ಧರ್ಮಾಚರಣೆಯಿಂದ ಜನ್ಮ ಸಾರ್ಥಕ

Team Udayavani, Apr 5, 2021, 8:46 PM IST

fghjhgtrd

ಶೃಂಗೇರಿ: ಮನುಷ್ಯ ಜನ್ಮ ಪಡೆದಾಗ ಪ್ರತಿಯೊಬ್ಬರೂ ಧರ್ಮಾಚರಣೆ ಮಾಡುವುದರಿಂದ ನಮ್ಮ ಜನ್ಮವನ್ನು ಸಾರ್ಥಕ್ಯಗೊಳಿಸಿಕೊಳ್ಳಬೇಕು ಎಂದು ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.

ಶ್ರೀ ಮಠದಲ್ಲಿ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಟಾರ ಬ್ರಾಹ್ಮಣ ಮಹಾಸಭಾದಿಂದ ಭಾನುವಾರ ಏರ್ಪಡಿಸಿದ್ದ ಶ್ರೀ ಗಾಯತ್ರಿ ಹೋಮದ ಪೂರ್ಣಾಹುತಿ ನೆರವೇರಿಸಿ ಅವರು ಆಶೀರ್ವಚನ ನೀಡಿದರು. ಬ್ರಾಹ್ಮಣರೆಲ್ಲರೂ ಗಾಯತ್ರಿ ಮಂತ್ರವನ್ನು ಪ್ರತಿ ದಿನವೂ ಹೇಳುವುದರ ಮೂಲಕ ದೇವಿಯನ್ನು ಪೂಜಿಸಬೇಕು. ಗಾಯತ್ರಿ ಮಂತ್ರವನ್ನು ಪಠಿಸುವುದಲ್ಲದೆ ಆಚಾರ- ವಿಚಾರದಲ್ಲೂ ಶ್ರದ್ಧೆ ಇರಬೇಕು. ಪ್ರತಿಯೊಬ್ಬರೂ ಮತ್ತೂಂದು ಜನ್ಮದಲ್ಲಿ ಏಳಿಗೆ ಕಾಣಬೇಕಾದರೆ ಧರ್ಮಾನುಷ್ಠಾನ ಮಾಡಬೇಕು.ನಮ್ಮ ಜೀವನಕ್ಕಾಗಿ ಲೌಖೀಕ ವ್ಯವಹಾರ ನಡೆಸಿದಂತೆ ನಾವು ಧರ್ಮಾಚರಣೆ ಆಚರಿಸುವುದನ್ನು ಮರೆಯಬಾರದು. ಶರೀರದಿಂದ ಮೋಕ್ಷ ಹೊಂದಿದ ನಂತರ ನಾವೇ ಗಳಿಸಿದ ಆಸ್ತಿ, ಹಣವನ್ನು ಕೊಂಡೊಯ್ಯಲು ಸಾಧ್ಯವಿಲ್ಲ. ಉಳಿಸಿದ ಹಣದಲ್ಲಿ ಸಮಾಜದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ಹಣವನ್ನು ಮೀಸಲು ಇಡಬೇಕು.

ನಮ್ಮ ಪೂರ್ವಿಕರು ಹಾಕಿಕೊಟ್ಟ ಮಾರ್ಗದಂತೆ ಮಕ್ಕಳಿಗೆ ಸಕಾಲದಲ್ಲಿ ಉಪನಯನ ಮಾಡಬೇಕು. ಕೇವಲ ನಾಮಕಾವಸ್ಥೆ ಧಾರ್ಮಿಕ ವಿಧಿ ಪೂರೈಸದೆ ಗಾಯತ್ರಿ ಮಂತ್ರ ಉಪದೇಶ ಪಡೆದು, ಪ್ರತಿ ದಿನವೂ ಸಂಧ್ಯಾವಂದನೆ ಮಾಡಬೇಕು. ವೇದ ನಮ್ಮ ಪವಿತ್ರ ಗ್ರಂಥವಾಗಿದ್ದು, ಸಂಪ್ರದಾಯವನ್ನು ಅನುಸರಿಸುವುದರಿಂದ ನಮಗೆ ಶ್ರೇಯಸ್ಸು ಉಂಟಾಗುತ್ತದೆ ಎಂದರು.

ಶ್ರೀಮಠದ ಆಡಳಿತಾ ಧಿಕಾರಿ ಡಾ| ಗೌರಿಶಂಕರ್‌ ಮಾತನಾಡಿ, ಜಗದ್ಗುರುಗಳ ಆದೇಶ ಮತ್ತು ಸಮಾಜ ಬಾಂಧವರ ಶ್ರದ್ಧೆಯಿಂದ ಕೈಗೊಂಡ ಗಾಯತ್ರಿ ಜಪ ಯಶಸ್ವಿಯಾಗಿದೆ. 2.5 ಕೋಟಿಗೂ ಅಧಿ ಕ ಜಪವನ್ನು ಪೂರೈಸಿ,ಇಂದು ಜಗದ್ಗುರುಗಳ ಅನುಗ್ರಹದಿಂದ ಗಾಯತ್ರಿ ಹೋಮದ ಪೂರ್ಣಾಹುತಿ ನಡೆದಿದೆ ಎಂದರು. ಮಹಾಸಭಾದ ಅಧ್ಯಕ್ಷ ಜಿ.ಸಿ. ಗೋಪಾಲಕೃಷ್ಣ ಮಾತನಾಡಿ, ಜಗದ್ಗುರುಗಳ ಆದೇಶದಂತೆ ಸಮಾಜ ಬಾಂಧವರು ಕೈಗೊಂಡ ಗಾಯತ್ರಿ ಜಪ ಯಶಸ್ವಿಯಾಗಿ ಪೂರ್ಣಗೊಂಡಿದೆ. ಎಂಟು ತಿಂಗಳ ಕಾಲ ನಡೆದ ಜಪದಲ್ಲಿ ಸಮಾಜ ಬಾಂಧವರು, ಎಲ್ಲಾ ಸಮುದಾಯದವರು ಕೈಜೋಡಿಸಿದ್ದಾರೆ ಎಂದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಯಾಗಶಾಲೆಯಲ್ಲಿ ಶ್ರೀ ಗಾಯತ್ರಿ ಹೋಮದ ಪೂರ್ಣಾಹುತಿ ನಡೆಯಿತು. ಇದೇ ಸಂದರ್ಭದಲ್ಲಿ ಶ್ರೀಮಠದ ಆಡಳಿತಾಧಿ ಕಾರಿ ಡಾ| ವಿ.ಆರ್‌.ಗೌರಿಶಂಕರ್‌ ಅವರನ್ನು ಗೌರವಿಸಲಾಯಿತು. ಮಹಾಸಭಾದ ಗೋಳಾYರ್‌ ನಾಗೇಂದ್ರರಾವ್‌, ಶಾರದಾ ಸೌಹಾರ್ದದ ಅಧ್ಯಕ್ಷ ಶಿವಶಂಕರ ರಾವ್‌, ಹೆಬ್ಬಿಗೆ ಗಣೇಶ್‌, ಹುಲ್ಕುಳಿ ದೀಪಕ್‌, ವಿಜಯರಂಗ, ಟಿ.ಆರ್‌. ಕೃಷ್ಣಮೂರ್ತಿ ಮತ್ತಿತರರು ಇದ್ದರು

ಟಾಪ್ ನ್ಯೂಸ್

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

B Y Vijayendra: ಕಾಂಗ್ರೆಸ್‌ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?

B Y Vijayendra: ಕಾಂಗ್ರೆಸ್‌ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು

Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.