ಕೊಟ್ಟಿಗೆಹಾರ : ರಸ್ತೆಯಲ್ಲಿ ಕೆಟ್ಟು ನಿಂತ ಲಾರಿ, ವಾಹನ ಸಂಚಾರ ಸ್ಥಗಿತ
Team Udayavani, May 21, 2022, 9:07 PM IST
ಕೊಟ್ಟಿಗೆಹಾರ : ಕೆಳಗೂರು ಕಡೆಯಿಂದ ಮೂಡಿಗೆರೆ ಕಡೆಗೆ ಸಾಗುತ್ತಿದ್ದ ಟಿಂಬರ್ ಲಾರಿಯೊಂದು ಚನ್ನಡ್ಲು ಸಮೀಪ ರಸ್ತೆಯಲ್ಲಿ ಕೆಟ್ಟು ನಿಂತ ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವಂತಾಯಿತು.
ಕೊಟ್ಟಿಗೆಹಾರದಿಂದ ಹೊರನಾಡು ಕಡೆಗೆ ಸಾಗುವ ರಸ್ತೆ ಸಂಚಾರ ಸ್ಥಗಿತಗೊಂಡಿದ್ದು ಪೊಲೀಸರು ಶನಿವಾರ ರಾತ್ರಿಯವರೆಗೂ ಲಾರಿ ತೆರವುಗೊಳಿಸಲು ಕಾರ್ಯಚರಣೆ ನಡೆಸಿದರು.
ರಸ್ತೆ ಸಂಚಾರ ಸ್ಥಗಿತಗೊಂಡ ಹಿನ್ನಲೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತ ದೃಶ್ಯ ಕಂಡು ಬಂತು.
ಇದನ್ನೂ ಓದಿ : ವಿವೋ ವೈ75 ಫೋನ್ ಬಿಡುಗಡೆ; 44ಎಂಪಿ ಸೆಲ್ಫಿ ಕ್ಯಾಮರಾವಿರುವ ಫೋನು