ಗುರು-ಶಿಷ್ಯರ ಸಂಬಂಧ ಅಮೂಲ್ಯ: ಭಾನುಪ್ರಕಾಶ್‌


Team Udayavani, Feb 3, 2020, 5:55 PM IST

3-Febrauary-29

ಶೃಂಗೇರಿ: ಮೆಕಾಲೆಯ ಉದ್ಯೋಗ ಆಧಾರಿತ ಅಂಕಗಳಿಕೆಯ ಫಲಾಪೇಕ್ಷೆ ಶಿಕ್ಷಣವನ್ನೇ ಕೊಡುತ್ತಾ ಮಾನಸಿಕ ಗುಲಾಮಗಿರಿಯನ್ನು ಈಗಲೂ ಒಪ್ಪಿಕೊಂಡಿದ್ದೇವೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಮತ್ತೂರಿನ ಭಾನುಪ್ರಕಾಶ್‌ ವಿಷಾದಿಸಿದರು.

ಹರಿಹರಪುರ ಚಿತ್ರಕೂಟದ ಪ್ರಬೋಧಿನಿ ಗುರುಕುಲದ ಅರ್ಧಮಂಡಲೋತ್ಸವದ ಅಂಗವಾಗಿ ಪಟ್ಟಣದ ಜಿಎಸ್‌ಬಿ ಸಭಾಭವನದಲ್ಲಿ ಏರ್ಪಡಿಸಿದ್ದ ಗುರುಕುಲ ದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬ್ರಿಟಿಷರು ಗುರುಕುಲ ವಿದ್ಯಾಭ್ಯಾಸ ಪರಂಪರೆ ನಾಶಮಾಡಿ ಶಾಶ್ವತವಾಗಿ ಸ್ವಾಭಿಮಾನದ ಬದುಕಿಗೆ ಕೊಡಲಿ ಏಟು ನೀಡಿದರು. ದೇಶದ ಮೇಲೆ ಆಕ್ರಮಣ ಮಾಡಿದ ಮೊಗಲರು ನಮ್ಮ ಶ್ರದ್ಧಾಕೇಂದ್ರ ನಾಶ ಮಾಡಿದರು.

ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳು ಆಗುತ್ತಿವೆ ಆದರೂ ಸ್ವಾತಂತ್ರ್ಯದ ನಂತರ ನಮ್ಮದೇ ಆದ ಶಿಕ್ಷಣ ಪದ್ಧತಿಯನ್ನು ಜಾರಿಗೆ ತರುವಲ್ಲಿ ನಾವು ಸೋತಿದ್ದರಿಂದ, ಅಂತಃಸತ್ವದ ಶಿಕ್ಷಣದ ಬದಲಿಗೆ ನಿಶ್ಚಿತ ಗುರಿ ಇಲ್ಲದ ಮೆಕಾಲೆ ಪದ್ಧತಿಯನ್ನೇ ಅನುಸರಿಸಿಕೊಂಡು ಬಂದಿದ್ದೇವೆ ಎಂದರು.

ಪರಕೀಯರ ಆಳ್ವಿಕೆಗೂ ಮೊದಲು 30 ಸಾವಿರ ಗುರುಕುಲಗಳು ನಮ್ಮಲ್ಲಿದ್ದವು. ಆರ್ಷಗುರುಕುಲ ಶಿಕ್ಷಣದಲ್ಲಿ ಭಗವಂತನ ಚಿಂತನೆ, ಪ್ರಕೃತಿಯ ಆರಾಧನೆಯೊಂದಿಗೆ ನಮ್ಮೊಳಗಿನ ವಿದ್ವತ್ತನ್ನು ಅರಳಿಸುವ ಬೋಧನೆ ಇತ್ತು. ಆದರೆ, ಇಂದಿಗೂ ನಮ್ಮ ಮಕ್ಕಳಿಗೆ ಬೇಕಾಗಿರುವ ಶಿಕ್ಷಣ ಗುರುತಿಸಿ, ಅದನ್ನೇ ಕೊಡಿಸುವಲ್ಲಿ ನಾವು ಸಂಪೂರ್ಣವಾಗಿ ಸೋತ್ತಿದ್ದೇವೆ. ಗುರು-ಶಿಷ್ಯರ ಸಂಬಂಧ ಅಮೂಲ್ಯವಾದದ್ದು. ಪ್ರಶ್ನೆ ಮಾಡುವ ಮನೋಭಾವವನ್ನು ಶಿಷ್ಯನಲ್ಲಿ ಮೂಡಿಸುವುದೇ ಸರಿಯಾದ ಶಿಕ್ಷಣವಾಗಿದೆ. ಶ್ರೀಮಂತ, ಬಡವ, ಜಾತಿ ಬೇಧವಿಲ್ಲದೇ ಯಾವುದೇ ಶುಲ್ಕ ಪಡೆಯದೇ ಶಿಕ್ಷಣ ನೀಡುವುದು ಗುರುಕುಲವಾಗಿದೆ. ಗುರುಕುಲದಲ್ಲಿ ಗುರು ತನ್ನ ಶಿಷ್ಯನನ್ನು ಸದಾಕಾಲ ತನ್ನೊಡನೆ ಇರಿಸಿಕೊಂಡು ಸರ್ವತೋಮುಖ ಮಾರ್ಗದರ್ಶನ ಮಾಡುತ್ತಾನೆ. ಇನ್ನಾದರೂ ಆಡಳಿತಗಾರರು ಎಚ್ಚೆತ್ತುಕೊಂಡು ಗುರುಕುಲ ಪದ್ಧತಿಯ ಶಿಕ್ಷಣವನ್ನು ದೇಶದಲ್ಲಿ ಜಾರಿಗೆ ತರಬೇಕು ಎಂದರು.

ಪ್ರಬೋಧಿನಿ ಗುರುಕುಲದ ಪ್ರಧಾನ ವ್ಯವಸ್ಥಾಪಕ ಉಮೇಶ್‌ ಮಾತನಾಡಿ, ಪ್ರಬೋಧಿ ನಿ ಗುರುಕುಲಕ್ಕೆ 24 ವರ್ಷ ಪೂರ್ಣಗೊಂಡ ಕಾರಣ ಈಗ ಅರ್ಧ ಮಂಡಲೋತ್ಸವವನ್ನು ಆಚರಿಸಲಾಗುತ್ತಿದೆ. ಇಲ್ಲಿ ಬಾಲಕರಿಗೆ ಮಾತ್ರ ಅವಕಾಶ. ವಿಟ್ಲದ ಮೈತ್ರೇಯಿ ಗುರುಕುಲದಲ್ಲಿ ಬಾಲಕಿಯರಿಗೆ ಮತ್ತು ಚನ್ನೇನಹಳ್ಳಿಯ ವೇದವಿಜ್ಞಾನ ಗುರುಕುಲದಲ್ಲಿ ಉನ್ನತ ಶಿಕ್ಷಣ ನೀಡಲಾಗುತ್ತಿದೆ. ಗುರುಕುಲ ಶಿಕ್ಷಣದ ಬಗ್ಗೆ ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸುವ ಸಲುವಾಗಿ ಈ ವರ್ಷ ರಾಜ್ಯಾದ್ಯಂತ ಕಾರ್ಯಕ್ರಮ ನಡೆಸಲಾಗುತ್ತಿದೆ. ಫೆ.9ರಂದು ಅರ್ಧಮಂಡಲೋತ್ಸವದ ಸಮಾರೋಪ ಸಮಾರಂಭವು ಗುರುಕುಲದಲ್ಲಿ ನಡೆಯುತ್ತಿದ್ದು ರಾ.ಸ್ವ.ಸಂಘದ ಸರಸಂಘಚಾಲಕ ಮೋಹನ್‌ ಭಾಗ್ವತ್‌ ಹಾಗೂ ಅಮೆರಿಕದ ಭಾರತೀಯ ಸಾಂಸ್ಕೃತಿಕ ವಿದ್ವಾಂಸ ಡೆವಿಡ್‌ ಫ್ರಾಲಿ ಭಾಗವಹಿಸಲಿದ್ದಾರೆ ಎಂದರು.

ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಎಂ.ಶ್ರೀನಿವಾಸ್‌ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರ್ಧಮಂಡಲೋತ್ಸವ ಸಮಿತಿ ಕಾರ್ಯಾಧ್ಯಕ್ಷ ಎಚ್‌ .ಬಿ.ರಾಜಗೋಪಾಲ್‌, ಗುರುಕುಲದ ಆಚಾರ್ಯ ರಾಕೇಶ್‌ ಇದ್ದರು. ಸುರೇಶ್ಚಂದ್ರ ನಿರೂಪಿಸಿದರು. ಎ.ಎಸ್‌.ನಯನ ಸ್ವಾಗತಿಸಿದರು.

ಟಾಪ್ ನ್ಯೂಸ್

ಇಳಿ ವಯಸ್ಸಿನಲ್ಲಿ ವಿವಾಹವಾದ ಅಜ್ಜ-ಅಜ್ಜಿ: ಶುಭ ಹಾರೈಸಿದ ಮಕ್ಕಳು- ಮೊಮ್ಮಕ್ಕಳು

ಇಳಿ ವಯಸ್ಸಿನಲ್ಲಿ ವಿವಾಹವಾದ ಅಜ್ಜ-ಅಜ್ಜಿ: ಶುಭ ಹಾರೈಸಿದ ಮಕ್ಕಳು- ಮೊಮ್ಮಕ್ಕಳು

ಎಂಟು ದಿನಗಳಿಂದ ಶಾಲೆಗೆ ಹೋಗದಿದ್ದರೂ ಪಾಸಿಟಿವ್ ವರದಿ; ಆರೋಗ್ಯ ಸಿಬ್ಬಂದಿ ಎಡವಟ್ಟು ಬಹಿರಂಗ

ಎಂಟು ದಿನಗಳಿಂದ ಶಾಲೆಗೆ ಹೋಗದಿದ್ದರೂ ಪಾಸಿಟಿವ್ ವರದಿ; ಆರೋಗ್ಯ ಸಿಬ್ಬಂದಿ ಎಡವಟ್ಟು ಬಹಿರಂಗ

1-sddsa

ಕುತೂಹಲಕ್ಕೆ ಎಡೆಮಾಡಿದ ಆರ್.ವಿ.ದೇಶಪಾಂಡೆಯವರ ರಾಜಕೀಯ ನಡೆ

‘ವರದ’ನಿಗೆ ಮುರಳಿ ಸಾಥ್‌: ಓಂ ಹರಿ ಹರಿ ಓಂ ಹಾಡು ಬಂತು

‘ವರದ’ನಿಗೆ ಮುರಳಿ ಸಾಥ್‌: ಓಂ ಹರಿ ಹರಿ ಓಂ ಹಾಡು ಬಂತು

PM Modi pay tribute to Subhas Chandra Bose on birth anniversary

ಸುಭಾಷ್ ಚಂದ್ರ ಬೋಸ್ ಸಾಧನೆ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ: ಪ್ರಧಾನಿ ಮೋದಿ

1-fsfdf

ಭಾರತದ ಅತಿ ಎತ್ತರದ ವ್ಯಕ್ತಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ

Imran Tahir played a blinder for World Giants

ಇಮ್ರಾನ್ ತಾಹಿರ್ ಸ್ಪೋಟಕ ಬ್ಯಾಟಿಂಗ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದ್ಗತಜಹಗ್ದ

ಬೆಂಕಿ ಅವಘಢ: 3 ಎಕರೆ ಅಡಕೆ ತೋಟ ನಾಶ

ದ್ಡರಹಜಜಹಗ್ದಸಅ

ಪ್ಲಾಸ್ಟಿಕ್ ಮುಕ್ತ ಚಿಕ್ಕಮಗಳೂರು ಕನಸು

ರಸ್ತೆ ಸೌಕರ್ಯವಿಲ್ಲದೆ ತೆಪ್ಪದಲ್ಲೇ ಮೃತದೇಹ ಸಾಗಿಸಿ ಅಂತ್ಯಸಂಸ್ಕಾರ ನೆರವೇರಿಸಿದ ಕುಟುಂಬ

ರಸ್ತೆ ಸೌಕರ್ಯವಿಲ್ಲದೆ ತೆಪ್ಪದಲ್ಲೇ ಮೃತದೇಹ ಸಾಗಿಸಿ ಅಂತ್ಯಸಂಸ್ಕಾರ ನೆರವೇರಿಸಿದ ಕುಟುಂಬ

5fire

ಬೆಂಕಿ ಅವಘಡ: ಕೃಷಿಭೂಮಿ ಬೆಂಕಿಗಾಹುತಿ

ಡ60ಉತದಸ

ಸಾಗರದಲ್ಲಿ ಶತಕ ಮುಟ್ಟಿದ ಕೊರೊನಾ

MUST WATCH

udayavani youtube

ಮಧ್ವರಾಜ್ ಮನದಾಳದ ಮಾತು

udayavani youtube

ಫಾರ್ಮ್‌ಹೌಸ್‌ನಲ್ಲಿ ಸಿನಿಮಾ ತಾರೆಯರ ಶವ ಸಮಾಧಿ ಆರೋಪ ! ನ್ಯಾಯಾಲಯದ ಮೊರೆ ಸಲ್ಲು

udayavani youtube

ಅಮಿತ್ ಶಾರಿಂದ ಮನೆ ಮನೆ ಪ್ರಚಾರ

udayavani youtube

ಗಣರಾಜ್ಯೋತ್ಸವ paradeಗಾಗಿ ಭಾರತೀಯ ನೌಕಾಪಡೆ ಉತ್ಸಾಹದಿಂದ ತಯಾರಿ ನಡೆಸುತ್ತಿದೆ

udayavani youtube

Viral Video: ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ನಾಯಿ

ಹೊಸ ಸೇರ್ಪಡೆ

ಇಳಿ ವಯಸ್ಸಿನಲ್ಲಿ ವಿವಾಹವಾದ ಅಜ್ಜ-ಅಜ್ಜಿ: ಶುಭ ಹಾರೈಸಿದ ಮಕ್ಕಳು- ಮೊಮ್ಮಕ್ಕಳು

ಇಳಿ ವಯಸ್ಸಿನಲ್ಲಿ ವಿವಾಹವಾದ ಅಜ್ಜ-ಅಜ್ಜಿ: ಶುಭ ಹಾರೈಸಿದ ಮಕ್ಕಳು- ಮೊಮ್ಮಕ್ಕಳು

6protest

ಅಬಕಾರಿ ಅಧಿಕಾರಿಯ ವರ್ತನೆಗೆ ಭೀಮನಹಳ್ಳಿ ಗ್ರಾಮಸ್ಥರ ಆಕ್ರೋಶ

ಎಂಟು ದಿನಗಳಿಂದ ಶಾಲೆಗೆ ಹೋಗದಿದ್ದರೂ ಪಾಸಿಟಿವ್ ವರದಿ; ಆರೋಗ್ಯ ಸಿಬ್ಬಂದಿ ಎಡವಟ್ಟು ಬಹಿರಂಗ

ಎಂಟು ದಿನಗಳಿಂದ ಶಾಲೆಗೆ ಹೋಗದಿದ್ದರೂ ಪಾಸಿಟಿವ್ ವರದಿ; ಆರೋಗ್ಯ ಸಿಬ್ಬಂದಿ ಎಡವಟ್ಟು ಬಹಿರಂಗ

5farmer

ವಿದ್ಯುತ್‌ ತಂತಿ ತಗುಲಿ ರೈತ ಸಾವು

1-sddsa

ಕುತೂಹಲಕ್ಕೆ ಎಡೆಮಾಡಿದ ಆರ್.ವಿ.ದೇಶಪಾಂಡೆಯವರ ರಾಜಕೀಯ ನಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.