Udayavni Special

ಮೋದಿ ವಿಶ್ವದ ಪ್ರಭಾವಿ ಪ್ರಧಾನಿ


Team Udayavani, Apr 17, 2019, 4:56 PM IST

chikk-1

ಮೂಡಿಗೆರೆ: ದೇಶ ದ್ರೋಹಿಗಳನ್ನು ಹತ್ತಿಕ್ಕಿ ಧರ್ಮ ಸಂಸ್ಕಾರ ರಾಷ್ಟ್ರ ಪ್ರಾರಂಭಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತಿನ ಎಲ್ಲಾ ರಾಷ್ಟ್ರದ ಪ್ರಧಾನಿಗಳಿಗಿಂತಲೂ ಪ್ರಭಾವಿಯಾಗಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ತಿಳಿಸಿದರು.

ಅವರು ಮಂಗಳವಾರ ಪಟ್ಟಣದಲ್ಲಿ ರೋಡ್‌ ಶೋ ಮೂಲಕ ಮತಯಾಚಿಸಿ ಬಳಿಕ ಅಡ್ಯಂತಾಯ ರಂಗಮಂದಿರದಲ್ಲಿ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಪುಲ್ವಾಮ ಘಟನೆಯಲ್ಲಿ 44 ಯೋಧರನ್ನು ಉಗ್ರರು ಬಲಿ ಪಡೆದಾಗ ಅದಕ್ಕೆ ಮೋದಿ ಸರಕಾರ ಪ್ರತಿಕಾರವಾಗಿ ಪಾಕಿಸ್ತಾನದಲ್ಲಿ ಉಗ್ರರ ನೆಲೆ ನಾಶಪಡಿಸಿ 400 ಉಗ್ರರನ್ನು ಕೊಂದು ಹಾಕಿದ್ದಾರೆ ಎಂದರು.

ಉತ್ತರ ಪ್ರದೇಶದ ಅಮೇಥಿ ಮತ್ತು ರಾಯಬರೇಲಿ ಕ್ಷೇತ್ರದ ಮೇಲೆ ನಂಬಿಕೆ ಕಳೆದುಕೊಂಡ ರಾಹುಲ್‌ ಗಾಂಧಿ ಕೇರಳದ ವಯನಾಡಿಗೆ ಪಲಾಯನ ಮಾಡಿದ್ದಾರೆ. ಚುನಾವಣೆ ರ್ಯಾಲಿಯಲ್ಲಿ ಪಾಕಿಸ್ತಾನದ ಧ್ವಜವನ್ನು ಹಾರಿಸಿ ದೇಶ ದ್ರೋಹವೆಸಗಿದ್ದಾರೆ. ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದರೆ ದೇಶದ್ರೋಹದ ಎಲ್ಲಾ ಕೇಸುಗಳನ್ನು ಹಿಂದಕ್ಕೆ ಪಡೆಯುವುದಾಗಿ ಹೇಳಿದ್ದಾರೆ. ಇದು ಅವರ ವ್ಯಕ್ತಿತ್ವಕ್ಕ ಶೋಭೆ ತರುವುದಿಲ್ಲವೆಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಮಾಡಿಕೊಂಡು ಕಾರ್ಯಕರ್ತರಲ್ಲಿಯೇ ಗೊಂದಲ ಉಂಟಾಗಿದೆ. ಇದು ಬಿಜೆಪಿಗೆ ವರದಾನವಾಗಲಿದೆ ಎಂದ ಅವರು, ರಾಜ್ಯದ ಮುಖ್ಯಮಂತ್ರಿ ಇತ್ತಿಚೆಗೆ ಏನೇನೋ ಹೇಳಿಕೆ ನೀಡುತ್ತಿದ್ದಾರೆ. ಕರಾವಳಿಯ ಜನರು ತಿಳುವಳಿಕೆ ಇಲ್ಲದವರು, ಬುದ್ಧಿ ಇಲ್ಲದವರೆಂದು ಹೇಳಿದ್ದಾರೆ. ಅದಕ್ಕೆ ಕರಾವಳಿಯಲ್ಲಿ ಪಿಯುಸಿ ಮಕ್ಕಳು ನಂ.ಒನ್‌ ಫಲಿತಾಂಶ ನೀಡಿ ಮುಖ್ಯಮಂತ್ರಿಗೆ ತಕ್ಕ ಉತ್ತರ ನೀಡಿದ್ದಾರೆಂದು ವ್ಯಂಗ್ಯವಾಡಿದರು.

ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಕೇಂದ್ರದಲ್ಲಿ ಅಧಿಕಾರದ ಗದ್ದುಗೇರಲು ಸರಳ ಬಹುಮತಕ್ಕಾಗಿ 272 ಸ್ಥಾನಗಳ ಅಗತ್ಯವಿದೆ. ಆದರೆ ಕಾಂಗ್ರೆಸ್‌ ಪಕ್ಷ ದೇಶದಲ್ಲಿ 200 ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸಿದೆ. ಹಾಗಾದರೆ ಆ ಪಕ್ಷ ಸರಕಾರ ರಚಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ 28
ಕ್ಷೇತ್ರದಲ್ಲಿ ಸ್ಪ ರ್ಧಿಸಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಇನ್ನಿಲ್ಲದ ಕಸರತ್ತು ನಡೆಸಿ 21 ಕ್ಷೇತ್ರದಲ್ಲಿ ಕಾಂಗ್ರೆಸ್‌ ಸರ್ಧಿಸಿದರೆ 7 ಕ್ಷೇತ್ರದಲ್ಲಿ ಜೆಡಿಎಸ್‌ ಸ್ಪರ್ಧಿಸಲು ಮುಂದಾದಾಗ, ಅದಕ್ಕೆ ಅಭ್ಯರ್ಥಿಗಳೇ ಸಿಕ್ಕಿಲ್ಲ. ಹಾಗಾಗಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಅಭ್ಯರ್ಥಿಯನ್ನು ಸಾಲ ಪಡೆದು ಸ್ಪರ್ಧಿಸುವಂತಾಗಿದೆ.

ಇಂತಹ ಶೋಚನೀಯ ಸ್ಥಿತಿ ಇರುವ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷ ಗೆಲ್ಲುವುದೆಂಬುದು ಹುಸಿ ಬರವಸೆ ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಎಂ.ಕೆ.ಪ್ರಾಣೇಶ್‌ ಮಾತನಾಡಿ, ಕಳೆದ 70 ವರ್ಷದಲ್ಲಿ ಕಾಂಗ್ರೆಸ್‌ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಸಮಸ್ಯೆಗಳಿಂದಾಗಿ ದೇಶದ ಜನ ಜಿಗುಪ್ಸೆಯಿಂದ ವಿದೇಶದಲ್ಲಿ ಹುಟ್ಟಿದ್ದರೆ ಚನ್ನಾಗಿತ್ತು ಅಂದುಕೊಳ್ಳುತ್ತಿದ್ದರು. ಮೋದಿ ಪ್ರಧಾನಿಯಾದ ಬಳಿಕ ಭಾರತದಲ್ಲಿ ಹುಟ್ಟಿದ್ದಕ್ಕೆ ಜನರು ಹೆಮ್ಮೆ ಪಡುವಂತಾಗಿದೆ. ಮೋದಿ ಆಡಳಿತದಲ್ಲಿ ಭ್ರಷ್ಟಾಚಾರವನ್ನು, ಧರ್ಮಭೇದ ಕಿತ್ತೂಗೆದು ಎಲ್ಲರನ್ನು ಅಭಿವೃದ್ಧಿಯೆಡೆಗೆ ಸಾಗಿಸಿದ್ದಾರೆ. ಈ ಬಾರಿಯೂ ಬಿಜೆಪಿಯನ್ನು ಜನತೆ ಬೆಂಬಲಿಸಲಿದ್ದಾರೆಂದು
ತಿಳಿಸಿದರು.

ಈ ವೇಳೆ ಕಾಂಗ್ರೆಸ್‌ ಪಕ್ಷದ ಪ್ರಭಾವಿ ಮುಖಂಡ, ಪ.ಪಂ.ಸದಸ್ಯ ಟಿ.ಎಂ.ಮದೀಶ್‌ ಮತ್ತು ಕಾಂಗ್ರೆಸ್‌, ಜೆಡಿಎಸ್‌, ಸಿಪಿಐನ 30 ಕ್ಕೂ ಹೆಚ್ಚು ಕಾರ್ಯಕರ್ತರು ತಮ್ಮ ಪಕ್ಷ ತೊರೆದು ಬಿಜೆಪಿಗೆ ಸೇರಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಅಖ್ತರ್‌ಗೆ ಕಪಿಲ್‌ ತಿರುಗೇಟು; ಭಾರತಕ್ಕೆ ಹಣದ ಆವಶ್ಯಕತೆ ಇಲ್ಲ

ಅಖ್ತರ್‌ಗೆ ಕಪಿಲ್‌ ತಿರುಗೇಟು; ಭಾರತಕ್ಕೆ ಹಣದ ಆವಶ್ಯಕತೆ ಇಲ್ಲ

ದ್ವಿಶತಕದತ್ತ ಕೋವಿಡ್ 19 ವೈರಸ್‌ ಸೋಂಕಿತರ ಸಂಖ್ಯೆ

ದ್ವಿಶತಕದತ್ತ ಕೋವಿಡ್ 19 ವೈರಸ್‌ ಸೋಂಕಿತರ ಸಂಖ್ಯೆ

ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ತಿಂಗಳ ವೇತನ ದೇಣಿಗೆ ನೀಡಿದ ಅರಣ್ಯಾಧಿಕಾರಿ

ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ತಿಂಗಳ ವೇತನ ದೇಣಿಗೆ ನೀಡಿದ ಅರಣ್ಯಾಧಿಕಾರಿ

ಕೋವಿಡ್ 19 ಮಣಿಸಲು ಸಾಮಾಜಿಕ ಅಂತರ & ಲಾಕ್ ಡೌನ್ ಅತೀ ದೊಡ್ಡ ಲಸಿಕೆ: ಸಚಿವ ಹರ್ಷವರ್ಧನ್

ಕೋವಿಡ್ 19 ಮಣಿಸಲು ಸಾಮಾಜಿಕ ಅಂತರ & ಲಾಕ್ ಡೌನ್ ಅತೀ ದೊಡ್ಡ ಲಸಿಕೆ: ಸಚಿವ ಹರ್ಷವರ್ಧನ್

ರಾಜ್ಯದ ಗಡಿ ದಾಟಿ ತಮಿಳುನಾಡು ಪೊಲೀಸರು ಚೆಕಿಂಗ್ ಕಾರ್ಯಾಚರಣೆಗೆ ಬೊಮ್ಮಾಯಿ ಗರಂ

ರಾಜ್ಯದ ಗಡಿ ದಾಟಿ ತಮಿಳುನಾಡು ಪೊಲೀಸರ ಚೆಕಿಂಗ್ ಕಾರ್ಯಾಚರಣೆಗೆ ಬೊಮ್ಮಾಯಿ ಗರಂ

ಭಾರತದ ಈ ಎರಡು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳತ್ತ ಮಾತ್ರ ಕೋವಿಡ್ ವೈರಸ್ ಸುಳಿದಿಲ್ಲ

ಭಾರತದ ಈ ಎರಡು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳತ್ತ ಮಾತ್ರ ಕೋವಿಡ್ ವೈರಸ್ ಸುಳಿದಿಲ್ಲ!

ನಕಲಿ ಪಾಸ್‌ ಮಾಡಿದವರ ವಿರುದ್ಧ ಕ್ರಮ: ಬಸವರಾಜ ಬೊಮ್ಮಾಯಿ

ನಕಲಿ ಪಾಸ್‌ ಮಾಡಿದವರ ವಿರುದ್ಧ ಕ್ರಮ: ಬಸವರಾಜ ಬೊಮ್ಮಾಯಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

09-April-26

ಪಡಿತರ ಚೀಟಿ ಇಲ್ಲದವರಿಗೆ ಧಾನ್ಯ ವಿತರಣೆ

09-April-12

ಲಾಕ್‌ಡೌನ್‌ಗೆ ಜನರ ಡೋಂಟ್‌ಕೇರ್‌

08-April-26

ಕಡೂರು ಸಾರ್ವಜನಿಕ ಆಸ್ಪತ್ರೆಗೆ ಸಂಸದ ಪ್ರಜ್ವಲ್‌ ರೇವಣ್ಣ ಭೇಟಿ

08-April-13

ಬೀದಿಗಿಳಿದವರಿಗೆ ಪೊಲೀಸರ ಲಾಠಿ ರುಚಿ

ಲಾಕ್ ಡೌನ್ ನಡುವೆ ಟ್ಯಾಕ್ಟರ್ ನಲ್ಲಿ ಗದ್ದೆ ಉಳುಮೆ ಮಾಡಿದ ಸಚಿವ ಸಿ ಟಿ ರವಿ

ಲಾಕ್ ಡೌನ್ ನಡುವೆ ಟ್ಯಾಕ್ಟರ್ ನಲ್ಲಿ ಗದ್ದೆ ಉಳುಮೆ ಮಾಡಿದ ಸಚಿವ ಸಿ ಟಿ ರವಿ

MUST WATCH

udayavani youtube

ಉದಯವಾಣಿಯ ‘ರೈತ ಸೇತು’ – ಇದು ಬೆಳೆಗಾರರು ಗ್ರಾಹಕರ ನಡುವಿನ ವ್ಯವಹಾರ ಸೇತು

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

ಹೊಸ ಸೇರ್ಪಡೆ

ಸರಕು ವಾಹನಕ್ಕೆ ರಾಜ್ಯದೊಳಗೆ ಪಾಸ್‌ ಬೇಡ

ಸರಕು ವಾಹನಕ್ಕೆ ರಾಜ್ಯದೊಳಗೆ ಪಾಸ್‌ ಬೇಡ

ವಿಂಬಲ್ಡನ್‌ ರದ್ದು : ಕ್ಲಬ್‌ಗ 100 ಮಿ. ಡಾಲರ್‌ ವಿಮಾ ಹಣ

ವಿಂಬಲ್ಡನ್‌ ರದ್ದು : ಕ್ಲಬ್‌ಗ 100 ಮಿ. ಡಾಲರ್‌ ವಿಮಾ ಹಣ

ಅಖ್ತರ್‌ಗೆ ಕಪಿಲ್‌ ತಿರುಗೇಟು; ಭಾರತಕ್ಕೆ ಹಣದ ಆವಶ್ಯಕತೆ ಇಲ್ಲ

ಅಖ್ತರ್‌ಗೆ ಕಪಿಲ್‌ ತಿರುಗೇಟು; ಭಾರತಕ್ಕೆ ಹಣದ ಆವಶ್ಯಕತೆ ಇಲ್ಲ

ಬೆಳೆಗಾರ-ಗ್ರಾಹಕ ಮಧ್ಯೆ ಸಂಪರ್ಕ ಕಲ್ಪಿಸುತ್ತಿರುವ ರೈತ ಸೇತು

ಬೆಳೆಗಾರ-ಗ್ರಾಹಕ ಮಧ್ಯೆ ಸಂಪರ್ಕ ಕಲ್ಪಿಸುತ್ತಿರುವ ರೈತ ಸೇತು

ಲಾಕ್‌ಡೌನ್‌ ತೆರವಿನ ವರೆಗೆ ಆಹಾರ ವಿತರಣೆ: ಭರತ್‌ ಶೆಟ್ಟಿ

ಲಾಕ್‌ಡೌನ್‌ ತೆರವಿನ ವರೆಗೆ ಆಹಾರ ವಿತರಣೆ: ಭರತ್‌ ಶೆಟ್ಟಿ