Udayavni Special

ಹುಲಿ ಯೋಜನೆಗೆ ವಿರೋಧ


Team Udayavani, Dec 4, 2020, 2:31 PM IST

ಹುಲಿ ಯೋಜನೆಗೆ ವಿರೋಧ

ಬಾಳೆಹೊನ್ನೂರು: ಹುಲಿ ಯೋಜನೆ, ಕಸ್ತೂರಿ ರಂಗನ್‌ ವರದಿ, ಪರಿಸರ ಸೂಕ್ಷ್ಮ ವಲಯ ಹಾಗೂ ಬಫರ್‌ಝೋನ್‌ ಯೋಜನೆಗಳನ್ನು ರದ್ದುಗೊಳಿಸದಿದ್ದಲ್ಲಿ ಮುಂಬರುವ ಗ್ರಾಪಂ ಚುನಾವಣೆಯನ್ನು ಸಂಪೂರ್ಣ ಬಹಿಷ್ಕರಿಸುವುದಾಗಿ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ತೀರ್ಮಾ ನಿಸಿದ್ದೇವೆ ಎಂದು ಮುಖಂಡರು ತಿಳಿಸಿದರು.

ಸಮೀಪದ ಖಾಂಡ್ಯ ಹೋಬಳಿ ದೇವದಾನ ಗ್ರಾಪಂ ವ್ಯಾಪ್ತಿಯ ಸಂಗಮೇಶ್ವಪೇಟೆಯಲ್ಲಿ ಖಾಂಡ್ಯ ನಾಗರಿಕ ರಕ್ಷಣಾ ವೇದಿಕೆ ವತಿಯಿಂದ ಸಂಗಮೇಶ್ವರಪೇಟೆ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಚುನಾವಣಾಬಹಿಷ್ಕಾರ ಕುರಿತ ಪೂರ್ವಬಾವಿ ಸಭೆಯಲ್ಲಿ ಕಾಂಗ್ರೆಸ್‌ಹೋಬಳಿ ಅಧ್ಯಕ್ಷ ಬಿ.ಎನ್‌. ಸೋಮೇಶ್‌ ಮಾತನಾಡಿ, ಮಲೆನಾಡಿನ ಜನತೆಗೆ ಮರಣ ಶಾಸನವಾದ ಈಯೋಜನೆಗಳನ್ನು ಸರಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿ ಸರಕಾರಕ್ಕೆ ಮನವಿ ಸಲ್ಲಿಸಿದರು.

ಖಾಂಡ್ಯ ಹೋಬಳಿ ಬಿಜೆಪಿ ಅಧ್ಯಕ್ಷ ಎಚ್‌.ಎಸ್‌. ರವಿ ಮಾತನಾಡಿ, ಕೋವಿಡ್‌ ಲಾಕ್‌ ಡೌನ್‌ ವೇಳೆಎನ್‌ಜಿಒಗಳು ಸುಪ್ರೀಂ ಕೋರ್ಟಿಗೆ ಆಕ್ಷೇಪ ಸಲ್ಲಿಸಿದ ಪರಿಣಾಮ ಈ ಸಮಸ್ಯೆ ಉಂಟಾಗಿದೆ. ಈ ಹಿಂದೆ ಗೋವಾ ಫೌಂಡೇಷನ್‌ ಯೋಜನೆಗಳ ಬಗ್ಗೆ ವರದಿಸಲ್ಲಿಸಿದ್ದು ಮಲೆನಾಡಿಗರು ಈ ವರದಿಯಿಂದ ಆತಂಕದ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಬದುಕಲು ಅವಕಾಶವಿಲ್ಲದಮೇಲೆ ಚುನಾವಣೆಯಾದರೂ ಯಾರಿಗೆ ಬೇಕಾಗಿದೆ ಎಂದು ಪ್ರಶ್ನಿಸಿದರು.

ಖಾಂಡ್ಯ ಹೋಬಳಿ ಜೆಡಿಎಸ್‌ ಅಧ್ಯಕ್ಷ ಜಯರಾಮ್‌ ಮಾತನಾಡಿ, ಅಧಿಕಾರಿಗಳು ವರದಿ ಸಲ್ಲಿಸುವಾಗ ಜನಪ್ರತಿನಿಧಿ ಗಳ ಗಮನಕ್ಕೆ ತಾರದೆ ಗ್ರಾಪಂಗಳಲ್ಲಿ ಒಪ್ಪಿಗೆ ಪತ್ರ ಗೌಪ್ಯವಾಗಿ ಕೊಡಿಸಿದ್ದಾರೆ. ಈ ಹಿನ್ನೆಲೆಯಲ್ಲಿಈ ಹಿಂದೆ 1.6ಕಿ.ಮೀ ರಿಂದ 12 ಕಿ.ಮೀ ವ್ಯಾಪ್ತಿಗೆ ಬಫರ್‌ ಝೋನ್‌ ಹಾಗೂ ಪರಿಸರ ಸೂಕ್ಷ್ಮವಲಯವೆಂದು ಸೇರ್ಪಡೆ ಮಾಡಿದ್ದಾರೆ. ಸರಕಾರವು ಈ ಯೋಜನೆಯನ್ನು ಹಿಂಪಡೆಯುವವರೆಗೂ ಹೋರಾಟ ನಡೆಸುವುದಾಗಿ ತಿಳಿಸಿದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್‌ ಕಾಂತರಾಜ್‌ಮಾತನಾಡಿ, ಗ್ರಾಮಸ್ಥರ ಮನವಿಯನ್ನು ತುರ್ತಾಗಿ ಸರಕಾರಕ್ಕೆ ಸಲ್ಲಿಸುವುದಾಗಿ ತಿಳಿಸಿದರು. ತಾಪಂ ಇಒ ರೇವಣ್ಣ, ಉಪ ತಹಶೀಲ್ದಾರ್‌ ಸುಜಾತ, ರಾಜಸ್ವ ನಿರೀಕ್ಷಕ ಸಂತೋಷ್‌ ಮತ್ತಿತರರು ಪೂರ್ವಭಾವಿ ಸಭೆಯಲ್ಲಿ ಇದ್ದರು. ಬಾಳೆಹೊನ್ನೂರು ಹೋಬಳಿಯಲ್ಲಿ ಗ್ರಾಪಂ ಚುನಾವಣೆ ಕುರಿತು ಸರ್ವ ಪಕ್ಷಗಳ ಪೂರ್ವಭಾವಿ ಸಭೆಯು ಶ್ರೀ ವಿದ್ಯಾಗಣಪತಿ ಸಮುದಾಯ ಭವನದಲ್ಲಿಡಿ.4ರ ಸಂಜೆ 4ಗಂಟೆಗೆ ನಡೆಯಲಿದೆ ಎಂದು ಕಾಂಗ್ರೆಸ್‌ ಹೋಬಳಿ ಅಧ್ಯಕ್ಷ ಮಹಮ್ಮದ್‌ ಹನೀಫ್‌ ತಿಳಿಸಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಅಂತರ್‌ರಾಜ್ಯ ಕಾರ್‌ ಲೋನ್‌ ಜಾಲ ಬೇಧಿಸಿದ ಪೊಲೀಸ್‌

ಅಂತರ್‌ರಾಜ್ಯ ಕಾರ್‌ ಲೋನ್‌ ಜಾಲ ಬೇಧಿಸಿದ ಪೊಲೀಸ್‌

Untitled-1

ಬಿಬಿಎಂಪಿ ಆಯುಕ್ತರಿಗೆ ಅತ್ಯುತ್ತಮ ಚುನಾವಣಾಧಿಕಾರಿ ಪ್ರಶಸ್ತಿ  

Untitled-1

ಅಮೆರಿಕಾದ 46 ನೇ ಅಧ್ಯಕ್ಷರಾಗಿ ಜೋ ಬೈಡೆನ್ ಪದಗ್ರಹಣ: ಉಪಾಧ್ಯಕ್ಷರಾದ ಕಮಲಾ ಹ್ಯಾರಿಸ್‌

ಕಾಂಗ್ರೆಸ್ ಶಾಸಕಿ ಕೀಳುಮಟ್ಟದ ವರ್ತನೆ ಖಂಡನೀಯ – ಕ್ಯಾಪ್ಟನ್ ಕಾರ್ಣಿಕ್ ಖಂಡನೆ

ಕಾಂಗ್ರೆಸ್ ಶಾಸಕಿ ಕೀಳುಮಟ್ಟದ ವರ್ತನೆ ಖಂಡನೀಯ – ಕ್ಯಾಪ್ಟನ್ ಕಾರ್ಣಿಕ್ ಖಂಡನೆ

Amazon Republic Day sale offers: Discounts on Apple iPhones, Xiaomi, OnePlus, Samsung smartphones

‘ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್’ ಆರಂಭ: ಸ್ಮಾರ್ಟ್ ಪೋನ್ ಗಳಿಗೆ 40% ಡಿಸ್ಕೌಂಟ್ !

POLICE

ಮoಡ್ಯ: ಸ್ಫೋಟಕ ಸಾಗಿಸುತ್ತಿದ್ದ ಇಬ್ಬರ ಬಂಧನ

Untitled-1

ಸಚಿವ ಕೋಟ ವಿರುದ್ಧ ಕಿಡಿಗೇಡಿಗಳ ಅಂತರ್ಜಾಲ ಅಪಪ್ರಚಾರಕ್ಕೆ ವ್ಯಾಪಕ ಖಂಡನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mahendranath speech about govt and former

ಕೃಷಿಕ ಸಮಾಜ ರೈತರು- ಸರ್ಕಾರದ ನಡುವಿನ ಸೇತುವಾಗಲಿ: ಮಹೇಂದ್ರನಾಥ್‌

Creating  traffic  by private buses

ಖಾಸಗಿ ಬಸ್‌ಗಳಿಂದ ಸಂಚಾರ ದಟ್ಟಣೆ ಸೃಷ್ಟಿ

Venugopalakrishnaswamy Chariot Festival

ವೇಣುಗೋಪಾಲಕೃಷ್ಣಸ್ವಾಮಿ ರಥೋತ್ಸವ

Rainfall: Insist on appropriate solution

ಮಳೆಹಾನಿ: ಸೂಕ್ತ ಪರಿಹಾರಕ್ಕೆ ಒತ್ತಾಯ

ಹರಕೆ ತೀರಿಸಲು ಸರಕಾರದ ಮೊರೆ ಹೋದ ಶಾಸಕ!

ಹರಕೆ ತೀರಿಸಲು ಸರಕಾರದ ಮೊರೆ ಹೋದ ಶಾಸಕ!

MUST WATCH

udayavani youtube

ಸರ್ವಿಸ್‌ ಆನ್‌ ವೀಲ್ಸ್‌ : ಮನೆ ಬಾಗಿಲಿಗೆ ಸರಕಾರಿ ಸೇವೆ

udayavani youtube

ಗುಜರಿ ವಸ್ತುಗಳನ್ನು ಬಳಸಿ ವಾಹನವನ್ನು ತಯಾರಿಸಿದ ಉಡುಪಿಯ ಯುವಕ

udayavani youtube

ಕೊಣಾಜೆ ಭಜನಾ ಮಂದಿರದಲ್ಲಿ ಕುಕೃತ್ಯ ಎಸಗಿದ ದುಷ್ಕರ್ಮಿಗಳು: ಭಗವಧ್ವಜಕ್ಕೆ ಅವಮಾನ!

udayavani youtube

ಕ್ಷಮಿಸುವುದನ್ನು ಕಲಿಸುವುದು ಹೇಗೆ?

udayavani youtube

ಅರ್ನಾಬ್- ಗುಪ್ತಾ ವಾಟ್ಸ್ ಆ್ಯಪ್ ಚಾಟ್ ಲೀಕ್!! ಹೊಸಾ ಕಥೆ, ತುಂಬಾ ವ್ಯಥೆ…

ಹೊಸ ಸೇರ್ಪಡೆ

ಷೇರು ಪೇಟೆಗೆ ಅಮೆರಿಕದ ಖದರ್‌

ಷೇರು ಪೇಟೆಗೆ ಅಮೆರಿಕದ ಖದರ್‌

ಪಶುವೈದ್ಯಕೀಯ ಪಾಲಿ ಕ್ಲಿನಿಕ್‌ ನಿರ್ಮಾಣ ತಿಂಗಳೊಳಗೆ ಕಾಮಗಾರಿ ಪೂರ್ಣ

ಪಶುವೈದ್ಯಕೀಯ ಪಾಲಿ ಕ್ಲಿನಿಕ್‌ ನಿರ್ಮಾಣ ತಿಂಗಳೊಳಗೆ ಕಾಮಗಾರಿ ಪೂರ್ಣ

ಪಾಲಿಕೆ ಬಜೆಟ್‌: “ನನ್ನ ನಗರ ನನ್ನ ಬಜೆಟ್‌’ ಆನ್‌ಲೈನ್‌ ಅಭಿಯಾನ

ಪಾಲಿಕೆ ಬಜೆಟ್‌: “ನನ್ನ ನಗರ ನನ್ನ ಬಜೆಟ್‌’ ಆನ್‌ಲೈನ್‌ ಅಭಿಯಾನ

“ಅತಿಥಿ’ ಉಪನ್ಯಾಸಕರಿಗೆ “ಆಹ್ವಾನ’ ನೀಡದ ಸರಕಾರ !

“ಅತಿಥಿ’ ಉಪನ್ಯಾಸಕರಿಗೆ “ಆಹ್ವಾನ’ ನೀಡದ ಸರಕಾರ !

‌ಮಾಹಿತಿ ಸೋರಿಕೆ ಗಂಭೀರದ್ದು

‌ಮಾಹಿತಿ ಸೋರಿಕೆ ಗಂಭೀರದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.