ಬ್ಯಾಂಕ್ ಮ್ಯಾನೇಜರ್ ಹೆಸರಿನಲ್ಲಿ ಕರೆ: ನಂಬಿ 1 ಲಕ್ಷ ಕಳೆದುಕೊಂಡ ವ್ಯಕ್ತಿ
Team Udayavani, Sep 1, 2021, 9:51 PM IST
ಕೊಟ್ಟಿಗೆಹಾರ:ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿಕೊಂಡು ಕರೆ ಮಾಡಿದ ವ್ಯಕ್ತಿಗೆ ಓಟಿಪಿ ಸಂಖ್ಯೆ ಹೇಳಿ ವ್ಯಕ್ತಿಯೊಬ್ಬರು ಸುಮಾರು 1 ಲಕ್ಷ ಹಣ ಕಳೆದುಕೊಂಡ ಘಟನೆ ಜಾವಳಿಯಲ್ಲಿ ನಡೆದಿದೆ.
ಜಾವಳಿ ಗ್ರಾಮದ ಕೃಷ್ಣೆಗೌಡ ಎಂಬುವವರ ಮೊಬೈಲ್ ಸಂಖ್ಯೆಗೆ ಕರೆ ಬಂದಿದ್ದು ಕರೆ ಮಾಡಿದ ವ್ಯಕ್ತಿ ಜಾವಳಿಯ ಬ್ಯಾಂಕ್ ವೊಂದರ ಮ್ಯಾನೇಜರ್ ಎಂದು ತಿಳಿಸಿದ್ದು, ಬ್ಯಾಂಕಿನಿಂದ ಎಟಿಎಂ ಕಾರ್ಡ್ ನೀಡಲು ಈಗ ಮೊಬೈಲ್‌ಗೆ ಬಂದಿರುವ ಓಟಿಪಿ ಸಂಖ್ಯೆಯನ್ನು ತಿಳಿಸುವಂತೆ ಹೇಳಿದ್ದು ಕೃಷ್ಣೆಗೌಡ ಅವರು ತಮ್ಮ ಮೊಬೈಲ್‌ಗೆ ಬಂದ ಓಟಿಪಿ ಸಂಖ್ಯೆಯನ್ನು ನೀಡಿದ್ದಾರೆ.
ಇದನ್ನೂ ಓದಿ:ಗಾಂಧಿ-ನೆಹರೂ ಕುಟುಂಬದ ವಿರುದ್ಧ ಆಕ್ಷೇಪಾರ್ಹ ವಿಡಿಯೋ : ನಟಿ ಪಾಯಲ್ ವಿರುದ್ಧ ಪ್ರಕರಣ
ಅದಾಗಿ ಕೆಲ ಸಮಯದಲ್ಲಿ ಕೃಷ್ಣೆಗೌಡ ಅವರ ಬ್ಯಾಂಕ್ ಖಾತೆಯಿಂದ 1 ಲಕ್ಷ ರೂ ಹಣ ಡ್ರಾ ಆಗಿದೆ. ಅನುಮಾನಗೊಂಡ ಕೃಷ್ಣೆಗೌಡ ಅವರು ಕೂಡಲೇ ಜಾವಳಿಯ ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ ತಾವು ಮೋಸ ಹೋಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಕೃಷ್ಣೆಗೌಡ ಅವರು ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.