ಹಣ ವಂಚನೆ: ಆರೋಪಿಗಳ ಸೆರೆ
Team Udayavani, May 22, 2022, 7:07 PM IST
ಬಾಳೆಹೊನ್ನೂರು: ಚೆನ್ನರಾಯಪಟ್ಟಣ ತಾಲೂಕು ಹಿರೇಸಾವಿಯ ಕೆ.ಇ.ಬಿ ಕಂಟ್ರಾಕ್ಟರ್ ವಿಜಯಕುಮಾರ್ ಎಂಬುವವರಿಗೆ ಕಲ್ಲೂರು ಮಠದಿಂದ 10ಲಕ್ಷ ಹಣವನ್ನು ಸಾಲ ಕೊಡಿಸುವುದಾಗಿ ತಿಳಿಸಿ ನೂರು ರೂ. ನೋಟುಗಳ 3 ಲಕ್ಷ ರೂ. ಹಣವನ್ನು 500 ರೂ. ನೋಟನ್ನು ಬದಲಿಸಿಕೊಡಬೇಕೆಂದು ಹೇಳಿ ಹಣ ಪಡೆದು ವಂಚನೆ ಮಾಡಿದ ಆರೋಪಿಗಳನ್ನು ಬಾಳೆಹೊನ್ನೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ಸಂಬಂಧ ಮೇ 3 ರಂದು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವೈಜ್ಞಾನಿಕ ತಪಾಸಣೆಯಿಂದ ಆರೋಪಿಗಳ ಮಾಹಿತಿ ಪಡೆದು ಎನ್.ಆರ್. ಪುರ ಬೈಪಾಸ್ ರಸ್ತೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಬೀರೂರಿನ ಕೋಡಿಹಳ್ಳಿಯ ಶ್ರೀಧರ್ ಯಾನೆ ಸಿದ್ದೇಶ್, ತಿಪಟೂರಿನ ಮಂಜುನಾಥ್, ಮಲ್ಲೇಶ್, ಕಿರಣ್ ಅವರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಸ್ಕಾರ್ಪಿಯೋ ಹಾಗೂ ಸ್ವಿಫ್ಟ್ ಕಾರು ಮತ್ತು 2 ಲಕ್ಷ 40 ಸಾವಿರು ರೂ.ಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಠಾಣಾಧಿಕಾರಿ ನಿತ್ಯಾನಂದ ಗೌಡ, ಪ್ರೊಬೆಶನರಿ ಠಾಣಾಧಿಕಾರಿಗಳಾದ ಅಭಿನಂದನ್, ಆದರ್ಶ, ಸಿಬ್ಬಂದಿ ನಾಗರಾಜ್, ಪ್ರದೀಪ್, ಸ್ವಾಮಿ, ಶಶಿ, ಸುನಿಲ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕಲಬುರಗಿ; ಇಬ್ಬರು ಮಕ್ಕಳನ್ನು ಕೊಂದು ಮಕ್ಕಳ ಶವದೊಂದಿಗೆ ರಿಕ್ಷಾದಲ್ಲಿ ತಿರುಗಾಡಿದ ಪಾಪಿ ತಂದೆ
ರಾಷ್ಟ್ರಪತಿ ಚುನಾವಣೆ ಕುರಿತ ಅರ್ಜಿತಿರಸ್ಕರಿಸಿದ ಸುಪ್ರೀಂ ಕೋರ್ಟ್
ಆಸ್ಕರ್ ಸಿನಿಮಾ ಸಮಿತಿಗೆ ತಮಿಳು ನಟ ಸೂರ್ಯ, ಬಾಲಿವುಡ್ ನಟಿ ಕಾಜೋಲ್
ಕುಂಬಳೆ : ಅಪರಿಚಿತರಿಂದ ವಿದ್ಯಾರ್ಥಿನಿಯ ಅಪಹರಣ: ವ್ಯಾನ್ನಿಂದ ಜಿಗಿದು ತಪ್ಪಿಸಿಕೊಂಡ ಬಾಲಕಿ
ಕುಣಿಗಲ್: ಕೆಂಪೇಗೌಡ ಜಯಂತೋತ್ಸವ ಮೆರವಣಿಗೆ ವೇಳೆ ಲೋಪ: ತಹಶೀಲ್ದಾರ್ ಮಹಬಲೇಶ್ವರ್ ಕ್ಷಮೆ