9 ವರ್ಷದಿಂದ ಶಬರಿಮಲೆಗೆ ಪಾದಯಾತ್ರೆ!
Team Udayavani, Jan 9, 2021, 7:00 AM IST
ಕೊಟ್ಟಿಗೆಹಾರ: ಶಿವಮೊಗ್ಗದ ಅಯ್ಯಪ್ಪ ಮಾಲಾಧಾರಿ ಸುಧೀಶ್ ಅವರು ಕಳೆದ 9 ವರ್ಷಗಳಿಂದ ಶಬರಿಮಲೆಗೆ ಪಾದಯಾತ್ರೆ ಮಾಡುತ್ತಿದ್ದು, ಈ ಬಾರಿಯ ಯಾತ್ರೆ ಮಧ್ಯೆ ಶುಕ್ರವಾರ ಅವರು ಕೊಟ್ಟಿಗೆಹಾರದಲ್ಲಿ ಪತ್ರಿಕೆಗೆ ಮಾತಿಗೆ ಸಿಕ್ಕಿದರು. ನ. 21ರಂದು ಪಾದಯಾತ್ರೆ ಪ್ರಾರಂಭಿಸಿದ್ದು ಸವದತ್ತಿ, ಮುರುಡೇಶ್ವರ, ಗೋಕರ್ಣ, ಆನೆಗುಡ್ಡೆ, ಧರ್ಮಸ್ಥಳ, ಕಟೀಲು ಕ್ಷೇತ್ರಗಳ ದರ್ಶನ ಮಾಡಿಕೊಂಡು ಕೊಟ್ಟಿಗೆಹಾರ ಮೂಲಕ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಸಾಗುತ್ತಿದ್ದೇನೆ ಎಂದು ಹೇಳಿದರು. ಹೊರನಾಡಿನಲ್ಲಿ ದರ್ಶನ ಮುಗಿಸಿ ತರೀಕೆರೆ, ಚನ್ನರಾಯಪಟ್ಟಣ ಮೂಲಕ ಕೇರಳ ಪ್ರವೇಶಿಸಿ ಫೆಬ್ರವರಿಯಲ್ಲಿ ಶಬರಿಮಲೆಗೆ ತಲುಪುತ್ತೇನೆ ಎಂದಿದ್ದಾರೆ.
ಹೊರನಾಡು ದೇಗುಲದಿಂದ ದೇಣಿಗೆ :
ಚಿಕ್ಕಮಗಳೂರು: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಶ್ರೀರಾಮ ಮಂದಿರಕ್ಕೆ ಹೊರನಾಡಿನ ಆದಿಶಕ್ತಾéತ್ಮಕ ಶ್ರೀಅನ್ನಪೂರ್ಣೆàಶ್ವರಿ ಅಮ್ಮನವರ ದೇವಾಲಯದಿಂದ 7,77,777 ರೂ. ದೇಣಿಗೆ ನೀಡಲಾಗಿದೆ. ಧರ್ಮಕರ್ತ ಭೀಮೇಶ್ವರ ಜೋಷಿ ಅವರು ಚೆಕ್ ಅನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ. ಎನ್. ಜೀವರಾಜ್ ಅವರಿಗೆ ಹಸ್ತಾಂತರಿಸಿದರು.