ಆರ್ಥಿಕ ವಹಿವಾಟಿಗೆ ಅವಕಾಶ ಕಲ್ಪಿಸಿ
Team Udayavani, May 29, 2021, 10:46 AM IST
ಚಿಕ್ಕಮಗಳೂರು: ಕೋವಿಡ್ ನಿಯಂತ್ರಿಸಲು ಜಿಲ್ಲಾಡಳಿತ ಲಾಕ್‌ಡೌನ್ ಅವಧಿಯಲ್ಲಿ ಬ್ಯಾಂಕ್ ಮೇಲೆ ವಿಧಿಸಿರುವ ನಿರ್ಬಂಧಗಳನ್ನು ತೆರವು ಮಾಡಿ ಆರ್ಥಿಕ ವಹಿವಾಟಿಗೆ ಅವಕಾಶ ಕಲ್ಪಿಸಬೇಕೆಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್. ಭೋಜೇಗೌಡ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಶುಕ್ರವಾರ ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಮಾತನಾಡಿದ ಅವರು, ಬ್ಯಾಂಕ್ ವ್ಯವಹಾರ ಸ್ಥಗಿತಗೊಳಿಸಿದ್ದರಿಂದ ಕಾಫಿ ಸೇರಿದಂತೆ ಇತರೆ ಉದ್ಯಮಗಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಬ್ಯಾಂಕ್ ವ್ಯವಹಾರ ನಡೆಸಲು ಅವಕಾಶ ಕಲ್ಪಿಸಬೇಕೆಂದು ತಿಳಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ರಸಗೊಬ್ಬರ ಸೇರಿದಂತೆ ಇತರೆ ಕೃಷಿ ಸಲಕರಣೆಗಳ ಮಾರಾಟಕ್ಕೆ ಅವಕಾಶ ಕಲ್ಪಿಸಿದರು. ಸಣ್ಣ ರೈತರಿಗೆ ಪ್ರಯೋಜನವಾಗಿಲ್ಲ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಇತರೆ ಖರೀದಿಗೆ ನಗರ ಪ್ರದೇಶಕ್ಕೆ ಬರಬೇಕಾಗಿದ್ದು, ಖರೀದಿಗೆತೊಂದರೆಯಾಗದಂತೆ ಕ್ರಮಕೈಗೊಳ್ಳಬೇಕು. ಕೋವಿಡ್ ಹಿನ್ನೆಲೆಯಲ್ಲಿ ಬ್ಯಾಂಕುಗಳು ಬೆಳೆಗಾರರ ಸಾಲದ ಕಂತನ್ನು ಮುಂದಕ್ಕೆ ಹಾಕಬೇಕು. ಹೊಸ ಸಾಲ ಮಂಜೂರು ಮಾಡಬೇಕು. ಅತಿವೃಷ್ಟಿ ಬರದಂತಹ ವಿಪತ್ತು ಸಂದರ್ಭದಲ್ಲಿ ಶೇ.33ರಷ್ಟು ಬೆಳೆಹಾನಿ ಸಂಭವಿಸಿದ್ದು ಸಾಲ ವಸೂಲಾತಿ 2 ವರ್ಷಕ್ಕೆ ಮುಂದಕ್ಕೆ ಹಾಕಬೇಕು. ಸರಳಬಡ್ಡಿಯಲ್ಲಿ ಹೊಸಸಾಲ ನೀಡಬೇಕು. ಶೇ.50ರಷ್ಟು ಬೆಳೆನಾಶವಾಗಿದ್ದು 5 ವರ್ಷ ಸಾಲ ವಸೂಲಾತಿ ಮುಂದಕ್ಕೆ ಹಾಕಬೇಕು ಎಂದರು.
ಪಶು ಸಂಗೋಪನಾ ವಿವಿ ಆಡಳಿತ ಮಂಡಳಿ ಸದಸ್ಯ ದೀಪಕ್ ದೊಡ್ಡಯ್ಯ, ಕಾಫಿ ಕ್ಯೂರಿಂಗ್ ವರ್ಕ್ಸ್ ಗಳ ಸಂಘದ ಅಧ್ಯಕ್ಷ ದೇವರಾಜ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅರಮನೆ ಮುಂಭಾಗದ ಪಾರಿವಾಳಗಳನ್ನು ಸ್ಥಳಾಂತರಿಸಿ; ಆಯುಕ್ತರಿಗೆ ಬರೆದ ಪತ್ರದಲ್ಲೇನಿದೆ?
ನವದೆಹಲಿ: 12 ನೇ ತರಗತಿ ವಿದ್ಯಾರ್ಥಿನಿಗೆ ಸಾರ್ವಜನಿಕವಾಗಿ ಇರಿದ ಯುವಕ
ಶ್ರೀನಗರದ ಶೂರ್ಯಾರ್ ಮಂದಿರದಲ್ಲಿ ರಾಮಾನುಜರ ಪ್ರತಿಮೆ ಅನಾವರಣ
ಉನ್ನತ ಅಧಿಕಾರಿಗಿಂತ ರೈತ ಆಗುವುದು ಶ್ರೇಷ್ಠ; ನಳಿನಾಕ್ಷಿ
ಮಳೆಯಿಂದ ಮನೆ ಕಳೆದುಕೊಂಡವರಿಗೆ 5 ಲಕ್ಷ ಪರಿಹಾರ: ಹಾನಿಗೆ 50 ಸಾವಿರ; ಆರ್ ಅಶೊಕ್