾರಾಟ ಕಂಡು ಬಂದಿದೆ. ಹತ್ತಾರು ಮರದಲ್ಲಿ ಕಂಡು ಬಂದ ಮಿಡತೆಗಳು ರಾತ್ರಿ ಅಡಕೆ ಸೋಗೆಯನ್ನು ತಿನ್ನುವುದನ್ನು ಗಮನಿಸಿದ್ದಾರೆ. ಬೆಳಕು ಹರಿಯುತ್ತಿದ್ದಂತೆ ಮಿಡತೆಗಳು ಎಲೆ ಅಡಿ ಸೇರಿಕೊಳ್ಳುತ್ತಿದ್ದು, ಸೋಗೆಯನ್ನು ಎಳೆದರೆ ಮಿಡತೆಗಳು ಹಾರಾಡುವುದು ಗೋಚರಿಸುತ್ತದೆ. ಹತ್ತಾರು ಮರಗಳಲ್ಲಿ ರಾಶಿ ರಾಶಿ ಮಿಡತೆ ಕಂಡು ಬಂದಿದ್ದು, ಅಡಕೆ ತೋಟದಲ್ಲಿರುವ ಜಾಯಿಕಾಯಿ ಮರದಲ್ಲೂ ಕಾಣಿಸಿಕೊಂಡಿದೆ. ಮಿಡತೆ ದಾಳಿ ಹೆಚ್ಚಾದರೆ ನಾಲ್ಕಾರು ದಿನದಲ್ಲಿಯೇ ತೋಟವಿಡೀ ತಿಂದು ಹಾಕುವ ಭೀತಿ ಎದುರಾಗಿದೆ.

ಈ ಘಟನೆಯಿಂದ ಸ್ಥಳೀಯ ರೈತರು ಆತಂಕಗೊಂಡಿದ್ದಾರೆ. ಗ್ರಾಮದಲ್ಲಿ ಈಗಾಗಲೇ ಅಡಕೆ ತೋಟಕ್ಕೆ ಹಳದಿ ಎಲೆ ರೋಗವಿದ್ದು, ಗ್ರಾಮದಲ್ಲಿ ಹತ್ತಾರು ಎಕರೆ ರೋಗಕ್ಕೆ ನಾಶವಾಗಿದೆ. ಅಶೋಕ್‌ ಅವರ ತೋಟ ಹೊಸ ತೋಟವಾಗಿದ್ದು, ಫಲಭರಿತ ಅಡಕೆ ಮರಗಳಿಗೆ ಮಿಡತೆ ದಾಳಿಯಾದರೆ ತೋಟ ನಾಶವಾಗುವುದು ಖಚಿತ. ಕೊಳೆ ರೋಗಕ್ಕೆ ಈಗಗಾಲೇ ಬೊರ್ಡೋ ದ್ರಾವಣ ಸಿಂಪಡಿಸಿದ್ದರೂ ಮಿಡತೆ ಇದಕ್ಕೆ ಬಗ್ಗದೇ ಸೋಗೆಯನ್ನು ತಿಂದು ಹಾಕುತ್ತಿವೆ. ಮಿಡತೆ ಕಪ್ಪು ಹಸಿರು ಬಣ್ಣದಿಂದ ಕೂಡಿದ್ದು, ದೇಹದ ಮೇಲೆ ಹಳದಿ ಚುಕ್ಕೆ ಹೊಂದಿದೆ. ಮರದಿಂದ ಮರಕ್ಕೆ ಹಾರುವ ಇದು ಸಮೃದ್ಧವಾಗಿ ಹಸಿರು ಎಲೆ ಭಾಗವೇ ಇದಕ್ಕೆ ಆಹಾರವಾಗಿದೆ.

ಮಕ್ಕಳಂತೆ ಹಗಲು ರಾತ್ರಿ ಬೆಳೆಸಿರುವ ಅಡಕೆ ತೋಟಕ್ಕೆ ಇದೀಗ ಮಿಡತೆ ದಾಳಿ ಇಟ್ಟಿರುವುದರಿಂದ ತೀವ್ರ ಆತಂಕ ಎದುರಾಗಿದೆ. ಕಳೆದ ಮೂರು ದಿನದಿಂದ ಕೆಲವೇ ಮಿಡತೆ ಕಂಡು ಬಂದಿದ್ದು, ಮಂಗಳವಾರ ರಾತ್ರಿ ನೂರಾರು ಮಿಡತೆ ಕಂಡು ಬಂದಿದೆ. ಈಗಾಗಲೇ ಎರಡು ಮರವನ್ನು ಸಂಪೂರ್ಣ ತಿಂದು ಹಾಕಿದೆ. ಇದೇ ರೀತಿ ದಾಳಿ ಮುಂದುವರೆದರೆ ತೋಟ ನಾಶವಾಗಲಿದೆ. ತೋಟಗಾರಿಕೆ ಇಲಾಖೆ ತ್ವರಿತವಾಗಿ ಇದಕ್ಕೆ ಸೂಕ್ತ ಔಷ ಧ ಸಿಂಪಡಣೆಗೆ ಮಾರ್ಗದರ್ಶನ ನೀಡಬೇಕು. -ಕೊಚ್ಚವಳ್ಳಿ ಅಶೋಕ್‌ಹೆಗ್ಡೆ, ತೋಟದ ಮಾಲೀಕ

ಮಿಡತೆ ದಾಳಿ ಈಗಾಗಲೇ ನರಸಿಂಹರಾಜಪುರ ತಾಲೂಕಿನಲ್ಲಿ ಕಂಡು ಬಂದಿದೆ. ಇದರ ನಿಯಂತ್ರಣ ಸಾಧ್ಯವಿದೆ. ಇದಕ್ಕಾಗಿ ರೈತರು ಕ್ವಿನಾಲ್‌ ಫಾಸ್‌ 25 ಇಸಿ 2ಮಿ.ಲೀ. ಒಂದು ಲೀ.ನೀರಿನೊಂದಿಗೆ ಸಿಂಪಡಿಸುವುದರಿಂದ ಮಿಡತೆ ಬಾಧೆ ಹತೋಟಿಗೆ ತರಬಹುದಾಗಿದೆ. –ಶ್ರೀಕೃಷ್ಣ, ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ

ಗ್ರಾಮದಲ್ಲಿ ಕಂಡು ಬಂದಿರುವ ಮಿಡತೆ ದಾಳಿ ಆತಂಕ ಉಂಟು ಮಾಡಿದೆ. ಈ ಬಗ್ಗೆ ಸರಕಾರಕ್ಕೆ ಹಾಗೂ ಶಾಸಕ ಟಿ.ಡಿ.ರಾಜೇಗೌಡರ ಗಮನಕ್ಕೆ ತರಲಾಗಿದೆ. ರೈತರ ನೆರವಿಗೆ ಸರಕಾರ ಧಾವಿಸಬೇಕು. –ನಾಗೇಶ್‌ ಹೆಗ್ಡೆ, ಅಧ್ಯಕ್ಷರು, ಕೂತಗೋಡು ಗ್ರಾಪಂ

ಟಾಪ್ ನ್ಯೂಸ್

ಮೈಸೂರಿನಲ್ಲಿ ಧಾರಾಕಾರ ಮಳೆ: ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತ

ಮೈಸೂರಿನಲ್ಲಿ ಧಾರಾಕಾರ ಮಳೆ: ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತ

1-shrk

ಜೈಲಿಗೆ ಬಂದು ಪುತ್ರನ ಭೇಟಿಯಾದ ಶಾರುಖ್; ಹೈಕೋರ್ಟ್ ನಲ್ಲಿ ಜಾಮೀನು?

metro

ಮೆಟ್ರೋ : ವರ್ಷದಲ್ಲಿ ಸೆಂಚುರಿ

ಬಾಂಬೆ ಷೇರುಪೇಟೆ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 260 ಅಂಕ ಜಿಗಿತ, ನಿಫ್ಟಿ ದಾಖಲೆ

ಬಾಂಬೆ ಷೇರುಪೇಟೆ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 260 ಅಂಕ ಜಿಗಿತ, ನಿಫ್ಟಿ ದಾಖಲೆ

ಕಾಲೇಜುಗಳಲ್ಲಿ ಯುವತಿಯರಿಗೆ ಸ್ವಯಂ ರಕ್ಷಣಾ ತರಬೇತಿ: ಸಿಎಂ ಬೊಮ್ಮಾಯಿ

ಕಾಲೇಜುಗಳಲ್ಲಿ ಯುವತಿಯರಿಗೆ ಸ್ವಯಂ ರಕ್ಷಣಾ ತರಬೇತಿ: ಸಿಎಂ ಬೊಮ್ಮಾಯಿ

ಲಲಿತಕಲಾ

ಕೌಶಲ್ಯ ಅಭಿವೃದ್ಧಿಗಾಗಿ ಹೊಸ ಪರಿಕಲ್ಪನೆಗೆ ಒತ್ತು

ತಿಂಗಳಿಗೆ 75 ಸಾವಿರ ರೂ. ದುಡಿಯುತ್ತಿದೆ ಒಂದು ವರ್ಷದ ಮಗು! ಹೇಗೆ ಗೊತ್ತಾ?

ತಿಂಗಳಿಗೆ 75 ಸಾವಿರ ರೂ. ದುಡಿಯುತ್ತಿದೆ ಒಂದು ವರ್ಷದ ಮಗು! ಹೇಗೆ ಗೊತ್ತಾ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

25ರಿಂದ 724 ಕಿರಿಯ ಪ್ರಾಥಮಿಕ ಶಾಲೆಗಳು ಓಪನ್‌

25ರಿಂದ 724 ಕಿರಿಯ ಪ್ರಾಥಮಿಕ ಶಾಲೆಗಳು ಓಪನ್‌

1-nbb

ಹೊನ್ನಮ್ಮನಹಳ್ಳ ಹಾಗೂ ದಬೆದಬೆ ಜಲಪಾತ: ಖಾಸಗಿಯಿಂದ ಮುಕ್ತಗೊಳಿಸಿ

1-33

ಗೋಡ್ಸೆ ಪೂಜೆ ಸಂಸ್ಕೃತಿ ಅಪಾಯಕಾರಿ: ಸೈಯ್ಯದ್‌ ಹನೀಫ್‌

bundh

ಆಸ್ಪತ್ರೆ ಹೋರಾಟ ಸಮಿತಿಯಿಂದ 22 ರಂದು ಶೃಂಗೇರಿ ಬಂದ್‌ ಕರೆ

chikkamagalore news

ಹಣದಾಸೆಗೆ ಗೋಮಾಳವನ್ನೂ ನುಂಗಿದ ಅಧಿಕಾರಿಗಳು….!: ಸ್ಥಳೀಯರ ಆರೋಪ

MUST WATCH

udayavani youtube

ಉದಯವಾಣಿ ಕಚೇರಿಯಲ್ಲಿ ‘ಸಲಗ’ !

udayavani youtube

ಗೂಟಿ ಕೃಷಿ ( air layering ) ಮಾಡುವ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ

udayavani youtube

ಭಾರತ – ಪಾಕ್‌ ಟಿ20 ವಿಶ್ವಕಪ್‌ ಪಂದ್ಯ ರದ್ದಾಗದು

udayavani youtube

‘ಅಂಬಾರಿ’ಯಲ್ಲಿ ಕುಳಿತು ಅರಮನೆ ನಗರಿ ನೋಡಿ

udayavani youtube

ಹುಣಸೂರು : ಟಿಬೆಟ್ ಕ್ಯಾಂಪ್ ನೊಳಗೆ ನುಗ್ಗಿ ದಾಂದಲೆ ನಡೆಸಿದ ಒಂಟಿ ಸಲಗ

ಹೊಸ ಸೇರ್ಪಡೆ

ಮೈಸೂರಿನಲ್ಲಿ ಧಾರಾಕಾರ ಮಳೆ: ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತ

ಮೈಸೂರಿನಲ್ಲಿ ಧಾರಾಕಾರ ಮಳೆ: ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತ

8

ವೀರಶೈವ ಭವನ ಶೀಘ್ರ ಲೋಕಾರ್ಪಣೆ: ಬಬ್ಬಳ್ಳಿ

ಹೃದೃೋಗ

ದೇಶದಲ್ಲಿ ಶೇ.50 ಮಂದಿ ಸೋಮಾರಿಗಳು

1-shrk

ಜೈಲಿಗೆ ಬಂದು ಪುತ್ರನ ಭೇಟಿಯಾದ ಶಾರುಖ್; ಹೈಕೋರ್ಟ್ ನಲ್ಲಿ ಜಾಮೀನು?

7

ಸಚಿವ ಈಶ್ವರಪ್ಪಗೆ ಘೇರಾವ್‌: ಗುತ್ತಿಗೆದಾರ ವಿರುದ್ದ ಕ್ರಮಕ್ಕೆ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.