Udayavni Special

ಸಹಕಾರ ಸಾರಿಗೆ ಬಂದ್‌: ಪ್ರಯಾಣಿಕರು ಕಂಗಾಲು

ಸರ್ಕಾರಿ ನೌಕರರು-ನಾಗರಿಕರು-ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಸ್‌ಗಾಗಿ ಕಾಯುವ ಶಿಕ್ಷೆ

Team Udayavani, Feb 20, 2020, 12:54 PM IST

20-February-10

ಎನ್‌.ಆರ್‌.ಪುರ: ಕಳೆದೆ ಕೆಲವು ದಿನಗಳಿಂದ ಸಹಕಾರ ಸಾರಿಗೆ ಬಸ್‌ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರು ಅಕ್ಷರಷಃ ಕಂಗಾಲಾಗಿದ್ದಾರೆ. ಈ ಭಾಗದಲ್ಲಿ ಯಥೇಚ್ಛವಾಗಿ ಸಹಕಾರ ಸಾರಿಗೆ ಸಂಸ್ಥೆ ಬಸ್‌ಗಳು ಸಂಚರಿಸುತ್ತಿದ್ದವು. ಅನೇಕ ಸರ್ಕಾರಿ ನೌಕರರು, ಶಾಲಾ- ಕಾಲೇಜು ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಬರುತ್ತಿದ್ದ ಈ ಬಸ್‌ಗಳನ್ನು ನಂಬಿಕೊಂಡಿದ್ದರು. ಆದರೆ, ಇದೀಗ ಬಸ್‌ ಗಳಿಲ್ಲದೆ ನೌಕರರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಅಧಿಕಾರಿಗಳು ಕಚೇರಿ ಸಮಯಕ್ಕೆ ಸರಿಯಾಗಿ ಬರಲಾಗುತ್ತಿಲ್ಲ. ಒಂದು ಬಸ್‌ ಬಂದರೆ ಸೀಟುಗಳೇ ಇರುವುದಿಲ್ಲ. ಅದರಲ್ಲೂ ಬಸ್‌ನಲ್ಲಿ ಕಾಲು¤ಳಿತ. ಹಾಲಿ ಸಂಚರಿಸುತ್ತಿರುವ ಐದಾರು ಖಾಸಗಿ ಬಸ್‌ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತವೆ. ಬಸ್‌ನಲ್ಲಿ ತುಂಬಿದ ಪ್ರಯಾಣಿಕರನ್ನು ನೋಡಿಯೇ ಕೆಲ ಪ್ರಯಾಣಿಕರು ಬಸ್‌ ಹತ್ತಲ್ಲ. ಒಟ್ಟಾರೆ ಸಹಕಾರ ಸಾರಿಗೆ ನೌಕರರ ಮುಷ್ಕರ ಜನಸಾಮಾನ್ಯರಿಗೆ, ಅಧಿಕಾರಿಗಳಿಗೆ, ಶಾಲಾ-ಕಾಲೇಜು ವಿದ್ಯಾರ್ಥಿಗಳ ಮೇಲೂ ಪ್ರಭಾವ ಬೀರಿದೆ.

ಬಸ್‌ ನಿಲ್ದಾಣದಲ್ಲಿ ಗಂಟೆಗಟ್ಟಲೇ ಬಸ್‌ ಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದ್ದು, ಮಕ್ಕಳು, ಸಾರ್ವಜನಿಕರು ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಶಿವಮೊಗ್ಗದಿಂದ ಎನ್‌.ಆರ್‌ .ಪುರ ಮಾರ್ಗವಾಗಿ ಶೃಂಗೇರಿಗೆ ಸೋಮವಾರದಿಂದ ಮೂರ್‍ನಾಲ್ಕು ಬಸ್‌ ಗಳು ಸಂಚಾರ ನಡೆಸಿವೆ. ಕೆ.ಎಸ್‌.ಆರ್‌.ಟಿ. ಬಸ್‌ನಲ್ಲಿ ಅಧಿಕ ಹಣ ಪಡೆಯುತ್ತಿದ್ದಾರೆ. ಅವರಿಗೆ ಹೊಸ ದಾರಿಯಾಗಿರುವುದರಿಂದ ಎಲ್ಲಿಗೆ ಎಷ್ಟು ತೆಗೆದುಕೊಳ್ಳಬೇಕೆಂಬುದು ತಿಳಿಯುತ್ತಿಲ್ಲ. ಇದರಿಂದ ಕೆಲ ಪ್ರಯಾಣಿಕರು ಹಾಗೂ ಕೆ.ಎಸ್‌.ಆರ್‌.ಟಿ. ಬಸ್‌ ನಿರ್ವಾಹಕರ ನಡುವೆ ಮಾತಿನ ಚಕಾಮಕಿ ನಡೆದಿವೆ.

ಪ್ರತಿನಿತ್ಯ ಮೂವತ್ತಕ್ಕೂ ಅಧಿಕ ಸಹಕಾರ ಸಾರಿಗೆ ಬಸ್‌ಗಳು ಶಿವಮೊಗ್ಗ, ಎನ್‌.ಆರ್‌.ಪುರ, ಕೊಪ್ಪ, ಶೃಂಗೇರಿ ಮಾರ್ಗವಾಗಿ ಸಂಚರಿಸುತ್ತಿರುವುದರಿಂದ ಪ್ರಯಾಣಿಕರಿಗೆ ಏನೂ ತೊಂದರೆ ಕಾಣುತ್ತಿರಲಿಲ್ಲ. ಬಸ್‌ ಸಮಯಕ್ಕೆ ಸರಿಯಾಗಿ ಹೊಂದಿಕೊಂಡಿದ್ದರು. ಆದರೆ ಇದೀಗ ಏಕಾಏಕಿ ಬಸ್‌ಗಳ ಓಡಾಟವನ್ನು ನಿಲ್ಲಿಸಿರುವುದರಿಂದ ಸಾರ್ವಜನಿಕರಿಗೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿರುವುದರಂತೂ ಸತ್ಯ.

ಬಸ್‌ ಸಂಚಾರ ಸ್ಥಗಿತಗೊಂಡಿದ್ದರಿಂದ ಕಚೇರಿಗೆ ಸಮಯಕ್ಕೆ ಸರಿಯಾಗಿ ಹೋಗಲು ಆಗುತ್ತಿಲ್ಲ. ಸಹಕಾರಿ ಸಾರಿಗೆ ಬಸ್‌ಗಳು ಕಚೇರಿ ಸಮಯಕ್ಕೆ ಸರಿಯಾಗಿದ್ದವು. ಆದರೆ ಇದೀಗ ಬಹಳ ತೊಂದರೆಯಾಗಿದೆ.
ನಾಗರಾಜ್‌ ,
ಸರ್ಕಾರಿ ಅಧಿಕಾರಿ, ಎನ್‌.ಆರ್‌.ಪುರ

ಶಿವಮೊಗ್ಗಕ್ಕೆ ಹೋಗಲು ಬೆ.11ರಿಂದ ಕಾಯುತ್ತಿದ್ದೆ. ಬಂದ ಒಂದೆರಡು ಬಸ್‌ಗಳಲ್ಲಿ ತುಂಬಿದ್ದ ಜನರನ್ನು ನೋಡಿ ಹೋಗಲಿಲ್ಲ. ಮೂರು ಗಂಟೆ ವರೆಗೂ ಕಾದು ಶಿವಮೊಗ್ಗಕ್ಕೆ ತೆರಳಬೇಕಾಯಿತು. ಸಹಕಾರ ಸಾರಿಗೆ ಸಂಸ್ಥೆ ಜನರಿಗೆ ಉತ್ತಮ ಸೇವೆ ನೀಡುತ್ತಿತ್ತು. ಆದರೆ ಇದೀಗ ನಷ್ಟ ಅನುಭವಿಸುತ್ತಿರುವುದು ನಿಜಕ್ಕೂ ಶೋಚನೀಯ.
ಮಂಜುನಾಥ್‌,
ಎನ್‌.ಆರ್‌.ಪುರ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Supreme-Court-Of-India-3-726

 ಹೈಕೋರ್ಟ್ ಗಳಲ್ಲಿ ಪ್ರಕರಣಗಳ ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್‌ ಬಳಸಲು ಸುಪ್ರೀಂ ನಿರ್ದೇಶನ

ಕೋವಿಡ್ ವೈರಸ್ ಮಹಾಮಾರಿಗೆ ಸೋಲುತ್ತಿದೆಯೇಕೆ ಅಮೆರಿಕ ?

ಕೋವಿಡ್ ವೈರಸ್ ಮಹಾಮಾರಿಗೆ ಸೋಲುತ್ತಿದೆಯೇಕೆ ಅಮೆರಿಕ ?

ಮೃತ ವೃದ್ಧನ ಪತ್ನಿ, ಸಹೋದರನಿಗೂ  ಸೋಂಕು ; ಬಾಗಲಕೋಟೆಯಲ್ಲಿ ಸೋಂಕಿತ ಸಂಖ್ಯೆ ಮೂರಕ್ಕೆ ಏರಿಕೆ

ಮೃತ ವೃದ್ಧನ ಪತ್ನಿ, ಸಹೋದರನಿಗೂ  ಸೋಂಕು ; ಬಾಗಲಕೋಟೆಯಲ್ಲಿ ಸೋಂಕಿತ ಸಂಖ್ಯೆ ಮೂರಕ್ಕೆ ಏರಿಕೆ

ಕೋವಿಡ್ 19 ವಿರುದ್ಧ ಹೋರಾಡಲು ಲಾಕ್ ಡೌನ್ ಮುಂದುವರಿಸಿ: ಪ್ರಧಾನಿಗೆ ಸಿಎಂ ಕೆಸಿಆರ್

ಕೋವಿಡ್ 19 ವಿರುದ್ಧ ಹೋರಾಡಲು ಲಾಕ್ ಡೌನ್ ಮುಂದುವರಿಸಿ: ಪ್ರಧಾನಿಗೆ ಸಿಎಂ ಕೆಸಿಆರ್

ವೃದ್ಧನ ಕುಟುಂಬಕ್ಕೆ ಕೋವಿಡ್ ಸೋಂಕಿಗೆ ಕಲಬುರಗಿಯ ನಂಟು ; ಡಿಸಿಎಂ ಕಾರಜೋಳ ಸಂಶಯ

ವೃದ್ಧನ ಕುಟುಂಬಕ್ಕೆ ಕೋವಿಡ್ ಸೋಂಕಿಗೆ ಕಲಬುರಗಿಯ ನಂಟು ; ಡಿಸಿಎಂ ಕಾರಜೋಳ ಸಂಶಯ

ಗುಡ್ಡದಲ್ಲಿ ಅವಿತು ಕುಳಿತಿದ್ದ ಶಂಕಿತ ತಬ್ಲಿಘಿಗಳು ಪರಾರಿ: ಸಿಕ್ಕಿದ ಬ್ಯಾಗ್ ಸುಟ್ಟ ಪೊಲೀಸರು

ಗುಡ್ಡದಲ್ಲಿ ಅವಿತು ಕುಳಿತಿದ್ದ ಶಂಕಿತ ತಬ್ಲಿಘಿಗಳು ಪರಾರಿ: ಸಿಕ್ಕಿದ ಬ್ಯಾಗ್ ಸುಟ್ಟ ಪೊಲೀಸರು

ಚೀನದಲ್ಲಿ ಮತ್ತೆ 30 ಕೋವಿಡ್ 19 ಸೋಂಕು ಕೇಸ್‌

ಚೀನದಲ್ಲಿ ಮತ್ತೆ 30 ಕೋವಿಡ್ 19 ಸೋಂಕು ಕೇಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಂಚಾರಿ ವಾಹನದಲ್ಲಿ ಹಣ್ಣು-ತರಕಾರಿ ಮಾರಾಟ

ಸಂಚಾರಿ ವಾಹನದಲ್ಲಿ ಹಣ್ಣು-ತರಕಾರಿ ಮಾರಾಟ

ಜಿಲ್ಲೆಯಲ್ಲಿಲ್ಲ ಕೊರೊನಾ ಪ್ರಕರಣ: ಸಿ.ಟಿ. ರವಿ

ಜಿಲ್ಲೆಯಲ್ಲಿಲ್ಲ ಕೋವಿಡ್ 19 ಪ್ರಕರಣ: ಸಿ.ಟಿ. ರವಿ

ನಿಜಾಮುದ್ದೀನ್ ತಬ್ಲಿಘಿ ಹಿಂದೆ ಜಿಹಾದಿ ವಾಸನೆ ಬಡಿಯುತ್ತಿದೆ: ಶೋಭಾ ಕರಂದ್ಲಾಜೆ ಆರೋಪ

ನಿಜಾಮುದ್ದೀನ್ ತಬ್ಲಿಘಿ ಹಿಂದೆ ಜಿಹಾದಿ ವಾಸನೆ ಬಡಿಯುತ್ತಿದೆ: ಶೋಭಾ ಕರಂದ್ಲಾಜೆ ಆರೋಪ

cm-tdy-1

ಇನ್ನೂ ಆರಂಭವಾಗದ ಪಡಿತರ ವಿತರಣೆ

cm-tdy-1

ಸಾಮಾಜಿಕ ಅಂತರ ಕಾಯ್ದುಕೊಳ್ಳಿ: ರವಿ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

Supreme-Court-Of-India-3-726

 ಹೈಕೋರ್ಟ್ ಗಳಲ್ಲಿ ಪ್ರಕರಣಗಳ ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್‌ ಬಳಸಲು ಸುಪ್ರೀಂ ನಿರ್ದೇಶನ

14 ತಿಂಗಳ ಮಗುವಿಗೆ ಕೋವಿಡ್ 19 ಸೋಂಕು

14 ತಿಂಗಳ ಮಗುವಿಗೆ ಕೋವಿಡ್ 19 ಸೋಂಕು

ಕೋವಿಡ್ ಕಳವಳ: ಏಕತಾ ಪ್ರತಿಮೆಯನ್ನೇ ಹರಾಜಿಗಿಟ್ಟ OLX

ಕೋವಿಡ್ ಕಳವಳ: ಏಕತಾ ಪ್ರತಿಮೆಯನ್ನೇ ಹರಾಜಿಗಿಟ್ಟ OLX!