Udayavni Special

ರೋಗ ಹರಡದಂತೆ ಜಾಗೃತೆ ವಹಿಸಿ: ಸುರೇಶ್‌


Team Udayavani, Oct 20, 2020, 7:09 PM IST

cm-tdy-1

ತರೀಕೆರೆ: ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಅಧ್ಯಕ್ಷೆ ಪದ್ಮಾವತಿ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಯಿತು.

ಶಾಸಕ ಡಿ.ಎಸ್‌. ಸುರೇಶ್‌ ಮಾತನಾಡಿ, ತಾಲೂಕಿನ ನಾಗೇನಹಳ್ಳಿ, ಲಕ್ಕವಳ್ಳಿ ಮತ್ತಿತರ ಭಾಗಗಳ ಜಾನುವಾರುಗಳಲ್ಲಿ ಮಾರಕ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ. ಬೇರೆಡೆ ರೋಗ ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದು ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಮೋಹನ್‌ಗೆ ಸೂಚನೆ ನೀಡಿದರು.

ಪಶು ಸಂಗೋಪನಾ ಇಲಾಖೆ ಸಹಾಯಕನಿರ್ದೇಶಕ ಎಂ.ಆರ್‌. ಮೋಹನ್‌ ಮಾತನಾಡಿ, ಜಾನುವಾರುಗಳಿಗೆ ಕಾಲು ಬಾಯಿ ಜ್ವರ ಬಾಧಿಸದಂತೆ ಲಸಿಕೆ ಹಾಕಲಾಗಿದೆ. ನಾಗೇನಹಳ್ಳಿ, ಲಕ್ಕವಳ್ಳಿ ಮತ್ತಿತರ ಕಡೆಗಳಲ್ಲಿ ಕಾಣಿಸಿಕೊಂಡಿದೆ ಎನ್ನಲಾಗುತ್ತಿರುವ ಲಿಂಪಿ ಸ್ಕಿನ್‌ ಡಿಸೀಸ್‌ ಕಾಯಿಲೆ ಕೋವಿಡ್ ಮಾದರಿಯದಾಗಿದ್ದು, ಈಗಾಗಲೇ ಲ್ಯಾಬ್‌ ಟೆಸ್ಟ್‌ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಡಾ| ಬಿ.ಜಿ.ಚಂದ್ರಶೇಖರ್‌ ಮಾತನಾಡಿ, ತಾಲೂಕಿನಲ್ಲಿ ಈವರೆಗೆ 1436 ಕೋವಿಡ್ಪ್ರಕರಣ ಕಂಡು ಬಂದಿದ್ದು, 122 ಸಕ್ರಿಯವಾಗಿದೆ. ಈ ಪೈಕಿ 100 ಮಂದಿ ಸೋಂಕಿತರಿಗೆ ಮನೆಯಲ್ಲೇ ಇರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಉಳಿದವರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ. ಪ್ರತಿ ದಿನ 450ಕ್ಕೂ ಹೆಚ್ಚು ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗುತ್ತಿದ್ದು, ಪ್ರತಿ ಹಳ್ಳಿ- ಹಳ್ಳಿಗಳಿಗೆ ತೆರಳಿ ಪರೀಕ್ಷೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ತಾಪಂ ಅಧ್ಯಕ್ಷೆ ಪದ್ಮಾವತಿ ಮಾತನಾಡಿ, ಆಹಾರ ನಿರೀಕ್ಷಕ ತಿಮ್ಮಯ್ಯ ಪ್ರತಿ ಪಡಿತರ ಚೀಟಿಯಿಂದ ಕೇವಲ 2 ರೂ ವಸೂಲಿ ಮಾಡುತ್ತಿರುವುದು ಮಾತ್ರವಲ್ಲ, ನ್ಯಾಯಬೆಲೆ ಅಂಗಡಿಯಲ್ಲಿನ ಖಾಲಿಚೀಲ ತನ್ನ ಸುಪರ್ದಿಗೆ ಹಿಂದಿರುಗಿಸಬೇಕು ಎನ್ನುವ ಬೇಡಿಕೆ ಬಹಿರಂಗವಾಗಿಡುತ್ತಿದ್ದಾರೆ ಎಂದು ಕೆಲವು ನ್ಯಾಯಬೆಲೆ ಅಂಗಡಿ ಮಾಲೀಕರು ದೂರುತ್ತಿದ್ದಾರೆ. ಪಡಿತರ ಅಂಗಡಿ ಮಾಲೀಕರ ಮೂಲಕ ವಸೂಲಿ ಮಾಡಿದ ಹಣವನ್ನು ಡಿಸಿ, ಜಿಪಂ ಸಿಇಒ, ಎಸಿ, ತಹಶೀಲ್ದಾರ್‌ ಸೇರಿಜನಪ್ರತಿನಿ ಗಳಿಗೆ ಹಂಚಿಕೆ ಮಾಡಬೇಕುಎಂದು ಸುಳ್ಳು ಹೇಳಿ ವಸೂಲಿ ಕಡ್ಡಾಯಗೊಳಿಸಿದ್ದಾರೆಂಬ ಗಂಭೀರ ಆರೋಪ ಮಾಡಿದರು.

ಆಹಾರ ನಿರೀಕ್ಷರಿಗೆ ಅನಗತ್ಯ ಗೈರಾಗುವುದರ ಜತೆ ತಮ್ಮ ನಡವಳಿಕೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕೆಂದು ಕಳೆದ ಸಭೆಯಲ್ಲೇಎಚ್ಚರಿಕೆ ನೀಡಿ ಕಳುಹಿಕೊಡಲಾಗಿತ್ತಾದರೂ, ಪದೇ ಪದೇ ಇದೇ ವರ್ತನೆ ಪುನರಾವರ್ತಿಸುತ್ತಿದ್ದಾರೆ. ತಕ್ಷಣವೇ ಆಹಾರ ನಿರೀಕ್ಷಕ ತಿಮ್ಮಯ್ಯಗೆ ನೋಟಿಸ್‌ ಜಾರಿಗೊಳಿಸಿ ಡಿಸಿ ಮತ್ತು ಸಿಇಒಗೆಅವರ ವಿರುದ್ಧ ವರದಿ ಸಲ್ಲಿಸುವಂತೆ ತಾಪಂ ಇಒಗೆ ಸೂಚನೆ ನೀಡಿದರು.

ಅಂಗನವಾಡಿ ಕೇಂದ್ರಗಳಿಗೆ ಬೆಲ್ಲ ಸೇರಿ ಕಳಪೆ ಗುಣಮಟ್ಟದ ಆಹಾರ ಸಾಮಗ್ರಿ ಪೂರೈಸಲಾಗುತ್ತಿದೆ ಎಂಬ ಆರೋಪ ಮತ್ತು ಚರ್ಚೆ ನಡೆಯುತ್ತಿದೆ. ಎಂಎಸ್‌ಪಿಸಿ ಘಟಕದಲ್ಲಿ ಪ್ರಸ್ತುತ ಆಹಾರ ತಯಾರಿಸುತ್ತಿರುವ ಸ್ತ್ರೀಶಕ್ತಿ ಸಂಘಕ್ಕೆ ಗುಣಮಟ್ಟ ಕಾಯ್ದುಕೊಳ್ಳುವುದರ ಜತೆಗೆ ಸಕಾಲದಲ್ಲಿ ಆಹಾರ ಸಾಮಗ್ರಿ ವಿತರಣೆ ಮಾಡಲು ಆಸಕ್ತಿ ಇಲ್ಲದಿದ್ದರೆ, ಬೇರೆ ಸಂಘಕ್ಕೆ ಜವಾಬ್ದಾರಿ ವಹಿಸಿ ಎಂದು ಎಸಿಡಿಪಿಒ ಚರಣ್‌ ರಾಜ್‌ಗೆ ಸೂಚಿಸಿದರು.  ತಾಪಂ ಉಪಾಧ್ಯಕ್ಷೆ ಶಿವಮ್ಮ, ಇಒ ಕೆ. ಯತಿರಾಜ್‌ ಮತ್ತಿತರರು ಇದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Dress

ಶುಲ್ಕ ಸಮರ: ಸರಕಾರಕ್ಕೆ ಸವಾಲು; ಸರಕಾರಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳ ಸಡ್ಡು

ಜುಲೈನೊಳಗೆ 30 ಕೋಟಿ ಮಂದಿಗೆ ಲಸಿಕೆ

ಜುಲೈನೊಳಗೆ 30 ಕೋಟಿ ಮಂದಿಗೆ ಲಸಿಕೆ

BSY

ಮೂಲ-ವಲಸಿಗ ಫೈಟ್‌ ಜೋರು; ಸಂಪುಟ ಸರ್ಜರಿ ಮಾತುಗಳ ಬೆನ್ನಲ್ಲೇ ಹೊಸ ಬೆಳವಣಿಗೆ

ಆದೇಶಕ್ಕೆ 16 ವರ್ಷ: ಇನ್ನೂ ಆಗದ ಅಧಿಸೂಚನೆ

ಆದೇಶಕ್ಕೆ 16 ವರ್ಷ: ಇನ್ನೂ ಆಗದ ಅಧಿಸೂಚನೆ

ಪಿಂಚಣಿ ಗೋಲ್‌ಮಾಲ್‌; ಸಂಧ್ಯಾ ಸುರಕ್ಷಾ ಸಹಿತ ಮಾಸಾಶನ ಯೋಜನೆಗಳಲ್ಲಿ ವಂಚನೆ

ಪಿಂಚಣಿ ಗೋಲ್‌ಮಾಲ್‌; ಸಂಧ್ಯಾ ಸುರಕ್ಷಾ ಸಹಿತ ಮಾಸಾಶನ ಯೋಜನೆಗಳಲ್ಲಿ ವಂಚನೆ

ಅಧಿಕಾರ ಹಸ್ತಾಂತರ ಹೇಗಿರಲಿದೆ?

ಅಧಿಕಾರ ಹಸ್ತಾಂತರ ಹೇಗಿರಲಿದೆ?

JIVAYAN

ಬದುಕಿನಲ್ಲಿ ಅಮೃತವಿದೆ; ಸವಿದರೆ ಚಿರಂಜೀವಿಗಳಾಗುತ್ತೇವೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೀಗರ ಊಟಕ್ಕೆ ಆಗಮಿಸಿ ಈಜಲು ತೆರಳಿದ ಯುವಕರು; ನಾಲ್ವರು ನಾಪತ್ತೆ, ಓರ್ವನ ಮೃತದೇಹ ಪತ್ತೆ

ಬೀಗರ ಊಟಕ್ಕೆ ಆಗಮಿಸಿ ಈಜಲು ತೆರಳಿದ ಯುವಕರು; ನಾಲ್ವರು ನಾಪತ್ತೆ, ಓರ್ವನ ಮೃತದೇಹ ಪತ್ತೆ

ಒಂದೆಡೆ ಗೈರು; ಮತ್ತೂಂದೆಡೆ ಹಾಜರು

ಒಂದೆಡೆ ಗೈರು; ಮತ್ತೂಂದೆಡೆ ಹಾಜರು

NEWS-TDY-03

ಚಿಕ್ಕಮಗಳೂರು : ಪತ್ನಿಯಿಂದಲೇ ಪತಿ ಕೊಲೆ : ಪ್ರಿಯಕರನ ಜೊತೆ ಸೇರಿ ಗಂಡನ ಮರ್ಡರ್

ಕಾಫಿ ಬೆಳೆಗಾರರ ನೆರವಿಗೆ ಕೇಂದ್ರ ಬರಲಿ

ಕಾಫಿ ಬೆಳೆಗಾರರ ನೆರವಿಗೆ ಕೇಂದ್ರ ಬರಲಿ

ಚಿಕ್ಕಮಗಳೂರು: ದತ್ತಮಾಲಾ ಅಭಿಯಾನಕ್ಕೆ ಚಾಲನೆ

ಚಿಕ್ಕಮಗಳೂರು: ದತ್ತಮಾಲಾ ಅಭಿಯಾನಕ್ಕೆ ಚಾಲನೆ

MUST WATCH

udayavani youtube

ಶತಮಾನಗಳಿಂದಲೂ ನಡೆಯುತ್ತಿರುವ ತುಳುವರ ಭೂಮಿಪೂಜೆ ಗದ್ದೆಕೋರಿ ಈಗಲೂ ಇಲ್ಲಿ ಜೀವಂತ

udayavani youtube

ಮಂಗಳೂರು: ಉಪ್ಪುನೀರು ತಡೆ ಅಣೆಕಟ್ಟು ಕಾಮಗಾರಿ ವೀಕ್ಷಿಸಿದ ಸಚಿವ ಮಾಧುಸ್ವಾಮಿ

udayavani youtube

ಕರಾವಳಿಯಲ್ಲೂ ಪರಿಚಯವಾಯಿತು ಜಪಾನಿನ ಕೊಕೆಡಾಮ ಕಲೆ

udayavani youtube

ಕೊರೊನಾ ಪರಿಣಾಮ ಅಧ್ಯಯನಕ್ಕಾಗಿ ರೋಡ್ ಆಶ್ರಮ್ ಅಭಿಯಾನ

udayavani youtube

Auto Rickshaw driver feeds stray dogs in Surathkal | Umesh Devadiga | Udayavani

ಹೊಸ ಸೇರ್ಪಡೆ

Dress

ಶುಲ್ಕ ಸಮರ: ಸರಕಾರಕ್ಕೆ ಸವಾಲು; ಸರಕಾರಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳ ಸಡ್ಡು

ಜುಲೈನೊಳಗೆ 30 ಕೋಟಿ ಮಂದಿಗೆ ಲಸಿಕೆ

ಜುಲೈನೊಳಗೆ 30 ಕೋಟಿ ಮಂದಿಗೆ ಲಸಿಕೆ

BSY

ಮೂಲ-ವಲಸಿಗ ಫೈಟ್‌ ಜೋರು; ಸಂಪುಟ ಸರ್ಜರಿ ಮಾತುಗಳ ಬೆನ್ನಲ್ಲೇ ಹೊಸ ಬೆಳವಣಿಗೆ

ಆದೇಶಕ್ಕೆ 16 ವರ್ಷ: ಇನ್ನೂ ಆಗದ ಅಧಿಸೂಚನೆ

ಆದೇಶಕ್ಕೆ 16 ವರ್ಷ: ಇನ್ನೂ ಆಗದ ಅಧಿಸೂಚನೆ

ಪಿಂಚಣಿ ಗೋಲ್‌ಮಾಲ್‌; ಸಂಧ್ಯಾ ಸುರಕ್ಷಾ ಸಹಿತ ಮಾಸಾಶನ ಯೋಜನೆಗಳಲ್ಲಿ ವಂಚನೆ

ಪಿಂಚಣಿ ಗೋಲ್‌ಮಾಲ್‌; ಸಂಧ್ಯಾ ಸುರಕ್ಷಾ ಸಹಿತ ಮಾಸಾಶನ ಯೋಜನೆಗಳಲ್ಲಿ ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.