ಫೋಟೋಗ್ರಫಿಗೆ ಕಲಾತ್ಮ ಕತೆ ಅಗತ್ಯ


Team Udayavani, Dec 14, 2020, 7:07 PM IST

ಫೋಟೋಗ್ರಫಿಗೆ ಕಲಾತ್ಮ ಕತೆ ಅಗತ್ಯ

ಕೊಟ್ಟಿಗೆಹಾರ: ಛಾಯಾಗ್ರಾಹಕನಿಗೆ ತಾಂತ್ರಿಕ ಜ್ಞಾನದ ಜೊತೆಗೆ ಕಲಾತ್ಮಕತೆ ಇದ್ದಾಗ ಒಂದು ಪರಿಪೂರ್ಣ ಛಾಯಾಚಿತ್ರ ಮೂಡಿ ಬರಲು ಸಾಧ್ಯ ಎಂದು ಖ್ಯಾತಚಿತ್ರ ಕಲಾವಿದ ಸುರೇಶ್‌ಚಂದ್ರ ದತ್ತ ಹೇಳಿದರು.

ಕೊಟ್ಟಿಗೆಹಾರದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಹಾಗೂ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಫೋಟೋಗ್ರಫಿ ಸೊಸೈಟಿ ವತಿಯಿಂದ ನಡೆದ ಎರಡು ದಿನಗಳ ಫೋಟೋಗ್ರಫಿ ಕಾರ್ಯಾಗಾರಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೋರ್ವ ವ್ಯಕ್ತಿಯು ಆಸಕ್ತಿಯಿಂದ ತೆಗೆದ ಚಿತ್ರವು ಆಳವಾಗಿ ಕಥೆ ಹೇಳುವಂತಿರಬೇಕು. ತೇಜಸ್ವಿ ಅವರು ಅಪಾರ ತಾಳ್ಮೆ ಹಾಗೂ ಶ್ರದ್ದೆಯಿಂದ ಹಕ್ಕಿಗಳ ಚಿತ್ರಗಳನ್ನು ತೆಗೆಯುತ್ತಿದ್ದರು. ಇಂತಹ ಕ್ರೀಯಾಶೀಲತೆಯಮನೋಭಾವ ಮೈಗೂಡಿಸಿಕೊಂಡು ಉತ್ತಮ ಛಾಯಾಗ್ರಾಹಕರಾಗಲು ಸಾಧ್ಯ ಎಂದರು.

ಮೂಡಬಿದಿರೆಯ ಖ್ಯಾತ ಛಾಯಾಗ್ರಾಹಕ ಡಾ| ಕೃಷ್ಣಮೋಹನ್‌ ಮಾತನಾಡಿ, ಆಸಕ್ತಿ ಹುಡುಕಾಟವು ನಮ್ಮಲ್ಲಿದ್ದರೆ ಎಂತಹ ಚಿತ್ರಗಳನ್ನಾದರೂ ನಾವು ತೆಗೆಯಬಹುದು. ನಮ್ಮ ಸುತ್ತಮುತ್ತಲಿನ ಪರಿಸರಗಳೇ ನಮಗೆ ಸ್ಫೂರ್ತಿದಾಯಕ ತಾಣಗಳಾಗಿವೆ ಎಂದರು.

ಚಿಕ್ಕಮಗಳೂರು ಸಹಮತ ಸಂಸ್ಥೆಯ ಸ್ಥಾಪಕ ಐವನ್‌ ಡಿಸಿಲ್ವ, ಪೂರ್ಣಚಂದ್ರ ಪ್ರತಿಷ್ಠಾನದನಿರ್ದೇಶಕ ಬಾಪು ದಿನೇಶ್‌, ಸಾಹಿತಿ ಪೂರ್ಣೇಶ್‌ ಮತ್ತಾವರ, ಅತುಲ್‌ ರಾವ್‌, ಕುಲದೀಪ್‌ ಮಾಕೋನಹಳ್ಳಿ, ಉದಯಪ್ರಸಾದ್‌, ಪತ್ರಕರ್ತ ಸತೀಶ್‌, ನವೀನ್‌, ಆಕರ್ಷ್‌ ಇದ್ದರು.

ಫೋಟೋಗ್ರಫಿ ಕಾರ್ಯಾಗಾರದ ಎರಡನೇ ದಿನ ಸಮಾರೋಪ ಸಮಾರಂಭದಲ್ಲಿ ಲೇಖಕ ಹಾಗೂ ತೇಜಸ್ವಿ ಪ್ರತಿಷ್ಠಾನದ ಸದಸ್ಯ ಪ್ರದೀಪ್‌ ಕೆಂಜಿಗೆ ಮಾತನಾಡಿ, ತೇಜಸ್ವಿ ಅವರ ಕರ್ವಾಲೊ ಕಾದಂಬರಿಯಲ್ಲಿ ಒಂದು ದೃಶ್ಯದಲ್ಲಿ ಕೊಳ್ಳವೊಂದರ ಹಿನ್ನಲೆಯಲ್ಲಿ ಹಠಾತನೇ ಕಾಣಿಸಿಕೊಳ್ಳುವ ಮಿಂಚುಳ್ಳಿಯೊಂದರ ವರ್ಣನೆಯನ್ನು ಪಂಚಭೂತಗಳನ್ನು ಸಮೀಕರಿಸಿ ಅದ್ಬುತವಾಗಿ ಕಟ್ಟಿಕೊಟ್ಟಿದ್ದಾರೆ. ಆದರೆ ಛಾಯಾಗ್ರಾಹಕರೂ ಆಗಿದ್ದ ತೇಜಸ್ವಿ ಅವರು ಆ ದೃಶ್ಯವನ್ನು ಕ್ಯಾಮರಾ ಕಣ್ಣಿನಲ್ಲಿ ಕಟ್ಟಿಕೊಡಲು ಪ್ರಯತ್ನಿಸಿರಬಹುದು. ಆದರೆ ವಿಜ್ಞಾನ, ತಂತ್ರಜ್ಞಾನದ ಮಿತಿಯನ್ನು ಅರಿತು ಸಾಹಿತ್ಯದಲ್ಲಿ ಆ ದೃಶ್ಯವನ್ನು ಕಟ್ಟಿಕೊಟ್ಟಿರಬಹುದು ಎಂಬುದು ನನ್ನ ಅನಿಸಿಕೆಯಾಗಿದೆ ಎಂದರು. ಚಿಕ್ಕಮಗಳೂರು ಸಹಮತ ಸಂಸ್ಥೆಯ ಸ್ಥಾಪಕ ಐವನ್‌ ಡಿಸಿಲ್ವ ಮಾತನಾಡಿ, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಫೋಟೋಗ್ರಫಿ ಸೊಸೈಟಿ ವತಿಯಿಂದ ನಡೆಯುವ ಮೂರನೇ ಕಾರ್ಯಕ್ರಮ ಇದಾಗಿದೆ. ಮುಂದಿನ ದಿನಗಳಲ್ಲಿ ಪ್ರೇಕ್ಷಣಿಯ ಸ್ಥಳಗಳಿಗೆ ಬೇಟಿ ನೀಡಿ ಅಲ್ಲಿಯೇ ವಿಷಯತಜ್ಞರನ್ನು ಕರೆಸಿ ಕಾರ್ಯಾಗಾರ ನಡೆಸಲಾಗುವುದು ಎಂದರು.

ಟಾಪ್ ನ್ಯೂಸ್

owaisi

ಪಿಎಫ್ ಐ ಕಾರ್ಯ ವಿಧಾನವನ್ನು ಯಾವಾಗಲೂ ವಿರೋಧಿಸುತ್ತಿದ್ದೆ: ಓವೈಸಿ

“ತೋತಾಪುರಿ” ಮೇಲೆ ಸುಮನ ಗಮನ!

“ತೋತಾಪುರಿ” ಮೇಲೆ ಸುಮನ ಗಮನ!

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಶೇ.4ರಷ್ಟು ಏರಿಕೆ; ಕೇಂದ್ರ

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಶೇ.4ರಷ್ಟು ಏರಿಕೆ; ಕೇಂದ್ರ

ಸಂಚಾರ ಪೊಲೀಸರಿಗೆ ಪ್ರತಿದಿನ 40 ಪ್ರಕರಣ ದಾಖಲು ಟಾರ್ಗೆಟ್‌?

ಸಂಚಾರ ಪೊಲೀಸರಿಗೆ ಪ್ರತಿದಿನ 40 ಪ್ರಕರಣ ದಾಖಲು ಟಾರ್ಗೆಟ್‌?

firee

ಚೀನದ ರೆಸ್ಟೋರೆಂಟ್‌ನಲ್ಲಿ ಬೆಂಕಿ ಅವಘಡ: ಕನಿಷ್ಠ 17 ಜನ ಸಾವು

ಮಾಲ್‌ ನಲ್ಲಿ ಸಿನಿಮಾ ಪ್ರಚಾರ: ಜನಸಂದಣಿಯಲ್ಲಿ ಖ್ಯಾತ ನಟಿಯರಿಗೆ ದೈಹಿಕ ಕಿರುಕುಳ

ಮಾಲ್‌ ನಲ್ಲಿ ಸಿನಿಮಾ ಪ್ರಚಾರ: ಜನಸಂದಣಿಯಲ್ಲಿ ಖ್ಯಾತ ನಟಿಯರಿಗೆ ದೈಹಿಕ ಕಿರುಕುಳ

1-dsfsdf

ಹಿಮಾಚಲದಲ್ಲಿ ಕಾಂಗ್ರೆಸ್ ಗೆ ಭಾರಿ ಶಾಕ್: ಕಾರ್ಯಾಧ್ಯಕ್ಷ ಮಹಾಜನ್ ಬಿಜೆಪಿಗೆ ಸೇರ್ಪಡೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದ್ವಾರಕಾ – ಬದರಿ ಶ್ರೀಗಳಿಗೆ ಅನುಗ್ರಹ: ಶ್ರೀಗಳಿಗೆ ದಂಡ – ಕಮಂಡಲ ನೀಡಿದ ಶೃಂಗೇರಿ ಶ್ರೀಗಳು

ದ್ವಾರಕಾ – ಬದರಿ ಶ್ರೀಗಳಿಗೆ ಅನುಗ್ರಹ: ಶ್ರೀಗಳಿಗೆ ದಂಡ – ಕಮಂಡಲ ನೀಡಿದ ಶೃಂಗೇರಿ ಶ್ರೀಗಳು

ಆರ್ ಎಸ್ಎಸ್ ಧರ್ಮ ಜಾಗರಣದ ಜಿಲ್ಲಾ ಸಹಸಂಯೋಜಕರ ಕಾರ್ ಮೇಲೆ ಕಿಲ್ ಯು ಜಿಹಾದಿ ಬರಹ

ಆರ್ ಎಸ್ಎಸ್ ಧರ್ಮ ಜಾಗರಣದ ಜಿಲ್ಲಾ ಸಹಸಂಯೋಜಕರ ಕಾರ್ ಮೇಲೆ ‘ಕಿಲ್ ಯು ಜಿಹಾದಿ’ ಬರಹ

ನನ್ನ ಮದುವೆ ಯಾವುದೇ ವಿಘ್ನವಿಲ್ಲದೆ ನೆರವೇರುವಂತೆ ಮಾಡು: ಉಕ್ಕಡದ ಮಾರಮ್ಮನಿಗೆ ಭಕ್ತನ ಪತ್ರ

ನನ್ನ ಮದುವೆ ಯಾವುದೇ ವಿಘ್ನವಿಲ್ಲದೆ ನೆರವೇರುವಂತೆ ಮಾಡು: ಉಕ್ಕಡದ ಮಾರಮ್ಮನಿಗೆ ಭಕ್ತನ ಪತ್ರ

ಎಸ್‌ಡಿಪಿಐ-ಪಿಎಫ್‌ಐ ನಿಷೇಧಕ್ಕೆ ಕಾಲ ಸನ್ನಿಹಿತ: ಸಚಿವೆ ಶೋಭಾ ಕರಂದ್ಲಾಜೆ

ಎಸ್‌ಡಿಪಿಐ-ಪಿಎಫ್‌ಐ ನಿಷೇಧಕ್ಕೆ ಕಾಲ ಸನ್ನಿಹಿತ: ಸಚಿವೆ ಶೋಭಾ ಕರಂದ್ಲಾಜೆ

ಸಾವಿನಲ್ಲೂ ಸಾರ್ಥಕತೆ ಮೆರೆದ ಕಡೂರಿನ ರಕ್ಷಿತಾ ಕುಟುಂಬಕ್ಕೆ 8 ಲಕ್ಷ ರೂ. ಪರಿಹಾರ ಘೋಷಣೆ

ಸಾವಿನಲ್ಲೂ ಸಾರ್ಥಕತೆ ಮೆರೆದ ಕಡೂರಿನ ರಕ್ಷಿತಾ ಕುಟುಂಬಕ್ಕೆ 8 ಲಕ್ಷ ರೂ. ಪರಿಹಾರ ಘೋಷಣೆ

MUST WATCH

udayavani youtube

ಬಿಜೆಪಿ ಸರಕಾರ ಇರೋವರೆಗೆ ದೇಶ ದ್ರೋಹಿಗಳಿಗೆ ವಿಜೃಂಭಿಸಲು ಅವಕಾಶವಿಲ್ಲ

udayavani youtube

ಉಚ್ಚಿಲ ದಸರಾ ವೈಭವಕ್ಕೆ ಅದ್ದೂರಿಯ ಚಾಲನೆ

udayavani youtube

ಓದಿನ ಜೊತೆ ಕೃಷಿ : ಮಕ್ಕಳೇ ನಿರ್ಮಿಸಿದ ‘ಆರೋಗ್ಯವನ’ !

udayavani youtube

ಕ್ರಿಯೇಟಿವ್ ಪಿಯು ಕಾಲೇಜು ಮೂಡಬಿದ್ರಿ

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

ಹೊಸ ಸೇರ್ಪಡೆ

13

ಕುರುಗೋಡು: ಪ್ರತಿಯೊಬ್ಬರೂ ಸಂವಿಧಾನತ್ಮಕ ಹಕ್ಕು ಪಡೆಯಲು ಮುಂದಾಗಿ: ನಾಗಪ್ಪ

“ದಿ ಚೆಕ್‌ ಮೇಟ್‌” ಇದು ಮೊದಲನೇ ಸುತ್ತಿನ ಆಟ

“ದಿ ಚೆಕ್‌ ಮೇಟ್‌” ಇದು ಮೊದಲನೇ ಸುತ್ತಿನ ಆಟ

vidhana-soudha

ವಿಳಂಬ ನೀತಿ ಖಂಡಿಸಿ ಸಚಿವಾಲಯದ ನೌಕರರ ಸಂಘದಿಂದ ಮತ್ತೆ ಧರಣಿ

owaisi

ಪಿಎಫ್ ಐ ಕಾರ್ಯ ವಿಧಾನವನ್ನು ಯಾವಾಗಲೂ ವಿರೋಧಿಸುತ್ತಿದ್ದೆ: ಓವೈಸಿ

“ತೋತಾಪುರಿ” ಮೇಲೆ ಸುಮನ ಗಮನ!

“ತೋತಾಪುರಿ” ಮೇಲೆ ಸುಮನ ಗಮನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.