ಮೂಡಿಗೆರೆ : ಕಾಡಾನೆ ದಾಳಿ, ಪ್ರಾಣಪಾಯದಿಂದ ಪಾರದ ಎಂಎಸ್ಐಎಲ್ ನೌಕರ
Team Udayavani, Jun 30, 2022, 11:03 PM IST
ಮೂಡಿಗೆರೆ : ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ಕಾಡಾನೆಯೊಂದು ದಾಳಿ ನಡೆಸಿದ್ದು ಅದೃಷ್ಟವಶಾತ್ ಎಂಎಸ್ಐಎಲ್ ನೌಕರ ಪಾರಾದ ಘಟನೆ ಮೂಡಿಗೆರೆ ತಾಲೂಕಿನ ಊರು ಬಗೆ ಸಮೀಪ ಗುರುವಾರ ನಡೆದಿದೆ.
ಎಂಎಸ್ಐಎಲ್ ನೌಕರರಾಗಿರುವ ಪ್ರಭಾಕರ್ ಎಂದಿನಂತೆ ಕೆಲಸ ಬಿಟ್ಟು ಬೈಕಿನಲ್ಲಿ ಬರುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದೆ, ಪರಿಣಾಮ ಗಾಯಗೊಂಡ ಪ್ರಭಾಕರ್ ಅವರಿಗೆ ಸತ್ತಿಗೆ ನಹಳ್ಳಿ ಪ್ರಾಥಮಿಕ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೂಡಿಗೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಬೈಕ್ ಆನೆ ದಾಳಿಗೆ ಸಿಲಿಕಿ ನುಜ್ಜುಗುಜ್ಜಾಗಿದೆ.
ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ಇದರಿಂದ ರೈತಾಪಿ ವರ್ಗ ಹೈರಾಣಾಗಿದ್ದಾರೆ.
ಇದನ್ನೂ ಓದಿ : ಮಂಗಳೂರು : ಮಾನಹಾನಿ ಪ್ರಕರಣಕ್ಕೆ ತಡೆ, ಡಾ.ಕಕ್ಕಿಲ್ಲಾಯಗೆ ನೋಟಿಸ್