ಮಹಿಳೆಯನ್ನು ಕಟ್ಟಿಹಾಕಿ ಹಾಡಹಗಲೇ ದರೋಡೆಗೆ ಯತ್ನ: ಸಿನಿಮೀಯಾ ರೀತಿಯಲ್ಲಿ ನಡೆಯಿತು ಚೇಸಿಂಗ್
ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ
Team Udayavani, Feb 27, 2021, 2:24 PM IST
ಚಿಕ್ಕಮಗಳೂರು: ಇಬ್ಬರು ದರೋಡೆಕೋರರಿಂದ ಹಾಡಹಗಲೇ ದರೋಡೆಗೆ ಯತ್ನಿಸಿದ ಘಟನೆ ಶನಿವಾರ ನಗರ ಎಐಟಿ ಸರ್ಕಲ್ ನಲ್ಲಿ ನಡೆದಿದೆ.
ಎಐಟಿ ಸರ್ಕಲ್ ನಲ್ಲಿರುವ ಸಿಡಿಎ ಮಾಜಿ ಅಧ್ಯಕ್ಷ ಚಂದ್ರೇಗೌಡ ಎಂಬವರ ಮನೆ ಬಳಿ ಪಲ್ಸರ್ ಬೈಕ್ ನಲ್ಲಿ ಆಗಮಿಸಿದ ಇಬ್ಬರು ಯುವಕರು ತಲೆಗೆ ಹೆಲ್ಮೆಟ್ ಧರಿಸಿ ಕೈಯಲ್ಲಿ ಚಾಕು ಹಿಡಿದು ಮನೆಯೊಳಗೆ ಪ್ರವೇಶಿಸಿದ್ದಾರೆ.
ಮನೆಯಲ್ಲಿ ಚಂದ್ರೇಗೌಡ ಪತ್ನಿ ಒಬ್ಬರೇ ಇದ್ದಿದ್ದು, ಅವರ ಕೈ ಬಾಯಿಗೆ ವೇಲ್ ನಿಂದ ಕಟ್ಟಿ ದರೋಡೆಗೆ ಯತ್ನಿಸಿದ್ದಾರೆ.
ಇದನ್ನೂ ಓದಿ:ಹೊಸಪೇಟೆ: ನ್ಯಾಯಾಲಯದ ಆವರಣದಲ್ಲೇ ವಕೀಲರೊಬ್ಬರ ಬರ್ಬರ ಹತ್ಯೆ
ಈ ವೇಳೆ ಮಹಿಳೆಯ ಮಗ ಬಂದು ನೋಡಿ ಕರೆದಿದ್ದಾನೆ. ಒಳಗಿನಿಂದ ಅಮ್ಮನ ಧ್ವನಿ ಕೇಳದಿದ್ದಾಗ ಕಿಟಕಿಯಲ್ಲಿ ಇಣುಕಿ ನೋಡಿದ್ದಾನೆ. ಆಗ ತನ್ನ ತಾಯಿಯನ್ನು ಕಟ್ಟಿಹಾಕಿರುವುದನ್ನು ಕಂಡು ಕಿರುಚಾಡಿದ್ದಾನೆ. ಆಗ ಒಳಗಿದ್ದ ದರೋಡೆಕೋರರಿಬ್ಬರು ಹೊರಗೆ ಓಡಿ ಬಂದಿದ್ದಾರೆ.
ಈ ವೇಳೆ ಸಾರ್ವಜನಿಕರು ಇಬ್ಬರು ದರೋಡೆಕೋರರನ್ನು ಹಿಡಿಯಲು ಯತ್ನಿಸಿದ್ದಾರೆ. ಆದರೆ ಚಾಕು ತೋರಿಸಿದ ಖದೀಮರು ಸಾರ್ವಜನಿಕರು ನೋಡನೋಡುತ್ತಲೇ ಓಡಿಹೋಗಿದ್ದಾರೆ. ದರೋಡೆಕೋರರು ಬೈಕ್ ಹತ್ತಿ ಪರಾರಿಯಾಗಲು ಯತ್ನಿಸುತ್ತಿದ್ದ ವೇಳ ಸಾರ್ವಜನಿಕರು ಕೂಗಾಡಿದ್ದರಿಂದ ಅಲ್ಲೇ ರಸ್ತೆಯಲ್ಲಿ ಬರುತ್ತಿದ್ದ ಅಗ್ನಿಶಾಮಕ ವಾಹನದ ಚಾಲಕ ವಾಹನವನ್ನು ಢಿಕ್ಕಿ ಹೊಡೆಸಿ ಅವರನ್ನು ಕೆಳಗೆ ಬೀಳಿಸಿದ್ದಾನೆ.
ಸಾರ್ವಜನಿಕರು ಇಬ್ಬರ ಮೇಲೂ ಕಲ್ಲು ತೂರಾಟ ನಡೆಸಿದ್ದರಿಂದ ದರೋಡೆಕೋರರಿಬ್ಬರು ಸರ್ಕಲ್ ಬಳಿಯ ಕಲ್ಯಾಣ ನಗರದತ್ತ ಓಡಿದ್ದಾರೆ.
ಇದನ್ನೂ ಓದಿ: ಸಿಸಿಬಿ ಪೊಲೀಸರಿಂದ ಕಾರು ಮಾರಾಟ: ನಗರದಲ್ಲಿ ಸಿಐಡಿ ತನಿಖೆ ಆರಂಭ, 4 ಪೊಲೀಸರ ಹೆಸರು ಉಲ್ಲೇಖ
ಆರೋಪಿಗಳು ಪಾರಾರಿಯಾಗುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದರೋಡೆ ಪ್ರಕರಣ ಸಂಬಂಧ ದಂಟರಮಕ್ಕಿ ಬಡಾವಣೆಯ ಸಚಿನ್ ಮತ್ತು ಮೋಹನ್ ಎಂಬ ಇಬ್ಬರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ಯದ ವಿವಿಧೆಡೆ ಉತ್ತಮ ಮಳೆ : ಮಂಗಳೂರು ರಸ್ತೆ ಬದಿ ಕುಸಿತ, ಎರಡು ದಿನ ಎಲ್ಲೋ ಅಲರ್ಟ್
ಮುಷ್ಕರ ನಿರತರಿಂದ 60 ಬಸ್ಸುಗಳಿಗೆ ಹಾನಿ,152 ಕೋಟಿ ರೂ.ಆದಾಯ ನಷ್ಟ : ಸಚಿವ ಲಕ್ಷ್ಮಣ ಸವದಿ
ಶಾಸಕ ರಾಜುಗೌಡಗೂ ಕೋವಿಡ್ ಪಾಸಿಟಿವ್ ;ಬೆಂಗಳೂರು ಆಸ್ಪತ್ರೆಗೆ ದಾಖಲು
ಕರ್ನಾಟಕದಲ್ಲಿಂದು 11,265 ಕೋವಿಡ್ ಹೊಸ ಪ್ರಕರಣಗಳು ಪತ್ತೆ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆಯಿಂದ ಜನಜೀವನ ಅಸ್ತವ್ಯಸ್ತ: ಸಿಡಿಲು ಬಡಿದು ಮಹಿಳೆ ಸಾವು
MUST WATCH
ಹೊಸ ಸೇರ್ಪಡೆ
10 ದಿನಗಳಲ್ಲಿ ಮತ್ತಷ್ಟು ಹೆಚ್ಚಳ; ಭಾರತದಲ್ಲಿ 24 ಗಂಟೆಯಲ್ಲಿ 2 ಲಕ್ಷ ಕೋವಿಡ್ ಪ್ರಕರಣ ಪತ್ತೆ
ಬುಕಿಯಿಂದ ಬಿಟ್ ಕಾಯಿನ್, ಪತ್ನಿಗಾಗಿ ಐಫೋನ್ ಪಡೆದಿದ್ದ ಹೀತ್ ಸ್ಟ್ರೀಕ್ ಗೆ 8 ವರ್ಷ ನಿಷೇಧ!
ಹಿಂದಿಯ ‘ಅನ್ನಿಯನ್’ ಗೆ ರಣವೀರ್ ಸಿಂಗ್ ಹೀರೋ: ಶಂಕರ್ ಆಕ್ಷನ್ ಕಟ್
‘ಎಂಜಾಯ್ ಎಂಜಾಮಿ ಕುಕ್ಕೂ ಕುಕ್ಕೂ..’ : ವೈರಲ್ ಹಾಡಿನ ಹಿಂದಿರುವುದು ದುಡಿದು ದಣಿದವರ ಬದುಕು
ಕಾಂಗ್ರೆಸ್ ನಿಂದ ಹೊಸ ಚಾನೆಲ್ “ಐಎನ್ ಸಿ ಟಿವಿ” ಶುರು