Udayavni Special

ಕಡೂರು ಕ್ಷೇತ್ರಕ್ಕೆ 500 ಕೋಟಿ ಅನುದಾನ


Team Udayavani, Jan 6, 2018, 3:02 PM IST

06-34.jpg

ಕಡೂರು: ನಾನು ಕಡೂರು ಕ್ಷೇತ್ರವನ್ನು ಚೆನ್ನಾಗಿ ಬಲ್ಲೆ. ಪದೇ ಪದೇ ಬರಗಾಲಕ್ಕೆ ತುತ್ತಾಗುವ ಈ ಕ್ಷೇತ್ರಕ್ಕೆ ಸುಮಾರು 500 ಕೋಟಿ ರೂ. ಅನುದಾನ ನೀಡಿರುವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಜಿಲ್ಲಾಡಳಿತವು ಎಪಿಎಂಸಿ ಆವರಣದಲ್ಲಿ ಏರ್ಪಡಿಸಿದ್ದ ಕ್ಷೇತ್ರದ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಭದ್ರಾ ಮೇಲ್ದಂಡೆ ಯೋಜನೆಯ ತುಮಕೂರು ಕಾಲುವೆ ಮೂಲಕ ಕಡೂರು ತಾಲೂಕಿನ ಕೆರೆಗಳನ್ನು ತುಂಬಿಸುವ ಯೋಜನೆಗೆ 108 ಕೋಟಿ ಅನುದಾನ ನೀಡಿದ್ದು, ಮುಂದಿನ ಮೇ ತಿಂಗಳೊಳಗೆ ಕಾರ್ಯ ಮುಗಿಯಲಿದೆ. ಈ ಯೋಜನೆಯಿಂದ 55 ಸಾವಿರ ಎಕರೆಗೆ ನೀರು ದೊರಕಲಿದೆ. ಶಾಸಕ ವೈ.ಎಸ್‌.ವಿ ದತ್ತ ಹೇಳಿರುವ ನೀರಾವರಿ ಯೋಜನೆಯು ನೀರಾವರಿ ನಿಗಮದ ಮುಂದೆ ಇದ್ದು ಸೋಮವಾರ ಸಭೆಯಲ್ಲಿ ಎಂಡಿ ಜೊತೆ ಮಾತನಾಡಿ ನೀರಾವರಿ ಯೋಜನೆಗೆ ಸಂಬಂಧಿಸಿದ ಯಾವುದೇ ಯೋಜನೆಗಳಿದ್ದರೂ ಅದಕ್ಕೆ ನಮ್ಮ ಸರ್ಕಾರ ಒಪ್ಪಿಗೆ ನೀಡಲಿದೆ ಎಂದರು.

ಕಳೆದ 5 ವರ್ಷಗಳ ಹಿಂದೆ ಪಾದಯಾತ್ರೆಯ ಸಂದರ್ಭದಲ್ಲಿ ಕೂಡಲಸಂಗಮದಲ್ಲಿ ನಾನು ಈ ನಾಡಿನ ಜನತೆಗೆ ಭರವಸೆ ನೀಡಿದ್ದೆ ಅಧಿಕಾರ ನೀಡಿದರೆ 50 ಸಾವಿರ ಕೋಟಿ ನೀರಾವರಿ ಯೋಜನೆಗಳಿಗೆ ಖರ್ಚು ಮಾಡುವುದಾಗಿ ಅದರಂತೆ ಪ್ರತಿವರ್ಷ 10 ಸಾವಿರ ಕೋಟಿ ಹಣವನ್ನು ನೀರಾವರಿ 
ಯೋಜನೆಗಳಿಗೆ ವ್ಯಯ ಮಾಡುತ್ತಿದ್ದು , ಈಗಾಗಲೇ 45 ಸಾವಿರ ಕೋಟಿ ಹಣ ನೀಡಿದ್ದೇನೆ ಮುಂದಿನ ಮಾರ್ಚ್‌ ಒಳಗೆ 50 ಸಾವಿರ ಕೋಟಿ ಮೀರಲಿದೆ
ಎಂದರು.

ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿದ್ದಾರೆ ಎಂದು ಯಡಿಯೂರಪ್ಪ ಹೇಳುತ್ತಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಯಡಿಯೂರಪ್ಪನವರಿಗೆ ಏನು ಗೊತ್ತು ? ಆರ್ಥಿಕತೆಯ ಮಾನದಂಡ ಸುಸ್ಥಿತಿಯಲ್ಲಿದೆ. ಜಿಡಿಪಿ ಉತ್ತಮವಾಗಿದೆ ಮಾಹಿತಿ ಪಡೆದು ಆರ್ಥಿಕ ವ್ಯವಸ್ಥೆಯ ಬಗ್ಗೆ ಮಾತನಾಡಲಿ
ಎಂದರು. ಕಡೂರು ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳ ಬಗ್ಗೆ ಮಾತನಾಡಿದ ಸಿಎಂ, ಕೆ.ಎಂ. ಕೃಷ್ಣಮೂರ್ತಿಯವರ ನಿಧನರಾದ ನಂತರ ಇಲ್ಲಿ ನಾಯಕತ್ವ ಬೆಳೆಯಲಿಲ್ಲ.ಯಾರೇ ಆದರೂ ಒತ್ತಾಯ,ಪ್ರಭಾವ ಬೀರಿ ಟಿಕೆಟ್‌ ಪಡೆಯಲು ಸಾಧ್ಯವಿಲ್ಲ.ಯಾರು ಗೆಲ್ಲುತ್ತಾರೋ ಅಂತಹವರಿಗೆ ಟಿಕೆಟ್‌ ನೀಡಲಾಗುವುದು. ನಾನು ಪ್ರತಿಯೊಂದು ಕ್ಷೇತ್ರದಲ್ಲೂ ಸರ್ವೆ ಮಾಡಿಸುತ್ತೀದ್ದೇನೆ. ಕಡೂರು ಕ್ಷೇತ್ರ ನಮ್ಮ ಮನೆಯಿದ್ದಂತೆ. ಇಲ್ಲಿನ ಜನರನ್ನು ಬಲ್ಲೆ
ಸರ್ವೆ ಆಧರಿಸಿ ಕಾರ್ಯಕರ್ತರ ಮತ್ತು ಜನರ ಅಭಿಪ್ರಾಯ ಪಡೆದು ಟಿಕೆಟ್‌ ನೀಡುತ್ತೇನೆ. ಯಾರೂ ಸಹ ಗೊಂದಲ ಮಾಡಿಕೊಳ್ಳಬಾರದು ಎಂಬ ಎಚ್ಚರಿಕೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ವೈ.ಎಸ್‌.ವಿ ದತ್ತ ಮಾತನಾಡಿ, ಮುಖ್ಯಮಂತ್ರಿಗಳು 600 ಕೋಟಿಗೂ ಹೆಚ್ಚಿನ ಅನುದಾನ ನೀಡಿದ್ದಾರೆ. ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ.ಶಾಶ್ವತ ನೀರಾವರಿ ಯೋಜನೆಗೆ ಹೆಬ್ಬೆ ಯೋಜನೆಯನ್ನು ಸರ್ಕಾರ ತಿರಸ್ಕರಿಸಿದ್ದು, ಪರ್ಯಾಯವಾಗಿ 1.53 ಟಿಎಂಸಿ ನೀರಿನ ಬಳಕೆಗೆ ಯೋಜನೆ ತಯಾರಿಸಿ ಕರ್ನಾಟಕ ನೀರಾವರಿ ನಿಗಮದ ಮುಂದೆ ಇಡಲಾಗಿದೆ. ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿದ್ದಾರೆ. ಮುಂದಿನ ವಾರ ನಡೆಯಲಿರುವ ನಿಗಮದ ಸಭೆಯಲ್ಲಿ ಒಪ್ಪಿಗೆ ಸೂಚಿಸಿದರೆ ಸಿದ್ದರಾಮಯ್ಯ ಕಡೂರು ಕ್ಷೇತ್ರದ ವಿಶ್ವೇಶ್ವರಯ್ಯನವರಾಗುತ್ತಾರೆ ಎಂದು ಸಿಎಂ ಅವರನ್ನು ಕೊಂಡಾಡಿದರು. 

ಜಿಲ್ಲಾ ಉಸ್ತುವಾರಿ ಸಚಿವ ರೋಷನ್‌ ಬೇಗ್‌ ಸಭೆಯಲ್ಲಿದ್ದರು. ಜಿಲ್ಲಾಧಿ ಕಾರಿ ಶ್ರೀರಂಗಯ್ಯ ಸ್ವಾಗತಿಸಿದರು. ಕಡೂರು ಪುರಸಭೆ ಅಧ್ಯಕ್ಷ ಮಾದಪ್ಪ, ಬೀರೂರು ಪುರಸಭೆ ಅಧ್ಯಕ್ಷೆ ಸವಿತಾ, ತಾ.ಪಂ.ಅಧ್ಯಕ್ಷೆ ರೇಣುಕಾ, ಜಿ.ಪಂ. ಸದಸ್ಯರಾದ ಮಹೇಶ್‌ ಒಡೆಯರ್‌, ಶರತ್‌ ಕೃಷ್ಣಮೂರ್ತಿ, ವನಮಾಲಾ ದೇವರಾಜು, ಲೋಲಾಕ್ಷಿಬಾಯಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ವಿಜಯಕುಮಾರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಎಂ.ಎಚ್‌.ಚಂದ್ರಪ್ಪ, ವಿನಾಯಕ, ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್‌, ಕೆ.ಎಂ.ಕೆಂಪರಾಜು, ಕೆ.ಎಸ್‌.ಆನಂದ್‌, ರಾಜ್ಯ ಕೈಗಾರಿಕಾ ಮೂಲ ಸೌಕರ್ಯ ನಿಗಮದ
ಆಧ್ಯಕ್ಷ ಸಿ.ಎಂ.ಧನಂಜಯ,ವಿವಿಧ ಇಲಾಖೆಗಳ   ಅಧಿಕಾರಿಗಳು ಇದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Supreme-Court-Of-India-3-726

 ಹೈಕೋರ್ಟ್ ಗಳಲ್ಲಿ ಪ್ರಕರಣಗಳ ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್‌ ಬಳಸಲು ಸುಪ್ರೀಂ ನಿರ್ದೇಶನ

ಕೋವಿಡ್ ವೈರಸ್ ಮಹಾಮಾರಿಗೆ ಸೋಲುತ್ತಿದೆಯೇಕೆ ಅಮೆರಿಕ ?

ಕೋವಿಡ್ ವೈರಸ್ ಮಹಾಮಾರಿಗೆ ಸೋಲುತ್ತಿದೆಯೇಕೆ ಅಮೆರಿಕ ?

ಮೃತ ವೃದ್ಧನ ಪತ್ನಿ, ಸಹೋದರನಿಗೂ  ಸೋಂಕು ; ಬಾಗಲಕೋಟೆಯಲ್ಲಿ ಸೋಂಕಿತ ಸಂಖ್ಯೆ ಮೂರಕ್ಕೆ ಏರಿಕೆ

ಮೃತ ವೃದ್ಧನ ಪತ್ನಿ, ಸಹೋದರನಿಗೂ  ಸೋಂಕು ; ಬಾಗಲಕೋಟೆಯಲ್ಲಿ ಸೋಂಕಿತ ಸಂಖ್ಯೆ ಮೂರಕ್ಕೆ ಏರಿಕೆ

ಕೋವಿಡ್ 19 ವಿರುದ್ಧ ಹೋರಾಡಲು ಲಾಕ್ ಡೌನ್ ಮುಂದುವರಿಸಿ: ಪ್ರಧಾನಿಗೆ ಸಿಎಂ ಕೆಸಿಆರ್

ಕೋವಿಡ್ 19 ವಿರುದ್ಧ ಹೋರಾಡಲು ಲಾಕ್ ಡೌನ್ ಮುಂದುವರಿಸಿ: ಪ್ರಧಾನಿಗೆ ಸಿಎಂ ಕೆಸಿಆರ್

ವೃದ್ಧನ ಕುಟುಂಬಕ್ಕೆ ಕೋವಿಡ್ ಸೋಂಕಿಗೆ ಕಲಬುರಗಿಯ ನಂಟು ; ಡಿಸಿಎಂ ಕಾರಜೋಳ ಸಂಶಯ

ವೃದ್ಧನ ಕುಟುಂಬಕ್ಕೆ ಕೋವಿಡ್ ಸೋಂಕಿಗೆ ಕಲಬುರಗಿಯ ನಂಟು ; ಡಿಸಿಎಂ ಕಾರಜೋಳ ಸಂಶಯ

ಗುಡ್ಡದಲ್ಲಿ ಅವಿತು ಕುಳಿತಿದ್ದ ಶಂಕಿತ ತಬ್ಲಿಘಿಗಳು ಪರಾರಿ: ಸಿಕ್ಕಿದ ಬ್ಯಾಗ್ ಸುಟ್ಟ ಪೊಲೀಸರು

ಗುಡ್ಡದಲ್ಲಿ ಅವಿತು ಕುಳಿತಿದ್ದ ಶಂಕಿತ ತಬ್ಲಿಘಿಗಳು ಪರಾರಿ: ಸಿಕ್ಕಿದ ಬ್ಯಾಗ್ ಸುಟ್ಟ ಪೊಲೀಸರು

ಚೀನದಲ್ಲಿ ಮತ್ತೆ 30 ಕೋವಿಡ್ 19 ಸೋಂಕು ಕೇಸ್‌

ಚೀನದಲ್ಲಿ ಮತ್ತೆ 30 ಕೋವಿಡ್ 19 ಸೋಂಕು ಕೇಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಂಚಾರಿ ವಾಹನದಲ್ಲಿ ಹಣ್ಣು-ತರಕಾರಿ ಮಾರಾಟ

ಸಂಚಾರಿ ವಾಹನದಲ್ಲಿ ಹಣ್ಣು-ತರಕಾರಿ ಮಾರಾಟ

ಜಿಲ್ಲೆಯಲ್ಲಿಲ್ಲ ಕೊರೊನಾ ಪ್ರಕರಣ: ಸಿ.ಟಿ. ರವಿ

ಜಿಲ್ಲೆಯಲ್ಲಿಲ್ಲ ಕೋವಿಡ್ 19 ಪ್ರಕರಣ: ಸಿ.ಟಿ. ರವಿ

ನಿಜಾಮುದ್ದೀನ್ ತಬ್ಲಿಘಿ ಹಿಂದೆ ಜಿಹಾದಿ ವಾಸನೆ ಬಡಿಯುತ್ತಿದೆ: ಶೋಭಾ ಕರಂದ್ಲಾಜೆ ಆರೋಪ

ನಿಜಾಮುದ್ದೀನ್ ತಬ್ಲಿಘಿ ಹಿಂದೆ ಜಿಹಾದಿ ವಾಸನೆ ಬಡಿಯುತ್ತಿದೆ: ಶೋಭಾ ಕರಂದ್ಲಾಜೆ ಆರೋಪ

cm-tdy-1

ಇನ್ನೂ ಆರಂಭವಾಗದ ಪಡಿತರ ವಿತರಣೆ

cm-tdy-1

ಸಾಮಾಜಿಕ ಅಂತರ ಕಾಯ್ದುಕೊಳ್ಳಿ: ರವಿ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

Supreme-Court-Of-India-3-726

 ಹೈಕೋರ್ಟ್ ಗಳಲ್ಲಿ ಪ್ರಕರಣಗಳ ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್‌ ಬಳಸಲು ಸುಪ್ರೀಂ ನಿರ್ದೇಶನ

14 ತಿಂಗಳ ಮಗುವಿಗೆ ಕೋವಿಡ್ 19 ಸೋಂಕು

14 ತಿಂಗಳ ಮಗುವಿಗೆ ಕೋವಿಡ್ 19 ಸೋಂಕು

ಕೋವಿಡ್ ಕಳವಳ: ಏಕತಾ ಪ್ರತಿಮೆಯನ್ನೇ ಹರಾಜಿಗಿಟ್ಟ OLX

ಕೋವಿಡ್ ಕಳವಳ: ಏಕತಾ ಪ್ರತಿಮೆಯನ್ನೇ ಹರಾಜಿಗಿಟ್ಟ OLX!

ಕೋವಿಡ್ ವೈರಸ್ ಮಹಾಮಾರಿಗೆ ಸೋಲುತ್ತಿದೆಯೇಕೆ ಅಮೆರಿಕ ?

ಕೋವಿಡ್ ವೈರಸ್ ಮಹಾಮಾರಿಗೆ ಸೋಲುತ್ತಿದೆಯೇಕೆ ಅಮೆರಿಕ ?

ಮೃತ ವೃದ್ಧನ ಪತ್ನಿ, ಸಹೋದರನಿಗೂ  ಸೋಂಕು ; ಬಾಗಲಕೋಟೆಯಲ್ಲಿ ಸೋಂಕಿತ ಸಂಖ್ಯೆ ಮೂರಕ್ಕೆ ಏರಿಕೆ

ಮೃತ ವೃದ್ಧನ ಪತ್ನಿ, ಸಹೋದರನಿಗೂ  ಸೋಂಕು ; ಬಾಗಲಕೋಟೆಯಲ್ಲಿ ಸೋಂಕಿತ ಸಂಖ್ಯೆ ಮೂರಕ್ಕೆ ಏರಿಕೆ