Udayavni Special

“ಯಕ್ಷಮಧುರಮಯ್ಯ’ ಭಾಗವತಿಕೆ ರಸಗ್ರಹಣ ಕಾರ್ಯಕ್ರಮ


Team Udayavani, Mar 19, 2021, 7:58 PM IST

ಹಗದ್ಹಗಹಗ

ಶೃಂಗೇರಿ : ಯಕ್ಷಗಾನದ ವಿವಿಧ ಪರಂಪರೆ ಮತ್ತು ಭಾಗವತಿಕೆಯನ್ನು ದಾಖಲಿಸುವ ಸಲುವಾಗಿ ನಿರಂತರ ಯಕ್ಷಗಾನದ ಹಿಮ್ಮೇಳ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ರಮೇಶ್‌ ಬೇಗಾರ್‌ ಹೇಳಿದರು.

ಶ್ರೀ ಭಾರತೀತೀರ್ಥ ಸಾಂಸ್ಕೃತಿಕ ಮತ್ತು ಜಾನಪದ ಅಧ್ಯಯನ ಕೇಂದ್ರ ಟ್ರಸ್ಟ್‌ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ನೆಮ್ಮಾರಿನ ಹರೂರು ಗ್ರಾಮದ ಅಬ್ಬೀಗುಂಡಿಯಲ್ಲಿ ಬುಧವಾರ ಆಯೋಜಿಸಿದ್ದ “ಯಕ್ಷ ಮಧುರಮಯ್ಯ’ ಎಂಬ ಭಾಗವತಿಕೆ ರಸಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಕ್ಷಗಾನದ ರಸಪ್ರತಿಪಾದನೆಯಲ್ಲಿ ಮತ್ತು ಕಲೆಯ ಕಟ್ಟುವಿಕೆಯಲ್ಲಿ ಯಕ್ಷಗಾನ ಭಾಗತಿಕೆಯು ಕೇಂದ್ರಸ್ಥಾನದಲ್ಲಿದ್ದು, ಈ ಭಾಗವತಿಕೆಯ ಸೊಗಸನ್ನು ಬಿಂಬಿಸುವ ಪ್ರತ್ಯೇಕ ಕಾರ್ಯಕ್ರಮಗಳು ಯಕ್ಷಗಾನ ಕಲೆಗೆ ಮತ್ತು ಅದರ ಬೆಳವಣಿಗೆಗೆ ಪೂರಕವಾಗಿವೆ. ಗ್ರಾಮೀಣ ಪ್ರದೇಶದ ಕಡೆಗೆ ಕೊಂಡೊಯ್ಯುವುದು ಉದ್ದೇಶವಾಗಿದೆ. ಅತ್ಯಂತ ದುರ್ಗಮ ತಾಣವಾಗಿರುವ ಅಬ್ಬಿಗುಂಡಿಯಲ್ಲಿ ಗ್ರಾಮಸ್ಥರ ಉತ್ಸಾಹ ಮತ್ತು ಆಸಕ್ತಿಯನ್ನು ಗಮನದಲ್ಲಿರಿಸಿ ಪ್ರತೀ ವರ್ಷ ಇಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಲಕ್ಷ್ಮಿ ನರಸಿಂಹ ಶಾಸ್ತ್ರಿ, ಕಲೆ ಮತ್ತು ಪ್ರಕೃತಿ ಅವಿನಾಭಾವ ಸಂಬಂಧವನ್ನು ಹೊಂದಿದೆ.

ಕಲೆಗೆ ಮೂಲ ನಿಸರ್ಗದ ಪ್ರಕ್ರಿಯೆಯಾಗಿದ್ದು ಇದೀಗ ನಿಸರ್ಗದ ಮಡಿಲಿಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೊಂಡೊಯ್ಯುವ ಈ ವಿನೂತನ ಪ್ರಯೋಗವು ಕಲೆಯ ಹೊಸತನದ ದೃಷ್ಟಿಯಿಂದ ಮಹತ್ವದ್ದಾಗಿದೆ ಎಂದರು. ಭಾಗವತ ರಾಘವೇಂದ್ರ ಮಯ್ಯ ಅವರು ಉಪ್ಪೂರರು ಮತ್ತು ಕಾಳಿಂಗ ನಾವಡರ ಶೈಲಿಯ ಹಲವು ಪದ್ಯಗಳನ್ನು ಪ್ರಸ್ತುತಪಡಿಸಿದರು.

ಸಾಂಪ್ರದಾಯಿಕ ಗಣಪತಿ ಸ್ತುತಿಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿದ ಅವರು ಉಪ್ಪೂರು ಘರಾಣೆ ಮಾದರಿಯ ಮೂಕಾಂಬಿಕ ಸ್ತುತಿಯನ್ನು ನೆರವೇರಿಸಿದರು. ಶುದ್ಧ ಸಾವೇರಿ ರಾಗದಲ್ಲಿ ಬಬ್ರುವಾಹನ ಕಾಳಗದ ಅಹುದೆ ಎನ್ನಯ ರಮಣ ಪದ್ಯವನ್ನು ಸಾಂಪ್ರದಾಯಿಕವಾಗಿ ಪ್ರಸ್ತುತಪಡಿಸಿದರು. ಇವರೇ ರಂಗಕ್ಕೆ ತಂದ ಶೃಂಗಾರ ಶಿವರಂಜಿನಿಯನ್ನು ಸಪ್ತಸ್ವರಗಳ ಏಳು ಮದ್ದಳೆಗಳೊಂದಿಗೆ ಪ್ರಸ್ತುತಪಡಿಸಿದರು. ಕರ್ಣ ಪರ್ವತ, ಮುಂಜಾನೆಯ ಏರು ಶೃತಿಯ ಸಾವೇರಿ ರಾಗದ ಪದ್ಯ ಹಾಡಿದರು. ರಾಕೇಶ್‌ ಮಲ್ಯ ಹಳ್ಳಾಡಿ ಚಂಡೆಯಲ್ಲೂ, ಶಶಿಕುಮಾರ ಆಚಾರ್ಯ ಮದ್ದಳೆಯಲ್ಲೂ ಸಹಕರಿಸಿದರು.

ಟಾಪ್ ನ್ಯೂಸ್

ಗೋವಾದಲ್ಲೂ ನೈಟ್ ಕರ್ಫ್ಯೂ :ಕ್ಯಾಸಿನೊ, ಥಿಯೇಟರ್, ಬಾರ್ ಗಳಲ್ಲಿ ಶೇ.50 ಜನರಿಗೆ ಮಾತ್ರ ಅವಕಾಶ

ಗೋವಾದಲ್ಲೂ ನೈಟ್ ಕರ್ಫ್ಯೂ ಜಾರಿ :ಕ್ಯಾಸಿನೊ, ಥಿಯೇಟರ್, ಬಾರ್ ಗಳಲ್ಲಿ ಶೇ.50 ಜನರಿಗೆ ಅವಕಾಶ

dyreyre

18 ವಯಸ್ಸು ದಾಟಿದ ಎಲ್ಲರಿಗೂ ಉಚಿತ ಲಸಿಕೆ : ಕೇರಳ ಸಿಎಂ ಪಿಣರಾಯಿ ವಿಜಯನ್ ಘೋಷಣೆ

ONGCಗೆ ಸೇರಿದ ಮೂವರು ಉದ್ಯೋಗಿಗಳ ಅಪಹರಣ : ಉಗ್ರರು ಅಪಹರಿಸಿರುವ ಶಂಕೆ

ONGCಗೆ ಸೇರಿದ ಮೂವರು ಉದ್ಯೋಗಿಗಳ ಅಪಹರಣ : ಉಗ್ರರು ಅಪಹರಿಸಿರುವ ಶಂಕೆ

ನಗರಸಭೆ ಅಧಿಕಾರಿಗಳ ಧಿಡೀರ್ ಕಾರ್ಯಾಚರಣೆ: ಮಾಸ್ಕ್ ಧರಿಸದವರಿಂದ 18,900 ಸಾವಿರ ದಂಡ ವಸೂಲಿ

ನಗರಸಭೆ ಅಧಿಕಾರಿಗಳ ಧಿಡೀರ್ ಕಾರ್ಯಾಚರಣೆ: ಮಾಸ್ಕ್ ಧರಿಸದವರಿಂದ 18,900 ಸಾವಿರ ದಂಡ ವಸೂಲಿ

ಪದ್ಮಭೂಷಣ ಪುರಸ್ಕೃತ, ಬಂಗಾಳದ ಖ್ಯಾತ ಕವಿ ಶಂಖಾ ಘೋಷ್‌ ನಿಧನ

ಪದ್ಮಭೂಷಣ ಪುರಸ್ಕೃತ, ಬಂಗಾಳದ ಖ್ಯಾತ ಕವಿ ಶಂಖಾ ಘೋಷ್‌ ನಿಧನ

ಶೇ.50ರಷ್ಟು ಬೆಡ್ ನೀಡಲು ಒಪ್ಪದ 66 ಖಾಸಗಿ ಆಸ್ಪತ್ರೆೆಗಳಿಗೆ ಬಿಬಿಎಂಪಿ ತುರ್ತು ನೋಟಿಸ್

ಶೇ.50ರಷ್ಟು ಬೆಡ್ ನೀಡಲು ಒಪ್ಪದ 66 ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ತುರ್ತು ನೋಟಿಸ್

ಚಾರ್‌ಧಾಮ್‌ ಯಾತ್ರೆಗೆ ಕಠಿಣ ಕ್ರಮ ಕೈಗೊಳ್ಳಿ : ಉತ್ತರಾಖಂಡ ಸರ್ಕಾರಕ್ಕೆ ಹೈ ಕೋರ್ಟ್ ಆದೇಶ

ಚಾರ್‌ಧಾಮ್‌ ಯಾತ್ರೆಗೆ ಕಠಿಣ ಕ್ರಮ ಕೈಗೊಳ್ಳಿ : ಉತ್ತರಾಖಂಡ ಸರ್ಕಾರಕ್ಕೆ ಹೈ ಕೋರ್ಟ್ ಆದೇಶಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

21-24

ಅವಧಿ ಮುಗಿದ ಗ್ಲೂಕೋಸ್‌ ಪೊಟ್ಟಣ ವಿತರಣೆಗೆ ಆಕ್ರೋಶ

21-23

ಕೊರೊನಾ ಸೋಂಕಿನ ಅಬ್ಬರ: ಜನತೆ ತತ್ತರ

21-22

ಕೊರೊನಾ ನಿಯಂತ್ರಣಕ್ಕೆ ದೇವರ ಮೇಲೆ ಭಾರ ಹಾಕಿದ ಸಚಿವ

20-20

ಜಲಮೂಲ ಇದ್ರೂ ನಿರ್ವಹಣೆಯದ್ದೇ ಸಮಸ್ಯೆ

20-19

13ನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ

MUST WATCH

udayavani youtube

ಗಮನಿಸಿ: ವೀಕೆಂಡ್ ಕರ್ಫ್ಯೂ ಸಮಯದಲ್ಲಿ ಮದುವೆಯಾಗುವುದಾದರೆ ಈ ನಿಯಮಗಳನ್ನು ಪಾಲಿಸಲೇಬೇಕು!

udayavani youtube

ಬೀದರ್: ಬೆಡ್ ಕೊರತೆ. ಫುಟ್ ಪಾತ್ ನಲ್ಲೇ ನರಳಾಡಿದ ರೋಗಿಗಳು

udayavani youtube

ತಮಿಳುನಾಡಿನ ಅಪ್ಪಟ ರೇಷ್ಮೆ, ಕೃಷ್ಣ ನೂರಿನ ಜಯಲಕ್ಷ್ಮಿಯಲ್ಲಿ

udayavani youtube

ರಾಮನವಮಿ ವಿಶೇಷ | ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರೊಂದಿಗೆ ಸಂದರ್ಶನ

udayavani youtube

ಮಾದರಿ ಕೋವಿಡ್ ಠಾಣೆಯಾಗಿ ಮಂಗಳೂರಿನ ಉರ್ವ ಪೊಲೀಸ್ ಠಾಣೆ

ಹೊಸ ಸೇರ್ಪಡೆ

ಗೋವಾದಲ್ಲೂ ನೈಟ್ ಕರ್ಫ್ಯೂ :ಕ್ಯಾಸಿನೊ, ಥಿಯೇಟರ್, ಬಾರ್ ಗಳಲ್ಲಿ ಶೇ.50 ಜನರಿಗೆ ಮಾತ್ರ ಅವಕಾಶ

ಗೋವಾದಲ್ಲೂ ನೈಟ್ ಕರ್ಫ್ಯೂ ಜಾರಿ :ಕ್ಯಾಸಿನೊ, ಥಿಯೇಟರ್, ಬಾರ್ ಗಳಲ್ಲಿ ಶೇ.50 ಜನರಿಗೆ ಅವಕಾಶ

dyreyre

18 ವಯಸ್ಸು ದಾಟಿದ ಎಲ್ಲರಿಗೂ ಉಚಿತ ಲಸಿಕೆ : ಕೇರಳ ಸಿಎಂ ಪಿಣರಾಯಿ ವಿಜಯನ್ ಘೋಷಣೆ

ಕಜಹಗ್ದಸದ್ದಗ

ವೈದ್ಯಕೀಯ ಲೋಪವಾಗದಂತೆ ಕ್ರಮ ವಹಿಸಲು ಕರೆ

The accused was sentenced to 10 years in prison

ಲೈಂಗಿಕ ದೌರ್ಜನ್ಯ: ಆರೋಪಿಗೆ 10 ವರ್ಷ ಜೈಲು

ONGCಗೆ ಸೇರಿದ ಮೂವರು ಉದ್ಯೋಗಿಗಳ ಅಪಹರಣ : ಉಗ್ರರು ಅಪಹರಿಸಿರುವ ಶಂಕೆ

ONGCಗೆ ಸೇರಿದ ಮೂವರು ಉದ್ಯೋಗಿಗಳ ಅಪಹರಣ : ಉಗ್ರರು ಅಪಹರಿಸಿರುವ ಶಂಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.