ಒಂದೇ ದಿನ ಐದು ಕಡೆ ಅಗ್ನಿ ಅವಘಡ

Team Udayavani, Mar 9, 2019, 10:10 AM IST

chikk-2.jpg

ಕಡೂರು: ಶುಕ್ರವಾರ ತಾಲೂಕಿನಲ್ಲಿ 5 ಅಗ್ನಿ ಅವಘಡ ಪ್ರಕರಣಗಳು ದಾಖಲಾಗಿದೆ ಎಂದು ತಿಳಿದುಬಂದಿದೆ. ಬಾಬಾ ಎಸ್ಟೇಟ್‌ನಲ್ಲಿ ಶುಕ್ರವಾರ ನಡೆದ ಅಗ್ನಿ ಆಕಸ್ಮಿಕದಿಂದ ತೆಂಗಿನ ತೋಟ, ವಾಸದ ಮನೆ, ಖಾಲಿ ಇದ್ದ 3 ಕೋಳಿ ಫಾರಂ, 12 ಸಾಗುವಾನಿ ಮರ, 6 ತೆಂಗಿನ ಮರ, 8 ಬೇವಿನ ಮರ ಸಂಪೂರ್ಣ ಸುಟ್ಟುಹೋಗಿವೆ ಎಂದು ಮಾಲೀಕ ಶಮೀರ್‌ ಹುಸೇನ್‌ ತಿಳಿಸಿದರು. ಕಲ್ಲಾಪುರದಲ್ಲಿ 10 ರಾಗಿ ಹುಲ್ಲಿನ ಬಣವೆ, ಪಾದದ ಮನೆ, ಕಬ್ಬಿನ ಗದ್ದೆ, ಗೆದ್ದೆಹಳ್ಳಿಯ ಅಡಿಕೆ ತೋಟ ದೋಗಿ ಹಳ್ಳಿಯ ತೆಂಗಿನ ತೋಟ,ನೀಲನಹಳ್ಳಿಯ ತೋಟ, ಸೋಮನಹಳ್ಳಿ ತಾಂಡ್ಯದ ಬೇಲಿ, ಬಿಸಿಲೆರೆಯ ಹುಲ್ಲಿನ ಬಣವೆಗಳಿಗೆ ಹತ್ತಿದ ಬೆಂಕಿಯನ್ನು ಅಗ್ನಿಶಾಮಕ ದಳದ ಅಧಿಕಾರಿಗಳು ನಂದಿಸಿದ್ದಾರೆ.

ತಾಲೂಕಿನ ನಾಗಗೊಂಡನಹಳ್ಳಿಯಲ್ಲಿ ಕಳೆದ 10 ದಿನಗಳಿಂದ ಕಿಡಿಗೇಡಿಗಳು ದ್ವೇಷಕ್ಕೆ ಹಚ್ಚುತ್ತಿರುವ ಬೆಂಕಿಗೆ ಗೋವಿಂದಪ್ಪನವರ 10 ಟ್ರ್ಯಾಕ್ಟರ್‌ ತೆನೆ ಇಲ್ಲದ ರಾಗಿಹುಲ್ಲು, ಗಿರಿಜಮ್ಮ ರಾಜಪ್ಪ ಅವರಿಗೆ ಸೇರಿದ 20 ಟ್ರ್ಯಾಕ್ಟರ್‌ ಹುಲ್ಲಿನ ಬಣವೆಗೆ ರಂಗಪ್ಪನವರ ರಾಗಿಹುಲ್ಲಿನ ಬಣವೆ, ತಿಮ್ಮಪ್ಪನವರಿಗೆ ಸೇರಿದ ಸುಮಾರು 7 ಟ್ರ್ಯಾಕ್ಟರ್‌ ಹುಲ್ಲು ಭಸ್ಮವಾಗಿದೆ. ಎನ್‌.ಜಿ.ರಂಗನಾಥ್‌ ಅವರಿಗೆ ಸೇರಿದ 10 ಟ್ರ್ಯಾಕ್ಟರ್‌ ರಾಗಿಹುಲ್ಲಿಗೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದಾರೆ. ಇದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಅವರವರ ಹುಲ್ಲಿನ ಬಣವೆಗಳನ್ನು ರಾತ್ರಿ ಹಗಲೆನ್ನದೆ ಕಾಯುತ್ತಿರುವುದಾಗಿ ರಂಗಪ್ಪ ತಿಳಿಸಿದರು. ಈಗಾಗಲೇ ಗ್ರಾಮದಲ್ಲಿ ನಡೆದಿರುವ ಬೆಂಕಿ ಅವಘಡಗಳ ಕುರಿತು ಯಗಟಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.  

ಕಡೂರು ತಾಲೂಕಿನಲ್ಲಿ ಎರಡು ಅಗ್ನಿ ಶಾಮಕ ವಾಹನಗಳಿವೆ. ಆದರೆ ಅದರಲ್ಲಿ ಒಂದು ದುರಸ್ಥಿಗೆ ನಿಂತಿದೆ. ಬೇರೆಡೆಯಿಂದ ಇನ್ನೊಂದು ವಾಹನ ತರಿಸಿಕೊಳ್ಳಲಾಗಿದೆ. ಕಡೂರು ಠಾಣೆಗೆ ಹೊಸ ವಾಹನದ ಅವಶ್ಯಕತೆ ಇದೆ. ಸಿಬ್ಬಂದಿ ಕೊರತೆಯೂ ಇದೆ. ಈಗಾಗಲೇ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಶಶಿಧರ್‌ ಅ‌ವರಿಗೆ ಮನವಿ ಮಾಡಲಾಗಿದೆ
ಬಸವರಾಜಪ್ಪ , ಅಗ್ನಿ ಶಾಮಕ ದಳದ ಅಧಿಕಾರಿ

ಟಾಪ್ ನ್ಯೂಸ್

Tollywood: ಈ ತಿಂಗಳಿನಲ್ಲಿ ಸಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

B Y Vijayendra: ಕಾಂಗ್ರೆಸ್‌ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?

B Y Vijayendra: ಕಾಂಗ್ರೆಸ್‌ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewqewq

Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!

Tollywood: ಈ ತಿಂಗಳಿನಲ್ಲಿ ಸಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

15-fusion

Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.