ಮಲೆನಾಡು ಕಲಾವಿದರ ಆಗರ: ಸಚ್ಚಿದಾನಂದಮೂರ್ತಿ

Team Udayavani, Mar 1, 2021, 4:37 PM IST

Sachidanad murthi

ಶೃಂಗೇರಿ: ಮಲೆನಾಡು ಕಲಾವಿದರ ಮತ್ತು ಸಾಹಿತಿಗಳ ಆಗರವಾಗಿದ್ದು, ಇಲ್ಲಿ ಕಲೆ, ಸಂಸ್ಕೃತಿ ಎಲ್ಲೆಡೆಯೂ ಇದೆ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಚ್‌.ಎಸ್‌. ಸಚ್ಚಿದಾನಂದಮೂರ್ತಿ ಹೇಳಿದರು.

ಭಾರತೀತೀರ್ಥ ಸಾಂಸ್ಕೃತಿಕ ಕೇಂದ್ರ ಟ್ರಸ್ಟ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗಾಯತ್ರಿ ಸೇವಾ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ವೈಕುಂಠಪುರದಲ್ಲಿ ಆಯೋಜಿಸಿರುವ 17 ನೇ ವರ್ಷದ ಮಲೆನಾಡು ಉತ್ಸವವನ್ನು ವರಲಿನಲ್ಲಿ ಭತ್ತ ಕುಟ್ಟುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ನಗರದ ಬದುಕು ಸದಾ ಒತ್ತಡದಿಂದಾಗಿ ಯಾಂತ್ರಿಕವಾಗುತ್ತಾ ನಮ್ಮ ಸಾಂಸ್ಕೃತಿಕ ಪ್ರಜ್ಞೆ ಕೂಡ ಸೃಜನಶೀಲತೆಯನ್ನು ಕಳೆದುಕೊಳ್ಳುತ್ತಿದೆ. ಆದರೆ  ಗ್ರಾಮೀಣ ಪ್ರದೇಶದಲ್ಲಿ ಆಧುನಿಕ ಬುದುಕು ದಾಂಗುಡಿ ಇಡುತ್ತಿದ್ದರೂ ಸಂಸ್ಕೃತಿ ಮತ್ತು ಸೌಜನ್ಯ ಗ್ರಾಮದಲ್ಲಿ ಇನ್ನೂ ಉಳಿದು ಬೆಳೆದು ಬರುತ್ತಿದೆ. ನಾಡಿಗೆ ಹಲವು ವಿಶಿಷ್ಟ ವ್ಯಕ್ತಿಗಳು ಈ ಭಾಗದಿಂದ ಸೃಜನಶೀಲರಾಗಿ ಸಾಂಸ್ಕೃತಿಕ ಕ್ರಿಯಾಶೀಲತೆಯಲ್ಲಿ ತೊಡಗಿಕೊಂಡಿದ್ದಾರೆ ಎಂದರು.

ಉತ್ಸವದ ಸಮರ್ಪಣೆಯ ಗೌರವವನ್ನು ಸ್ವೀಕರಿಸಿದ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಸದಸ್ಯ ಗಾಯತ್ರಿ ಸೇವಾ ಪ್ರತಿಷ್ಠಾನದ ಪ್ರವರ್ತಕ ಡಾ.ರಾಘವೇಂದ್ರ ಭಟ್‌ ಬೆಟ್ಟಗೇರಿ ಮಾತನಾಡಿ, ಮಲೆನಾಡಿನ ಕಟ್ಟಕಡೆಯ ಹಳ್ಳಿಯನ್ನು ತಲುಪಿ ಅಲಲ್ಲಿ ಸಾಂಸ್ಕೃತಿಕ ವಾತಾವರಣ ನಿರ್ಮಿಸುತ್ತಾ ಊರಿಂದ ಊರಿಗೆ ಸಾಗುತ್ತಿರುವ ಮಲೆನಾಡು ಉತ್ಸವವು ನಿತ್ಯೋತ್ಸವವಾಗಲಿ ಎಂದರು.

ಈ ಸಂದರ್ಭ ಕುವೆಂಪು ವಿ.ವಿ ಯ ಸ್ವರ್ಣ ಪದಕ ವಿಜೇತೆ ಶಾಶ್ವತಿಯವರನ್ನು ಯುವ ಪುರಸ್ಕಾರದೊಂದಿಗೆ ಗೌರವಿಸಲಾಯಿತು. ಈ ಸಂದರ್ಭ ಮಾತನಾಡಿದ ಶಾಶ್ವತಿ, ಮಕ್ಕಳನ್ನು ಅವರ ಆಯ್ಕೆಯಂತೆ ಓದಲು ಬಿಡಬೇಕು. ಅವರ ಮೇಲೆ ಕಲಿಕೆಯ ವಿಚಾರದಲ್ಲಿ ಉತ್ತಡವನನು ಹೇರಬಾರದು. ಇದರಿಂದ ವಿದ್ಯಾರ್ಥಿಯೊಬ್ಬನ ನೈಜ ಪ್ರತಿಭೆ ಆನಾವರಣಗೊಳ್ಳಲು ನೆರವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶತಾಯುಷಿ ನಾಟಿ ವೈದ್ಯ ಸಿಡ್ಲುಮನೆ ಸುಬ್ಬಣ್ಣ ಹೆಗ್ಗಡೆ ಮಾತನಾಡಿ, ಊರಿನ ಹಬ್ಬವಾಗಿ ಎಲ್ಲರೂ ಒಂದಾಗಿ ಬಾಳಲು ಇಂತಹ ಉತ್ಸವಗಳು ಮಾದರಿಯಾಗಿದ್ದು, ಸಂತಸ ತಂದಿದೆ ಎಂದರು. ಸಮಾರಂಭದಲ್ಲಿ ತಾಪಂ ಉಪಾಧ್ಯಕ್ಷೆ ಚಂದ್ರಾವತಿ, ಕೂತಗೋಡು ಗ್ರಾ.ಪಂ ಅಧ್ಯಕ್ಷೆ ನಯನ, ಸದಸ್ಯೆ ಚಂದ್ರಾವತಿ ಉಪಸ್ಥಿತರಿದ್ದರು.

ನಾಟಕ ಪ್ರದರ್ಶನ: ಮಲೆನಾಡು ಉತ್ಸವದ ಮೊದಲನೆ ದಿನದ ಪ್ರಮುಖ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮೂರು ಮುತ್ತು ಕಲಾ ತಂಡದವರಿಂದ ಮದುಮಗ ಎಂಬ ಹಾಸ್ಯ ನಾಟಕ ಗ್ರಾಮೀಣ ಪ್ರದೇಶದ ಜನರನ್ನು ನಗೆಗಡಲಲ್ಲಿ ತೇಲಿಸಿತು.

ಮಲೆನಾಡಿನ ಸುಪ್ರಸಿದ್ಧ ಸುಗಮ ಸಂಗೀತ ಕಲಾವಿದ ಅಡಗಂದೂರು ಕೃಷ್ಣಮೂತಿ ಇವರ ಸಂಯೋಜಿತ ಗೀತೆಗಳನ್ನು ಮಂಜುನಾಥ ಮತ್ತು ಸುಂಕದಮಕ್ಕಿ ಗೋಪಾಲಕೃಷ್ಣ ಪ್ರಸ್ತುತಪಡಿಸಿದರು.

ಹಿಮ್ಮೇಳದಲ್ಲಿ ಎಂ.ಕೆ ಶ್ರೀನಿ  ಕೊಪ್ಪ, ರಮೆಶ್‌ ಉಪಾಧ್ಯಾಯ, ಗಾಡಿಕೆರೆ ಸತ್ಯನಾರಾಯಣ ಸಹಕರಿಸಿದರು. ಮಲೆನಾಡ ಉತ್ಸವವು ಪ್ರಗತಿಪರ ಕೃಷಿಕರಾದ ಪಶ್ಚಿಮವಾಹಿನಿ ರಾಮಯ್ಯ, ಗಣೇಶ್‌ ರಾವ್‌ ಮತ್ತು ವೇಬ್ರಂಶ್ರೀ ವೆಂಕಟರಮಣ ಭಟ್‌ ಅವರ ಪ್ರವೇಶದ್ವಾರಗಳನ್ನು ಒಳಗೊಂಡಿದೆ. ಮಲೆನಾಡ ಶೈಲಿಯ ಅಲಂಕಾರವನ್ನು ವೇದಿಕೆ ಮತ್ತು ಹೊರಾಂಗಣಕ್ಕೆ ಮಾಡಲಾಗಿತ್ತು.

ಟಾಪ್ ನ್ಯೂಸ್

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeqwewq

Congress ನಿಂದ ಬದುಕು; ಬಿಜೆಪಿಯದ್ದು ಭಾವನೆಗಳ ಚೆಲ್ಲಾಟ: ಡಾ| ಭಂಡಾರಿ

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqwewq

Congress ನಿಂದ ಬದುಕು; ಬಿಜೆಪಿಯದ್ದು ಭಾವನೆಗಳ ಚೆಲ್ಲಾಟ: ಡಾ| ಭಂಡಾರಿ

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.